ಅನುಷ್ಕಾ ಶರ್ಮಾರಿಂದ ಬೈಗುಳ ತಿಂದ ವ್ಯಕ್ತಿ ಯಾರು ಗೊತ್ತಾ?


Updated:June 18, 2018, 10:57 PM IST
ಅನುಷ್ಕಾ ಶರ್ಮಾರಿಂದ ಬೈಗುಳ ತಿಂದ ವ್ಯಕ್ತಿ ಯಾರು ಗೊತ್ತಾ?
PC: arhhansingh/ Instagram

Updated: June 18, 2018, 10:57 PM IST
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಶೇರ್​ ಮಾಡಿರುವ ವಿಡಿಯೋ ಕಳೆದ ಎರಡು ದಿನಗಳಿಂದ ಟ್ರೆಂಡ್​ ಎಬ್ಬಿಸಿದೆ. ಸದ್ಯ ಈ ಘಟನೆಯ ಅಪ್​ಡೇಟ್​ ಎಂದು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಳಿಂದ ಬೈಗುಳ ಕೇಳಿಸಿಕೊಂಡಿರುವ ವ್ಯಕ್ತಿ ಓರ್ವ ನಟನಾಗಿದ್ದು, ಅದರಲ್ಲೂ ಪ್ರಮುಖವಾಗಿ ಈ ವ್ಯಕ್ತಿ​ ಶಾರುಖ್​ ಖಾನ್​ನ ಚಿತ್ರದಲ್ಲೂ ನಟಿಸಿದ್ದರಂತೆ.

ಹೌದು! ರಸ್ತೆಯಲ್ಲಿ ಕಸ ಎಸೆದ ನಟ ಅರ್ಹಾನ್​ ಸಿಂಗ್​ಗೆ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಬೈದ ಬೈಗುಳಗಳ ವಿಡಿಯೋ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಸಿಂಗ್ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲು ಯತ್ನಿಸಿದ್ದ ನೆಟ್ಟಿಗರಿಗೆ ಕೆಲ ಆಶ್ಚರ್ಯಕರ ವಿಚಾರಗಳು ದೊರೆತಿವೆ.
#throwback to my #childhood 😜 what a lovely experience making this #film was... and working with and learning first hand from the amazing #shahrukhkhan #srk #fondmemories #growingup #movies #bollywood


A post shared by Arhhan Singh (@arhhansingh) on


Loading...
ಅದೇನೆಂದರೆ ಅರ್ಹಾನ್​ ಸಿಂಗ್ 90ರ ದಶಕದಲ್ಲಿ ಫೇಮಸ್​ ಬಾಲನಟರಲ್ಲಿ ಒಬ್ಬರಾಗಿದ್ದ. ಪ್ರಮುಖವಾಗಿ ಈತನ್ನು 90ರ ದಶಕದಲ್ಲಿ ಎಲ್ಲರೂ ಸನ್ನಿ ಸಿಂಗ್​ ಎಂದೇ ಗುರುತಿಸಿದ್ದರು. ಶಾರುಖ್​ ಖಾನ್​ನ ಇಂಗ್ಲಿಷ್​ ಬಾಬಿ ದೇಸಿ ಮೆಮ್​ ಚಿತ್ರದಲ್ಲಿ ನಟಿಸಿದ್ದರು, ಅಲ್ಲದೇ ಮಾಧುರಿ ದೀಕ್ಷಿತ್​ ಅಭಿನಯದ ರಾಜಾ ಚಿತ್ರದಲ್ಲೂ ನಟಿಸಿದ್ದರು. ದೇಖ್​ ಭಾಯ್​ ದೇಖ್​, ಸೇರಿದಂತೆ ಹಲವಾರು ಸಿನಿಮಾ, ಧಾರಾವಹಿ, ಜಾಹೀರಾತುಗಳಲ್ಲಿ ಇವರು ಕಾಣಿಸಿಕೊಂಡಿದ್ದರು.ಇನ್ನು ಶಾಹಿದ್​ ಕಪೂರ್​ ಅಭಿನಯದ ಪಾಠಶಾಲಾದಲ್ಲಿ ಸಹ ನಟನಾಗಿ ಅಭಿನಯಿಸಿದ್ದರು. ಈ ಎಲ್ಲಾ ಮಾಹಿತಿಯನ್ನು ನೆಟ್ಟಿಗರು ಕೆದಕಿದ್ದಾರೆ.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...