ಭಾರತದಲ್ಲಿ ನಾವು ಭಿನ್ನ ಸಂಸ್ಕೃತಿ , ಧರ್ಮ ಮತ್ತು ಹಿನ್ನೆಲೆಯ ಜನರನ್ನು ಕಾಣಬಹುದು. ಆದರೆ ಎಲ್ಲಾ ಭಾರತೀಯರಲ್ಲಿ ಕಾಣಸಿಗುವ ಸಮಾನ ಅಂಶವೆಂದರೆ, ಆಹಾರದ ಬಗೆಗಿನ ಪ್ರೀತಿ. ನಮ್ಮ ದೇಶದಲ್ಲಿ ಇರುವ ಅತ್ಯಂತ ರುಚಿಕರ ಖಾದ್ಯವನ್ನು ಆಯ್ಕೆ ಮಾಡಬೇಕಾಗಿ ಬಂದರೆ, 90% ಜನರ ಆಯ್ಕೆ ಬಿರಿಯಾನಿ ಆಗಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಬಿರಿಯಾನಿಯ ಬಗೆಗಿನ ಪ್ರೀತಿ ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ ಹಾಗೂ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಾ ಬಂದಿದೆ.ಯಾವ ತರಹದ ಬಿರಿಯಾನಿಯೇ ಇರಲಿ, ಅದರ ಹಿನ್ನಲೆ ಏನೇ ಇರಲಿ, ಅದನ್ನು ಎಲ್ಲಾ ವರ್ಗದ ಜನರು ಮನಃಪೂರ್ವಕವಾಗಿ ಸವಿಯುತ್ತಾರೆ. ಇನ್ನು ಬಾಳೆ ಎಲೆಯಲ್ಲಿ ರುಚಿಯಾದ ಘಮಘಮ ಬಿರಿಯಾನಿಯನ್ನು ಬಡಿಸಿದರಂತೂ, ಬಿರಿಯಾನಿ ಪ್ರೇಮಿಗಳಿಗೆ ಅದುವೇ ಸ್ವರ್ಗ. ಪ್ರತಿಯೊಬ್ಬ ಬಿರಿಯಾನಿ ಪ್ರೇಮಿಯು ಒಪ್ಪುವ ಮಾತಿದು.
ಬಹಳಷ್ಟು ವೃತ್ತಿಪರರು ಮತ್ತು ತಜ್ಞರು ಬಿರಿಯಾನಿ ಭಾರತ ಮೂಲದ್ದಲ್ಲ ಎಂದು ಹೇಳುತ್ತಾರೆ. ಅದು ಯಾವ ಮೂಲದ್ದಾದರೆ ನಮಗೇನು, ಬಿರಿಯಾನಿ ತಿನ್ನುವುದರಲ್ಲಿ ಸಿಗುವ ಆನಂದವೇ ಆನಂದ. ಇದೇ ಕಾರಣದಿಂದಾಗಿ ಭಾರತದ ಪ್ರತೀ ಮೂಲೆಯಲ್ಲೂ ಬಿರಿಯಾನಿ ಕಾರ್ನರ್‌ಗಳನ್ನು ಕಾಣಬಹುದು. ಬಿರಿಯಾನಿ ಇಲ್ಲದೇ ಮದುವೆ ಊಟ ಅಪೂರ್ಣ ಎನ್ನುವ ಮಾತು ಕೂಡ ಇದೆ.
ಬಿರಿಯಾನಿಯ ಬಗೆಗೆ ಕೆಲವು ಕುತೂಹಲಕಾರಿ ಸಂಗತಿಗಳು ಈ ಕೆಳಗಿನಂತಿವೆ
1. ಒಮ್ಮೆ ಮಮ್ತಾಜ್ ಬೇಗಂಳು , ಸೈನಿಕನೊಬ್ಬನು ಸೊರಗಿರುವುದನ್ನು ನೋಡಿದಳು. ಕೂಡಲೇ ಅವಳು ಪಾಕ ಶಾಲೆಯ ಮುಖ್ಯ ಅಡುಗೆ ಭಟ್ಟನಿಗೆ ಹೇಳಿ, ಅನ್ನ ಹಾಗೂ ಮಾಂಸವನ್ನು ಒಳಗೊಂಡಿರುವ ಸಮತೋಲಿತ ಖಾದ್ಯವನ್ನು ತಯಾರಿಸುವಂತೆ ಹೇಳಿದಳು. ಅದರ ಫಲಿತಾಂಶವೇ ಬಿರಿಯಾನಿ.
2. ಬಿರಿಯಾನಿ ಎಂಬ ಪದವು “ಬಿರಿಂಜಿ” ಎಂಬ ಪರ್ಷಿಯನ್ ಪದದಿಂದ ಉಗಮವಾಗಿದೆ, ಆ ಪದದ ಮೂಲ ಅರ್ಥ ಅಕ್ಕಿ.
3. ಅಧ್ಯಯನವೊಂದರ ಪ್ರಕಾರ, ಸೈನಿಕರ ಶಿಬಿರಗಳಲ್ಲಿ ಹೆಚ್ಚಾಗಿ ಬಿರಿಯಾನಿ ತಯಾರಿಸುತ್ತಾರೆ . ಏಕೆಂದರೆ, ಒಂದೇ ಪಾತ್ರೆಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ ಅದನ್ನು ಬೇಯಿಸಬಹುದು.
4. ಬಿರಿಯಾನಿ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಮಯನ್ಮಾರ್ ಮುಂತಾದ ದೇಶಗಳಲ್ಲೂ ಕೂಡ ಮನೆಗಳಲ್ಲಿ ಮುಖ್ಯ ಖಾದ್ಯಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.
ವೆಜ್ ಬಿರಿಯಾನಿ - ಪಲಾವ್ ? ಬಿರಿಯಾನಿಗೆ ಸಂಬಂಧಪಟ್ಟಂತೆ, ಅತ್ಯಂತ ಕಿರಿಕಿರಿ ಹುಟ್ಟಿಸುವ ಪ್ರಶ್ನೆಯೆಂದರೆ, “ಬಿರಿಯಾನಿ ಸಸ್ಯಹಾರಿಯೇ ಅಥವಾ ಮಾಂಸಹಾರಿಯೇ? ಅದು ಸಸ್ಯಹಾರಿ ಆಗಿದ್ದರೆ ಅದು ಪಲಾವ್ ಆಗುತ್ತದೆ ಅಲ್ಲವೇ? ಓಹ್ ಇಷ್ಟೆಲ್ಲಾ ತರ್ಕ ಏಕೆ? ಬಿರಿಯಾನಿಯ ರುಚಿಯ ಮುಂದೆ ಈ ಪ್ರಶ್ನೆಗಳು ಬೇಕೆ?
ವಿಭಿನ್ನ ಬಿರಿಯಾನಿಗಳು ಮತ್ತು ಅದರ ಆಯ್ಕೆಗಳು ಲಭ್ಯ ಇವೆವಿಭಿನ್ನ ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಳ್ಳುವುದು ನಮಗೆಲ್ಲರಿಗೂ ಇಷ್ಟವಾಗುತ್ತದೆ ಅಲ್ಲವೇ? ಖಂಡಿತಾ. ಅದು ಮನುಷ್ಯನ ಸಹಜ ಗುಣ. ಬಿರಿಯಾನಿಯು, ಹೈದರಾಬಾದಿ ಬಿರಿಯಾನಿ, ಕಲ್ಕತ್ತಾ ಬಿರಿಯಾನಿ, ಮಲಬಾರಿ ಬಿರಿಯಾಬಿ ಹೀಗೆ ವಿಭಿನ್ನ ರೂಪಗಳಲ್ಲಿ ಲಭ್ಯ.ಬಿರಿಯಾನಿಯ ವಿಷಯದಲ್ಲಿ ಇರುವ ಏಕೈಕ “ಗೊಂದಲಮಯ ಸಂಗತಿ”ಎಂದರೆ, ಅಷ್ಟೊಂದು ತರಾವರಿ ರುಚಿಕರ ಬಿರಿಯಾನಿಗಳಲ್ಲಿ , ಸಿಕ್ಕಾಪಟ್ಟೆ ರುಚಿಯಾಗಿರುವುದು ಯಾವ ಬಿರಿಯಾನಿ ಎಂಬುವುದು.
ಒಂದೇ ಖಾದ್ಯದಲ್ಲಿ ಎಲ್ಲವೂಬಿರಿಯಾನಿಯಲ್ಲಿ ಇರುವ ಮಾಂಸ, ಬಾಸುಮತಿ ಅಕ್ಕಿ, ವಿವಿಧ ಮಸಾಲೆಗಳು ಮತ್ತು ಇತರ ಅತ್ಯುತ್ತಮ ಪದಾರ್ಥಗಳು, ಬಿರಿಯಾನಿಯನ್ನು ಎಲ್ಲರೂ ಇಷ್ಟಪಡುವ ಒಂದು ಸಂಪೂರ್ಣ ಖಾದ್ಯವನ್ನಾಗಿಸುತ್ತದೆ. ವ್ಯಕ್ತಿಯ ಆಹಾರ ಕ್ರಮ ಯಾವುದೇ ಇರಲಿ, ಬಿರಿಯಾನಿಗಾಗಿ ಅವನ ಹೊಟ್ಟೆಯಲ್ಲಿ ಪ್ರತ್ಯೇಕ ಜಾಗ ಮೀಸಲಿರುತ್ತದೆ.
ಶ್ರೀಮಂತ ಅನುಭೂತಿಬಿರಿಯಾನಿಯಲ್ಲಿ ಮಾಂಸ, ದುಬಾರಿ ಬಾಸ್ಮತಿ ಅಕ್ಕಿ, ಅಮೂಲ್ಯ ಭಾರತೀಯ ಮಸಾಲೆಗಳು ಮತ್ತು ಇತರ ಅತುತ್ತಮ ಪದಾರ್ಥಗಳು ಇರುತ್ತವೆ. ಕೆಲವರ ಪಾಲಿಗೆ ಅದರಲ್ಲಿರುವ ಒಂದೊಂದು ಪದಾರ್ಥವೂ ಅತ್ಯಮೂಲ್ಯ. ಹಾಗಾಗಿ ಇದನ್ನು ಶ್ರೀಮಂತ ಖಾದ್ಯ ಎಂದರೆ ತಪ್ಪಿಲ್ಲ. ಮುಘಲರು ಮತ್ತು ನವಾಬರ ಆಹಾರ ಕ್ರಮದಲ್ಲಿ ಬಿರಿಯಾನಿ ಅತ್ಯಂತ ಮಹತ್ವದ ಖಾದ್ಯವಾಗಿತ್ತಂತೆ.
ಕೊರೆವ ಚಳಿಯಲ್ಲಿ ಜೀವರಕ್ಷಕ ಬಿರಿಯಾನಿತಾಪಮಾನದಲ್ಲಿ ತೀವ್ರ ಇಳಿಕೆಯಾದಾಗ, ಕೆಲಸ ಮಾಡಲು ಇಚ್ಚೆಯಿಲ್ಲದೆ ನೀವು ಬೆಚ್ಚಗಿನ ಹೊದಿಕೆಯಲ್ಲಿ ಅವಿತುಕೊಂಡಿದ್ದರೆ, ಮಾಂಸ ಹಾಗೂ ಇತರ ಉತ್ತಮ ಪದಾರ್ಥಗಳಿಂದ ತುಂಬಿರುವ ಬಿಸಿಬಿಸಿಯಾದ ಬಿರಿಯಾನಿ ನಿಮ್ಮ ದೇಹದಲ್ಲಿ ಹೊಸ ಉತ್ಸಾಹ ಮೂಡಿಸಬಹುದು. ಆ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ.
ಸರ್ವಕಾಲಿಕ ಆಹಾರಬಿರಿಯಾನಿ ತಿನ್ನಲು ನಿರ್ದಿಷ್ಟ ಸಮಯ ಬೇಕಾಗಿಲ್ಲ, ನೀವು ಬೆಳಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವವರೆಗೆ ಯಾವಾಗ ಬೇಕಾದರೂ ಬಿರಿಯಾನಿ ತಿನ್ನಬಹುದು. ಹಾಗಾಗಿ ಬಿರಿಯಾನಿ ಒಂದು ಸರ್ವಕಾಲಿಕ ಖಾದ್ಯ.
ಬಿರಿಯಾನಿಯ ಮಜಾ ಕಥೆಗಳು :ಅನರ್ಹ ಹುಡುಗನನ್ನು ಮದುವೆಯಾಗುವುದನ್ನು ತಪ್ಪಿಸಿದ ಬಿರಿಯಾನಿ - ವಧುವಿನ ಕಡೆಯವರು ವರನ ಮನೆಗೆ 30 ಕೆಜಿ ಚಿಕನ್ ಬಿರಿಯಾನಿ ಕಳುಹಿಸಿದರಂತೆ. ಆದರೆ ಅವರು ಸಿಟ್ಟಾಗಿ, ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಕಾರಣ, ವರನ ಮನೆಯವರಿಗೆ ಮಟನ್ ಬಿರಿಯಾನಿ ಹೆಚ್ಚು ಇಷ್ಟವಿತ್ತಂತೆ. ಈ ಘಟನೆಯಿಂದ ಕೆರಳಿದ ಹುಡುಗಿ , ಮದುವೆಯನ್ನು ಮುರಿದೇ ಬಿಟ್ಟಳಂತೆ.
ಬಿರಿಯಾನಿ ಪ್ರಸಾದ – ತಮಿಳುನಾಡಿನ ವಡಕ್ಕಂಪಟ್ಟಿ ಎಂಬ ಸಣ್ಣ ಗ್ರಾಮದಲ್ಲಿ, ಪ್ರತೀ ಜನವರಿಯಲ್ಲಿ ನಡೆಯುವ ಹಬ್ಬದಲ್ಲಿ, ಬಿರಿಯಾನಿಯನ್ನು ಪ್ರಸಾದ ರೂಪದಲ್ಲಿ ಕೊಡುತ್ತಾರಂತೆ. ಇದು ಕಳೆದ 83 ವರ್ಷಗಳಿಂದ ನಡೆದು ಬಂದ ಪದ್ಧತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ