ಈ ಕಾರಣಕ್ಕೆ Biscuit​ನಲ್ಲಿ ಈ ರೀತಿ ಚುಕ್ಕಿ ಚುಕ್ಕಿ ರಂಧ್ರ ಇರತ್ತಂತೆ!

ಯಾವತ್ತಾದರೂ ನೀವು ತಿನ್ನುವಂತಹ ಬಿಸ್ಕತ್ತಿನಲ್ಲಿ ಈ ಚಿಕ್ಕ ಚಿಕ್ಕ ರಂಧ್ರಗಳನ್ನು ಏಕೆ ಸಾಲು ಸಾಲಾಗಿ ಮಾಡಲಾಗಿರುತ್ತದೆ ಎಂದು ಯೋಚಿಸಿದ್ದೀರಾ?

ಬಿಸ್ಕತ್ತುಗಳು

ಬಿಸ್ಕತ್ತುಗಳು

  • Share this:
ನಾವು ಚಿಕ್ಕವರಾಗಿದ್ದಾಗ ಯಾರಾದರೂ ಮನೆಗೆ ಬಂದರೆ ಅವರು ನಮಗಾಗಿ ಒಂದು ಬಿಸ್ಕತ್ತಿನ ಪ್ಯಾಕೆಟ್ (Biscuit)  ಅಥವಾ ಚಾಕೊಲೇಟ್‌ (Chocolate) ಅನ್ನು ಕೈಯಲ್ಲಿ ಹಿಡಿದುಕೊಂಡು ನಮಗಾಗಿ ತರುತ್ತಿದ್ದರು. ಅಲ್ಲಿಂದ ಶುರುವಾದ ಬಿಸ್ಕತ್ತಿನ ಮೇಲೆ ನಮ್ಮ ಪ್ರೀತಿ ಎಷ್ಟೇ ವಯಸ್ಸಾದರೂ (Age) ಸಹ ಅದು ಕೊನೆಗೊಳ್ಳುವುದೇ ಇಲ್ಲ. ನಾವು ಚಿಕ್ಕವರಾಗಿದ್ದಾಗಿನಿಂದ ಹಿಡಿದು ಎಷ್ಟೇ ಬೆಳೆದು ದೊಡ್ಡವರಾದರೂ ಸಹ ಈ ಬಿಸ್ಕತ್ತುಗಳನ್ನು ನೋಡಿದರೆ ಸಾಕು ಹಾಗೇ ತೆಗೆದುಕೊಂಡು ಬಾಯಲ್ಲಿ ಹಾಕಿಕೊಳ್ಳುತ್ತೇವೆ. ಅವಾಗಿನ್ನೂ ಕೇವಲ ಒಂದೆರಡು ರೀತಿಯ ಬಿಸ್ಕತ್ತುಗಳು ಇರುತ್ತಿದ್ದವು, ಆದರೆ ಈಗ ಅನೇಕ ರೀತಿಯ ಬಿಸ್ಕತ್ತುಗಳು ಮಾರುಕಟ್ಟೆಯಲ್ಲಿವೆ.

ಈ ಕೆಲವು ಬಿಸ್ಕತ್ತುಗಳ ಮೇಲ್ಬಾಗ ತುಂಬಾನೇ ವಿಭಿನ್ನ ರೀತಿಯಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ. ಕೆಲವೊಂದು ಕ್ರೀಂ ಬಿಸ್ಕತ್ತುಗಳು ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಎರಡು ಬಿಸ್ಕತ್ತುಗಳಿದ್ದು, ಮಧ್ಯೆ ಅನೇಕ ರೀತಿಯ ಕ್ರೀಂಗಳು ಇರುವುದನ್ನು ನಾವೆಲ್ಲಾ ಈಗ ನೋಡುತ್ತಿದ್ದೇವೆ.

ಯಾಕೆ ಇರತ್ತೆ ಈ ರಂಧ್ರ

ಆದರೆ ಈ ಬಿಸ್ಕತ್ತುಗಳ ಬಗ್ಗೆ ಬದಲಾವಣೆ ಆಗದೆ ಉಳಿದಿರುವ ಒಂದು ವಿಚಾರ ಎಂದರೆ, ಇನ್ನೂ ಕೆಲವು ರೀತಿಯ ಬಿಸ್ಕತ್ತುಗಳಲ್ಲಿ ಚಿಕ್ಕ ಚಿಕ್ಕ ರಂಧ್ರಗಳು ಇದ್ದು, ತುಂಬಾನೇ ವಿಭಿನ್ನವಾಗಿ ಕಾಣುತ್ತವೆ. ಆದರೆ  ಯಾವತ್ತಾದರೂ ನೀವು ತಿನ್ನುವಂತಹ ಬಿಸ್ಕತ್ತಿನಲ್ಲಿ ಈ ಚಿಕ್ಕ ಚಿಕ್ಕ ರಂಧ್ರಗಳನ್ನು ಏಕೆ ಸಾಲು ಸಾಲಾಗಿ ಮಾಡಲಾಗಿರುತ್ತದೆ ಎಂದು ಯೋಚಿಸಿದ್ದೀರಾ? ಈ ಬಿಸ್ಕತ್ತಿನಲ್ಲಿ ಈ ರೀತಿಯ ಚಿಕ್ಕ ಚಿಕ್ಕ ರಂಧ್ರಗಳನ್ನು ಏಕೆ ಬಿಡಲಾಗುತ್ತದೆ ಎಂದು ನೀವು ಎಂದಾದರೂ ಇದರ ಬಗ್ಗೆ ತಲೆ ಕೆಡೆಸಿಕೊಂಡಿದ್ದೀರಾ? ಹಾಗಾದರೆ ಬನ್ನಿ ಇದೇಕೆ ಹೀಗೆ ಎಂದು ತಿಳಿದುಕೊಳ್ಳೋಣ.

ಕಂಪನಿಯ ವಿನ್ಯಾಸದ ಮೇಲೆ ಅವಲಂಬಿತ

ಈ ಕೆಲವು ಬಿಸ್ಕತ್ತಿನಲ್ಲಿ ಏಕೆ ಚಿಕ್ಕ ಚಿಕ್ಕ ರಂಧ್ರಗಳು ಇರುತ್ತವೆ ಎಂದು ಕಾರಣ ಹುಡುಕಿದಾಗ ನಮಗೆ ಈ ರಂಧ್ರಗಳನ್ನು ಸಾಮಾನ್ಯವಾಗಿ ಸಿಹಿ ಮತ್ತು ಉಪ್ಪಿನ ರುಚಿಯುಳ್ಳ ಬಿಸ್ಕತ್ತಿನಲ್ಲಿ ಮತ್ತು ಬಾರ್ಬನ್‌ನಂತಹ ಕ್ರೀಂ ಬಿಸ್ಕತ್ತಿನಲ್ಲಿ ಕಂಡು ಬರುತ್ತವೆ ಎಂಬುದು ತಿಳಿಯಿತು. ಈ ರಂಧ್ರಗಳು ಬಿಸ್ಕತ್ತು ತಯಾರಕ ಕಂಪನಿಗಳ ವಿನ್ಯಾಸ ಮತ್ತು ತಯಾರಿಕೆಗೆ ಸಂಬಂಧಪಟ್ಟದ್ದು ಎಂದು ಪ್ರಾಥಮಿಕವಾಗಿ ಹೇಳಲಾಗುತ್ತಿದೆ.

ಇದನ್ನು ಓದಿ: ಆಹಾರದಲ್ಲಿ ಈ ಖನಿಜಾಂಶಗಳು ಕಡಿಮೆ ಆದರೆ ಕ್ಯಾನ್ಸರ್​ ಬರಬಹುದು ಎಚ್ಚರ..!

ಇನ್ನೊಂದು ಕಾರಣ ಏನೆಂದರೆ ಇಂತಹ ಬಿಸ್ಕತ್ತುಗಳನ್ನು ತಯಾರಿಸುವಾಗ ಗಾಳಿ ಹೋಗಲಿ ಎಂದು ಈ ರೀತಿಯ ಚಿಕ್ಕ ಚಿಕ್ಕ ರಂಧ್ರಗಳನ್ನು ಬಿಡಲಾಗುತ್ತದೆ, ಇಲ್ಲವಾದರೆ ಬಿಸ್ಕತ್ತು ಇನ್ನಷ್ಟು ಉಬ್ಬುತ್ತದೆ ಮತ್ತು ಅಷ್ಟೊಂದು ತೆಳುವಾಗಿ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.

ಈ ರಂಧ್ರಗಳನ್ನು ಹೇಗೆ ಈ ಬಿಸ್ಕತ್ತಿನ ಮೇಲೆ ಮಾಡಲಾಗುತ್ತದೆ ಗೊತ್ತೇ?

ಬನ್ನಿ ಹಾಗಾದರೆ ಇದನ್ನು ತಿಳಿದು ಕೊಳ್ಳೋಣ.. ತಯಾರಕರು ಮೊದಲಿಗೆ ಬಿಸ್ಕತ್ತು ಮಾಡಲು ಬೇಕಿರುವ ಹಿಟ್ಟನ್ನು, ಸಕ್ಕರೆ ಮತ್ತು ಉಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದನ್ನು ಒಂದು ಟ್ರೇ ಅಂತೆ ಇರುವ ಶೀಟ್ ಮೇಲೆ ಹಾಕಿಡುತ್ತಾರೆ. ನಂತರ ಅದನ್ನು ಯಂತ್ರದಲ್ಲಿ ಇರಿಸಲಾಗುತ್ತದೆ.

ಆ ಯಂತ್ರವೇ ಈ ರೀತಿಯ ರಂಧ್ರಗಳನ್ನು ಮಾಡುತ್ತದೆ. ಬಿಸ್ಕತ್ತಿನಲ್ಲಿ ಈ ರೀತಿಯ ರಂಧ್ರಗಳನ್ನು ಮಾಡದೆಯೇ ಬಿಸ್ಕತ್ತನ್ನು ಚೆನ್ನಾಗಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ರಂಧ್ರಗಳನ್ನು ನಾವು ಬಿಸ್ಕತ್ತಿನ ಮೇಲೆ ಕಾಣುತ್ತೇವೆ. ಅಲ್ಲದೆ ಈ ರಂಧ್ರಗಳನ್ನು ಮಾಡುವುದರಿಂದ ಬಿಸ್ಕತ್ತಿನ ಆಕಾರ ದೊಡ್ಡದಾಗುತ್ತದೆ ಮತ್ತು ಸೂಕ್ತವಾದ ಒಂದು ಆಕಾರ ಬರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: Lord Shiva: ಶಿವನಿಗೆ ಅಪ್ಪಿ-ತಪ್ಪಿ ಕೂಡ ಈ ವಸ್ತು ಅರ್ಪಿಸಬೇಡಿ

ಈ ಯಂತ್ರವು ಸಮನಾದ ಗಾತ್ರದ ರಂಧ್ರಗಳನ್ನು ಸಾಲಾಗಿ ಹಾಕುವುದರಿಂದ ಬಿಸ್ಕತ್ತು ಎಲ್ಲಾ ಕಡೆಯೂ ಚೆನ್ನಾಗಿ ಆಕಾರವನ್ನು ಪಡೆಯುತ್ತದೆ. ಇದಲ್ಲದೆ ಬಿಸ್ಕತ್ತು ತಯಾರಾದ ಮೇಲೆ ತಿನ್ನಲು ತುಂಬಾನೇ ಗರಿಗರಿಯಾಗಿರುತ್ತದೆ. ಇನ್ನೊಂದು ತುಂಬಾ ಮಹತ್ವದ ವಿಷಯ ಏನೆಂದರೆ ಈ ರಂಧ್ರಗಳನ್ನು ಮಾಡದೆ ಹೋದರೆ ಬಿಸ್ಕತ್ತಿನಲ್ಲಿರುವ ಉಷ್ಣಾಂಶ ಹೊರಗೆ ಹೋಗದೆ ಅಲ್ಲಿಯೇ ಉಳಿದುಕೊಳ್ಳುತ್ತದೆ ಮತ್ತು ಹೀಗೆ ಆದಾಗ ತಯಾರಿಕೆ ಸಮಯದಲ್ಲಿ ಬಿಸ್ಕತ್ತಿನ ಮೇಲೆ ಬಿರುಕುಗಳನ್ನು ಸಹ ನೋಡಬಹುದು ಎಂದು ಹೇಳಲಾಗುತ್ತದೆ.
Published by:Seema R
First published: