Business Tips: ನೀವು ಏನನ್ನೇ ಮಾರಬೇಕಾದ್ರೂ ಅದ್ರ ಪ್ಯಾಕಿಂಗ್ ಸಖತ್ತಾಗಿರ್ಬೇಕು, ಯಾವ ವಸ್ತುವಿಗೆ ಯಾವ ರೀತಿ ಪ್ಯಾಕೇಜಿಂಗ್ ಬೇಕು? ಫುಲ್ ಡೀಟೆಲ್ಸ್

ಉತ್ತಮ ಪ್ಯಾಕೇಜಿಂಗ್ ಗ್ರಾಹಕರನ್ನು ಮರಳು ಮಾಡುತ್ತದೆ. ನಿಮ್ಮ ಉತ್ಪನ್ನದ ಪ್ಯಾಕೇಜಿಂಗ್ ಸರಿಯಾಗಿಲ್ಲದಿದ್ದರೆ ನಿಮ್ಮ ಬ್ರ್ಯಾಂಡ್ ಫೇಲ್ ಆಯಿತು ಎಂದೇ ಅರ್ಥವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Marketing and Package: ಆಹಾರ ಉತ್ಪನ್ನಗಳ ಮೇಲಿನ ಪ್ಯಾಕೇಜಿಂಗ್ ಮಾರುಕಟ್ಟೆ ತಂತ್ರವಾಗಿದ್ದು, ಉತ್ಪನ್ನದ ಮೇಲಿನ ಪ್ಯಾಕೇಜಿಂಗ್‌ನಿಂದಲೇ ಗ್ರಾಹಕರು ಆ ಉತ್ಪನ್ನ ಖರೀದಿಸುತ್ತಾರೆ. ಹೀಗಾಗಿ ಪ್ಯಾಕೇಜ್ ಎನ್ನುವುದು ಬ್ರ್ಯಾಂಡ್‌ ಏಳಿಗೆಗೂ ಮುಖ್ಯವಾಗಿದೆ. ಸಾಂಕ್ರಾಮಿಕ ನಮ್ಮನ್ನು ಆವರಿಸುವ ಮುನ್ನ ಲಾಕ್‌ಡೌನ್‌ನಲ್ಲಿ ನಾವು ಬಂಧಿಗಳಾಗುವುದಕ್ಕೂ ಮೊದಲು ಸೂಪರ್ ಮಾರ್ಕೆಟ್ ಅಥವಾ ಮಾಲ್‌ನಲ್ಲಿ ಬರಿಯ ಪ್ಯಾಕೇಜಿಂಗ್‌ಗೆ ಮರುಳಿ ಹೋಗಿ ಸಾಕಷ್ಟು ವಸ್ತುಗಳನ್ನು ಖರೀದಿಸುತ್ತಿದ್ದೆವು. ನಮಗೆ ಅಗತ್ಯವಿರಲಿ ಇಲ್ಲದಿರಲಿ ಒಮ್ಮೊಮ್ಮೆ ವಸ್ತುಗಳ ಪ್ಯಾಕೇಜ್‌ಗೆ ಮರುಳಾಗಿ ದಂಢಿಯಾಗಿ ಖರೀದಿಸಿದ್ದೂ ಇದೆ.ಆದರೆ ಲಾಕ್‌ಡೌನ್‌ ನಂತರ ಮಾರುಕಟ್ಟೆಯ ಪೂರ್ಣ ಚಿತ್ರಣವೇ ಬದಲಾಯ್ತು. ಸೀಮಿತ ಅವಧಿಯಲ್ಲಿ ಖರೀದಿಗೆ ಅವಕಾಶವಿರುವಾಗ ಜನರು ಪ್ಯಾಕೇಜ್ ಕಡೆಗೆ ಗಮನ ಹರಿಸದೇ ಅಗತ್ಯ ವಸ್ತುಗಳನ್ನು ಖರೀದಿಸುವತ್ತ ಒಲವು ತೋರಿದರು. ಹೀಗೆ ಪ್ಯಾಕೇಜಿಂಗ್ ಎನ್ನುವುದು ಬ್ರ್ಯಾಂಡ್‌ನ ಉನ್ನತಿಗೂ ಕಾರಣವಾಗುತ್ತದೆ, ಅವನತಿಗೂ ಕಾರಣವಾಗುತ್ತದೆ ಎಂಬುದು ಸಾಂಕ್ರಾಮಿಕದಿಂದ ತಿಳಿದು ಬಂದಿತು. ಸೂಪರ್ ಮಾರ್ಕೆಟ್‌ಗಳಲ್ಲಿ ಖರೀದಿಯ ಸಮಯದಲ್ಲಿ ಬೆಲೆಯನ್ನು ನಿಖರವಾಗಿ ಪರಿಶೀಲಿಸಬೇಕು ಬರಿಯ ಪ್ಯಾಕೇಜ್‌ಗೆ ಮಾತ್ರವೇ ಮರುಳಾಗುವುದಲ್ಲವೆಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯವಾಗಿದೆ.


ಆದರೂ, ಉತ್ತಮ ಪ್ಯಾಕೇಜಿಂಗ್ ಗ್ರಾಹಕರನ್ನು ಮರಳು ಮಾಡುತ್ತದೆ. ನಿಮ್ಮ ಉತ್ಪನ್ನದ ಪ್ಯಾಕೇಜಿಂಗ್ ಸರಿಯಾಗಿಲ್ಲದಿದ್ದರೆ ನಿಮ್ಮ ಬ್ರ್ಯಾಂಡ್ ಫೇಲ್ ಆಯಿತು ಎಂದೇ ಅರ್ಥವಾಗಿದೆ.


ಸೂಪರ್ ಮಾರ್ಕೆಟ್‌ಗಳಲ್ಲಿ ನೀವು ದಿನಬಳಕೆಯ ಅಗತ್ಯ ವಸ್ತುಗಳ ಸಾಲಿನಲ್ಲಿ ಇತರ ಆಹಾರ ಐಟಂಗಳಾದ ಚಿಪ್ಸ್, ಜಾಮ್, ಬಿಸ್ಕತ್ತು ಮೊದಲಾದವುಗಳನ್ನು ಇರಿಸಬಹುದು. ಗೃಹಿಣಿ ಟೂತ್‌ಪೇಸ್ಟ್ ಖರೀದಿಸಲು ಆ ಸಾಲಿಗೆ ಬಂದಾಗ ಜಾಮ್, ಬಿಸ್ಕತ್ತನ್ನು ಕೂಡ ಖರೀದಿಸುತ್ತಾರೆ. ಹೀಗೆ ನಿಮ್ಮ ಮಾರಾಟ ತಂತ್ರ ನಿಖರವಾಗಿದ್ದರೆ ವಸ್ತುಗಳ ಮಾರಾಟವೂ ಸುಲಭವಾಗಿ ನಡೆಯುತ್ತದೆ. ಇನ್ನು ಮಕ್ಕಳ ಆಹಾರ ವಸ್ತುಗಳನ್ನು ಕೂಡ ಸುಂದರವಾದ ಪ್ಯಾಕೇಜ್‌ನಲ್ಲಿರಿಸಿ ನೀವು ಸಾಲಿನಲ್ಲಿರಿಸಿದರೆ ಅದು ಕೂಡ ಕ್ಷಣಾರ್ಧದಲ್ಲಿ ಮಾರಾಟವಾಗಿಬಿಡುತ್ತದೆ.


ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಸಖತ್ ಸುದ್ದಿ…ಬಂದಿದೆ Alcohol Ice Cream! ತಿಂದ್ರೆ ಕಿಕ್ ಹೊಡೆಯೋದು ಗ್ಯಾರಂಟಿ

ನಿಜವಾಗಿ ಹೇಳಬೇಕೆಂದರೆ ಪ್ಯಾಕೇಜಿಂಗ್ ಮಾರಾಟದ ಒಂದು ಕಲೆಯಾಗಿದೆ. ಸರಳ ಹಾಗೂ ಸ್ಪಷ್ಟ ರೀತಿಯಲ್ಲಿ ಪ್ಯಾಕೇಜ್ ಇದ್ದರೆ ಅದನ್ನು ಖರೀದಿಸುವ ಗ್ರಾಹಕ ಕೂಡ ಸಂತಸ ವ್ಯಕ್ತಪಡಿಸುತ್ತಾನೆ. ಹೀಗೆ ಸರಳ ಪ್ಯಾಕೇಜಿಂಗ್ ವ್ಯಾಪಾರದಲ್ಲಿಯೂ ಯಶಸ್ಸು ತಂದುಕೊಡುತ್ತದೆ.


ಇನ್ನು ಉತ್ಪನ್ನದ ಜಾಹೀರಾತಿಗೆ ಅನುಗುಣವಾಗಿ ಪ್ಯಾಕೇಜಿಂಗ್ ವಿನ್ಯಾಸಪಡಿಸುವುದೂ ಗಮನಾರ್ಹ ಅಂಶವಾಗಿದೆ. ಸೋಪಿನ ಜಾಹೀರಾತು ನೋಡಿ ಗ್ರಾಹಕರು ಸೋಪ್ ಖರೀದಿಸುವಾಗ ಸೋಪ್ ಪ್ಯಾಕೆಟ್‌ನಲ್ಲಿ ಜಾಹೀರಾತಿನ ಅಂಶಗಳನ್ನು ಖಂಡಿತ ಹುಡುಕುತ್ತಾರೆ. ಹಾಗಾಗಿ ಈ ಅಂಶದತ್ತ ಕೂಡ ಗಮನಹರಿಸುವುದು ಅನಿವಾರ್ಯವಾಗಿದೆ.


ಗಮನಿಸಬೇಕಾದ ಅಂಶವೆಂದರೆ ಪ್ಯಾಕೇಜಿಂಗ್ ಹೆಚ್ಚು ಕ್ರಿಯಾತ್ಮಕವಾಗಿದ್ದಷ್ಟು ಬ್ರ್ಯಾಂಡ್ ಇಮೇಜ್ ಉತ್ತಮವಾಗಿರುತ್ತದೆ ಎಂದಾಗಿದೆ. ಒಂದು ಪ್ಯಾಕೇಜಿಂಗ್‌ನಲ್ಲಿ ಆ ಉತ್ಪನ್ನದ ಸಂಪೂರ್ಣ ಮಾಹಿತಿ ದೊರೆಯುವಂತಿರಬೇಕು. ಅದಕ್ಕಾಗಿ ಪ್ಯಾಕೇಜಿಂಗ್ ಮಾರುಕಟ್ಟೆ ತಂತ್ರದಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ. ನಿಮ್ಮ ಪ್ಯಾಕೇಜಿಂಗ್ ಮುದ್ರಣದಲ್ಲಿ ನಿಯಂತ್ರಕ ಆದೇಶಗಳು ಹಾಗೂ ಹಕ್ಕು ನಿರಾಕರಣೆಗಳನ್ನು ಮುದ್ರಿಸಲು ಮರೆಯದಿರಿ!


ಇದನ್ನೂ ಓದಿ: Weight Loss: ತೂಕ ಇಳಿಸೋಕೂ ಒಂದಷ್ಟು ಪ್ಲಾನ್​ಗಳಿವೆ, ಇದ್ರಲ್ಲಿ ನಿಮ್ಗೆ ಯಾವ್ದು ಸೂಟ್ ಆಗುತ್ತೆ ನೋಡಿ

ಪ್ಯಾಕೇಜಿಂಗ್ ವಿನ್ಯಾಸವನ್ನು ಕಲೆ ಹಾಗೂ ವಿಜ್ಞಾನದ ಸಂಯೋಜನೆ ಇಲ್ಲವೇ ಸರಳ ವಿನ್ಯಾಸ ಎಂದು ಹೇಳಲಾಗುವುದಿಲ್ಲ. ಗ್ರಾಹಕ ವಸ್ತುವನ್ನು ಖರೀದಿಸಬೇಕೇ ಬೇಡವೇ ಎಂಬುದನ್ನು ಪ್ಯಾಕೇಜಿಂಗ್ ನಿರ್ಧರಿಸುತ್ತದೆ. ಹಾಗಾಗಿ ಉತ್ಪನ್ನದ ಪ್ಯಾಕೇಜಿಂಗ್ ಮಾರುಕಟ್ಟೆ ತಂತ್ರದಲ್ಲಿ ಮಹತ್ವದ್ದಾಗಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: