Elon Musk: ಈ ಶ್ರೀಮಂತ ವ್ಯಕ್ತಿಯನ್ನು ಭೇಟಿಯಾಗಲು ಬಂದಾಗ ಅವರ ತಾಯಿ ಗ್ಯಾರೇಜ್​ನಲ್ಲಿ ಮಲಗ್ತಿದ್ರಂತೆ! ಇದೇನಪ್ಪಾ ಹಿಂಗೆ

ಈಗ ಸುದ್ದಿಯಲ್ಲಿರುವುದು ಎಲೋನ್ ಮಸ್ಕ್ ಅವರಷ್ಟೇ ಅಲ್ಲ, ಅವರ ತಾಯಿ ಮಾಯೆ ಮಸ್ಕ್ ಅವರು ಸಹ ಈ ಸುದ್ದಿಯಲ್ಲಿದ್ದಾರೆ ನೋಡಿ. ತಮ್ಮ ಮಗನನ್ನು ಭೇಟಿ ಮಾಡಿದಾಗ ಸರಿಯಾದ ಮಲಗುವ ಕೋಣೆಯ ವ್ಯವಸ್ಥೆ ಇರದೆ ಈ ತಾಯಿ ಗ್ಯಾರೇಜ್ ನಲ್ಲಿ ಮಲಗುತ್ತಾರಂತೆ ಎಂದು ಬಹಿರಂಗಪಡಿಸಿದ್ದಾರೆ.

ಎಲೋನ್ ಮಸ್ಕ್ ಮತ್ತು ಅವರ ತಾಯಿ

ಎಲೋನ್ ಮಸ್ಕ್ ಮತ್ತು ಅವರ ತಾಯಿ

  • Share this:
ಸದಾ ಒಂದಲ್ಲಾ ಒಂದು ಕಾರಣಕ್ಕಾಗಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮತ್ತು ಟೆಸ್ಲಾ (Tesla) ಕಂಪನಿಯ ಸಿಇಒ ಆದ ಎಲೋನ್ ಮಸ್ಕ್ (Elon Musk) ಅವರು ಸುದ್ದಿಯಲ್ಲಿರುತ್ತಾರೆ. ಹೌದು.. ತುಂಬಾ ಹಿಂದೆಯಿಂದಲೂ ಮಸ್ಕ್ ಅವರು ತಮ್ಮ ಬಗ್ಗೆ ಯಾವುದಾದರೊಂದು ಸ್ವಾರಸ್ಯಕರವಾದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ಹಂಚಿಕೊಳ್ಳುವುದರೊಂದಿಗೆ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಮಗೆ ಇರಲು ಒಂದು ಸ್ವಂತ ಮನೆಯೇ (House) ಇಲ್ಲ, ತಾವು ತಮ್ಮ ಸ್ನೇಹಿತರ ಮನೆಯಲ್ಲಿ ಒಂದು ಕೋಣೆ ಹೆಚ್ಚುವರಿಯಾಗಿ ಅತಿಥಿಗಳಿಗೆ ಇದ್ದರೆ, ಅಲ್ಲಿ ಹೋಗಿ ಇರುತ್ತೇನೆ ಅಂತ ಹೇಳಿ ಸುದ್ದಿ ಆಗಿದ್ದರು. ಈಗ ಮತ್ತೊಮ್ಮೆ ಅವರ ವೈಯುಕ್ತಿಕ ಜೀವನದ (personal life) ಬಗ್ಗೆ ಮತ್ತೊಂದು ಮಾಹಿತಿಯಿಂದ ಸುದ್ದಿಯಲ್ಲಿ ಇದ್ದಾರೆ. 

ಗ್ಯಾರೇಜ್‌ನಲ್ಲಿ ಮಲಗಲು ಕಾರಣವೇನು?
ಈಗ ಸುದ್ದಿಯಲ್ಲಿರುವುದು ಎಲೋನ್ ಮಸ್ಕ್ ಅವರಷ್ಟೇ ಅಲ್ಲ, ಅವರ ತಾಯಿ ಮಾಯೆ ಮಸ್ಕ್ ಅವರು ಸಹ ಈ ಸುದ್ದಿಯಲ್ಲಿದ್ದಾರೆ ನೋಡಿ. ತಮ್ಮ ಮಗನನ್ನು ಭೇಟಿ ಮಾಡಿದಾಗ ಸರಿಯಾದ ಮಲಗುವ ಕೋಣೆಯ ವ್ಯವಸ್ಥೆ ಇರದೆ ಈ ತಾಯಿ ಗ್ಯಾರೇಜ್ ನಲ್ಲಿ ಮಲಗುತ್ತಾರಂತೆ ಎಂದು ಬಹಿರಂಗಪಡಿಸಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, 71 ವರ್ಷದ ಮಾಯೆ ಮಸ್ಕ್ ಅವರು ತಮ್ಮ ಮಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಸಹ ಎಲ್ಲಿಯೂ ಭವ್ಯವಾದ, ಅತಿ ಐಷಾರಾಮಿ ಮನೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಮಸ್ಕ್ ಅವರ ತಾಯಿ ಕಂಪನಿಯ ಟೆಕ್ಸಾಸ್ ಪ್ರಧಾನ ಕಚೇರಿ ಮತ್ತು ಸ್ಟಾರ್ಬೇಸ್ ಉಡಾವಣಾ ತಾಣದ ಸ್ಥಳವಾದ ಬೊಕಾ ಚಿಕಾದಲ್ಲಿನ ಸ್ಪೇಸ್ಎಕ್ಸ್ ಸಿಇಒನ ಪ್ಯಾಡ್ ಬಳಿ ಹೋದಾಗಲೆಲ್ಲಾ ಅವರು ಒಂದು ಗ್ಯಾರೇಜ್ ನಲ್ಲಿ ರಾತ್ರಿಯನ್ನು ಕಳೆಯುವುದನ್ನು ಬಿಟ್ಟು ಅವರಿಗೆ ಬೇರೆ ಯಾವುದೇ ಆಯ್ಕೆಗಳಿಲ್ಲವಂತೆ ಎಂದು ಹೇಳಿದ್ದಾರೆ.

ತಾಯಿ ಕೇಳಿದ ಪ್ರಶ್ನೆಗೆ ಎಲೋನ್ ಮಸ್ಕ್ ಹೇಳಿದ್ದೇನು ನೋಡಿ
"ರಾಕೆಟ್ ಸೈಟ್ ಬಳಿ ನೀವು ಅಲಂಕಾರಿಕ ಮನೆಯನ್ನು ಹೊಂದಲು ಸಾಧ್ಯವಿಲ್ಲ" ಎಂದು ಮಾಯೆ ಮಸ್ಕ್ ಅವರು ಕಾರಣ ಕೇಳಿದರೆ ವ್ಯಂಗ್ಯವಾಗಿ ಹೇಳುತ್ತಾರಂತೆ. ಕೆಲವು ವಾರಗಳ ಹಿಂದೆ, ಎಲೋನ್ ಮಸ್ಕ್ ಅವರು ಪಾಡ್ಕಾಸ್ಟ್ ನಲ್ಲಿ 45,000 ಡಾಲರ್ ಮೌಲ್ಯದ ಬೋಕಾ ಚಿಕಾದಲ್ಲಿನ "ಅತ್ಯಂತ ಸಣ್ಣ" ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದರು. ಅದಕ್ಕೂ ಮೊದಲು, ಅವರು 2020 ರಲ್ಲಿ ತಮ್ಮ ಭೌತಿಕ ವಸ್ತುಗಳನ್ನು ಬಹುತೇಕವಾಗಿ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ಯಾವುದೇ ಮನೆಯನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Elon Musk: ಆ ಫೇಮಸ್​​ ಫುಟ್​ಬಾಲ್​ ಕ್ಲಬ್​ ಖರೀದಿಸ್ತೀನಿ ಎಂದಿದ್ದ ಎಲಾನ್​ ಮಸ್ಕ್​! ಇದ್ದಕಿದ್ದ ಹಾಗೆ ಜೋಕ್​ ಅಷ್ಟೇ ಎಂದಿದ್ಯಾಕೆ?

ಟೆಸ್ಲಾ ಸಿಇಒ ಅವರ ಹೇಳಿಕೆಗೆ ಇನ್ನಷ್ಟು ಸೇರಿಸಿ ಅವರ ತಾಯಿ ಮಾಯೆ ಅವರು ತನ್ನ ಮಗನಿಗೆ ಭೌತಿಕ ಆಸ್ತಿಗಳಲ್ಲಿ ಯಾವುದೇ ರೀತಿಯ ಆಸಕ್ತಿ ಇಲ್ಲ ಎಂದು ಸಂದರ್ಶನದಲ್ಲಿ ಹೇಳಿದರು.

ಮಾಯೆ ಮಸ್ಕ್ ಯಾರು?
ಮಾಜಿ ಸೂಪರ್ ಮಾಡೆಲ್ ಮಾಯೆ ಹಾಲ್ಡೆಮನ್ ಮತ್ತು ದಕ್ಷಿಣ ಆಫ್ರಿಕಾದ ಉದ್ಯಮಿ ಎರ್ರೋಲ್ ಮಸ್ಕ್ ಅವರ ಪುತ್ರ ಎಲೋನ್. ಮಸ್ಕ್ ಅವರ ತಂದೆ ತಾಯಿ ಇಬ್ಬರು 1979 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ, ಮಾಯೆ ಅವರು ಎಲೋನ್ ಮಸ್ಕ್ ಮತ್ತು ಅವನ ಒಡಹುಟ್ಟಿದವರಾದ ಕಿಂಬಲ್ ಮತ್ತು ಟೋಸ್ಕಾ ಅವರೊಂದಿಗೆ ಕೆನಡಾಕ್ಕೆ ಹೋದರು. ಆ ಸಮಯವನ್ನು ಒಮ್ಮೆ ನೆನಪಿಸಿಕೊಂಡು ಮಾಯೆ ಅವರು “ನಮ್ಮ ಕುಟುಂಬವು ತುಂಬಾನೇ ಹಣದ ಸಮಸ್ಯೆಗಳಿಂದ ಬಳಲುತ್ತಿದ್ದ ಸಮಯ ಅದು ತುಂಬಾನೇ ಭಯಾನಕವಾಗಿತ್ತು ಎಂದು ಹೇಳಿದರು. ಅವಳು ತನ್ನ ಮಕ್ಕಳಿಗೆ ಎಲ್ಲಿ ಆಹಾರಕ್ಕಾಗಿ ತೊಂದರೆಯಾಗುತ್ತದೆಯೋ ಅನ್ನೋ ಭಯದಲ್ಲೇ ಕಾಲ ಕಳೆಯುತ್ತಿದ್ದ ಸಮಯ ಅದು” ಅಂತ ಹೇಳಿದರು.

ಇದನ್ನೂ ಓದಿ: Marriage with Doll: ಇವನಿಗೆ ಬೊಂಬೆ ಮೇಲೆ ಪ್ಯಾರ್‌ಗೇ ಆಗ್ಬಿಟ್ಟೈತೆ! ಅದನ್ನೇ ಮದ್ವೆಯಾಗ್ತಾನಂತೆ ಈ ಭೂಪ!

"ಕಷ್ಟದ ಸಮಯಗಳು ಇದ್ದವು, ಕುಟುಂಬವು ಒಂದೇ ಒಂದು ಮಲಗುವ ಕೋಣೆಯ ಅಪಾರ್ಟ್ಮೆಂಟ್ ನಲ್ಲಿ ಹೇಗೆ ವಾಸಿಸುತ್ತಿತ್ತು ಮತ್ತು ಹೊಸ ಬಟ್ಟೆಗಳನ್ನು ಖರೀದಿಸಲು ಸಹ ಸಾಧ್ಯವಾಗಲಿಲ್ಲ” ಅಂತ ಇವರು ಹಳೆಯದನ್ನೆಲ್ಲಾ ನೆನಪಿಸಿಕೊಂಡರು.
Published by:Ashwini Prabhu
First published: