• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಜನರನ್ನು ಕಂಡರೆ ಕೂಗುತ್ತಾರೆ, ಓಡಿ ಹೋಗುತ್ತಾರೆ ಸಹೋದರರು, ಈ ಸಮಸ್ಯೆಗೆ ಕಾರಣ ಏನು?

Viral News: ಜನರನ್ನು ಕಂಡರೆ ಕೂಗುತ್ತಾರೆ, ಓಡಿ ಹೋಗುತ್ತಾರೆ ಸಹೋದರರು, ಈ ಸಮಸ್ಯೆಗೆ ಕಾರಣ ಏನು?

ವೈರಲ್​ ಆದ ಸಹೋದರರು

ವೈರಲ್​ ಆದ ಸಹೋದರರು

ಯುಎಸ್‌ನಲ್ಲಿ ಕಂಡುಬಂದ ಈ ಕುಟುಂಬ ಒಂದು ರೀತಿಯ ಅಂತರ್ಗತ ಕುಟುಂಬ ಎನ್ನಬಹುದು. ಏಕೆಂದರೆ ಇವರು ಮನುಷ್ಯರನ್ನು ಕಂಡರೆ ಜೋರಾಗಿ ಕೂಗುತ್ತಾರೆ, ಗೊಣಗಾಟದ ಮೂಲಕ ಸಂವಹನ ನಡೆಸುತ್ತಾರೆ.

  • Share this:
  • published by :

ಸೋದರ ಸಂಬಂಧದಲ್ಲಿ ಮದುವೆಯಾದರೆ ಸಂತಾನೋತ್ಪತ್ತಿ ಸಮಸ್ಯೆ ಅಥವಾ ಹುಟ್ಟುವ ಮಕ್ಕಳಲ್ಲಿ ಸಮಸ್ಯೆ ಎದುರಾಗಬಹುದು ಅಂತಾ ವೈದ್ಯಲೋಕ ಹೇಳುತ್ತದೆ. ಇದು ಹಲವರ ಜೀವನದಲ್ಲಿ ನಡೆದಿದೆ ಕೂಡ. ಹೀಗೆ ಅನುವಂಶೀಯ ಸಮಸ್ಯೆಯಿಂದ ಹುಟ್ಟಿದ ಮಕ್ಕಳು ಹಲವಾರು ರೀತಿಯಲ್ಲಿ ತೊಂದರೆ ಕೂಡ ಅನುಭವಿಸುತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಅಮೇರಿಕಾದ ಇಲ್ಲೊಂದು ಕುಟುಂಬ ಸಾಕ್ಷಿಯಾಗಿದೆ. ಅಮೇರಿಕಾದಲ್ಲಿ ಒಂದು ಅಪರೂಪದ ಮತ್ತು ಒಂದು ರೀತಿಯ ವಿಚಿತ್ರ ಕುಟುಂಬವನ್ನು ಚಲನಚಿತ್ರ ನಿರ್ಮಾಪಕ ಮಾರ್ಕ್ ಲೈಟಾ ಪರಿಚಯಿಸಿದ್ದಾರೆ. ಯುಎಸ್‌ನಲ್ಲಿ ಕಂಡುಬಂದ ಈ ಕುಟುಂಬ ಒಂದು ರೀತಿಯ ಅಂತರ್ಗತ ಕುಟುಂಬ ಎನ್ನಬಹುದು. ಏಕೆಂದರೆ ಇವರು ಮನುಷ್ಯರನ್ನು ಕಂಡರೆ ಜೋರಾಗಿ ಕೂಗುತ್ತಾರೆ, ಗೊಣಗಾಟದ ಮೂಲಕ ಸಂವಹನ ನಡೆಸುತ್ತಾರೆ.


ಮಾರ್ಕ್ ಲೈಟಾ ಇಲ್ಲಿಗೆ ತೆರಳಿದಾಗ ಈ ಕುಟುಂಬದ ಮತ್ತು ಆ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಮತ್ತು ಅವರ ನಡವಳಿಕೆಯ ಮಾದರಿಗಳನ್ನು ಬಹಿರಂಗಪಡಿಸಿದ್ದಾರೆ. ಮೊದಲ ಬಾರಿಗೆ ಕಾದಂಬರಿ ನಿಮಿತ್ತ ಇಲ್ಲಿಗೆ ತೆರಳಿದಾಗ ಲೈಟಾ ಅವರು ಈ ಕುಟುಂಬದಲ್ಲಿನ ಮೂವರು ಸಹೋದರರ ಬಗ್ಗೆ ತಿಳಿದುಕೊಂಡಿದ್ದರು. ಈಗ ಮತ್ತೆ ಅವರನ್ನು ಭೇಟಿ ಮಾಡಿದ್ದು, ರಹಸ್ಯ ಕ್ಯಾಮೆರಾ ಮೂಲಕ ಅವರ ಚಲನವಲನಗಳನ್ನು ಸಂಗ್ರಹಿಸಿದ್ದಾರೆ.


ಇದನ್ನೂ ಓದಿ: ಅಯ್ಯಬ್ಬಾ, ಇದು ಸಾಮಾನ್ಯದ ಮೀನಲ್ಲ; ಬಿಟ್ರೆ ರಕ್ತವನ್ನೇ ಹೀರುತ್ತಂತೆ!


ನಿರ್ಮಾಪಕ ಲೈಟಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ಸಾಫ್ಟ್ ವೈಟ್ ಅಂಡರ್‌ಬೆಲ್ಲಿಯಲ್ಲಿ 12 ನಿಮಿಷಗಳ ಒಂದು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಕುಟುಂಬದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮೂವರು ಸಹೋದರರಿರುವ ಕುಟುಂಬವು ಪಶ್ಚಿಮ ವರ್ಜೀನಿಯಾದ ಹೊರಗಿದ್ದು, ಚಾರ್ಲ್ಸ್‌ಟನ್‌ನಿಂದ 75 ಮೈಲುಗಳಷ್ಟು ದೂರದಲ್ಲಿರುವ ಆಡ್ ಎಂಬ ಹೆಸರಿನ ಸುಮಾರು 800 ಜನಸಂಖ್ಯೆಯನ್ನು ಹೊಂದಿರುವ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಎಂದು ವಿಡಿಯೋ ವಿವರಿಸಿದೆ.


ಜನರನ್ನು ಕಂಡರೆ ಕೂಗುತ್ತಾರೆ, ಓಡಿಹೋಗುತ್ತಾರೆ ಯುಎಸ್‌ನ ಈ ಮೂವರು ಸಹೋದರರು


ಟಿಮ್ಮಿ, ರೇ ಮತ್ತು ಲೋರೆನ್ ಎಂಬ ಅಪರೂಪದ ಅಣ್ಣ-ತಮ್ಮಂದಿರು
2020 ರಲ್ಲಿ, ಲೈಟಾ ವಿಟ್ಟೇಕರ್‌ ಕುಟುಂಬವನ್ನು ಭೇಟಿ ಮಾಡಿದರು ಮತ್ತು ಅದರ ಬಗ್ಗೆ ಅವರ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಈ ಕುಟುಂಬದಲ್ಲಿ ಟಿಮ್ಮಿ, ರೇ ಮತ್ತು ಲೋರೆನ್ ಎಂಬ ಮೂವರು ಒಡಹುಟ್ಟಿದವರು ಇದ್ದಾರೆ. ಈ ವ್ಯಕ್ತಿಗಳೇ ಯುಎಸ್‌ನ ಅಪರೂಪದ ವ್ಯಕ್ತಿಗಳು. ಇವರ ಪೋಷಕರು ಸೋದರ ಸಂಬಂಧಿಗಳಾಗಿದ್ದರಿಂದ ಹುಟ್ಟಿದ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಆನುವಂಶಿಕ ಸಂಕೀರ್ಣತೆಗಳು ಇವರ ವರ್ತನೆಯ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಲೈಟಾ ವರದಿ ಮಾಡಿದ್ದಾರೆ. ಇನ್ನೂ ಈ ಮೂವರನ್ನು ಅವರ ಸಹೋದರಿಯೊಬ್ಬರು ನೋಡಿಕೊಳ್ಳುತ್ತಿದ್ದಾರೆ.


ಜನರನ್ನು ಕಂಡರೆ ಕೂಗುತ್ತಾರೆ, ಓಡಿಹೋಗುತ್ತಾರೆ ಯುಎಸ್‌ನ ಈ ಮೂವರು ಸಹೋದರರು


ಇದನ್ನೂ ಓದಿ: ನೀವು ಬೇಸಿಗೆಯಲ್ಲಿ ಮಾಡಲೇಬೇಕಾದ ಅಡ್ವೇಂಚರ್ಸ್​ ಟ್ರಿಪ್​ಗಳಿವು! ಮಿಸ್​ ಮಾಡ್ಲೇಬೇಡಿ


ಜನರನ್ನು ಕಂಡರೆ ವಿಚಿತ್ರ ವರ್ತನೆ ತೋರುತ್ತಾರೆ ಈ ವ್ಯಕ್ತಿಗಳು!
ಟಿಮ್ಮಿ, ರೇ ಮತ್ತು ಲೋರೆನ್ ಜನರನ್ನು ಕಂಡರೆ ಕೂಗುತ್ತಾರೆ, ಗೊಣಗುತ್ತಾರೆ, ಓಡಿ ಹೋಗುತ್ತಾರೆ. ಅವರಿಗೆ ಏನು ಮಾಡುತ್ತಿದ್ದೇವೆ ಎನ್ನುವ ಕಿಂಚಿತ್ತೂ ಸುಳಿವಿಲ್ಲ, ಮೈಮೇಲಿನ ಬಟ್ಟೆಯ ಮೇಲೂ ಅಷ್ಟಾಗಿ ಅರಿವಿಲ್ಲ ಎಂದು ಲೈಟಾ ವಿವರಿಸಿದ್ದಾರೆ. ಅವರ ಮನೆಯ ಹತ್ತಿರ ಜನ ಬರುವುದು ಅವರಿಗೆ ಇಷ್ಟವಾಗುವುದಿಲ್ಲ, ಯಾರಾದರು ಅವರನ್ನು ಅಪಹಾಸ್ಯ ಮಾಡಿದರೆ ಅವರು ವಿಚಿತ್ರವಾಗಿ ವರ್ತಿಸುತ್ತಾರೆ. ವಿಟ್ಟೇಕರ್‌ಗಳು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಲೈಟಾ ವಿಡಿಯೋದಲ್ಲಿ ವಿವರಿಸಿದ್ದಾರೆ.



ಡಿಸ್ಕವರ್ ಮ್ಯಾಗಜೀನ್‌ನ ಪ್ರಕಾರ, ಸಂತಾನಾಭಿವೃದ್ಧಿ ಕಡಿಮೆಯಾದ ಅರಿವಿನ ಸಾಮರ್ಥ್ಯಗಳು ಮತ್ತು ಸ್ನಾಯುವಿನ ಕಾರ್ಯಚಟುವಟಿಕೆಗಳು, ಕಡಿಮೆ ಎತ್ತರ ಮತ್ತು ಶ್ವಾಸಕೋಶದ ಕಾರ್ಯಚಟುವಟಿಕೆಗಳಂತಹ ಹಲವಾರು ಅಡ್ಡ ಪರಿಣಾಮಗಳು ಎದುರಾಗಬಹುದು ಎಂದು ಹೇಳಿದೆ. ಜೊತೆಗೆ ಸಾಮಾನ್ಯವಾಗಿ ಈ ರೋಗಗಳು ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ ಎಂದು ತಿಳಿಸಿದೆ.

top videos


    ಪ್ರಸ್ತುತ ಅಮೆರಿಕಾದ ವಿಟ್ಟೇಕರ್ ಕುಟುಂಬದ ಟಿಮ್ಮಿ, ರೇ ಮತ್ತು ಲೋರೆನ್ ಎಂಬ ಮೂವರು ಒಡಹುಟ್ಟಿದವರು ಇದೆ ಸಮಸ್ಯೆಯಿಂದಾ ಬಳಲುತ್ತಿದ್ದು, ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ.

    First published: