Engineers Day 2022: ಭಾರತದಲ್ಲಿ ಸೆಪ್ಟೆಂಬರ್ 15ರಂದು ಇಂಜಿನಿಯರ್ ದಿನ ಯಾಕೆ ಆಚರಿಸುತ್ತಾರೆ?

ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಎಲ್ಲಾ ಇಂಜಿನಿಯರ್‌ಗಳನ್ನು ಗೌರವಿಸಲು ಮತ್ತು ಗುರುತಿಸಲು ಈ ದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿ ವರ್ಷ ಸೆಪ್ಟೆಂಬರ್ 15 ನ್ನು ಭಾರತದಲ್ಲಿ (India) ಇಂಜಿನಿಯರ್ಸ್ ಡೇ (Engineer’s Day) ಎಂದು ಆಚರಣೆ (Celebration) ಮಾಡಲಾಗುತ್ತದೆ. ಭಾರತದ ಮಹಾನ್ ಇಂಜಿನಿಯರ್ ಮತ್ತು ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ (Mokshagundam Visvesvaraya) ಅವರ ಜನ್ಮದಿನವನ್ನೇ ದೇಶದಲ್ಲಿ ಇಂಜಿನಿಯರ್ಸ್ ಡೇ ಎಂದು ಆಚರಿಸುತ್ತಾರೆ. ಇಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕೊಡುಗೆ ಗಮನಾರ್ಹವಾಗಿದೆ. ಭಾರತದಲ್ಲಿ ಅಣೆಕಟ್ಟು, ಜಲಾಶಯ ಮತ್ತು ಜಲವಿದ್ಯುತ್ ಯೋಜನೆಗಳ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯ ಆಔಋ ಕೊಡುಗೆ ಅಪಾರ.ಹಾಗಾಗಿ ವಿಶ್ವೇಶ್ವರಯ್ಯ ಅವರನ್ನು ಮಹಾನ್ ರಾಷ್ಟ್ರ ನಿರ್ಮಾಪಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ವಿಶ್ವೇಶ್ವರಯ್ಯ ಅವರು ಭಾರತದ ಮಹಾನ್ ಇಂಜಿನಿಯರ್‌ಗಳಲ್ಲಿ ಒಬ್ಬರು.

  ಇಂಜಿನಿಯರ್ಸ್ ಡೇ ಇತಿಹಾಸ

  1968 ರಲ್ಲಿ ಭಾರತ ಸರ್ಕಾರವು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ಸ್ ದಿನ ಎಂದು ಆಚರಣೆ ಮಾಡುವಂತೆ ಘೋಷಣೆ ಮಾಡಿತು.

  ಅಂದಿನಿಂದ ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಎಲ್ಲಾ ಇಂಜಿನಿಯರ್‌ಗಳನ್ನು ಗೌರವಿಸಲು ಮತ್ತು ಗುರುತಿಸಲು ಈ ದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.

  ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಆಧುನಿಕ ಭಾರತ ಸೃಷ್ಟಿಸಿದರು. ಮತ್ತು ದೇಶಕ್ಕೆ ಹೊಸ ರೂಪ ನೀಡಿದರು.

  ವಿಶ್ವೇಶ್ವರಯ್ಯ ಅವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದರು. ವಿಶ್ವೇಶ್ವರಯ್ಯ ಅವರ ಶ್ರಮ, ಸಾಧನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.

  ಇದನ್ನೂ ಓದಿ: ಕ್ವೀನ್ ಎಲಿಜಬೆತ್ ಅಂತ್ಯಕ್ರಿಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು

  ನಾಡಿನ ತುಂಬ ವಿಶ್ವೇಶ್ವರಯ್ಯ ಅವರು ನಿರ್ಮಿಸಿರುವ ಅನೇಕ ನದಿಗಳ ಅಣೆಕಟ್ಟುಗಳು ಮತ್ತು ಸೇತುವೆಗಳ ಯಶಸ್ಸಿನ ಹಿಂದೆ ವಿಶ್ವೇಶ್ವರಯ್ಯನವರ ದೊಡ್ಡ ಕೊಡುಗೆ ಇದೆ. ನಾಡಿನ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆಯಿದೆ.

  ಆಧುನಿಕ ಭಾರತ ಸೃಷ್ಟಿಸಿದ ವಿಶ್ವೇಶ್ವರಯ್ಯ

  1968 ರಲ್ಲಿ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಭಾರತ ಸರ್ಕಾರ ಎಂಜಿನಿಯರ್ ದಿನ ಎಂದು ಘೋಷಣೆ ಮಾಡಿದ ನಂತರ ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನ ಆಚರಣೆ ಮಾಡಲಾಗುತ್ತಿದೆ. ವಿಶ್ವೇಶ್ವರಯ್ಯನವರು ಕರ್ನಾಟಕ ಜಿಲ್ಲೆಯ ಮೈಸೂರಿನ ಕೋಲಾರ ಜಿಲ್ಲೆಯಲ್ಲಿ 15 ಸೆಪ್ಟೆಂಬರ್ 1860 ರಂದು ಜನಿಸಿದರು.

  ಎಂಜಿನಿಯರ್ ಆಗಿ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟು, ಪುಣೆಯ ಖಡಕ್ವಾಸ್ಲಾ ಜಲಾಶಯ ಮತ್ತು ಗ್ವಾಲಿಯರ್‌ನ ಟೈಗ್ರಾ ಅಣೆಕಟ್ಟು ಸೇರಿದಂತೆ ದೇಶದ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ.

  ಹೈದರಾಬಾದ್ ನ್ನು ನಗರವನ್ನಾಗಿ ಮಾಡಿದ ಸಂಪೂರ್ಣ ಶ್ರೇಯಸ್ಸು ಡಾ.ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ. ಅವರು ಅಲ್ಲಿ ಪ್ರವಾಹ ರಕ್ಷಣೆ ವ್ಯವಸ್ಥೆ ವಿನ್ಯಾಸ ಮಾಡಿದರು. ಅವರು ಭಾರತದಾದ್ಯಂತ ಪ್ರಸಿದ್ಧರಾದರು. ಸಮುದ್ರ ಕೊರೆತದಿಂದ ವಿಶಾಖಪಟ್ಟಣಂ ಬಂದರನ್ನು ರಕ್ಷಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

  ಆಧುನಿಕ ಮೈಸೂರು ರಾಜ್ಯದ ಪಿತಾಮಹ

  ವಿಶ್ವೇಶ್ವರಯ್ಯನವರನ್ನು ಆಧುನಿಕ ಮೈಸೂರು ರಾಜ್ಯದ ಪಿತಾಮಹ ಎಂದು ಗೌರವಿಸಲಾಗಿದೆ. ಅವರು ಮೈಸೂರು ಸರ್ಕಾದ ಜೊತೆ ಹಲವು ಕಾರ್ಖಾನೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು.

  ವಿಶೇಷವಾಗಿ ಮೈಸೂರು ಸೋಪ್ ಫ್ಯಾಕ್ಟರಿ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಸ್ಥಾಪಿಸಿದರು.

  ಭಾರತ ಸೇರಿದಂತೆ ಯಾವ ದೇಶಗಳಲ್ಲಿ ಇಂಜಿನಿಯರ್ ದಿನ ಆಚರಿಸುತ್ತಾರೆ?

  ಪ್ರಪಂಚದಾದ್ಯಂತದ ಇಂಜಿನಿಯರ್‌ಗಳನ್ನು ಪ್ರೋತ್ಸಾಹಿಸಲು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಇಂಜಿನಿಯರ್ ಡೇ ಅನ್ನು ಭಾರತದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ.

  ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಅಮೆರಿಕಾ; ಭಾರತಕ್ಕೆ ದ್ರೋಹ?

  ಜೂನ್ 16 ರಂದು ಅರ್ಜೆಂಟೀನಾದಲ್ಲಿ, ಮೇ 7 ರಂದು ಬಾಂಗ್ಲಾದೇಶದಲ್ಲಿ, ಜೂನ್ 15 ರಂದು ಇಟಲಿಯಲ್ಲಿ, ಡಿಸೆಂಬರ್ 5 ರಂದು ಟರ್ಕಿಯಲ್ಲಿ, ಇರಾನ್‌ನಲ್ಲಿ ಫೆಬ್ರವರಿ 24, ಬೆಲ್ಜಿಯಂನಲ್ಲಿ ಮಾರ್ಚ್ 20 ರಂದು ಮತ್ತು ಸೆಪ್ಟೆಂಬರ್ 14 ರಂದು ರೊಮೇನಿಯಾದಲ್ಲಿ ಇಂಜಿನಿಯರ್ ದಿನ ಆಚರಿಸಲಾಗುತ್ತದೆ.
  Published by:renukadariyannavar
  First published: