• Home
  • »
  • News
  • »
  • trend
  • »
  • Mosquito: ಸೊಳ್ಳೆಗಳು ನಿಮಗೇ ಹೆಚ್ಚು ಕಚ್ಚುತ್ತಾ? ಈ ಕುರಿತು ಸಂಶೋಧನೆ ತಿಳಿಸಿದ ಸತ್ಯ ಇದು!

Mosquito: ಸೊಳ್ಳೆಗಳು ನಿಮಗೇ ಹೆಚ್ಚು ಕಚ್ಚುತ್ತಾ? ಈ ಕುರಿತು ಸಂಶೋಧನೆ ತಿಳಿಸಿದ ಸತ್ಯ ಇದು!

ಸೊಳ್ಳೆ

ಸೊಳ್ಳೆ

ಬೇರೆ ಯಾರಿಗಿಂತಲೂ ಹೆಚ್ಚಾಗಿ ಸೊಳ್ಳೆ ನಿಮ್ಮನ್ನು ಹೆಚ್ಚು ಕಡಿಯುತ್ತಿದೆಯೇ ಹಾಗಾದರೆ ಈ ಸಂಶೋಧನೆ ತಿಳಿಸಿದ ಅಂಶ ಇದು.

  • Trending Desk
  • Last Updated :
  • New Delhi, India
  • Share this:

ಬೇರೆ ಯಾರಿಗಿಂತಲೂ ಹೆಚ್ಚಾಗಿ ಸೊಳ್ಳೆ (Mosquito) ನಿಮ್ಮನ್ನು ಹೆಚ್ಚು ಕಡಿಯುತ್ತಿದೆಯೇ? ಹಾಗಿದ್ದರೆ ಇದಕ್ಕೆ ಕಾರಣ ಕೂಡ ಇದ್ದೇ ಇರುತ್ತದೆ. ಜರ್ನಲ್ ಸೆಲ್‌ನಲ್ಲಿ ಕಂಡುಬಂದಿರುವ ಹೊಸ ಅಧ್ಯಯನದ (Study) ಪ್ರಕಾರ, ಕೆಲವು ಜನರೆಡೆಗೆ ಸೊಳ್ಳೆಗಳು ಅಯಸ್ಕಾಂತಗಳಂತೆ ಆಕರ್ಷಿಸಲ್ಪಡುತ್ತವೆ. ಇದಕ್ಕೆ ಕಾರಣ ಅವರ ದೇಹವು ಹೊರಸೂಸುವ ವಾಸನೆಯಾಗಿದ್ದು, ಇದರಿಂದ ಆಕರ್ಷಿತಗೊಂಡು ಸೊಳ್ಳೆಗಳು ಅವರನ್ನು ಹೆಚ್ಚಾಗಿ ಕಚ್ಚುತ್ತವೆ (Bite) ಎಂದು ಸಂಶೋಧನೆಯು ತಿಳಿಸಿದೆ.


ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲ


ತಮ್ಮ ತ್ವಚೆಯ ಮೇಲೆ ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲವನ್ನು ಹೊಂದಿರುವ ಜನರು ಡೆಂಗ್ಯೂ, ಚಿಕೂನ್‌ಗುನ್ಯಾ, ಹಳದಿ ಜ್ವರ ಮತ್ತು ಜಿಕಾದಂತಹ ರೋಗಗಳನ್ನು ಹರಡಲು ಕಾರಣವಾದ ಹೆಣ್ಣು ಸೊಳ್ಳೆಯ ಪ್ರಕಾರವಾದ ಈಡಿಸ್ ಈಜಿಪ್ಟಿಗೆ 100 ಪಟ್ಟು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.


ಮನುಷ್ಯರೆಡೆಗೆ ಸೊಳ್ಳೆಗಳ ಆಕರ್ಷಣೆಯು ಕಾಲಾನಂತರದಲ್ಲಿ ಸ್ಥಿರವಾಗಿರುತ್ತದೆ ಇದು ಎಷ್ಟೆಂದರೆ ನೀವು ಆಹಾರದಲ್ಲಿ ಅಥವಾ ದೇಹವನ್ನು ಶುಚಿಯಾಗಿಡುವ ವಿಧಾನದಲ್ಲಿ ಎಷ್ಟು ಬದಲಾವಣೆಗಳನ್ನು ಮಾಡಿಕೊಂಡರೂ ಸೊಳ್ಳೆಗಳು ಆಕರ್ಷಣೆಗೊಳ್ಳುವುದು ಹಾಗೆಯೇ ಇರುತ್ತದೆ ಎಂದಾಗಿದೆ.


ಸೊಳ್ಳೆಗಳು ಹೆಚ್ಚು ಆಕರ್ಷಣೆಗೆ ಒಳಗಾಗುತ್ತವೆ


ಚರ್ಮದ ಮೇಲೆ ಉತ್ಪತ್ತಿಯಾಗುವ ಕೆಲವು ರಾಸಾಯನಿಕಗಳು ಸೊಳ್ಳೆಗಳನ್ನು ಆಕರ್ಷಿಸುವ ವಾಸನೆಯನ್ನು ಬಿಡುಗಡೆ ಮಾಡುವುದರಿಂದ ಕೆಲವು ಜನರೆಡೆಗೆ ಸೊಳ್ಳೆಗಳು ಹೆಚ್ಚು ಆಕರ್ಷಣೆಗೊಂಡು ಅವರನ್ನು ಕಡಿಯುತ್ತವೆ ಎಂದು ಹೊಸ ಅಧ್ಯಯನ ತಿಳಿಸಿದೆ. ನಿಮ್ಮ ತ್ವಚೆಯಲ್ಲಿ ರಾಸಾಯನಿಕದ ಅಂಶ ಹೆಚ್ಚಿದ್ದರೆ ಸೊಳ್ಳೆ ಕಡಿತ ನಿಮಗೆ ಇನ್ನೂ ಹೆಚ್ಚಿರುತ್ತದೆ ಎಂದು ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಲೇಖಕ ಲೆಸ್ಲಿ ವೊಸ್ಶಾಲ್ ಸೈಂಟಿಫಿಕ್ ತಿಳಿಸುತ್ತಾರೆ.


ಸೊಳ್ಳೆ ಕಡಿಯುವುದರ ಬಗ್ಗೆ ಜಾನಪದ ಕಥೆಗಳಿದ್ದರೂ, ಬಲವಾದ ವೈಜ್ಞಾನಿಕ ಪುರಾವೆಗಳನ್ನು ತಿಳಿಸುವ ಹೆಚ್ಚಿನ ವಿವರಣೆಗಳು ಇನ್ನೂ ಪ್ರವರ್ಧಮಾನಕ್ಕೆ ಬಂದಿಲ್ಲ ಎಂದು ಲೆಸ್ಲಿ ತಿಳಿಸಿದ್ದಾರೆ. ಈ ಕುರಿತು ಸಂಶೋಧನೆಯನ್ನು ನಡೆಸಲಾಯಿತು. ವಿಶ್ವವಿದ್ಯಾಲಯದ ಅರತವತ್ತನಾಲ್ಕು ಸ್ವಯಂ ಸೇವಕರಿಗೆ ತ್ವಚೆಯ ವಾಸನೆಯನ್ನು ಗ್ರಹಿಸಲೆಂದೇ ಮುಂದೋಳಿನ ಸುತ್ತಲೂ ನೈಲಾನ್ ಕೈಗವಸನ್ನು ಧರಿಸಲು ತಿಳಿಸಲಾಯಿತು.


ಅಧ್ಯಯನ ಕೂಡ ಇದನ್ನು ಸಾಬೀತುಪಡಿಸಿದೆ


ಉದ್ದನೆಯ ಕೊಳವೆಯಿರುವ ಟ್ಯೂಬ್‌ಗೆ ಪ್ರತ್ಯೇಕ ಬಲೆಗಳನ್ನು ಹಾಕಿ ಕೈಗವಸುಗಳನ್ನು ಧರಿಸಲಾಯಿತು ನಂತರ ಡಜನ್‌ಗಟ್ಟಲೆ ಸೊಳ್ಳೆಗಳನ್ನು ಬಿಡುಗಡೆ ಮಾಡಲಾಯಿತು. ಎರಡು ಬಗೆಯ ಪ್ರಯೋಗಗಳನ್ನು ನಡೆಸುವುದಕ್ಕಾಗಿ ನೈಲಾನ್ ಕೈಗವಸಿನ ಕೆಲವು ತುಂಡುಗಳನ್ನು ಕತ್ತರಿಸಲಾಯಿತು ಹಾಗೂ ಭಾಗವಹಿಸಿದವರಿಂದ ಸಂಗ್ರಹಿಸಲಾದ ಉದ್ದನೆಯ ಟ್ಯೂಬ್‌ನ ಕೊನೆಯನ್ನು ಈಡಿಸ್ ಈಜಿಪ್ಟಿ ಸೊಳ್ಳೆಗಳಿಂದ ತುಂಬಿದ ಮುಚ್ಚಿದ ಪಾತ್ರೆಯಲ್ಲಿ ಇರಿಸಲಾಯಿತು.


ಇದನ್ನೂ ಓದಿ: ರಿಲಯನ್ಸ್‌ ಜಿಯೋದಿಂದ ಮೊದಲ ಲ್ಯಾಪ್​ಟಾಪ್​ ಬಿಡುಗಡೆ, ಅದು ಇಷ್ಟು ಕಡಿಮೆ ಬೆಲೆಗೆ!


ಈ ಅಧ್ಯಯನವನ್ನು ನಡೆಸಿದ ಲೇಖಕಿ ಮರಿಯಾ ತಿಳಿಸಿರುವಂತೆ ಸೊಳ್ಳೆಗಳು ಹೆಚ್ಚಾಗಿ ಅತ್ಯಂತ ಆಕರ್ಷಕವಾದ ವಸ್ತುಗಳ ಕಡೆಗೆ ಆಕರ್ಷಣೆಗೊಳ್ಳುತ್ತವೆ ಎಂಬುದು ಸ್ಪಷ್ಟವಾಯಿತು ಎಂದು ತಿಳಿಸಿದ್ದಾರೆ. ಅಯಸ್ಕಾಂತೀಯ ಸೊಳ್ಳೆಯು ಇತರ ಸೊಳ್ಳೆಗಳಿಗಿಂತ 100 ಪಟ್ಟು ಹೆಚ್ಚು ಆಕರ್ಷಕವಾಗಿರುತ್ತವೆ ಎಂಬುದನ್ನು ಆಕೆ ಗಮನಿಸಿರುವುದಾಗಿ ತಿಳಿಸಿದ್ದಾರೆ.


ಹೆಚ್ಚಿನ ಮಟ್ಟದ ಆಮ್ಲಜನಕ ಪತ್ತೆ


ಸೊಳ್ಳೆಗಳು ಒಮ್ಮೆ ಆಕರ್ಷಿತರಾದರೆ ಅವರನ್ನು ಬಿಟ್ಟು ಹೋಗುವುದಿಲ್ಲ ಎಂಬುದನ್ನು ಈ ಅಧ್ಯಯನವು ಸಾಬೀತುಪಡಿಸಿದೆ. ಅಯಸ್ಕಾಂತೀಯ ಸೊಳ್ಳೆಗಳು ಹಾಗೆಯೇ ಉಳಿದುಕೊಂಡಿವೆ ಎಂದು ಫ್ಲೋರಿಡಾ ವಿಶ್ವವಿದ್ಯಾನಿಲಯದ ನ್ಯೂರೋಜೆನೆಟಿಸ್ಟ್ ಮ್ಯಾಟ್ ಡಿಜೆನ್ನಾರೊ ತಿಳಿಸಿದ್ದಾರೆ.


ಸೊಳ್ಳೆಗಳು ಆಕರ್ಷಣೆಗೊಂಡವರ ತ್ವಚೆಯಲ್ಲಿ ಹೆಚ್ಚಿನ ಮಟ್ಟದ ಆಮ್ಲಜನಕವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ತ್ವಚೆಯ ಮೇಲೆ ಇರುವ ಈ ಜಿಡ್ಡಿನ ಅಣುಗಳು ನೈಸರ್ಗಿಕ ಆರ್ಧ್ರಕ ಪದರದ ಭಾಗವಾಗಿದೆ ಮತ್ತು ವಿಭಿನ್ನ ಜನರು ಅವುಗಳನ್ನು ವಿಭಿನ್ನ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಅದೃಷ್ಟ ಅಂದ್ರೆ ಇದೇ: ಇತ್ತ ಸಾಲ ವಸೂಲಾತಿಗೆ ನೋಟಿಸ್ ಬಂದ್ರೆ ಅತ್ತ ಲಾಟರಿ ಕೈ ಹಿಡಿಯಿತು!


ತ್ವಚೆಯ ಮೇಲೆ ವಾಸಿಸುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಈ ಅಣುಗಳನ್ನು ತಿನ್ನುತ್ತವೆ ಹಾಗೂ ತ್ವಚೆಯ ಮೇಲೆ ವಾಸನೆಯ ಅಂಶಗಳನ್ನು ಉತ್ಪತ್ತಿಗೊಳಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಧ್ಯಯನವು ಹಲವಾರು ತಿಂಗಳುಗಳ ಕಾಲ ನಡೆದಿದ್ದು ಪರೀಕ್ಷೆಗಳನ್ನು ಕೂಡ ಹಲವಾರು ಬಾರಿ ನಡೆಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.


ಸೊಳ್ಳೆಗಳ ಈ ಆಯಸ್ಕಾಂತೀಯ ಗುಣವು ನಿಮ್ಮ ಸಂಪೂರ್ಣ ಜೀವಿತದವರೆಗೆ ಹಾಗೆಯೇ ಇರುತ್ತದೆ ನಿಮ್ಮ ಸ್ವಭಾವವನ್ನು ಆಧರಿಸಿ ಇದು ಒಳ್ಳೆಯ ಸುದ್ದಿಯೂ ಆಗಿರಬಹುದು ಕೆಟ್ಟ ಸುದ್ದಿಯೂ ಆಗಿರಬಹುದು ಎಂದು ತಿಳಿಸಿದ್ದಾರೆ.

First published: