ಪ್ರಸ್ತುತ ನಮಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಅಂತಾ ಯಾರಾದ್ರೂ ಕೇಳಿದ್ರೆ ನಮ್ಮ ಬಾಯಲ್ಲಿ ಬರೋದೆ, ಟ್ವಿಟರ್, ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಮಾಲೀಕರಾದ ಎಲಾನ್ ಮಸ್ಕ್ (Elon Musk) ಅಥವಾ ಅಮೆಜಾನ್ನ ಸಿಇಒ ಜೆಫ್ ಬೆಜೋಸ್, ಮಾರ್ಕ್ ಜುಕರ್ಬರ್ಗ್ (Mark Zuckerberg), ಬಿಲ್ ಗೇಟ್ಸ್ (Bill Gates) ಹೀಗೆ ಇವರ ಹೆಸರನ್ನು ಹೇಳ್ತೀವಿ. ಆದರೆ ಎಂದಾದರೂ ಇತಿಹಾಸದ ಬಗ್ಗೆ ಯೋಚಿಸಿದ್ದೀರಾ? ಆ ಕಾಲದಲ್ಲೂ ಕೂಡ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿ ಇತ್ತು ಅಂತಾ ನಿಮಗೆ ಗೊತ್ತಾ? ಅಂತಹವರ ವಿವರ ಇಲ್ಲಿದೆ ನೋಡಿ.
ಪ್ರಪಂಚದ ಅತ್ಯಂತ ಶ್ರೀಮಂತ ಚಕ್ರವರ್ತಿ:
ಹೌದು, ಇತಿಹಾಸದಲ್ಲೂ ಅಗರ್ಭ ಶ್ರೀಮಂತ ವ್ಯಕ್ತಿಗಳು ಇದ್ದರು. ಹೇಳಿ ಕೇಳಿ ರಾಜರ ಕಾಲವದು, ಹತ್ತಾರು ಊರು-ಕೇರಿ, ಸಾಮ್ರಾಜ್ಯದ ಚುಕ್ಕಾಣಿ ಹಿಡಿದು ತಲತಲಾಂತರದಿಂದ ಬಂದ ಸಂಪತ್ತು, ಆಸ್ತಿ, ಗೌರವ ಎಲ್ಲಾ ಆಗಿನವರ ಬಳಿ ಇತ್ತು. 1280 ಮತ್ತು 1337 BC ನಡುವಿನ ಮಧ್ಯಕಾಲೀನ ಕಾಲದಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಚಕ್ರವರ್ತಿಯೊಬ್ಬರು ಹೆಸರು ಮಾಡಿದ್ದರು.
ಸಾರ್ವಕಾಲಿಕ ಶ್ರೀಮಂತ ರಾಜ ಮಾನ್ಸ ಮೂಸಾ:
ಸಾರ್ವಕಾಲಿಕ ಶ್ರೀಮಂತ ಎಂಬ ಕಿರೀಟ ಹೊತ್ತ ವ್ಯಕ್ತಿ ಮಾನ್ಸ ಮೂಸಾ. ಆತ ಪಶ್ಚಿಮ ಆಫ್ರಿಕಾದ ಒಬ್ಬ ರಾಜ. ಈತನ ಸಾಮ್ರಾಜ್ಯವು ನೈಜೀರಿಯಾದಿಂದ ಸೆನೆಗಲ್ ಕರಾವಳಿಯವರೆಗೆ ಹರಡಿದ ವಿಶಾಲವಾದ ಪ್ರದೇಶವನ್ನು ಹೊಂದಿತ್ತು.
ಮಾನ್ಸ ಮೂಸಾನ ಶ್ರೀಮಂತಿಕೆಯನ್ನು ಯಾರ ಜತೆಗೂ ಹೋಲಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಇತಿಹಾಸಕಾರರು. ಸೆಲೆಬ್ರಿಟಿ ನೆಟ್ ವರ್ತ್ ನಿಯತಕಾಲಿಕದ ಪ್ರಕಾರ, ಪ್ರಸ್ತುತ ಹಣದುಬ್ಬರಕ್ಕೆ ಸರಿಹೊಂದಿಸಿದರೆ, ಮಾನ್ಸಾ ಮೂಸಾ ಅವರ ಸಂಪತ್ತು ಮಾನವಕುಲದ ಇತಿಹಾಸದಲ್ಲಿ ಅತಿ ದೊಡ್ಡ ಸಂಪತ್ತಾಗಿರುತ್ತದೆ. ಒಟ್ಟಾರೆ ಈ ರಾಜ ಅಂದಾಜು ಸುಮಾರು 400 ಶತಕೋಟಿ ಡಾಲರ್ (387.109 ಶತಕೋಟಿ ಯುರೋಗಳು) ಸಂಪತ್ತು ಹೊಂದಿದ್ದರಂತೆ.
ಚಿನ್ನದ ನಿಕ್ಷೇಪವೇ ಇತ್ತು:
ಮಾನ್ಸ ಮೂಸಾ ಹುಟ್ಟಿದ್ದು 1280ರಲ್ಲಿ, ಒಂದು ರಾಜ ಕುಟುಂಬದಲ್ಲಿ. ಆತನ ಸಹೋದರ ಮಾನ್ಸ ಅಬು-ಬಕರ್ 1312ರ ತನಕ ಆಳ್ವಿಕೆ ಮಾಡಿ, ಸಾಮ್ರಾಜ್ಯ ವಿಸ್ತರಣೆಗಾಗಿ ತೆರಳಿದವನು ವಾಪಸಾಗಲೇ ಇಲ್ಲ ಎಂದು ಇತಿಹಾಸ ವಿವರಿಸಿದೆ. ಸಹೋದರ ಹೋದ ನಂತರ ಸಾಮ್ರಾಜ್ಯ ಆಳ್ವಿಕೆ ನಡೆಸುತ್ತಿದ್ದ ಮೂಸಾಗೆ ಚಿನ್ನ, ಉಪ್ಪಿನಂಥ ಖನಿಜಗಳು ದೊಡ್ಡ ಪ್ರಮಾಣದಲ್ಲಿ ಸಿಕ್ಕವು. ಬ್ರಿಟಿಷ್ ಮ್ಯೂಸಿಯಂನ ಮಾಹಿತಿ ತಿಳಿಸುವಂತೆ, ಆಗಿನ ವಿಶ್ವದ ಒಟ್ಟು ಚಿನ್ನದ ನಿಕ್ಷೇಪದಲ್ಲಿ ಅರ್ಧದಷ್ಟು ಆ ಮಾಲಿ ಸಾಮ್ರಾಜ್ಯದ ರಾಜನ ಅಧೀನಕ್ಕೆ ಒಳಪಟ್ಟಿತ್ತು.
60,000 ಜನರೊಂದಿಗೆ ಮೆಕ್ಕಾ ಪ್ರವಾಸ
ಮಾನ್ಸ ಮೂಸಾ ಅವರ ಇತಿಹಾಸ ಮತ್ತು ನಂತರದ ಖ್ಯಾತಿಯು 1324 ರಲ್ಲಿ ಮೆಕ್ಕಾಗೆ ಅವರ ತೀರ್ಥಯಾತ್ರೆಗೆ ಕಾರಣವಾಯಿತು. ಇಸ್ಲಾಂ ಧರ್ಮ ಅನುಸರಿಸುತ್ತಿದ್ದ ಮಾನ್ಸ ಮೂಸಾ ಮೆಕ್ಕಾಗೆ ತೆರಳಲು ನಿರ್ಧರಿಸಿದ. 12,000 ಗುಲಾಮರನ್ನು ಒಳಗೊಂಡಂತೆ 60,000 ಜನರೊಂದಿಗೆ ಪವಿತ್ರ ಸ್ಥಳಕ್ಕೆ 6,500 ಕಿಲೋಮೀಟರ್ ಪ್ರಯಾಣಿಸಿದನು. ಅವನೊಂದಿಗೆ ಸುಮಾರು ನೂರು ಒಂಟೆಗಳು ಸಹ ಇದ್ದವು, ಪ್ರತಿಯೊಂದೂ ಒಂಟೆಯ ಮೇಲೂ ಟನ್ ಗಟ್ಟಲೆ ಶುದ್ಧ ಚಿನ್ನವನ್ನು ಹೊರಿಸಲಾಗಿತ್ತಂತೆ.
ಇದನ್ನೂ ಓದಿ: Viral News: ವಿಮಾನದಲ್ಲಿ ನಿಮ್ಮ ಲಗೇಜ್ಗಳನ್ನು ಹೇಗೆ ಲೋಡ್ ಮಾಡ್ತಾರೆ? ಈ ವೈರಲ್ ವಿಡಿಯೋ ನೋಡಿ
ಮಿಶಿಗನ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರು ಮನಿ ಮ್ಯಾಗಜೀನ್ಗೆ ಮಾನ್ಸ ಮೂಸಾ "ಯಾರೂ ನೋಡಿರದ ಅತ್ಯಂತ ಶ್ರೀಮಂತ ವ್ಯಕ್ತಿ" ಎಂದು ತಿಳಿಸಿದ್ದಾರೆ.
ಮಸ್ಕ್, ಬೆಜೋಸ್, ಗೇಟ್ಸ್ ಮತ್ತು ಜುಕರ್ಬರ್ಗ್ ಅವರ ಮೌಲ್ಯ ಏನು?
ಮಾನ್ಸ ಮೂಸಾ ಅವರ ಸಂಪತ್ತು (400 ಶತಕೋಟಿ ಡಾಲರ್) ಆಗಿದ್ದು ಅದು ಇಂದಿರುವ ಎಲೋನ್ ಮಸ್ಕ್ (219 ಬಿಲಿಯನ್ ಡಾಲರ್), ಜೆಫ್ ಬೆಜೋಸ್ (171 ಬಿಲಿಯನ್ ಡಾಲರ್) ಮತ್ತು ಬಿಲ್ ಗೇಟ್ಸ್ (118 ಬಿಲಿಯನ್ ಡಾಲರ್) ಸಂಪತ್ತನ್ನೂ ಮೀರಿದೆ. ಪ್ರಸ್ತುತ ಶ್ರೀಮಂತ ಪಟ್ಟಿಯಲ್ಲಿರುವ ಇವರ ಜೊತೆ ಮಾನ್ಸ ಮೂಸಾ ರಾಜನನ್ನು ಹೋಲಿಕೆ ಮಾಡಿದರೆ, ಸಾರ್ವಕಾಲಿಕ ಶ್ರೀಮಂತ ಎಂದು ಕರೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ