• Home
  • »
  • News
  • »
  • trend
  • »
  • Viral News: ಸಂಗಾತಿ ಸಾವಿನ ಬಳಿಕ ಒಂಟಿಯಾಗಿರುವ ಶಂಕರ್ ಆನೆ ಬಿಡುಗಡೆಗೆ ಹೆಚ್ಚಿದ ಒತ್ತಡ, ಏನಿದು ಸ್ಟೋರಿ?

Viral News: ಸಂಗಾತಿ ಸಾವಿನ ಬಳಿಕ ಒಂಟಿಯಾಗಿರುವ ಶಂಕರ್ ಆನೆ ಬಿಡುಗಡೆಗೆ ಹೆಚ್ಚಿದ ಒತ್ತಡ, ಏನಿದು ಸ್ಟೋರಿ?

ಶಂಕರ್ ಆನೆ

ಶಂಕರ್ ಆನೆ

Elephant Shankar: ಸೆಪ್ಟೆಂಬರ್ ನಲ್ಲಿ ಯೂತ್ ಫಾರ್ ಅನಿಮಲ್ಸ್ ಸಂಸ್ಥಾಪಕಿ ನಿಕಿತಾ ಧವನ್ ಎಂಬುವವರು ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದರು.. ಈ ವೇಳೆ ದೆಹಲಿ ಮೃಗಾಲಯದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಆನೆ ಶಂಕರ್ ನನ್ನ ಕಂಡು ಅದನ್ನ ಮರಳಿ ತಾಯಿನಾಡಿಗೆ ಕಳುಹಿಸಲು ನಿಕಿತಾ ಹೋರಾಟ ಮಾಡುತ್ತಿದ್ದಾರೆ..

ಮುಂದೆ ಓದಿ ...
  • Share this:

    ಒಂಟಿಯಾಗಿರುವ ಆಫ್ರಿಕಾದ ಆನೆಯನ್ನು(African Elephant) ದೆಹಲಿ ಮೃಗಾಲಯದಿಂದ(Delhi Zoo) ಮುಕ್ತಗೊಳಿಸಿ ಮತ್ತೆ ತನ್ನ ಮರಳಿ ತಾಯ್ನಾಡಿಗೆ ಕಳುಹಿಸುವಂತೆ ಲಾಭೋದ್ದೇಶವಿಲ್ಲದ ಯೂತ್ ಫಾರ್ ಅನಿಮಲ್ಸ್(Youth For Animals) ಸಂಸ್ಥಾಪಕಿ ನಿಕಿತಾ ಧವನ್(Nikitha Dhavan) ಮನವಿ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್(High Court) ನಲ್ಲಿ ನಿಕಿತಾ ಧವನ್ ಸಲ್ಲಿಸಿರುವ ಅರ್ಜಿಯಲ್ಲಿ ಶಂಕರ್ ಆನೆ(Elephant Shankar) ಹಲವಾರು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದೆ. ಹೀಗಾಗಿ ಅದರ ಸ್ವಾತಂತ್ರ್ಯವನ್ನು ಮರಳಿ ಕೊಡಿಸಲು ಮತ್ತೆ ಅದನ್ನು ಈ ಮೃಗಾಲಯದಿಂದ ಅದನ್ನು ಮರಳಿ ಆಫ್ರಿಕಾದ ಆನೆಗಳಿರುವ ವನ್ಯಜೀವಿ ಅಭಯಾರಣ್ಯದಲ್ಲಿ ಪುನರ್ವಸತಿ ಮಾಡಬೇಕೆಂದು ನಿಕಿತಾ ಒತ್ತಾಯಿಸಿದ್ದಾರೆ.


     ಯಾವುದು ಈ ಶಂಕರ್ ಆನೆ...?


    1998ರಲ್ಲಿ ಅಂದರೆ 24 ವರ್ಷಗಳ ಹಿಂದೆ ಜಿಂಬಾಂಬೆ ಸರ್ಕಾರ ಅಂದಿನ ಭಾರತದ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರಿಗೆ ರಾಜತಾಂತ್ರಿಕವಾಗಿ ಎರಡು ಆನೆ ಮರಿಗಳನ್ನು ಉಡುಗರೆಯಾಗಿ ಆಫ್ರಿಕಾ ಅರಣ್ಯದಿಂದ ಕಳುಹಿಸಿಕೊಟ್ಟಿತ್ತು.. ಎಳೆಯ ಆನೆಮರಿಗಳು ಆಫ್ರಿಕಾದಿಂದ ದೆಹಲಿಗೆ ಬಂದ ಬಳಿಕ ಅವುಗಳನ್ನು ಮೃಗಾಲಯಕ್ಕೆ ರವಾನೆ ಮಾಡಿ ಅಲ್ಲಿ, ಒಂದಕ್ಕೆ ಶಂಕರ್ ಎಂದು, ಮತ್ತೊಂದು ಹೆಣ್ಣು ಆನೆಗೆ ಬಾಂಬೆ ಎಂದು ಹೆಸರಿಸಲಾಯಿತು. ಕೆಲವು ವರ್ಷಗಳ ಹಿಂದೆ ಬಾಂಬೆ ಆನೆ ಅನಾರೋಗ್ಯದಿಂದ ಮೃತಪಟ್ಟಿತ್ತು.. ಅಂದಿನಿಂದ ಇಂದಿನವರೆಗೂ ಶಂಕರ್ ಆನೆ ದೆಹಲಿ ಮೃಗಾಲಯದಲ್ಲಿ ಒಂಟಿಯಾಗಿ ವಾಸ ಮಾಡುತ್ತಿದೆ.



    ಇದನ್ನೂ ಓದಿ: ಆನೆಗಳು ರೈಲ್ವೆ ಟ್ರ್ಯಾಕ್ ದಾಟಿದ ಪರಿ ನೋಡಿ ಗೋಡೆಯನ್ನೇ ತೆಗೆದುಬಿಟ್ಟಿದೆ ರೈಲ್ವೆ ಇಲಾಖೆ, ವಿಡಿಯೋ ನೋಡಿ!


    ಆನೆಯನ್ನು ಮರಳಿ ತವರಿಗೆ ಕಳುಹಿಸಲು ಹೋರಾಟ


    ಇನ್ನು ಕಳೆದ ಸೆಪ್ಟೆಂಬರ್ ನಲ್ಲಿ ಯೂತ್ ಫಾರ್ ಅನಿಮಲ್ಸ್ ಸಂಸ್ಥಾಪಕಿ ನಿಕಿತಾ ಧವನ್ ಎಂಬುವವರು ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದರು.. ಈ ವೇಳೆ ದೆಹಲಿ ಮೃಗಾಲಯದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಆನೆ ಶಂಕರ್ ನನ್ನ ಕಂಡು ಅದನ್ನ ಮರಳಿ ತಾಯಿನಾಡಿಗೆ ಕಳುಹಿಸಲು ನಿಕಿತಾ ಹೋರಾಟ ಮಾಡುತ್ತಿದ್ದಾರೆ.. ಮೃಗಾಲಯದ ಅಧಿಕಾರಿಗಳು ಆನೆಯನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ನಿಖಿತಾ ಅರ್ಜಿ ಸಲ್ಲಿಸಿದ್ದಾರೆ..



    ಹಠಮಾರಿಯಾಗಿರುವ ಶಂಕರ್


    ತನ್ನ ಜೊತೆಗಾತಿ ಬಾಂಬೆ ನಿಧನದ ಬಳಿಕ ಆಫ್ರಿಕಾದ ಆನೆ ಶಂಕರ್ ನನ್ನ ಏಷ್ಯಾ ಆನೆಗಳ ಜೊತೆ ಬೆರೆಯುವಂತೆ ಮಾಡಲು ಪ್ರಯತ್ನ ಮಾಡಲಾಯಿತು ಎಂದು ದೆಹಲಿ ಮೃಗಾಲಯದ ನಿರ್ದೇಶಕಿ ಸೋನಾಲಿ ಘೋಷ್ ಮಾಹಿತಿ ನೀಡಿದ್ದಾರೆ.. ಆದರೆ ಹಠಮಾರಿಯಾಗಿರುವ ಶಂಕರ್ ಏಷ್ಯಾದ ಆನೆಗಳ ಜೊತೆ ಬೆರೆಯುವ ಪ್ರಯತ್ನ ಮಾಡಲಿಲ್ಲ.. ಹೀಗಾಗಿ ಶಂಕರ್ ನನ್ನ ಮರಳಿ ಆಫ್ರಿಕಾಗೆ ಕಳುಹಿಸುವ ಬಗ್ಗೆ, ಅಥವಾ ಶಂಕರ್ ಗೆ ಓರ್ವ ಜೊತೆಗಾತಿಯನ್ನು ಹುಡುಕುವ ಕುರಿತು ಪತ್ರ ಬರೆಯಲಾಗಿದೆ.


    ಇದನ್ನೂ ಓದಿ: ಮಂಗಳನ ಅಂಗಳಕ್ಕೆ ನಾಲ್ಕು ಜನರ 45 ದಿನಗಳ ಪ್ರಯಾಣ ಆರಂಭ..!


    ಸ್ವಂತ ವೆಚ್ಚದಲ್ಲಿ ಆನೆ ಶಂಕರ್ ನನ್ನ ಆಫ್ರಿಕಾಕ್ಕೆ ಕಳುಹಿಸಲು ಮುಂದಾದ ಯುಕೆ ಮೂಲದ ಸಂಸ್ಥೆ


    ಇನ್ನು ದೆಹಲಿ ಮೃಗಾಲಯದಲ್ಲಿರುವ ಒಂಟಿಯಾಗಿ ಜೀವನ ನಡೆಸುತ್ತಿರುವ ಆನೆ ಶಂಕರ್ ನನ್ನ ಬಂಧಮುಕ್ತ ಮಾಡಿ ಸ್ವಂತ ವೆಚ್ಚದಲ್ಲಿ ಮರಳಿ ಆಫ್ರಿಕಾಗೆ ಕಳುಹಿಸಲು ಯುಕೆ ಮೂಲದ ಆಸ್ಪಿನಾಲ್ ಫೌಂಡೇಶನ್ ಎಂಬುದು ಮುಂದಾಗಿದೆ.. ಇದಿಷ್ಟೇ ಅಲ್ಲದೆ ಆನೆ ಶಂಕರ್ ಪರವಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿರುವ ನಿಖಿತಾ ಕೂಡ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಅಭಿಯಾನ ಆರಂಭ ಮಾಡಿದ್ದಾರೆ.. ಅಲ್ಲದೆ ಈವರೆಗೂ 1,25,000 ಕ್ಕೂ ಹೆಚ್ಚು ಸಹಿಗಳನ್ನು ನಿಖಿತಾ ಸಂಗ್ರಹಿಸಿದ್ದಾರೆ.. ಒಂದು ವೇಳೆ ಆನೆ ಶಂಕರ್ ನನ್ನ ಮರಳಿ ತನ್ನ ತವರು ದೇಶಕ್ಕೆ ಕಳುಹಿಸುವ ಪರವಾಗಿ ಹೈಕೋರ್ಟ್ ತೀರ್ಪು ನೀಡಿದರೆ, ಭಾರತದಲ್ಲಿ ಒಂಟಿಯಾಗಿ ಇರುವ ಎಲ್ಲಾ ಆನೆಗಳು ಬಂಧ ಮುಕ್ತವಾಗಿ ಕಾಡು ಸೇರಲಿವೆ. ಶಂಕರ್ ಹೊರತುಪಡಿಸಿ ಮೈಸೂರು ಮೃಗಾಲಯದಲ್ಲಿರುವ ಮತ್ತೊಂದು ಆಫ್ರಿಕನ್ ಆನೆ ತನ್ನ ತವರು ದೇಶಕ್ಕೆ ಹೋಗಲಿದೆ.

    Published by:ranjumbkgowda1 ranjumbkgowda1
    First published: