ನೀವು Ola-Uberನಲ್ಲಿ ಓಡಾಡ್ತೀರಾ? ಹುಷಾರ್​.. ಅಪ್ಪಿ-ತಪ್ಪಿನೂ ಎಸಿ ಆನ್ ಮಾಡಿ ಅನ್ಬೇಡಿ!

ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ಪಶ್ಚಿಮ ಬಂಗಾಳ(West Bengal), ನವದೆಹಲಿ(Delhi), ನೋಯ್ಡಾ(Noida) ಹಾಗೂ ತೆಲಂಗಾಣಗಳಲ್ಲಿ ಓಲಾ ಮತ್ತು ಉಬರ್ ಚಾಲಕರು "ನೋ-ಎಸಿ"(No Ac ಪಾಲಿಸಿಯನ್ನು ಅಳವಡಿಸಿಕೊಂಡಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈಗಾಗಲೇ ನಮಗೆಲ್ಲ ತಿಳಿದಿರುವಂತೆ ದೇಶದೆಲ್ಲೆಡೆ ಕಳೆದ 2 ವಾರಗಳಿಂದ ಪೆಟ್ರೋಲ್(Petrol) ಹಾಗೂ ಡೀಸೆಲ್(Diesel) ಬೆಲೆಗಳು ಹೆಚ್ಚಾಗುತ್ತಿದೆ. ಸ್ವಂತ ವಾಹನ ಹೊಂದಿರುವವರೇ ನಿತ್ಯ ತಮ್ಮ ಜೇಬು ಸುಡುತ್ತಿರುವ ಈ ಬೆಲೆ ಹೆಚ್ಚಳದಿಂದ ತತ್ತರಿಸಿ ಹೋಗುತ್ತಿರುವಾಗ ಬಾಡಿಗೆ ಕಾರು(Rent Car) ಚಾಲಕರಿಗೆ ಇದರ ಬಿಸಿ ತಟ್ಟದೆ ಇರುತ್ತದೆಯೇ..? ಇನ್ನೊಂದು ಸಂಕಟವೆಂದರೆ ಅವರು ಬೇಕೆಂದಾಗಲೆಲ್ಲ ಬೆಲೆ ಏರಿಸುವಂತೆಯೂ ಇಲ್ಲ. ಹಾಗಾಗಿ ದೇಶಾದ್ಯಂತ ಸೇವೆ ನೀಡುತ್ತಿರುವ ಓಲಾ(Ola) ಮತ್ತು ಉಬರ್(Uber) ಚಾಲಕರು ಧರ್ಮ ಸಂಕಟದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಅಂತ ಹೇಳಬಹುದಾಗಿದೆ.ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ಪಶ್ಚಿಮ ಬಂಗಾಳ(West Bengal), ನವದೆಹಲಿ(Delhi), ನೋಯ್ಡಾ(Noida) ಹಾಗೂ ತೆಲಂಗಾಣಗಳಲ್ಲಿ ಓಲಾ ಮತ್ತು ಉಬರ್ ಚಾಲಕರು "ನೋ-ಎಸಿ"(No Ac ಪಾಲಿಸಿಯನ್ನು ಅಳವಡಿಸಿಕೊಂಡಿದ್ದಾರೆ. 

  ಓಲಾ-ಉಬರ್​​ನಲ್ಲಿ ಇನ್ಮುಂದೆ ಎಸಿ ಇಲ್ಲ!

  ಇದೀಗ ಈ ನೀತಿಯನ್ನು ಬೆಂಗಳೂರು ನಗರದಲ್ಲಿ ಓಡಾಡುವ ಓಲಾ ಮತ್ತು ಉಬರ್ ಚಾಲಕರು ಅನುಸರಿಸುತ್ತಿದ್ದಾರೆಂದು ಸುದ್ದಿಯಾಗಿದೆ. ಈಗ ಮೊದಲೇ ಬೇಸಿಗೆ ಕಾಲ. ಉದ್ಯಾನ ನಗರಿ ಬೆಂಗಳೂರಿನಲ್ಲೂ ತಾಪಮಾನ ಅಧಿಕವಾಗಿದ್ದು ಜನರು ಬಿಸಿಲ ಬೇಗೆಯಿಂದ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರಿನಲ್ಲಿ ಕುಳಿತು ಪ್ರಯಾಣಿಸುವಾಗ ಎಸಿ ಇಲ್ಲದೆ ಖಂಡಿತ ಪ್ರಯಾಣಿಸಲಾಗದು ಎಂಬಂತಹ ಸ್ಥಿತಿಯಿದ್ದು ಈಗ ಎಸಿ 'ಸೇವೆ' ಗಾಗಿ ಚಾಲಕರು ಹೆಚ್ಚಿನ ದರ ಕೇಳುತ್ತಿದ್ದಾರೆ. ಇಲ್ಲದೆ ಹೋದಲ್ಲಿ ಎಸಿ ಆನ್ ಮಾಡಲು ಒಪ್ಪುತ್ತಿಲ್ಲ ಎಂಬ ವರದಿಗಳು ಬೆಳಕಿಗೆ ಬಂದಿವೆ.

  ಗಗನಕ್ಕೇರಿದ ಪೆಟ್ರೋಲ್​-ಡೀಸೆಲ್​ ಬೆಲೆ!

  ಬೆಂಗಳೂರಿನಲ್ಲಿ ಮಾರ್ಚ್ 28ಕ್ಕೆ ನೂರು ರೂ. ಗಡಿಯಲ್ಲಿದ್ದ ಪೆಟ್ರೋಲ್ ಬೆಲೆ ಏಪ್ರಿಲ್ 5ರಂದು 110 ರೂ. ಗಳವರೆಗೆ ತಲುಪಿತ್ತು. ಇದು ಚಾಲಕರಿಗೆ ಸಾಕಷ್ಟು ಕಿರಿಕಿರಿ ಅನುಭವಿಸುವಂತೆ ಮಾಡಿದೆ ಎಂದರೂ ತಪ್ಪಿಲ್ಲ. ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲೂ ಕಾರು ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಶುಲ್ಕ ಕೇಳುತ್ತಿರುವ ಬಗ್ಗೆ ವರದಿಯಾಗಿವೆ.

  ಇದನ್ನೂ ಓದಿ: ಸೂಟು ಧರಿಸಿ, ಬೀದಿ ಬದಿಯಲ್ಲಿ ಚಾಟ್ಸ್ ಮಾರುತ್ತಿರುವ ಯುವಕನ ವಿಡಿಯೋ ವೈರಲ್

  ಕೆಲ ಬೆಂಗಳೂರಿಗರು ಕಾರಿನಲ್ಲಿ ಕುಳಿತು ಪ್ರಯಾಣಿಸುವ ಸಂದರ್ಭದಲ್ಲಿ ಎಸಿ ಆನ್ ಮಾಡಲು ಚಾಲಕರಿಗೆ ಹೇಳಿದರೂ ಅವರು ಒಪ್ಪುತ್ತಿಲ್ಲ ಎಂಬ ಬಗ್ಗೆ ಹೇಳಿಕೊಂಡಿದ್ದಾರೆನ್ನಲಾಗಿದೆ. ಚಾಲಕರಿಗೆ ಎಸಿ ಆನ್ ಮಾಡಲು ಹೇಳಿದರೆ ಅವರು ಕೋವಿಡ್ ನಿರ್ಬಂಧದ ಕಾರಣ ಹೇಳಿ ಆನ್ ಮಾಡುತ್ತಿಲ್ಲ. ಇಲ್ಲವೆ ಓಲಾದ ಪ್ರೈಮ್ ಇಲ್ಲವೇ ಸೆಡಾನ್ ಕ್ಲಾಸ್ ಸೇವೆಯಲ್ಲಿ ಮಾತ್ರ ಎಸಿ ಆನ್ ಮಾಡುವ ಕ್ರಮವಿದೆ ಎಂದು ಸಬೂಬು ಹೇಳುತ್ತಿದ್ದಾರೆಂದು ವರದಿಯಾಗಿದೆ.

  ಎಸಿ ಆನ್​ ಮಾಡಲು ಒಪ್ಪುತ್ತಿಲ್ವಂತೆ ಚಾಲಕರು!

  ತೆಲಂಗಾಣ ರಾಜ್ಯದಲ್ಲೂ ಚಾಲಕರು ಎಸಿ ಆನ್ ಮಾಡಲು ಒಪ್ಪುತ್ತಿಲ್ಲ ಎಂಬ ವರದಿಗಳು ಬಂದಿದ್ದು ಅದಕ್ಕೆ ಕಾರಣ ಕೇಳಿದರೆ ಚಾಲಕರು ಸದ್ಯ ಆಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿನ ಹೆಚ್ಚಳ ಹಾಗೂ ಅವರಿಗೆ ಸಿಗುತ್ತಿರುವ ಕಡಿಮೆ ಮೊತ್ತದ ಕಮಿಷನ್‌ಗಳಿಂದಾಗಿಯೇ ಎಸಿ ಆನ್ ಮಾಡಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆನ್ನಲಾಗಿದೆ.

  ಚಾಲಕರ ವಿರುದ್ಧ ಪ್ರಯಾಣಿಕರು ಗರಂ!

  ಇದಕ್ಕೆ ಸಂಬಂಧಿಸಿದಂತೆ ರಾಹುಲ್ ಶುಕ್ಲಾ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಓಲಾ ಮತ್ತು ಅದರ ಸಂಸ್ಥಾಪಕ ಭವೀಶ್ ಅಗರ್ವಾಲ್ ಅವರ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿ ಈ ರೀತಿ ಬರೆದುಕೊಂಡಿದ್ದಾರೆ, "ಬೆಂಗಳೂರಿನಲ್ಲಿ ನಿಮ್ಮ ಕ್ಯಾಬ್ ಚಾಲಕ ಕೋವಿಡ್ ನಿರ್ಬಂಧದ ಕಾರಣ ಹೇಳಿ ಎಸಿ ಆನ್ ಮಾಡಲಿಲ್ಲ ಮತ್ತು ಮಾಸ್ಕ್ ಸಹ ಧರಿಸಿರಲಿಲ್ಲ. ಈ ಬಗ್ಗೆ ನಾನು ದೂರು ದಾಖಲಿಸಿದಾಗ ಅದಕ್ಕೆ ಯಾವ ಕ್ರಮವನ್ನಾಗಲಿ ಅಥವಾ ರೀಫಂಡ್ ಸಹ ನನಗೆ ಸಿಗಲಿಲ್ಲ. ನಾವು ಕ್ಯಾಬ್ ಬುಕ್ ಮಾಡಿದಾಗ ಅವಶ್ಯಕತೆಯಿದ್ದಲ್ಲಿ ಎಸಿ ಬಳಸಬಹುದೆಂದೇ ಅರ್ಥೈಸಿಕೊಳ್ಳಲಾಗುತ್ತದೆ, ಅದು ಹಾಗಲ್ಲದಿದ್ದರೆ ನಾನು ಕ್ಯಾಬ್‌ಗಿಂತ ಆಟೋನಲ್ಲಿ ಪ್ರಯಾಣಿಸಲು ಇಷ್ಟಪಡುತ್ತೇನೆ" ಎಂದು ಅವರು ಹೇಳಿದ್ದಾರೆ.

  ಇದನ್ನೂ ಓದಿ: ಬಿಸಿಲಿನ ತಾಪದಲ್ಲಿ ಪ್ರಯಾಣಿಕರ ಪರದಾಟ ಕಂಡು ಆಟೋವನ್ನೇ ಹಸಿರಾಗಿಸಿದ ಚಾಲಕ

  ಪೂರ್ಣಿಮಾ ಎಂಬ ಇನ್ನೊಬ್ಬ ಬಳಕೆದಾರರು, "ನಾನು ಸದ್ಯ ಬೆಂಗಳೂರಿನಲ್ಲಿ ಮಹದೇವಪುರದಿಂದ ಬಿಳೇಕಹಳ್ಳಿವರೆಗೆ ಓಲಾದಲ್ಲಿ ಪ್ರಯಾಣಿಸುತ್ತಿದ್ದೇನೆ. ನಾನು ಓಲಾ ಮಿನಿ ಬುಕ್ ಮಾಡುತ್ತಿದ್ದ ಸಂದರ್ಭದಲ್ಲಿ ಅದು ತಾನಾಗಿಯೇ ಓಲಾ ಪ್ರೈಮ್ ಸೆಡಾನ್ ವರ್ಗಕ್ಕೆ ಅಪ್‌ಗ್ರೇಡ್‌ ಆಯಿತು. ಈಗ ನಾನು ಚಾಲಕನಿಗೆ ಎಸಿ ಆನ್ ಮಾಡಲು ಹೇಳಿದರೆ ಚಾಲಕ ಓಲಾ ಮಿನಿನಲ್ಲಿ ಎಸಿ ಇರುವುದಿಲ್ಲ ಎಂದು ಹೇಳುತ್ತಿದ್ದಾನೆ, ಈ ಬಗ್ಗೆ ಕ್ರಮವಹಿಸಿ" ಎಂದು ದೂರನ್ನು ಸಮಾಜಿಕ ಮಾಧ್ಯಮದ ಮೂಲಕ ಓಲಾಗೆ ಟ್ಯಾಗ್ ಮಾಡಿ ದಾಖಲಿಸಿದ್ದಾರೆ.
  Published by:Vasudeva M
  First published: