Weird News: ಈ ದೇಶದಲ್ಲಿ ಮೃತದೇಹಗಳನ್ನು ರಣಹದ್ದುಗಳಿಗೆ ನೀಡಲಾಗುತ್ತದಂತೆ!

ಹದ್ದುಗಳು ಹೆಣವನ್ನು ತಿನ್ನುತ್ತಾ ಇದೆ

ಹದ್ದುಗಳು ಹೆಣವನ್ನು ತಿನ್ನುತ್ತಾ ಇದೆ

ಮೃತರ ಅಂತ್ಯಕ್ರಿಯೆ ನಡೆಸುವ ಪ್ರಕ್ರಿಯೆಗಳಲ್ಲೂ ಸಾಕಷ್ಟು ವಿಭಿನ್ನವಾದ ಸಂಪ್ರದಾಯಗಳಿಗೆ.ಕೆಲವು ಜನಾಂಗದ ಸಂಸ್ಕೃತಿಗಳಲ್ಲಿ ಮೃತರ ಶರೀರವನ್ನು ವಿಧಿ ವಿಧಾನಗಳೊಂದಿಗೆ ಸುಡುತ್ತಾರೆ.

  • Trending Desk
  • 4-MIN READ
  • Last Updated :
  • Share this:

ಪ್ರತಿಯೊಂದು ದೇಶ ಮತ್ತು ಸಂಸ್ಕೃತಿ (Culture) ತನ್ನದೇ ಆದ ಬೇರೆ ಬೇರೆ ಆಚರಣೆಗಳನ್ನು ಪದ್ಧತಿಗಳನ್ನು ಹೊಂದಿದೆ. ಅದರಲ್ಲೂ ಮೃತರ ಅಂತ್ಯಕ್ರಿಯೆ ನಡೆಸುವ ಪ್ರಕ್ರಿಯೆಗಳಲ್ಲೂ ಸಾಕಷ್ಟು ವಿಭಿನ್ನವಾದ ಸಂಪ್ರದಾಯಗಳಿಗೆ.ಕೆಲವು ಜನಾಂಗದ ಸಂಸ್ಕೃತಿಗಳಲ್ಲಿ ಮೃತರ ಶರೀರವನ್ನು ವಿಧಿ ವಿಧಾನಗಳೊಂದಿಗೆ ಸುಡುತ್ತಾರೆ. ಪಂಚಭೂತಗಳಲ್ಲಿ ಲೀನವಾದರು ಎಂದು ಭಾವಿಸುತ್ತಾರೆ. ಇನ್ನೂ ಕೆಲವು ಜಾತಿ-ಧರ್ಮಗಳಲ್ಲಿ ಬಟ್ಟೆಯಲ್ಲಿ ಸುತ್ತಿದ ಶವವನ್ನು ಮಣ್ಣು ಮಾಡುತ್ತಾರೆ. ಈ ಆಚರಣೆಗಳ ಜೊತೆಗೆ ಕೆಲವು ಶಾಸ್ತ್ರ, ಸಂಪ್ರದಾಯ, ವಿಧಿ ವಿಧಾನ, ಮಾಡುವ ರೀತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ಆದರೆ ಬೇರೆ ಬೇರೆ ದೇಶಗಳಲ್ಲಿ, ಅಲ್ಲಿನ ಜನಾಂಗಗಳಲ್ಲಿ ಇಂಥ ಕೆಲವು ಪದ್ಧತಿಗಳು ವಿಚಿತ್ರವಾಗಿರುತ್ತವೆ. ಟಿಬೆಟ್ (Tibet) ಮತ್ತು ಕಿಂಗ್ಹೈ ಮತ್ತು ಮಂಗೋಲಿಯಾದ ಕೆಲವು ಭಾಗಗಳಲ್ಲಿ ಅಂತ್ಯಕ್ರಿಯೆಯನ್ನು ವಿಲಕ್ಷಣ ರೀತಿಯಲ್ಲಿ ಮಾಡುತ್ತಾರಂತೆ. ಈ ವಿಚಿತ್ರ ಸಂಪ್ರದಾಯವನ್ನು ಆಕಾಶ (Sky) ಸಮಾಧಿಗಳು ಎಂದು ಕರೆಯಲಾಗುತ್ತದೆ.


ಏನಿದು ಆಕಾಶ ಸಮಾಧಿ?


ಆಕಾಶ ಸಮಾಧಿ ಆಚರಣೆ ಎಂದರೆ ಇಲ್ಲಿ ಮೃತ ದೇಹಗಳನ್ನು ರಣಹದ್ದುಗಳಿಗೆ ನೀಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಸುದ್ದಿ ಮಾಧ್ಯಮದ ವರದಿಯೊಂದರ ಪ್ರಕಾರ ಟಿಬೆಟಿಯನ್ ಮತ್ತು ಮಂಗೋಲಿಯನ್ ಜನಸಂಖ್ಯೆಯ ಪ್ರಮುಖ ಭಾಗವು ಈ ಪದ್ಧತಿಯನ್ನು ಅನುಸರಿಸುತ್ತದೆ.


ಈ ಪದ್ಧತಿ ಪ್ರಕಾರ ವ್ಯಕ್ತಿಯೊಬ್ಬ ಸತ್ತರೆ, ಅವರ ಆತ್ಮವು ದೇಹವನ್ನು ಬಿಟ್ಟು ಹೋಗುತ್ತದೆ. ದೇಹವು ಖಾಲಿ ಪಾತ್ರೆಯಂತಾಗುತ್ತದೆ ಎಂದು ಅವರು ನಂಬುತ್ತಾರೆ. ಈ ನಿರ್ದಿಷ್ಟ ಬೌದ್ಧ ಸಂಪ್ರದಾಯವನ್ನು ವಜ್ರಯಾನ ಬೌದ್ಧಧರ್ಮ ಎಂದು ಕರೆಯಲಾಗುತ್ತದೆ. ಈ ಆಚರಣೆಯನ್ನು ಅನುಸರಿಸುವ ಜನರು ಇದನ್ನು ಆತ್ಮಗಳ ವರ್ಗಾವಣೆಯನ್ನು ನಂಬುತ್ತಾರೆ.


ಅವರ ಪ್ರಕಾರ, ಆತ್ಮವು ದೇಹವನ್ನು ತೊರೆಯುವುದರಿಂದ, ಅವರು ದೈವಿಕ ಆಕಾಶದ ಸಮಾಧಿಯ ಮೂಲಕ ಶವವನ್ನು ವಿಲೇವಾರಿ ಮಾಡುತ್ತಾರೆ.


ಮೃತ ದೇಹವನ್ನು ಹದ್ದುಗಳಿಗೆ ನೀಡುತ್ತಾರಂತೆ!


ಆಕಾಶ ಸಮಾಧಿ ಆಚರಣೆಯಲ್ಲಿ ಮೃತ ದೇಹವನ್ನು ಮೊದಲು ತುಂಡುಗಳಾಗಿ ಕತ್ತರಿಸಿ, ಸತ್ತ ವ್ಯಕ್ತಿಯ ಸಂಬಂಧಿಕರ ಸಮ್ಮುಖದಲ್ಲಿ ರಣಹದ್ದುಗಳಿಗೆ ತೆರೆದ ಆಕಾಶದ ಕೆಳಗೆ ಇಡಲಾಗುತ್ತದೆ ಎನ್ನಲಾಗಿದೆ.


ಮೃತದೇಹವನ್ನು ರಣಹದ್ದುಗಳು ಸೇವಿಸಿದ ನಂತರ, ಉಳಿದ ಮೂಳೆಗಳು ಮತ್ತು ಅಸ್ಥಿಪಂಜರಗಳನ್ನು ಒಡೆದು ಹಾಕಲಾಗುತ್ತದೆ. ಕೆಲವೊಮ್ಮೆ, ಮೂಳೆಗಳನ್ನು ಹಿಟ್ಟು, ಬೆಣ್ಣೆ ಮತ್ತು ಹಾಲಿನೊಂದಿಗೆ ಬೆರೆಸಲಾಗುತ್ತದೆ. ನಂತರ ಅದನ್ನು ಕಾಗೆಗಳಿಗೆ ನೀಡಲಾಗುತ್ತದೆ. ಇನ್ನು ಪುರುಷರು ಮತ್ತು ಮಹಿಳೆಯರ ಮೃತದೇಹಗಳನ್ನು ವಿವಿಧ ವಿಭಾಗಗಳಲ್ಲಿ ಇರಿಸಲಾಗುತ್ತದೆ ಎನ್ನಲಾಗಿದೆ.


ಇದನ್ನೂ ಓದಿ: ಅದೃಷ್ಟ ಅಂದ್ರೆ ಇವ್ನದ್ದೇ ನೋಡಿ, ಮೊಬೈಲ್​ನಿಂದ ಒಂದು ಪ್ರಾಣ ಉಳಿಯಿತು!


ದೇಹವು ಆತ್ಮವನ್ನು ಹೊಂದಿರದ ಕಾರಣ ಅದನ್ನು ಸಂರಕ್ಷಿಸುವ ಅಗತ್ಯವಿಲ್ಲ ಎಂದು ಬೌದ್ಧರು ನಂಬುತ್ತಾರೆ. ಇದಲ್ಲದೆ ಹೀಗೆ ಅಂತ್ಯಕ್ರಿಯೆ ಮಾಡಿದ ನಂತರ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅವರು ಭಾವಿಸುತ್ತಾರೆ.


ಅವರ ಪ್ರಕಾರ ಈ ಕಾರಣಕ್ಕೆ ಆಕಾಶ ಸಮಾಧಿ ಮುಖ್ಯ !


ಈ ಜನಾಂಗದ ಪ್ರಕಾರ, ರಣಹದ್ದುಗಳು ಮೃತದೇಹದ ಮಾಂಸವನ್ನು ಸೇವಿಸಿದಾಗ ಅವು ತೃಪ್ತವಾಗುತ್ತವೆ. ಇದರಿಂದ ಕುರಿಮರಿಗಳು ಮತ್ತು ಮೊಲಗಳಂತಹ ಸಣ್ಣ ಜೀವಿಗಳ ಮೇಲೆ ದಾಳಿ ಮಾಡುವುದು ತಪ್ಪುತ್ತದೆ.


ರಣಹದ್ದುಗಳು ಅವುಗಳ ಮೇಲೆ ದಾಳಿ ಮಾಡಿ ಬೇಟೆಯಾಡುವುದಿಲ್ಲವಾದ್ದರಿಂದ ಸಣ್ಣ ಜೀವಿಗಳು ಉಳಿಯುತ್ತವೆ. ಆದ್ದರಿಂದ ಆಕಾಶ ಸಮಾಧಿಗಳು ಮುಖ್ಯವೆಂದು ಬೌದ್ಧರು ನಂಬುತ್ತಾರೆ.


ಇನ್ನು, ಸ್ಕ್ಯಾವೆಂಜರ್ ಪಕ್ಷಿಗಳಿಗೆ ಆಹಾರಕ್ಕಾಗಿ ಶವಗಳನ್ನು ಸುಮಾರು ಒಂದು ವರ್ಷದವರೆಗೆ ಸೈಲೆನ್ಸ್ ಗೋಪುರದ ಮೇಲೆ ಇರಿಸಲಾಗುತ್ತದೆ ಎಂಬುದಾಗಿಯೂ ಕೆಲವು ಕಥೆಗಳಲ್ಲಿ ಹೇಳಲಾಗುತ್ತದೆ.


ಸಾಮಾನ್ಯ ಜನರಿಗೆ ಮೃತದೇಹವನ್ನು ರಣಹದ್ದುಗಳಿಗೆ ಕೊಡುವಂಥ ಈ ಆಚರಣೆ ವಿಚಿತ್ರ ಅನ್ನಿಸದೇ ಇರದು. ನಮ್ಮ ಜೊತೆ ಬಾಳಿದ ಬದುಕಿದ ಜೀವವನ್ನು ಹಾಗೆ ಬಿಟ್ಟು ಹೋಗುವುದು ಸರಿಯಾ ಎನಿಸಬಹುದು.




ಆದ್ರೆ ಒಂದೊಂದು ಸ್ಥಳಗಳಲ್ಲಿ ಒಂದೊಂದು ಬಗೆಯ ಆಚರಣೆಗಳಿರುತ್ತವೆ. ಅವುಗಳ ಬಗ್ಗೆ ಕೇಳಿದಾಗ, ತಿಳಿದುಕೊಂಡಾಗ ಕೆಲವೊಮ್ಮೆ ವಿಚಿತ್ರ ಅನ್ನಿಸುತ್ತದೆ. ಆದರೆ ಅವರವರ ಪಾಲಿಗೆ ಅವರ ಆಚರಣೆಗಳೇ ಮಹತ್ವದ್ದು ಎನಿಸುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು