Cinnamon Bath: 25 ವರ್ಷವಾದ್ರೂ ಸಿಂಗಲ್ಲಾ? ಅಂಥವರಿಗಿಲ್ಲಿ ಮಸಾಲೆ ಸ್ನಾನದ ಶಿಕ್ಷೆ

ದಾಲ್ಚಿನ್ನಿ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಒಂದು ಮಸಾಲೆ ಪದಾರ್ಥ ಎಂಬುವುದು ಗೊತ್ತಿರುವ ಸಂಗತಿ. ಅದನ್ನು ಕೋಳಿಯ ಮೇಲೋ, ಕುರಿಯ ಮೇಲೋ ಮೆತ್ತಿದ್ದರೆ, ಅದರ ಹಿಂದಿನ ಉದ್ದೇಶ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದಿತ್ತು, ಆದರೆ ಮನುಷ್ಯನಿಗೇಕೆ ಮಸಾಲೆ ಮೆತ್ತುತ್ತಾರೆ ಎಂದು ಅರ್ಥವಾಗುತ್ತಿಲ್ಲ ಅಲ್ಲವೇ?

ದಾಲ್ಚಿನ್ನಿ ಪುಡಿಯ ಸ್ನಾನ

ದಾಲ್ಚಿನ್ನಿ ಪುಡಿಯ ಸ್ನಾನ

  • Share this:
ನಾವು ಬದುಕುತ್ತಿರುವ ಈ ಜಗತ್ತು (World) ಅತ್ಯಂತ ವೈವಿಧ್ಯಮಯವಾಗಿದೆ ಅಲ್ಲವೇ? ಕೇವಲ ಭೌಗೋಳಿಕ ವಿನ್ಯಾಸದಲ್ಲಿ ಮಾತ್ರವಲ್ಲ, ಮನುಷ್ಯರ (Man) ಜೀವನ ಶೈಲಿಯ ವಿಷಯದಲ್ಲಿ ಕೂಡ. ಅಂದರೆ, ಪ್ರತಿಯೊಂದು ದೇಶವು ಕೂಡ ತನ್ನದೇ ಆದ ವಿಭಿನ್ನ ಆಚರಣೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಒಂದು ದೇಶದ ಸಂಪ್ರದಾಯ (Tradition) ಬೇರೆ ದೇಶಗಳ ಜನರಿಗೆ ವಿಚಿತ್ರವಾಗಿ ಕಾಣುತ್ತದೆಯಾದರೂ, ಆ ಸಂಪ್ರದಾಯಗಳನ್ನು ನಂಬುವವರು ಮಾತ್ರ ನಿರಂತರವಾಗಿ ಅದಕ್ಕೆ ಬದ್ಧರಾಗಿರುತ್ತಾರೆ. ಅಂತದ್ದೇ, ನಮಗೆಲ್ಲಾ ಇದೇನಪ್ಪಾ ವಿಚಿತ್ರ ಎಂದೆನಿಸುವ ಸಂಪ್ರದಾಯವೊಂದನ್ನು ಡೆನ್ಮಾರ್ಕ್‍ನಲ್ಲಿ (Denmark) ಪಾಲಿಸಲಾಗುತ್ತದೆ. ಅದೇನಪ್ಪಾ ಅಂತೀರಾ? ಅಲ್ಲಿ ಅವಿವಾಹಿತರಿಗೆ ದಾಲ್ಚಿನ್ನಿಯ ಪುಡಿಯಿಂದ ಸ್ನಾನ (Cinnamon Bath )ಮಾಡಿಸಲಾಗುತ್ತದೆಯಂತೆ !

25 ವರ್ಷಕ್ಕೆ ಮದುವೆಯಾಗದೇ ಇರುವುದಕ್ಕೆ ಒಂದು ಶಿಕ್ಷೆ
ದಾಲ್ಚಿನ್ನಿ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಒಂದು ಮಸಾಲೆ ಪದಾರ್ಥ ಎಂಬುವುದು ಗೊತ್ತಿರುವ ಸಂಗತಿ. ಅದನ್ನು ಕೋಳಿಯ ಮೇಲೋ, ಕುರಿಯ ಮೇಲೋ ಮೆತ್ತಿದ್ದರೆ, ಅದರ ಹಿಂದಿನ ಉದ್ದೇಶ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದಿತ್ತು, ಆದರೆ ಮನುಷ್ಯನಿಗೇಕೆ ಮಸಾಲೆ ಮೆತ್ತುತ್ತಾರೆ ಎಂದು ಅರ್ಥವಾಗುತ್ತಿಲ್ಲ ಅಲ್ಲವೇ? ಮಾಧ್ಯಮ ವರದಿಯೊಂದರ ಪ್ರಕಾರ, 25 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಡ್ಯಾನಿಷ್ ಯುವಕ/ಯುವತಿಯರ ಮೇಲೆ, ಅವರ ಕುಟುಂಬದ ಸದಸ್ಯರು ದಾಲ್ಚಿನಿ ಪುಡಿಯನ್ನು ಸುರಿಯುತ್ತಾರೆ.

ಇದನ್ನೂ ಓದಿ:  Viral Story: ಫೋರ್ಕ್ ಬಳಸುವಂತಿಲ್ಲ, ತಟ್ಟೆಯಲ್ಲಿ ಆಹಾರ ಖಾಲಿ ಮಾಡುವಂತಿಲ್ಲ! ವಿವಿಧ ದೇಶಗಳ 8 ವಿಚಿತ್ರ ನಿಯಮಗಳು ಇಲ್ಲಿವೆ

ಇದು ಮೇಲ್ನೋಟಕ್ಕೆ, 25 ವರ್ಷವಾಗುವುದರ ಒಳಗೆ ಸೆಟಲ್ ಆಗಿ, ಮದುವೆಯಾಗದೇ ಇರುವುದಕ್ಕೆ ಒಂದು ಶಿಕ್ಷೆಯಂತೆ ಕಾಣಬಹುದು. ಆದರೆ, ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವರನ್ನು ಗೋಳು ಹೋಯ್ದುಕೊಳ್ಳಲು ಮತ್ತು ತರಲೆ ಮಾಡಲು ಇದು ಮತ್ತೊಂದು ಅವಕಾಶ ಎಂದರೂ ತಪ್ಪಿಲ್ಲ ಬಿಡಿ.

ದಾಲ್ಚಿನ್ನಿ ಪುಡಿಯಿಂದ ಸ್ನಾನ
ಇದು ಒಂದು ಸಂಪ್ರದಾಯ ತಾನೆ? 25 ನೇ ವರ್ಷಕ್ಕೆ ಕಾಲಿಟ್ಟವರ ಮೇಲೆ ಸುಮ್ಮನೆ ಶಾಸ್ತ್ರಕ್ಕೆ ಒಂದಿಷ್ಟು ದಾಲ್ಚಿನ್ನಿ ಪುಡಿ ಸಿಂಪಡಿಸಿ ಸುಮ್ಮನಾಗುತ್ತಾರೇನೋ ಎಂದು ನೀವು ಭಾವಿಸಬಹುದು. ಆದರೆ ಅಸಲಿಯತ್ತು ಹಾಗಿಲ್ಲ. ಆ ವ್ಯಕ್ತಿಗೆ ಅಡಿಯಿಂದ ಮುಡಿಯ ವರೆಗೆ ದಾಲ್ಚಿನ್ನಿ ಪುಡಿಯಿಂದ ಸ್ನಾನ ಮಾಡಿಸಲಾಗುತ್ತದೆ.ಕೆಲವೊಮ್ಮೆ, ಆ ಪುಡಿ ದೇಹಕ್ಕೆ ಚೆನ್ನಾಗಿ ಮೆತ್ತಿಕೊಳ್ಳಲಿ ಎಂದು ನೀರನ್ನು ಕೂಡ ಸಿಂಪಡಿಸುತ್ತಾರಂತೆ. ಕೆಲವು ತರಲೇ ಪ್ರಿಯರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದಾಲ್ಚಿನ್ನಿ ಪುಡಿ ದೇಹಕ್ಕೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಲು ಮತ್ತು ಮಜಾ ಪಡೆಯಲು ದಾಲ್ಚಿನ್ನಿ ಪುಡಿಯೊಂದಿಗೆ ಮೊಟ್ಟೆಯನ್ನು ಕೂಡ ಬಳಸುತ್ತಾರಂತೆ.

ವಿಚಿತ್ರ ಸಂಪ್ರದಾಯ
ಈ ಸಂಪ್ರದಾಯದ ಆಚರಣೆಯಲ್ಲಿ ಕುಟುಂಬದ ಸದಸ್ಯರು ಮಾತ್ರವಲ್ಲ ಸ್ನೇಹಿತರು ಕೂಡ ಪಾಲ್ಗೊಳ್ಳುತ್ತಾರೆ. 25 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಯನ್ನು ಲೈಟ್ ಕಂಬ ಅಥವಾ ಮರವೊಂದಕ್ಕೆ ಕಟ್ಟಿ ಹಾಕಿ, ಆಕೆ ಅಥವಾ ಆತನ ಮೈಗೆ ಮೊಟ್ಟೆ ಹಾಗೂ ದಾಲ್ಚಿನ್ನಿ ಪುಡಿಯ ಸ್ನಾನ ಮಾಡಿಸಿ, ಕೀಟಲೆ ಮಾಡುತ್ತಾ ಮನರಂಜನೆ ಪಡೆಯುತ್ತಾರೆ.

ಪೆಪ್ಪರ್‍ಡೂಡ್ಸ್ ಮತ್ತು ಪೆಪ್ಪರ್ ಮೇಡೆನ್ಸ್
ಅಲ್ಲಿನ ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ನೀಡಿರುವ ಮಾಹಿತಿಯ ಪ್ರಕಾರ, ಈ ಸಂಪ್ರದಾಯ ನೂರಾರು ವರ್ಷ ಹಳೆಯದ್ದು, ಅಂದರೆ ಮಸಾಲೆ ಮಾರಾಟಗಾರರು ಮಸಾಲೆಗಳನ್ನು ಮಾರಲು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುತ್ತಿದ್ದಂತಹ ಕಾಲದ್ದು. ನಗರದಿಂದ ನಗರಕ್ಕೆ ಸುತ್ತುತ್ತಾ ಇದ್ದದ್ದರಿಂದ ಅವರು ಮದುವೆಯಾಗಲು ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿರಲಿಲ್ಲ ಮತ್ತು ದೀರ್ಘಕಾಲದ ವರೆಗೆ ಅವಿವಾಹಿತರಾಗಿ ಉಳಿಯುತ್ತಿದ್ದರು. ಅಂತಹ ಮಾರಾಟಗಾರ ಪುರುಷರನ್ನು ಪೆಪ್ಪರ್‍ಡೂಡ್ಸ್ ಮತ್ತು ಮಹಿಳೆಯರನ್ನು ಪೆಪ್ಪರ್ ಮೇಡೆನ್ಸ್ ಎಂದು ಕರೆಯಲಾಗುತ್ತಿತ್ತು.

ಇದನ್ನೂ ಓದಿ: Helicopter: ಆನ್​ಲೈನ್​ನಲ್ಲಿ ಹಳೆಯ ಹೆಲಿಕಾಪ್ಟರ್​ ಖರೀದಿಸಿ, ಕ್ಯಾಂಪ್​ ಹೌಸನ್ನಾಗಿ ಮಾರ್ಪಡಿಸಿದ ದಂಪತಿ!

ಡೆನ್ಮಾರ್ಕ್‍ನಲ್ಲಿ ಈ ಸಂಪ್ರದಾಯ ಇನ್ನೂ ಆಚರಣೆಯಲ್ಲಿ ಇದೆ ಎನ್ನುವುದೇನೋ ನಿಜ. ಹಾಗಂತ, ಇತರರು 25 ಒಳಗೆ ಮದುವೆಯಾಗದೆ ಇದ್ದರೆ ತಪ್ಪು ಎಂದು ಜನರು ಭಾವಿಸುವುದಿಲ್ಲ. ಏಕೆಂದರೆ, ಡ್ಯಾನಿಶ್ ಸಮಾಜದಲ್ಲಿ ಆರಂಭಿಕ ಮದುವೆಗೆ ಯಾವುದೇ ಅವಸರ ಇರುವುದಿಲ್ಲ. ಗಂಡಸರಿಗೆ ಮದುವೆಯಾಗುವ ಸರಾಸರಿ ವಯಸ್ಸು 34 ವರ್ಷಗಳು ಮತ್ತು ಮಹಿಳೆಯರಿಗೆ ಸರಾಸರಿ 32 ವರ್ಷಗಳು.
Published by:Ashwini Prabhu
First published: