Thyroid: ಯಾರನ್ನ ಕೇಳಿದ್ರೂ ಥೈರಾಯ್ಡ್ ಸಮಸ್ಯೆ ಅಂತಿದ್ದಾರಲ್ಲಾ, ಭಾರತದಲ್ಲಿ ಇದು ಹೆಚ್ಚಾಗೋಕೆ ಏನು ಕಾರಣ? ತಡೆಯೋದು ಹೇಗೆ?

Thyroid Issues: ಬೆಂಗಳೂರೊಂದರಲ್ಲೇ 9.23%% ವಯಸ್ಕರು ಹೈಪೋಥರಾಯ್ಡಿಸಮ್‍ನಿಂದ ಬಳಲುತ್ತಿದ್ದಾರೆ. ಹಾಗೆ ನೋಡಿದರೆ, ಅನೇಕ ವೇಳೆ ಈ ಕಾಯಿಲೆಯು ಆನುವಂಶಿಕವಾಗಿದ್ದು, ಕುಟುಂಬದಲ್ಲಿ ಥೈರಾಯ್ಡ್ ಕಾಯಿಲೆಯ ಇತಿಹಾಸವಿದ್ದರೆ, ಹೈಪೋಥೈರಾಯ್ಡಿಸಮ್ ಬೆಳೆಸಿಕೊಳ್ಳುವ ಒಟ್ಟಾರೆ ಅಪಾಯವೂ ಹೆಚ್ಚಾಗಿತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Hypothyroidism: ಭಾರತದಲ್ಲಿ 10 ಮಂದಿ ವಯಸ್ಕರು ಪೈಕಿ ಕನಿಷ್ಟ 1 ವ್ಯಕ್ತಿಯಾದರೂ ಅಥವಾ 10.95% ಹೈಪೋಥೈರಾಯ್ಡಿಸಮ್ ಅಥವಾ ಕಡಿಮೆ ಥೈರಾಯ್ಡ್ ಕಾರ್ಯಾಚರಣೆಯ ರೋಗದಿಂದ ಬಾಧಿತರಾಗಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇರುವ 2%ನಿಂದ 5%ವರೆಗಿನ ಪ್ರಚಲಿತತೆಗೆ ಹೋಲಿಸಿದರೆ ಇದು ಗಣನೀಯವಾಗಿ ಹೆಚ್ಚಾಗಿದೆ. ಬೆಂಗಳೂರೊಂದರಲ್ಲೇ 9.23%% ವಯಸ್ಕರು ಹೈಪೋಥರಾಯ್ಡಿಸಮ್‍ನಿಂದ ಬಳಲುತ್ತಿದ್ದಾರೆ. ಹಾಗೆ ನೋಡಿದರೆ, ಅನೇಕ ವೇಳೆ ಈ ಕಾಯಿಲೆಯು ಆನುವಂಶಿಕವಾಗಿದ್ದು, ಕುಟುಂಬದಲ್ಲಿ ಥೈರಾಯ್ಡ್ ಕಾಯಿಲೆಯ ಇತಿಹಾಸವಿದ್ದರೆ, ಹೈಪೋಥೈರಾಯ್ಡಿಸಮ್ ಬೆಳೆಸಿಕೊಳ್ಳುವ ಒಟ್ಟಾರೆ ಅಪಾಯವೂ ಹೆಚ್ಚಾಗಿತ್ತದೆ. ಅಧಿಕ ಪ್ರಚಲಿತತೆ ಹಾಗು ಇದರೊಂದಿಗೆ ಬರುವ ಹೊರೆಯ ಹೊರತಾಗಿಯೂ, ಥೈರ್ಯಾಡ್ ಕಾಯಿಲೆಗಳು, ಇತರ ಪ್ರಸರಣವಾಗದ ರೋಗಗಳ ಜೊತೆಗೆ(ಎನ್‍ಎಸ್‍ಡಿಗಳು), ನಿರ್ಲಕ್ಷ್ಯಕ್ಕೊಳಗಾಗುತ್ತವೆ. ಪ್ರಸ್ತುತ ಇರುವ ಪರಿಸ್ಥಿತಿಗಳಲ್ಲಿ, ಇಂತಹ ದೀರ್ಘಾವಧಿ ಆರೋಗ್ಯ ಸ್ಥಿತಿಗಳನ್ನು ನಿಭಾಯಿಸುವಲ್ಲಿ ಕಣ್ಣಿಗೆ ಕಾಣುವ ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡಲು, ಅಬಾಟ್, ಹಲವು ಯೋಜನೆಗಳ ಮೂಲಕ, ಥೈರಾಯ್ಡ್ ಕಾಯಿಲೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುವ ಮತ್ತು ನಿಯಮಿತ ಸ್ಕ್ರೀನಿಂಗ್‍ನ ಅಗತ್ಯವನ್ನು ಎತ್ತಿಹಿಡಿಯುವ ಜಾಗೃತಿಯನ್ನು ಹೆಚ್ಚಿಸಲು ಬದ್ಧವಾಗಿದೆ.

ಜೀರ್ಣಕ್ರಿಯೆ, ದೇಹದ ಬೆಳವಣಿಗೆ ಹಾಗು ಅಭಿವೃದ್ಧಿಯಲ್ಲಿ ಥೈರಾಯ್ಡ್ ಗ್ರಂಥಿಯು ಪ್ರಮುಖ ಪಾತ್ರ ವಹಿಸುವ ಸಮಯದಲ್ಲೇ, ಶಕ್ತಿ ಮಟ್ಟಗಳು, ತೂಕ, ಹೃದಯದ ಬಡಿತದ ಪ್ರಮಾಣ, ಮತ್ತು ಮೂಡ್ ಒಳಗೊಂಡಂತೆ, ಅನೇಕ ಕಾರ್ಯಾಚರಣೆಗಳನ್ನು ಕೂಡ ನಿಯಂತ್ರಿಸುತ್ತಿರುತ್ತದೆ. ಥೈರಾಯ್ಡ್ ಗ್ರಂಥಿಯು, ದೇಹದ ಅಗತ್ಯಗಳನ್ನು ಪೂರೈಸುವಷ್ಟು ಪ್ರಮಾಣದಲ್ಲಿ ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪತ್ತಿ ಮಾಡದಿದ್ದಾಗ ಹೈಪೋಥೈರಾಯ್ಡಿಸಮ್ ಏರ್ಪಡುತ್ತದೆ.

ಭಾರತದ ಎಂಟು ನಗರಗಳಾದ್ಯಂತ ನಡೆಸಿದ ಒಂದು ಅಧ್ಯಯನದ ಪ್ರಕಾರ, ಹೈಪೋಥೈರಾಯ್ಡಿಸಮ್‍ನೊಂದಿಗೆ ಜೀವಿಸುತ್ತಿರುವ ಜನರ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಮಂದಿ ಯಾವುದೇ ರೋಗಪತ್ತೆಯಿಲ್ಲದೆ ರೋಗವನ್ನು ಅನುಭವಿಸುತ್ತಿರುತ್ತಾರೆ. ಹಾಗಾಗಿ, ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿರುವ ಬಹುದೊಡ್ಡ ಸಂಖ್ಯೆಯ ಮಂದಿ ಚಿಕಿತ್ಸೆಯನ್ನೇ ಪಡೆದುಕೊಳ್ಳದಿರಬಹುದು. ಈ ಕಡಿಮೆ ಜಾಗೃತಿಯು, ನಿತ್ರಾಣ, ಅಧಿಕ ತೂಕಗಳಿಕೆ, ಮಲಬದ್ಧತೆ, ಒಣತ್ವಚೆ, ನೆಗಡಿಗೆ ಅಸಹಿಷ್ಣುತೆ, ಸ್ನಾಯು ಸೆಳೆತ, ಮತ್ತು ಊದಿಕೊಂಡ ಕಣ್ಣೆವೆಯಂತಹ ಅನಿರ್ದಿಷ್ಟ ಲಕ್ಷಣಗಳು ಏರ್ಪಡುವುದಕ್ಕೆ ಕಾರಣವಾಗುತ್ತಿದೆ .

ಇದನ್ನೂ ಓದಿ: Breastfeeding: ಎದೆಹಾಲು ನೀಡಿದ್ರೆ ಮಗುವಿಗೆ ಕ್ಯಾನ್ಸರ್​ನಿಂದ ರಕ್ಷಣೆ ಸಿಗುತ್ತೆ, ಹಾಲೂಡಿಸುವ ಸರಿಯಾದ ವಿಧಾನ ಏನು? ವೈದ್ಯರು ತಿಳಿಸಿದ್ದಾರೆ...

ಭಾರತೀಯ ಜನಸಂಖ್ಯೆಯಾದ್ಯಂತ ಈ ಪರಿಸ್ಥಿತಿಗೆ ಸ್ಕ್ರೀನಿಂಗ್ ಮಾಡುವುದು ಬಹಳ ಕಡಿಮೆ ಇದೆ. ಆದರೂ, ಥೈರಾಯ್ಡ್ ಕಾಯಿಲೆಗಳಿಗೆ ಚಿಕಿತ್ಸೆ ನೀಡದಿದ್ದರೆ, ಕೊಲೆಸ್ಟೆರಾಲ್ ಮಟ್ಟಗಳು ಹೆಚ್ಚಾಗುವುದು, ಅನಿಯಮಿತ ಋತುಚಕ್ರ ಮತ್ತು ಖಿನ್ನತೆ ಏರ್ಪಡುವುದು ಮಾತ್ರವಲ್ಲದೆ, ಗಂಭೀರವಾದ ಹೃದ್ರೋಗ ಸಮಸ್ಯೆಗಳು ಹಾಗು ನರರೋಗ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು.  ಒಟ್ಟಾರೆಯಾಗಿ, ಥೈರಾಯ್ಡ್ ಕಾಯಿಲೆಗಳು, ಒಬ್ಬ ವ್ಯಕ್ತಿಯ ದಿನನಿತ್ಯದ ಜೀವನದ ಗುಣಮಟ್ಟ, ಉದ್ಯೋಗ ಕಾರ್ಯಕ್ಷಮತೆ, ಮತ್ತು ಆರ್ಥಿಕ ಉತ್ಪಾದಕತೆಯನ್ನು ಬಾಧಿಸಬಹುದಾಗಿದೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೈಪೋಥೈರಾಯ್ಡಿಸಮ್ ಏರ್ಪಡಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗಿದ್ದು ಇವರಲ್ಲಿ ಬಂಜೆತನ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(PCOS)ನ ಅಪಾಯವೂ ಹೆಚ್ಚಾಗಿರುತ್ತದೆ.  ಗರ್ಭಿಣಿ ಮಹಿಳೆಯರಲ್ಲಿ ಹೈಪೋಥೈರಾಯ್ಡಿಸಮ್, ಅಂಡಧಾರಕ(ಪ್ಲೆಸೆಂಟಾ) ಅಸಹಜತೆಗಳು, ರಕ್ತಹೀನತೆ, ಪ್ರೀಎಕ್ಲಾಂಪ್ಸಿಯ, ಗರ್ಭಪಾತ, ಮತ್ತು ಹೆರಿಗೆನಂತರದ ರಕ್ತಸ್ರಾವದ ಅಪಾಯ ಒಳಗೊಂಡಂತೆ, ಚಿಂತಾಜನಕ ಸಮಸ್ಯೆಗಳನ್ನುಂಟು ಮಾಡುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಥೈರಾಯ್ಡ್ ಕಾಯಿಲೆಯ ರೋಗಪತ್ತೆಗಾಗಿ ಸ್ಕ್ರೀನಿಂಗ್‍ಗೆ ಒಳಗಾಗುವಂತೆ ಜಗತ್ತಿನಾದ್ಯಂತ ವೈದ್ಯರು  ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ: Weight Loss: ತೂಕ ಇಳಿಸೋಕೆ ಮೊದಲು ಮೆದುಳನ್ನು ರೆಡಿ ಮಾಡಿ, ವಿಜ್ಞಾನಿಗಳು ಹೇಳಿದ್ದಾರೆ ಹೊಸಾ ಟ್ರಿಕ್!

ಥೈರಾಯ್ಡ್ ಸಂಬಂಧಿತ ಪರಿಸ್ಥಿತಿಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವ ಅಗತ್ಯವನ್ನು ಒತ್ತಿಹೇಳುತ್ತಾ, ಬೆಂಗಳೂರಿನ ಸೆಂಟರ್ ಫಾರ್ ಡಯಾಬಿಟೀಸ್ ಅಂಡ್ ಎಂಡೋಕ್ರೈನ್ ಡಿಸಾರ್ಡರ್ಸ್‍ನ ಹಿರಿಯ ಸಮಾಲೋಚಕ ಎಂಡೋಕ್ರಿನಾಲಜಿಸ್ಟ್ ಆದ ಡಾ. ಪ್ರಸನ್ನ ಕುಮಾರ್ ಅವರು, “ಬೆಂಗಳೂರೊಂದರಲ್ಲೇ ನಾವು 3.81% ಹೈಪೋಥೈರಾಯ್ಡಿಸಮ್ ಸಂದರ್ಭಗಳು ಪತ್ತೆಯಾಗದೇ ಹೋಗುವುದನ್ನು ಕಾಣುತ್ತಿದ್ದೇವೆ. 35 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಕರು, ನಿರ್ದಿಷ್ಟವಾಗಿ ಗರ್ಭಿಣಿ ಮತ್ತು ಮಧ್ಯ ವಯಸ್ಕ ಮಹಿಳೆಯರು, ಹೆಚ್ಚಿನ ಅಪಾಯದಲ್ಲಿದ್ದು ಥೈರಾಯ್ಡ್ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ, ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪತ್ತೆಯಾಗದ ಹೈಪೋಥೈರಾಯ್ಡಿಸಮ್‍ನಿಂದ, ಮಧುಮೇಹ ಹಾಗು ಏರುರಕ್ತದೊತ್ತಡದಂತಹ ಸಹರೋಗಗಳು ಏರ್ಪಡುವ ಅಪಾಯ ಹೆಚ್ಚಾಗುತ್ತದೆ.

ಟೈಪ್ 2 ಮಧುಮೇಹ(T2DM ಮತ್ತು ಥೈರಾಯ್ಡ್ ಕಾರ್ಯವೈಫಲ್ಯದ ನಡುವಿನ ವೈದ್ಯಕೀಯ ಸಂಬಂಧಕ್ಕೆ, ಹಲವು ಜೀವರಾಸಾಯನಿಕ, ವಂಶವಾಹಿ, ಮತ್ತು ಹಾರ್ಮೋನು ಕಾರ್ಯವೈಫಲ್ಯಗಳ ನಡುವಿನ ಅಂತರ್ಬದಲಾವಣೆಯೇ ಕಾರಣ ಎಂದು ನಂಬಲಾಗಿದೆ. T2DMನ ಅಸಮರ್ಪಕ ನಿರ್ವಹಣೆಯಿಂದ ಮಧುಮೇಹಿಗಳಲ್ಲಿ ಇನ್ಸುಲಿನ್ ನಿರೋಧಕತೆ, ಹೈಪರ್ ಇನ್ಸುಲಿನೀಮಿಯ(ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವುದು), ಮತ್ತು ಹೈಪೋಗ್ಲೈಸೀಮಿಕ್(ತಗ್ಗಿದ ಗ್ಲುಕೋಸ್ ಪ್ರಮಾಣ) ಎಪಿಸೋಡ್‍ಗಳ ಅಪಾಯ ಹೆಚ್ಚಾಗುವುದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Tata Tiago NRG: ಹೊಸಾ ರೂಪದೊಂದಿಗೆ ಬಂದಿದೆ ಟಿಯಾಗೊ, ಹೊಸಾ ಫೀಚರ್ಸ್ ಏನಿದೆ, ಬೆಲೆ ಎಷ್ಟು? ಫುಲ್ ಡೀಟೆಲ್ಸ್

11 ತತ್ಪರಿಣಾಮವಾಗಿ,  T2DMದಲ್ಲಿ ಇದು ಹೃದ್ರೋಗಗಳ ಅಪಾಯವನ್ನೂ ಹೆಚ್ಚಿಸುತ್ತದೆ.  ಸಮಯಕ್ಕೆ ಸರಿಯಾಗಿ ರೋಗಪತ್ತೆ ಮಾಡುವುದನ್ನು ಖಾತರಿಪಡಿಸುವುದಕ್ಕೆ ಪದೇ ಪದೇ ಸ್ಕ್ರೀನಿಂಗ್‍ಗೆ ಒಳಗಾಗುವುದರಿಂದ ಮಾತ್ರ ಇದನ್ನು ಕಡಿಮೆ ಮಾಡಬಹುದು.  ಇದರಿಂದ, ಆರಂಭಿಕ ಹಂತದಲ್ಲೇ ಹೈಪೋಥೈರಾಯ್ಡಿಸಮ್‍ನ ಚಿಕಿತ್ಸೆ ಮತ್ತು ರೋಗನಿರ್ವಹಣೆಯನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ.” ಎಂದರು.

ಭಾರತದ ಆರೋಗ್ಯಶುಶ್ರೂಷಾ ವ್ಯವಸ್ಥೆಯ ಮೇಲೆ ಬೀಳುವ ಪ್ರಸ್ತುತದ ಮತ್ತು ಭವಿಷ್ಯತ್ತಿನ ಒತ್ತಡಗಳನ್ನು ಕಡಿಮೆ ಮಾಡಲು ಹೈಪೋಥೈರಾಯ್ಡಿಸಮ್ ಮತ್ತು ಅದರ ತತ್ಸಂಬಂಧಿತ ಸಂಕೀರ್ಣ ಸಮಸ್ಯೆಗಳನ್ನು ನಿವಾರಿಸುವ ಅಗತ್ಯವು ಹೆಚ್ಚಾಗುತ್ತಿದೆ.
Published by:Soumya KN
First published: