Explainer: ಸಣ್ಣ ಉಳಿತಾಯ ದರಗಳು ಏಕೆ ಹೆಚ್ಚು ಮುಖ್ಯ? ಇಲ್ಲಿದೆ ಹಲವು ಪ್ರಶ್ನೆಗಳಿಗೆ ಉತ್ತರ

ಸಣ್ಣ ಉಳಿತಾಯ ದರಗಳು ಏಕೆ ಹೆಚ್ಚು ಮುಖ್ಯವಾಗಿವೆ ಮತ್ತು ಅವು ವಾಣಿಜ್ಯ ಬ್ಯಾಂಕುಗಳೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬ ಬಗ್ಗೆ ಕೆಲವು ಉತ್ತರಗಳು ಇಲ್ಲಿವೆ

Photo: Google

Photo: Google

  • Share this:

ಜುಲೈ-ಸೆಪ್ಟೆಂಬರ್ 2021 ರ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿನ್ನೆಲೆ ಇದು ಸಣ್ಣ ಹೂಡಿಕೆದಾರರಿಗೆ ದೊಡ್ಡ ರಿಲೀಫ್‌ ಆಗಿದೆ.


ದುಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಕ್ರಮವಾಗಿ ವಾರ್ಷಿಕ 7.1 ಮತ್ತು 6.8 ಶೇಕಡಾ ಬಡ್ಡಿಯನ್ನು ಗಳಿಸಲಿದೆ ಎಂದು ಸರ್ಕಾರ ಜೂನ್ 30 ರಂದು ಮಾಹಿತಿ ನೀಡಿದೆ. ಒಂ ವರ್ಷ ಅವಧಿಯ ಠೇವಣಿ ಯೋಜನೆಯು ಹೂಡಿಕೆದಾರರಿಗೆ ಶೇಕಡಾ 5.5 ರಷ್ಟು ಬಡ್ಡಿಯನ್ನು ನೀಡಿದರೆ, ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯಲ್ಲಿ ಹೂಡಿಕೆ ಮಾಡಿದವರು ಹಣಕಾಸು ವರ್ಷ 2022 ರ ಎರಡನೇ ತ್ರೈಮಾಸಿಕದಲ್ಲಿ ಶೇ 7.6 ರಷ್ಟು ಬಡ್ಡಿ ದರವನ್ನು ಪಡೆಯಲಿದ್ದಾರೆ. ಕೊರೊನಾವೈರಸ್‌ ಸಾಂಕ್ರಾಮಿಕದಿಂದ ಸಾಕಷ್ಟು ಉದ್ಯೋಗ ನಷ್ಟವಾಗಿದ್ದು, ವ್ಯವಹಾರಗಳು ನಷ್ಟ ಅನುಭವಿಸಿವೆ ಮತ್ತು ಕುಟುಂಬಗಳು ತಮ್ಮ ಆದಾಯ ಕುಗ್ಗುತ್ತಿರುವುದನ್ನು ನೋಡಿದೆ. ಈ ಹಿನ್ನೆಲೆ ಬಡ್ಡಿ ದರಗಳನ್ನು ಸ್ಥಿರವಾಗಿರಿಸಿಕೊಳ್ಳುವ ನಿರ್ಧಾರವನ್ನು ಸ್ಥಿರ-ಆದಾಯದ ಹೂಡಿಕೆದಾರರು ಸ್ವಾಗತಿಸುತ್ತಾರೆ.


ಸಣ್ಣ ಉಳಿತಾಯ ದರಗಳು ಏಕೆ ಹೆಚ್ಚು ಮುಖ್ಯವಾಗಿವೆ ಮತ್ತು ಅವು ವಾಣಿಜ್ಯ ಬ್ಯಾಂಕುಗಳೊಂದಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬ ಬಗ್ಗೆ ಕೆಲವು ಉತ್ತರಗಳು ಇಲ್ಲಿವೆ:

ಸಣ್ಣ ಉಳಿತಾಯ ದರಗಳನ್ನು ಆಗಾಗ್ಗೆ ಪರಿಶೀಲಿಸಲಾಗುತ್ತದೆಯೇ?

ಸಣ್ಣ ಉಳಿತಾಯ ದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ, ಈ ಯೋಜನೆಗಳ ಬಡ್ಡಿ ದರವನ್ನು ಕಡಿಮೆ ಮಾಡಲು ಮೋದಿ ಸರ್ಕಾರವು ಪ್ರಯತ್ನಗಳನ್ನು ಮಾಡಿತು. 2021 ರ ಮಾರ್ಚ್ 31 ರಂದು ಬಡ್ಡಿ ದರ ಕಡಿತವನ್ನು ಘೋಷಿಸಲಾಯಿತಾದರೂ, ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಕಾರಣದಿಂದಾಗಿ ಮರುದಿನವೇ ಹಿಂತೆಗೆದುಕೊಳ್ಳಲಾಯಿತು.

ದರ ಕಡಿತವನ್ನು ಹಿಂಪಡೆಯಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಆ ವೇಳೆ ಟ್ವೀಟ್‌ ಮಾಡಿದ್ದರು. ಬಡ್ಡಿ ದರ ಕಡಿತ ಜಾರಿಯಾಗಿದ್ದರೆ, ಪಿಪಿಎಫ್ ದರವು ಶೇ. 6.4, ಎನ್‌ಎಸ್‌ಸಿ ದರವು ಶೇ.
5.9 ಕ್ಕೆ ಇಳಿಕೆಯಾಗುತ್ತಿತ್ತು.

ದರಗಳಲ್ಲಿ ಬದಲಾವಣೆ ಮಾಡಿದರೆ ಸಣ್ಣ ಹೂಡಿಕೆದಾರರ ಮೇಲೆ ಪರಿಣಾಮವಾಗುತ್ತಾ?

ಚುನಾವಣಾ ಸಮಯದಲ್ಲಿ ಕೇಂದ್ರ ಹಣಕಾಸು ಸಚಿವಾಲಯ ತೆಗೆದುಕೊಂಡ ಆತುರದ ಪ್ರತಿಕ್ರಿಯೆಯು ಸಣ್ಣ ಉಳಿತಾಯ ದರಗಳ ಸುತ್ತ ಸಿಗ್ನಲಿಂಗ್ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಏಕೆಂದರೆ, ಹೆಚ್ಚಿನ ಸಂಖ್ಯೆಯ ನಾಗರಿಕರು ಇವುಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಲ್ಲದೆ, ಸದ್ಯ ಬ್ಯಾಂಕ್ ಠೇವಣಿಗಳಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತದೆ ಮತ್ತು ಸರ್ಕಾರದಿಂದ ಬೆಂಬಲ ಪಡೆದುಕೊಂಡಿದೆ.

ಉದಾಹರಣೆಗೆ, ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ವರ್ಷದ ಅವಧಿಯ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಕೇವಲ ಶೇ. 4.9 ರಷ್ಟು ಬಡ್ಡಿ ಗಳಿಸಬಹುದು. ಆದರೆ, ಸರ್ಕಾರ ಬೆಂಬಲಿತ ಒಂದು ವರ್ಷ ಅವಧಿಯ ಠೇವಣಿ ಯೋಜನೆಯು 5.5 ಪ್ರತಿಶತದಷ್ಟು ಬಡ್ಡಿ ದರ ನೀಡುತ್ತದೆ.


ಸಣ್ಣ ಉಳಿತಾಯ ದರಗಳು ಬ್ಯಾಂಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಸಣ್ಣ ಉಳಿತಾಯ ದರಗಳು ಮತ್ತು ಬ್ಯಾಂಕ್ ಠೇವಣಿ ದರಗಳ ನಡುವೆ ಸಂಪರ್ಕ ಕಡಿತವಾದರೆ ಕೆಲವೊಮ್ಮೆ ವಿತ್ತೀಯ ಪ್ರಸರಣ ಪ್ರಕ್ರಿಯೆಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅಥವಾ ಸಾಲಗಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ರೆಪೋ ದರ ಕಡಿಮೆ ಮಾಡುವಂತೆ ಮಾಡುತ್ತದೆ.

ಸಣ್ಣ ಉಳಿತಾಯ ದರಗಳು ಹೆಚ್ಚಿದ್ದರೆ, ವಾಣಿಜ್ಯ ಬ್ಯಾಂಕುಗಳು ಠೇವಣಿ ದರವನ್ನು ಸ್ಪರ್ಧಾತ್ಮಕವಾಗಿರಿಸಿಕೊಳ್ಳಬೇಕು. ಇದು ಸಾಲಗಳನ್ನು ಅಗ್ಗದ ಬೆಲೆಗೆ ನೀಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಂಕುಗಳು ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಿದರೆ ಹಾಗೂ ಹೆಚ್ಚು ಬಡ್ಡಿ ದರದಲ್ಲಿ ಎರವಲು ಪಡೆದರೆ ಅದರ ಮಾರ್ಜಿನ್‌ ಒತ್ತಡಕ್ಕೆ ಸಿಲುಕುತ್ತದೆ.


ಬಡ್ಡಿದರಗಳ ಪ್ರಸ್ತುತ ಸನ್ನಿವೇಶ ಏನು?


ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಫೆಬ್ರವರಿ 2019 ರಿಂದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೋ ದರವನ್ನು 225 ಬೇಸಿಸ್ ಪಾಯಿಂಟ್‌ಗಳಿಂದ ನಾಲ್ಕು ಪ್ರತಿಶತಕ್ಕೆ ಇಳಿಸಿದೆ. ಒಂದು ಬೇಸಿಸ್‌ ಪಾಯಿಂಟ್ ಶೇಕಡಾವಾರು ಪಾಯಿಂಟಿನ ನೂರನೇ ಒಂದು ಭಾಗವಾಗಿದೆ.


ಇನ್ನೊಂದೆಡೆ, ಹಣದುಬ್ಬರ ಹೆಚ್ಚಳದ ಆತಂಕ ಹಿನ್ನೆಲೆ ಎಂಪಿಸಿ ದರಗಳನ್ನು ಬದಲಾಯಿಸದೆ ಬಿಟ್ಟಿದೆ. ಸಾಲವನ್ನು ಅಗ್ಗವಾಗಿರಿಸುವುದು ವ್ಯವಸ್ಥೆಗೆ ಸಂದೇಶವಾಗಿದೆ, ಇದರರ್ಥ ಠೇವಣಿಗಳು ಅಗ್ಗವಾಗುತ್ತವೆ. ಆದರೆ ಸಣ್ಣ ಉಳಿತಾಯ ಯೋಜನೆಗಳು ಅವರೊಂದಿಗೆ ಸ್ಪರ್ಧಿಸಿದಾಗ ಠೇವಣಿ ದರವನ್ನು ಕಡಿತಗೊಳಿಸುವುದು ಕಷ್ಟ.

ಸಣ್ಣ ಉಳಿತಾಯ ಬಡ್ಡಿ ದರಗಳ ಬಗ್ಗೆ ಆರ್‌ಬಿಐ ನಿಲುವೇನು..?

ಸಣ್ಣ ಉಳಿತಾಯ ಯೋಜನೆಗಳು ಹಣಕಾಸು ಕ್ಷೇತ್ರದ ಪ್ರಮುಖ ವಿಭಾಗವಾಗಿದ್ದರಿಂದ, ಹಣಕಾಸು ಕ್ಷೇತ್ರದ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ನಮ್ಯತೆಯನ್ನು ಅವರಿಗೆ ನೀಡುವುದು ಮುಖ್ಯ ಎಂದು ಆರ್‌ಬಿಐನ ಸಂಶೋಧಕರ ಗುಂಪು 2001 ರ ನವೆಂಬರ್ 12 ರಂದು ತಿಳಿಸಿದೆ.

"ಆಡಳಿತಾತ್ಮಕ ಬಡ್ಡಿದರಗಳನ್ನು ವಿರೂಪಗೊಳಿಸುವ ಪರಿಣಾಮಗಳು ಮತ್ತು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ತೆರಿಗೆ ಪ್ರೋತ್ಸಾಹಗಳು ಹೆಚ್ಚಿನ ಬಡ್ಡಿ ವೆಚ್ಚಗಳು, ಹಣಕಾಸಿನ ಹೊರೆ ಮತ್ತು ಖಾಸಗಿ ಹೂಡಿಕೆಗೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ನೀತಿ ಸಮಸ್ಯೆಗಳನ್ನು ಹೆಚ್ಚಾಗಿ ಹುಟ್ಟುಹಾಕುತ್ತವೆ" ಎಂದು ಹೇಳಿತ್ತು.


First published: