• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Lions: ಈ ಸ್ಥಳದಲ್ಲಿ ಎರಡು ವರ್ಷಗಳಲ್ಲಿ 240 ಸಿಂಹಗಳು ಸಾವನ್ನಪ್ಪಿದ್ಯಂತೆ! ಇದಕ್ಕೆ ಕಾರಣ ಏನು ಗೊತ್ತಾ?

Lions: ಈ ಸ್ಥಳದಲ್ಲಿ ಎರಡು ವರ್ಷಗಳಲ್ಲಿ 240 ಸಿಂಹಗಳು ಸಾವನ್ನಪ್ಪಿದ್ಯಂತೆ! ಇದಕ್ಕೆ ಕಾರಣ ಏನು ಗೊತ್ತಾ?

ಸಿಂಹಗಳು

ಸಿಂಹಗಳು

ಗುಜುರಾತ್ ಸರ್ಕಾರವೇ ಕಳೆದ ಎರಡು ವರ್ಷಗಳಲ್ಲಿ ಗಿರ್ ಅರಣ್ಯ ಪ್ರದೇಶದಲ್ಲಿ 240 ಸಿಂಹಗಳು (Lions) ಸಾವನ್ನಪ್ಪಿವೆ ಎಂದು ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.

  • Share this:

ವನ್ಯಜೀವಿಗಳ ಸಂರಕ್ಷಣೆ (Conservation of Wildlife) ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಎಂದರೆ ಆಯಾ ರಾಜ್ಯದಲ್ಲಿರುವ ಕಾಡುಗಳಲ್ಲಿ ವಾಸ ಮಾಡುವಂತಹ ಪ್ರಾಣಿಗಳ ಜೀವನವನ್ನು ಮತ್ತು ಅವುಗಳಿಗೆ ಅಗತ್ಯವಾದ ರಕ್ಷಣೆಯನ್ನು ಒದಗಿಸುವುದು ವನ್ಯಜೀವಿ ಸಂರಕ್ಷಣೆ ವಿಭಾಗದ ಅಧಿಕಾರಿಗಳ ಹೊಣೆಯಾಗಿರುತ್ತದೆ ಅಂತ ಹೇಳಬಹುದು. ಆದರೆ ಹೀಗೆ ವನ್ಯಜೀವಿ ಸಂರಕ್ಷಣೆಯಲ್ಲಿ ಗುಜುರಾತ್ (Gujarat) ಸರ್ಕಾರ ಎಡವಿದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ ನೋಡಿ. ಇದನ್ನು ನಾವು ಹೇಳುತ್ತಿಲ್ಲ, ಖುದ್ದು ಗುಜುರಾತ್ ಸರ್ಕಾರವೇ ಕಳೆದ ಎರಡು ವರ್ಷಗಳಲ್ಲಿ ಗಿರ್ ಅರಣ್ಯ ಪ್ರದೇಶದಲ್ಲಿ 240 ಸಿಂಹಗಳು (Lions) ಸಾವನ್ನಪ್ಪಿವೆ ಎಂದು ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ. ಈ ಪೈಕಿ 26 ಸಾವುಗಳು ಅಸ್ವಾಭಾವಿಕ ಕಾರಣಗಳಿಂದ ಮತ್ತು ಉಳಿದವು ನೈಸರ್ಗಿಕ ಕಾರಣಗಳಿಂದ ಸಂಭವಿಸಿವೆ ಎಂದು ಸಮಜಾಯಿಷಿ ನೀಡಿದೆ.


ಎರಡೇ ವರ್ಷಗಳಲ್ಲಿ 240 ಸಿಂಹಗಳು ಮೃತಪಟ್ಟಿವೆಯಂತೆ..


ಎರಡು ವರ್ಷಗಳಲ್ಲಿ ಸಾವನ್ನಪ್ಪಿರುವ 240 ಸಿಂಹಗಳಲ್ಲಿ, 2021ರಲ್ಲಿ 124 ಮತ್ತು 2022ರಲ್ಲಿ 116 ಸಿಂಹಗಳು ಮೃತಪಟ್ಟಿವೆ. ಅವುಗಳಲ್ಲಿ 53 ಗಂಡು, 59 ಹೆಣ್ಣು ಮತ್ತು 128 ಸಿಂಹದ ಮರಿಗಳು ಸೇರಿವೆ.


ಆರಂಭದಲ್ಲಿ, 240 ಸಾವುಗಳು 674 ರ ಒಟ್ಟು ಸಿಂಹ ಜನಸಂಖ್ಯೆಯ ಶೇಕಡಾ 36 ರಷ್ಟು ಆಗಿದ್ದು ದೊಡ್ಡ ಸಂಖ್ಯೆಯಂತೆ ತೋರುತ್ತದೆ, ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಹೆಚ್ಚುತ್ತಿರುವ ಸಿಂಹದ ಜನಸಂಖ್ಯೆಯನ್ನು ಗಮನಿಸಿದರೆ, ಸಾವಿನ ಸಂಖ್ಯೆ ಆತಂಕಕಾರಿಯಲ್ಲ ಎಂದು ತಿಳಿದುಬಂದಿದೆ.


ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ಬಹುತೇಕ ಇಡೀ ಸೌರಾಷ್ಟ್ರ ಪರ್ಯಾಯ ದ್ವೀಪದಲ್ಲಿ ಹರಡಿದೆ. ಇದು ಈ ಜಾತಿಯ ಸಿಂಹಗಳ ಕೊನೆಯ ವಾಸಸ್ಥಾನವಾಗಿದೆ.


ಗಿರ್ ವನ್ಯಜೀವಿ ಅಭಯಾರಣ್ಯವು 1,412 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿದೆ. ಸೌರಾಷ್ಟ್ರದ 11 ಜಿಲ್ಲೆಗಳಲ್ಲಿ ಇತರ ನಾಲ್ಕು ಅಭಯಾರಣ್ಯ ಪ್ರದೇಶಗಳು ಅಭಿವೃದ್ಧಿಗೊಂಡಿವೆ.


ಇದನ್ನೂ ಓದಿ: ಬರೋಬ್ಬರಿ 325 ಕೆಜಿ ತೂಕವಿದ್ದ ಮಹಿಳೆ ಈಗ ಹೇಗೆ ಆಗಿದ್ದಾಳಂತ ನೋಡಿದ್ರೆ ಶಾಕ್​ ಆಗ್ತೀರ!


ಸಿಂಹಗಳು ಕಂಡುಬರುವ ಹೆಚ್ಚಿನ ಪ್ರದೇಶಗಳನ್ನು ಮೀಸಲು ಅರಣ್ಯಗಳೆಂದು ಗೊತ್ತುಪಡಿಸಲಾಗಿದೆ ಮತ್ತು ಸಂರಕ್ಷಣೆಗಾಗಿ ಸರ್ಕಾರದ ಗಮನವನ್ನು ಸೆಳೆಯುವ 'ಗ್ರೇಟರ್ ಗಿರ್ ಪ್ರದೇಶ' ದಲ್ಲಿ ಸೇರಿಸಲಾಗಿದೆ.


ಈ ಸಿಂಹಗಳ ಸಾವಿಗೆ ಕಾರಣ ಏನಂತಾರೆ ವನ್ಯಜೀವಿ ತಜ್ಞರು?


ಸಿಂಹಗಳ ಬಗ್ಗೆ ಕೆಲಸ ಮಾಡುವ ವನ್ಯಜೀವಿ ತಜ್ಞರು ಮತ್ತು ಪರಿಸರವಾದಿಗಳು ಒಂದು ವರ್ಷದಲ್ಲಿ ನೈಸರ್ಗಿಕ ಕಾರಣಗಳಿಂದಾಗಿ ಸಿಂಹಗಳ ಒಟ್ಟು ಜನಸಂಖ್ಯೆಯ 8 ರಿಂದ 10 ಪ್ರತಿಶತದಷ್ಟು ಸಾವು ಸಮಂಜಸವೆಂದು ಪರಿಗಣಿಸಲಾಗಿದೆ ಎಂದು ಹೇಳುತ್ತಾರೆ.


ವೃದ್ಧಾಪ್ಯ ಸಹ ಸಾವುಗಳಿಗೆ ಕಾರಣವಾಗುತ್ತವೆ. ನರಭಕ್ಷಕತೆ, ಹಸಿವಿನ ಸಾವುಗಳು ಮತ್ತು ಒಳಜಗಳದ ಬಲಿಪಶುಗಳಿಂದಾಗಿ ಮರಿಗಳ ಸಾವಿನ ಪ್ರಮಾಣವು ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಾಗಿದೆ ಎಂದು ಹೇಳುತ್ತಾರೆ.


"ನಾವು 26 ಅಸ್ವಾಭಾವಿಕ ಸಾವುಗಳ ಬಗ್ಗೆ ಗಮನ ಹರಿಸಬೇಕು, ಇಲ್ಲಿ ಸುತ್ತಲೂ ರೈಲ್ವೆ ಹಳಿಗಳು ಇರುವುದರಿಂದ ಅಪಘಾತಗಳು, ಮತ್ತು ಕೆಲವು ಸಂದರ್ಭಗಳಲ್ಲಿ ಮೀಸಲು ಅರಣ್ಯ ಪ್ರದೇಶಗಳ ರಸ್ತೆಯಲ್ಲಿ ಆಗುವ ಅಪಘಾತಗಳು, ಬಾವಿಗಳಲ್ಲಿ ಬೀಳುವುದು, ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಹಾಕಿದ ಅಕ್ರಮ ಲೈವ್ ವೈರ್ ಗಳಿಂದ ಶಾಕ್ ಗೆ ಒಳಗಾಗುವುದೆಲ್ಲವು ಈ ಅಸ್ವಾಭಾವಿಕ ಸಾವುಗಳ ಕಾರಣಗಳ ಅಡಿಯಲ್ಲಿಯೇ ಬರುತ್ತವೆ" ಎಂದು ಸಿಂಹ ಸಂಬಂಧಿತ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಹಿರಿಯ ಸಂರಕ್ಷಣಾಕಾರರೊಬ್ಬರು ಹೇಳುತ್ತಾರೆ.


ಇದನ್ನೂ ಓದಿ: ರೈಲುಗಳಲ್ಲಿ ಬಣ್ಣ ಬಣ್ಣದ ಬೋಗಿಗಳು ಇರೋದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್​ ಫ್ಯಾಕ್ಟ್​!


ಗಿರ್ ವನ್ಯಜೀವಿ ಅಭಯಾರಣ್ಯದ ಹೊರವಲಯದಲ್ಲಿ 2022 ರ ಕೊನೆಯ ನಾಲ್ಕು ತಿಂಗಳಲ್ಲಿ 7 ರಿಂದ 14 ವರ್ಷದೊಳಗಿನ ನಾಲ್ಕು ಮಕ್ಕಳ ಮೇಲೆ ಸಿಂಹಗಳು ದಾಳಿ ಮಾಡಿ ಕೊಂದಿವೆ.


ಸಂಘರ್ಷದಿಂದ ಆಘಾತಕ್ಕೊಳಗಾದ 23 ಸಿಂಹಗಳನ್ನು ಅರಣ್ಯ ಇಲಾಖೆ ಕಾಡಿನಿಂದ ಸೆರೆಹಿಡಿದಿದೆ, ಅದರಲ್ಲಿ ಐದು ಸಿಂಹಗಳನ್ನು ಜೀವನಕ್ಕಾಗಿ ಸಕ್ಕರ್ಬಾಗ್ ಮೃಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಉಳಿದವುಗಳನ್ನು ಕ್ರಮೇಣ ಬಿಡುಗಡೆ ಮಾಡಲಾಗಿದೆ.


ಈ ಸಂಘರ್ಷಗಳು ವಿರಳವಾಗಿದ್ದರೂ, ಭೂಪ್ರದೇಶವು ಕುಗ್ಗುತ್ತಿದ್ದಂತೆ, ಮಾನವ ಸಂಪರ್ಕವು ಹೆಚ್ಚಾಗುತ್ತದೆ ಎಂದು ಸಂರಕ್ಷಣಾವಾದಿಗಳು ಭಯಪಡುತ್ತಾರೆ.


ಸಿಂಹಗಳ ಸಾವುಗಳನ್ನು ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳಿವು..


ಅಪಘಾತಗಳು ಸಂಭವಿಸಿದಾಗ ಸಿಂಹಗಳಿಗೆ ತಕ್ಷಣವೇ ಚಿಕಿತ್ಸೆಯನ್ನು ಒದಗಿಸಲು ಲಯನ್ ಆಂಬ್ಯುಲೆನ್ಸ್ ಅನ್ನು ನಿಯೋಜಿಸಲಾಗಿದೆ ಮತ್ತು ಪಶುವೈದ್ಯ ಅಧಿಕಾರಿಗಳು ಮತ್ತು ರಕ್ಷಣೆಗಾಗಿ ಕ್ಷಿಪ್ರ ಕ್ರಿಯಾ ತಂಡಗಳನ್ನು ನಿಯೋಜಿಸಲಾಗಿದೆ.


2018-2019 ರಲ್ಲಿ 35ಕ್ಕೂ ಹೆಚ್ಚು ಸಿಂಹಗಳನ್ನು ಬಲಿ ತೆಗೆದುಕೊಂಡ ಕೆನೈನ್ ಡಿಸ್ಟೆಂಪರ್ ವೈರಸ್ ಗೆ ಸಕ್ಕರ್ಬಾಗ್, ದೇವಲಿಯಾ ಸಫಾರಿ ಪಾರ್ಕ್, ಅಂಬರ್ಡಿ ಮತ್ತು ಜಿನ್ಪೂಲ್ ನಲ್ಲಿ ಲಸಿಕೆ ಸಹ ನೀಡಲಾಗಿದೆ.
ಇದಲ್ಲದೆ, ಗಿರ್ ಮತ್ತು ಸುತ್ತಮುತ್ತಲಿನ ವನ್ಯ ಪ್ರದೇಶಗಳಲ್ಲಿ ತೆರೆದ ಬಾವಿಗಳನ್ನು ಪ್ಯಾರಾಪೆಟ್ ಗೋಡೆಗಳಿಂದ ನಿರ್ಮಿಸಲಾಗಿದೆ. ನಾಲ್ಕು ಚೆಕ್ ಪಾಯಿಂಟ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಸ್ಥಾಪಿಸಲಾಗಿದೆ.


ಇದಲ್ಲದೆ, ಪೊಲೀಸರು ಮತ್ತು ಅರಣ್ಯ ಇಲಾಖೆ ಕಾಲಕಾಲಕ್ಕೆ ಜಂಟಿ ಗಸ್ತು ನಡೆಸುತ್ತವೆ. ಇಲ್ಲಿರುವ ಎಲ್ಲಾ ಸಿಂಹಗಳು ರೇಡಿಯೋ-ಕಾಲರ್ಡ್ ಆಗಿವೆ. ಇದಷ್ಟೇ ಅಲ್ಲದೆ 2023-24ರ ರಾಜ್ಯ ಬಜೆಟ್ ನಲ್ಲಿ ಗಿರ್ ಅಭಯಾರಣ್ಯದ ಅಭಿವೃದ್ಧಿಗೆ 27 ಕೋಟಿ ರೂಪಾಯಿ ಗಿರ್ ಪ್ರದೇಶದ ಸಮಗ್ರ ಅಭಿವೃದ್ಧಿ ಯೋಜನೆಯ ಭಾಗವಾಗಿ ಎರಡು ಹೊಸ ಸಿಂಹ ಸಫಾರಿ ಉದ್ಯಾನವನಗಳನ್ನು ಸಹ ಘೋಷಿಸಲಾಗಿದೆ.

First published: