Alcohol: ಮದ್ಯವನ್ನು ‘ಎಣ್ಣೆ’ ಎಂದು ಕರೆಯುವುದು ಏಕೆ? ಇದರ ಹಿಂದೆ ಇದೆ ರೋಚಕ ಕತೆ !

Alcohol: ಮದ್ಯವನ್ನು ಬಹಳ ಕಾಲದಿಂದ ಆಡುಭಾಷೆಯಲ್ಲಿ ಎಣ್ಣೆ ಎಂದು ಕರೆಯುತ್ತಾರಲ್ಲಾ ಯಾಕೆ? ಗೆಳೆಯರು ಎಣ್ಣೆ ಪಾರ್ಟಿ ಜೋರಾ ಅಂತ ಕೇಳೋದ್ರಿಂದ ಹಿಡಿದು ಎಣ್ಣೆ ನಮ್ದು, ಊಟ ನಿಮ್ದು ಅಂತ ಸಿನಿಮಾ ಹಾಡುಗಳು ಫೇಮಸ್ ಆಗೋ ತನಕ ಎಣ್ಣೆ ಎನ್ನುವ ಪದ ಮದ್ಯಪಾನದ ಜೊತೆ ಬೆರೆತುಹೋಗಿಬಿಟ್ಟಿದೆ.

ಸಾಂದರ್ಭಿಕ ಚಿತ್ರ- ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಸಾಂದರ್ಭಿಕ ಚಿತ್ರ- ಮದ್ಯಪಾನ ಆರೋಗ್ಯಕ್ಕೆ ಹಾನಿಕರ

  • Share this:
Alcohol: ಎಣ್ಣೆ ಪಾರ್ಟಿ, ಎಣ್ಣೆ ಸಿಗಲ್ವಂತೆ, ಎಣ್ಣೆ ಹೊಡೆಯೋಣ…ಇವೆಲ್ಲಾ ಸಾಮಾನ್ಯವಾಗಿ ಬಳಕೆಯಲ್ಲಿರೋ ಪದಗಳು. ಮೊದಲೆಲ್ಲಾ ಗುಟ್ಟುಗುಟ್ಟಾಗಿ ಜನ ಮಾತಾಡುತ್ತಿದ್ದ ಮದ್ಯಪಾನದ ವಿಚಾರ ಜಗಜ್ಜಾಹೀರಾಗಿ ಧಾರಾಳವಾಗಿ ಚರ್ಚೆಯಾಗೋಕೆ ಕೊರೊನಾ ಮತ್ತು ಲಾಕ್​ಡೌನ್ ಕಾರಣವಾಗ್ಬಿಡ್ತು. ಲಾಕ್​ಡೌನ್ ಅಂತ ಅಂದ್ಕೂಡ್ಲೇ ಮೊದಲು ಜನ ಓಡಿದ್ದೇ ಮದ್ಯದಂಗಡಿಗಳ ಬಳಿ. ಗಂಟೆಗಟ್ಟಲೆ ಗಂಡಸರು, ಹೆಂಗಸರು ಎಲ್ಲರೂ ಸರತಿಯಲ್ಲಿ ನಿಂತು ಮದ್ಯ ಖರೀದಿಸಿದ್ದರು. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡೋದು ಕೂಡಾ ಇದೇ ಅಬಕಾರಿ ವಿಭಾಗ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಆದರೆ ಜನ ನಾನಾ ಕಾರಣಗಳಿಗೆ ಇಂದಿಗೂ ಮದ್ಯಪಾನ ಮಾಡುವುದಕ್ಕೆ ಅವರದ್ದೇ ಆದ ಕಾರಣಗಳೂ ಇರುತ್ತವೆ.

ಆದರೆ ಈಗ ನಾವು ಚರ್ಚೆ ಮಾಡುತ್ತಿರುವ ವಿಚಾರ ಅದಲ್ಲ. ಮದ್ಯವನ್ನು ಬಹಳ ಕಾಲದಿಂದ ಆಡುಭಾಷೆಯಲ್ಲಿ ಎಣ್ಣೆ ಎಂದು ಕರೆಯುತ್ತಾರಲ್ಲಾ ಯಾಕೆ? ಗೆಳೆಯರು ಎಣ್ಣೆ ಪಾರ್ಟಿ ಜೋರಾ ಅಂತ ಕೇಳೋದ್ರಿಂದ ಹಿಡಿದು ಎಣ್ಣೆ ನಮ್ದು, ಊಟ ನಿಮ್ದು ಅಂತ ಸಿನಿಮಾ ಹಾಡುಗಳು ಫೇಮಸ್ ಆಗೋ ತನಕ ಎಣ್ಣೆ ಎನ್ನುವ ಪದ ಮದ್ಯಪಾನದ ಜೊತೆ ಬೆರೆತುಹೋಗಿಬಿಟ್ಟಿದೆ. ಪ್ರತಿದಿನ ಅಡುಗೆಮನೆಗಳಲ್ಲಿ ಬಹಳಸುವ ಪಾಪದ ಅಡುಗೆ ಎಣ್ಣೆಗೂ, ಅನೇಕರ ಬದುಕನ್ನೇ ಬೀದಿಗೆ ತಂದು ನಿಲ್ಲಿಸಿದ ಈ ಎಣ್ಣೆಗೂ ಏನಿದು ಲಿಂಕ್? ಹುಡುಕುತ್ತಾ ಹೋದಾಗ ಅಚ್ಚರಿ ಮೂಡಿಸುವ ವಿಚಾರಗಳು ಹೊರಬಂದವು.

ಇದನ್ನೂ ಓದಿ: Kitchen Hacks: ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಅದನ್ನು ಸರಿ ಮಾಡೋಕೆ ಸಿಂಪಲ್ ಟ್ರಿಕ್ಸ್ ಇಲ್ಲಿದೆ !

ಕ್ರಿಸ್ತ ಪೂರ್ವ 327 ರಲ್ಲಿ ಅರಿಸ್ಟಾಟಲ್ ಮದ್ಯ ತಯಾರಿಸೋಕೆ ಶುರು ಮಾಡಿದ್ದನಂತೆ. ಆಗ ಅವನಿಗೂ ಇದು ಏನು, ಬಳಕೆ ಹೇಗೆ ಎನ್ನುವುದೆಲ್ಲಾ ಗೊತ್ತಿರಲಿಲ್ಲ. ರಾಸಾಯನಿಕಗಳನ್ನು ಬಳಸಿ ಆತ ಮಾಡುತ್ತಿದ್ದ ಅನೇಕ ಪ್ರಯೋಗಗಳಲ್ಲಿ ಇದೂ ಒಂದಾಗಿತ್ತು ಅಷ್ಟೇ. ಆಗಲೇ ಆತ ನಾನಾ ವಸ್ತುಗಳಿಂದ ಆವಿಯನ್ನು ತೆಗೆದು, ಅದನ್ನು ತಣ್ಣಗಾಗಿಸಿ ಡಿಸ್ಟಿಲ್ಲೇಶನ್ ವಿಧಾನದ ಮೂಲಕ ಮದ್ಯ ತಯಾರಿಸಿದ್ದ ಎನ್ನುತ್ತದೆ ಇತಿಹಾಸ.

ಬಹುಶಃ ಈ ವಿಧಾನದಿಂದಲೇ ಕನ್ನಡದಲ್ಲೂ ಎಣ್ಣೆ ಎನ್ನುವ ಪದ ಬಳಕೆ ಆಗಿರಬಹುದು. ಮದ್ಯ ತಯಾರಿಸೋಕೆ ಬಳಸೋ ಬಾರ್ಲಿ, ಕಬ್ಬಿನರಸ, ವಿವಿಧ ಹಣ್ಣುಗಳು ಎಲ್ಲವನ್ನೂ ಇದೇ ವಿಧಾನದಿಂದ ಮದ್ಯ ತಯಾರಿಕೆ ಮಾಡುತ್ತಾರೆ. ಅಲ್ಲದೆ ಎಣ್ಣೆ ಎಂದರೆ ಜಿಗುಟು, ಸುಲಭಕ್ಕೆ ಹೋಗುವುದಲ್ಲ. ಮದ್ಯಪಾನದ ಚಟವೂ ಹಾಗೇ, ಅಷ್ಟು ಸುಲಭವಾಗಿ ಬಿಡುವುದಿಲ್ಲ. ಇನ್ನು ಇಂದಿಗೂ ಬಹುಪಾಲು ಜನ ಮನೆಯವರಿಂದ ತಪ್ಪಿಸಿಕೊಂಡೇ ಮದ್ಯಪಾನ ಮಾಡುತ್ತಾರೆ. ಹಾಗಾಗಿ ಮನೆಯಲ್ಲಿ ನಿತ್ಯ ಬಳಸುವ ಯಾವುದಾದರೂ ಪದಾರ್ಥಕ್ಕೆ ರೂಪಕದ ಅವಶ್ಯಕತೆ ಇತ್ತು ಎನಿಸುತ್ತದೆ. ಇನ್ನು ಮದ್ಯ ಮತ್ತು ಅಡುಗೆ ಎಣ್ಣೆ ಎರಡರ ಬಣ್ಣವೂ ಸರಿಸುಮಾರು ಒಂದೇ.

ಇದನ್ನೂ ಓದಿ: Vaastu Tips : ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಹಣ ನಷ್ಟವಾಗುತ್ತದೆ ! ಇದು ವಾಸ್ತು ಪ್ರಕಾರ !

ಇದಷ್ಟೇ ಅಲ್ಲ, ತುರ್ತು ಸಂದರ್ಭದಲ್ಲಿ ಬೆಂಕಿ ಹೊತ್ತಿಸಲೂ ಮದ್ಯ ಬಳಕೆ ಆಗುತ್ತದೆ. ಇದರಿಂದ ಅನಾಹುತವಾದ ಸಂದರ್ಭಗಳು ಅನೇಕ ಇದ್ದರೂ ಕೂಡಾ ದುಷ್ಕೃತ್ಯ ಮಾಡುವ ಉದ್ದೇಶ ಇದ್ದವರು ಇದರ ದುರ್ಬಳಕೆ ಮಾಡಿರುವ ಸನ್ನಿವೇಶಗಳು ಸಾಕಷ್ಟಿವೆ. ಈ ಎಲ್ಲಾ ನಾನಾ ಕಾರಣಗಳಿಂದಾಗಿ ‘ಎಣ್ಣೆ’ ಎನ್ನುವ ಪದ ಮದ್ಯಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡಿದೆ ಎನ್ನುತ್ತಾರೆ ಬಲ್ಲವರು.

ಇಂಗ್ಲಿಷ್​​​ನಲ್ಲಿ ಕೂಡಾ ಸ್ಪಿರಿಟ್ ಎನ್ನುವ ಪದ ಇದೇ ರೀತಿ ಬಳಕೆಯಾಗುತ್ತದೆ. ಸ್ಪಿರಿಟ್ ಎಂದರೆ ಆತ್ಮ ಎನ್ನುವ ಇನ್ನೊಂದು ಅರ್ಥವೂ ಇರುವುದರಿಂದ ಮದ್ಯ ತಯಾರಿಕೆಯ ರಾಸಾಯನಿಕ ಪ್ರಕ್ರಿಯೆಯಲ್ಲಿ ಮೇಲೇಳುವ ಆವಿ ನಂತರ ತಣ್ಣಗಾಗಿ ಶೇಖರಣೆಯಾಗುತ್ತದೆ. ಆ ಆವಿ ನೋಡಲು ಆತ್ಮದ ಚಲನದಂತೆ ಇರುತ್ತದೆ ಎನ್ನುವುದು ಒಂದು ಕಾರಣವಾದರೆ ಕುಡಿದವರು ಆತ್ಮದಷ್ಟು ಹಗುರವಾದ ಅನುಭವ ಪಡೆದಂತೆ ಆಗುವುದು ಕೂಡಾ ಇನ್ನೊಂದು ಕಾರಣ ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.
Published by:Soumya KN
First published: