Well Shape: ಬಾವಿ ವೃತ್ತಾಕಾರದಲ್ಲಿರಲು ಇದೆ ಕಾರಣ!

ಬಾವಿ ಏಕೆ ವೃತ್ತಾಕಾರದಲ್ಲಿಯೇ ಇರುತ್ತದೆ ಎಂದು ಯಾರಾದರೂ ಬಲ್ಲಿರಾ, ಇದರ ವೈಜ್ಞಾನಿಕ ಸತ್ಯದ ಬಗ್ಗೆ ಯೋಚಿದ್ದೀರಾ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಿಂದಿನ ಕಾಲದಲ್ಲಿ ಬಾವಿಗಳನ್ನು(well) ತೋಡಿ ಕೃಷಿಗೆ ನೀರಾವರಿಯನ್ನು ಒದಗಿಸುವುದು ಅತ್ಯಂತ ಸುಲಭದ ಕೆಲಸವಾಗಿತ್ತು. ಪರಿಣಿತರು ಒಂದು ತಿಂಗಳೊಳಗೆ ಬಾವಿ ತೋಡಿಕೊಡುತ್ತಿದ್ದರು. ಈಗಲೂ ಕಡಿಮೆ ಖರ್ಚಿನಲ್ಲಿ ಬಾವಿಯನ್ನು ತೆಗೆಯಬಹುದಾಗಿದೆ. ಕೃಷಿಗೆ ಕಡಿಮೆ ಖರ್ಚಿನಲ್ಲಿ ನೀರೊದಗಿಸಬಹುದಾಗಿದೆ. ಬಾವಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಕುಡಿಯುಲು, ಗೃಹಬಳಕೆಗೆ ಉಪಯುಕ್ತ. ಭತ್ತ, ರಾಗಿ, ಜೋಳ, ಬೇಳೆಕಾಳುಗಳು, ನೆಲಗಡಲೆ, ಕಬ್ಬು, ಹಣ್ಣು, ತರಕಾರಿ, ಹಿಪ್ಪುನೇರಳೆ(Paddy, millet, corn, pulses, groundnut, sugarcane), ತೋಟದ ಬೆಳೆಗಳು ಎಲ್ಲವೂ ಬಾವಿಯ ನೀರಿನಿಂದಲೇ ಸಮೃದ್ಧವಾಗಿ ಬೆಳೆಯುತ್ತಿದ್ದವು. ಸುಮಾರು ೨.೭ ಲಕ್ಷ ಬಾವಿಗಳ ಆಳ ೩೦ ಅಡಿಗಳಿಗಿಂತಲೂ ಕಡಿಮೆ. ಅಂದರೆ ಅಂತರ್ಜಲದ ಮಟ್ಟ ಅತ್ಯಂತ ಮೇಲಿತ್ತು ಎಂಬುದು ದಾಖಲೆ ಸಹಿತ ಸಿಗುತ್ತದೆ. ಇಷ್ಟೊಂದು ಪ್ರಯೋಜನವಿರುವ ಬಾವಿ ಏಕೆ ವೃತ್ತಾಕಾರದಲ್ಲಿಯೇ ಇರುತ್ತದೆ ಎಂದು ಯಾರಾದರೂ ಬಲ್ಲಿರಾ, ಇದರ ವೈಜ್ಞಾನಿಕ ಸತ್ಯದ ಬಗ್ಗೆ ಯೋಚಿದ್ದೀರಾ.

  ಎಲ್ಲಾ ಬಾವಿಗಳು ವೃತ್ತಾಕಾರದಲ್ಲಿರುತ್ತದೆ (Why Is Well Always In Round Shape) ಎಂಬುದನ್ನು ನೀವು ಗಮನಿಸಿರಬಹುದು. ಅದರ ಯಾಕೆ ಎಂದು ಚಿಂತಿಸಿದ್ದೀರಾ, ಏಕೆ ಚೌಕ, ತ್ರಿಕೋನ ಅಥವಾ ಷಡ್ಭುಜಾಕೃತಿಯ ಆಕಾರದಲ್ಲಿರುವುದಿಲ್ಲ? (square, triangle or hexagon shape) ಇದರ ಹಿಂದಿನ ಕಾರಣ ಕುತೂಹಲಕಾರಿಯಾಗಿದೆ. ಹೌದು ಇದರ ಬಗ್ಗೆ ಮಾಹಿತಿ ಹುಡುಕಾಟ ನಡೆಸಿ ತಿಳಿದುಕೊಂಡರೇ ನಿಚಕ್ಕೂ ಅಚ್ಚರಿಯಾಗುವುದು ಖಂಡಿತ, ವಾಸ್ತವವಾಗಿ ಬಾವಿಯ ಸುತ್ತಿನ ಆಕಾರದ ಹಿಂದೆ ವಿಜ್ಞಾನವಿದೆ (science behind the well) ಎಂಬುದನ್ನು ನೀವು ನಂಬಲೇಬೇಕು.

  ಗೋಡೆಗಳ ಮೇಲೆ ಒತ್ತಡ ಸಮ(The pressure on the walls is equal)
  ನಾವು ಯಾವುದೇ ದ್ರವ ಪದಾರ್ಥವನ್ನು ಸಂಗ್ರಹಿಸಿದಾಗ, ಅದು ಯಾವ ಆಕಾರದಲ್ಲಿ ಸಂಗ್ರಹಿಸಲ್ಪಟ್ಟಿದೆಯೋ ಅದೇ ಆಕಾರವನ್ನು ತೆಗೆದುಕೊಳ್ಳುತ್ತದೆ . ದ್ರವವನ್ನು ಹಡಗಿನಲ್ಲಿ ಇರಿಸಿದಾಗ, ಅದು ಅದರ ಗೋಡೆಗಳ ಮೇಲೆ ಒತ್ತಡವನ್ನು ಬೀರುತ್ತದೆ. ಬಾವಿಯನ್ನು ಚೌಕಾಕಾರದಲ್ಲಿ ಮಾಡಿದರೆ, ಅದರೊಳಗೆ ಸಂಗ್ರಹವಾಗಿರುವ ನೀರು ಬಾವಿಯ ಗೋಡೆಯ ಮೂಲೆಗಳಲ್ಲಿ ಗರಿಷ್ಠ ಒತ್ತಡವನ್ನು ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬಾವಿಯ ಜೀವಿತಾವಧಿಯು ಕಡಿಮೆಯಾಗುತ್ತದೆ ಮತ್ತು ಬಾವಿ ಕುಸಿದು ಬೀಳುವ ಅಪಾಯ ಹೆಚ್ಚಾಗಿರುತ್ತದೆ.

  ಈ ಕಾರಣದಿಂದಲೇ ಬಾವಿಯನ್ನು ದುಂಡಾಕಾರದಲ್ಲಿ ನಿರ್ಮಿಸಲಾಗುತ್ತದೆ ಇದರಿಂದ ಅದರೊಳಗಿನ ನೀರಿನ ಒತ್ತಡವು ಬಾವಿಯ ಗೋಡೆಯ ಮೇಲೆ ಎಲ್ಲೆಡೆ ಸಮನಾಗಿರುತ್ತದೆ ಎಂದು ವೈಜ್ಞಾನಿಕ ಕಥೆ ಹೇಳುತ್ತದೆ.

  ನಮ್ಮ ಮನೆಯಲ್ಲಿ ಇರುವ ಗಾಜು, ಬಟ್ಟಲು, ತಟ್ಟೆ, ಬಕೆಟ್, ತಂಬಿಗೆ ಪಾತ್ರೆಗಳೂ ಸಹ ದುಂಡಾಗಿರುವುದನ್ನು ನೀವು ಗಮನಿಸಿರಬೇಕು. ನಮ್ಮ ಸುತ್ತಲಿನ ಎಲ್ಲಾ ವಿಷಯಗಳ ಹಿಂದೆ ಕೆಲವು ವಿಜ್ಞಾನವಿದೆ ಎಂಬುದು ಗಮನಿಸಬೇಕಾದ ಸಂಗತಿ. ದುಂಡಾಕಾರದ ಬಾವಿಗಳು ತುಂಬಾ ಬಲಿಷ್ಠವಾಗಿರುತ್ತವೆ ಎಂದು ಗಮನಿಸಬೇಕಾದ ಅಂಶವಾಗಿದೆ. ನೀವು ಚೌಕಾಕಾರದ ಬಾವಿಗಳನ್ನು ಸಹ ನೋಡಿರಬಹುದು ಆದರೆ ಅವು ಹೆಚ್ಚು ಗಟ್ಟಿಯಾಗಿರುವುದಿಲ್ಲ ಎಂಬುದು ಅಷ್ಟೆ ಸತ್ಯ.

  ಇದನ್ನು ಓದಿ:ಬಾವಿಗೆ ಬಿದ್ದ ಮಗುವನ್ನು ನೋಡೋಕೆ ಹೋಗಿ ತಾವೂ ಬಾವಿ ಪಾಲಾದ 40 ಜನ! 3 ಸಾವು, 11 ಮಿಸ್ಸಿಂಗ್

  ನೀರಾವರಿ ವ್ಯವಸ್ಥೆಗೆ ಮೂಲ(Source for the irrigation system)
  ತೆರೆದ ಬಾವಿಗಳು ಅತ್ಯಧಿಕ ಸಂಖ್ಯೆಯಲ್ಲಿರುವುದು ಕೋಲಾರದಲ್ಲಿ. ಬೆಳಗಾಂಗೆ ಎರಡನೇ ಸ್ಥಾನ. ಬಿಜಾಪುರ ಮೂರನೇ ಸ್ಥಾನದಲ್ಲಿದೆ. ಆದರೆ ಬಿಜಾಪುರದಲ್ಲಿರುವ ಬಾವಿಗಳು ದೊಡ್ಡ ಸರೋವರಗಳಂತಿವೆ. ಅತ್ಯಧಿಕ ಕೃಷಿಕ್ಷೇತ್ರಕ್ಕೆ ನೀರುಣಿಸುತ್ತವೆ. ಸುಲ್ತಾನರ ಕಾಲದಲ್ಲಿ ಅತ್ಯಂತ ಮೇರು ಮಟ್ಟಕ್ಕೇರಿದ್ದ ನೀರಾವರಿ ವ್ಯವಸ್ಥೆಗೆ ಮೂಲ ಈ ಬಾವಿಗಳು. ಇದನ್ನೇ ಬಿಜಾಪುರದಲ್ಲಿ ಬಾವಡಿ ಅಥವಾ ಬಾವರಿ ಎಂದು ಕರೆಯುತ್ತಾರೆ.

  ಇದಕ್ಕೆ ಹೊರತಾದ ಬಾವಿಗಳೂ ಸಹ ಇವೆ. ವಿಶಾಲವಾದ ಕೊಳ. ಅದಕ್ಕೆ ವೃತ್ತಾಕಾರದಲ್ಲಿ ಕಟ್ಟಿದ ಕಲ್ಲಿನ ಗೋಡೆ. ನೀರಿನವರೆಗೂ ಇಳಿದುಹೋಗಲು ಮೆಟ್ಟಿಲುಗಳು. ಸುತ್ತಲೂ ನಡೆದಾಡಲು ದಾರಿ. ಕುಳಿತುಕೊಳ್ಳಲು ವಿಶ್ರಾಂತಿಧಾಮ. ಒಂದೆರಡು ಕೊಠಡಿಗಳು. ಹೊರನೀರು ಒಳಬರದಂತಹ ವ್ಯವಸ್ಥೆ. ನೀರಿಗೊಂದು ಸುಂದರ ವಾಸ್ತುರಚನೆಯೇ ಬಾವಡಿಗಳು. ಒಂದೊಂದು ಬಾವಡಿಯೂ ವಿಭಿನ್ನ.

  ಇದನ್ನು ಓದಿ:ಏಕಾಂಗಿಯಾಗಿ 60 ಅಡಿ ಆಳದ ಬಾವಿ ತೋಡಿ ಜನರ ದಾಹ ನೀಗಿಸಿದ 56 ವರ್ಷದ ಧೀರ ‌ಮಹಿಳೆ!

  ಫ್ರಿಜ್‌ನಂತೆ ಬಳಕೆ(Use as a fridge)
  ಬಾವಿಗಳು ಸಾಮಾಜಿಕವಾಗಿ ಬಹುದೊಡ್ಡ ಪಾತ್ರ ವಹಿಸುತ್ತವೆ. ಬಾವಿಯಿಂದ ನೀರು ಮೇಲೆತ್ತಲು ರಾಟೆ, ಗಡಗಡೆ, ಏತ, ಕಪಿಲೆ, ಪರ್ಷಿಯನ್ ವೀಲ್ ಹಾಗೂ ಪಂಪ್‌ಸೆಟ್‌ಗಳು ಮುಖ್ಯ ಸಲಕರಣೆಗಳು. ರಾಟೆ, ಗಡಗಡೆಗೆ ದಪ್ಪ ಕತ್ತದ ಹಗ್ಗ ಅಥವಾ ರಬ್ಬರ್, ಪ್ಲಾಸ್ಟಿಕ್ ಹಗ್ಗಗಳನ್ನು ಬಳಸುತ್ತಾರೆ. ಬಾವಿಗಳಲ್ಲಿ ಮೀನುಗಳನ್ನೂ, ಆಮೆಗಳನ್ನೂ ಸಾಕುತ್ತಾರೆ. ಹೆಚ್ಚು ಆಳದ ಬಾವಿಗಳಲ್ಲಿ ಆಮ್ಲಜನಕದ ಕೊರತೆ ಇದ್ದರೆ ಇದು ಅಸಾಧ್ಯ.

  ಬಾವಿಗಳನ್ನು ಫ್ರಿಜ್‌ನಂತೆ ಬಳಸುತ್ತಾರೆ. ಅಂದರೆ ನಿಂಬೆಹಣ್ಣು, ವೀಳ್ಯದೆಲೆ ಮುಂತಾದ ಬೇಗನೆ ಬಾಡುವ ವಸ್ತುಗಳನ್ನು ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ತುಂಬಿ ಬೀಲದಂತೆ ಹಗ್ಗ ಕಟ್ಟಿ ಬಾವಿಯ ಅರ್ಧದವರೆಗೆ ಇಳಿಬಿಟ್ಟರೆ ಅನೇಕ ದಿನಗಳವರೆಗೆ ಕೆಡದೆ, ಹಾಳಾಗದೆ ಹಾಗೇ ಇರುತ್ತದೆ. ಇದು ಮಲೆನಾಡಿನ ಮನೆಯೊಳಗಿರುವ ಬಾವಿಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ. ಬಾವಿಯ ನೀರನ್ನು ಸಿಹಿಗೊಳಿಸಲು ಬಾವಿಗೆ ನೆಲ್ಲಿಮರದ ತುಂಡನ್ನು ಹಾಕುತ್ತಾರೆ. ಕುಂದಣದ ಬಾವಿ, ರಸ ಬಾವಿ, ಕಟ್ಟಿನ ಬಾವಿ, ಬೆಟ್ಟದ ಬಾವಿ, ಸುರಂಗದ ಬಾವಿ ಹೀಗೆ ಬಾವಿಗಳಲ್ಲಿ ಅನೇಕ ವಿಧಗಳಿವೆ.
  Published by:vanithasanjevani vanithasanjevani
  First published: