Gray-headed Swamphen: ಇಡೀ ಪ್ರಪಂಚದಲ್ಲಿ ಈಗ ಒಂದೇ 'ಗ್ರೇ ಹೆಡೆಡ್ ಸ್ವಾಂಪ್‍ಹೆನ್' ಇರೋದಂತೆ, ಅದು ಒರಿಸ್ಸಾದಲ್ಲಿ!

ಸ್ವಾಂಪ್‍ಹೆನ್ ಎಂದರೆ ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಕಂಡುಬರುವ ನೀರು ಹಕ್ಕಿ. ಜಗತ್ತಿನ ಯಾವ ಭಾಗಗಳಲ್ಲೂ ಕಂಡುಬರದೆ ಕೇವಲ ಭಾರತದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಒಡಿಶಾ ರಾಜ್ಯದಲ್ಲಿ ಕಂಡುಬರುತ್ತದೆ.

ಸ್ವಾಂಪ್‍ಹೆನ್ ಪಕ್ಷಿ

ಸ್ವಾಂಪ್‍ಹೆನ್ ಪಕ್ಷಿ

  • Share this:
ಈ ಜಗತ್ತಿನಲ್ಲಿ ವೈವಿಧ್ಯಮಯ ಜೀವಿಗಳಿವೆ. ಅವುಗಳಲ್ಲಿ ಪಕ್ಷಿಗಳೂ (Birds) ಸಹ ಒಂದಾಗಿದೆ. ಅವುಗಳಲ್ಲೂ ಬಹಳಷ್ಟು ವೈವಿಧ್ಯಗಳಿವೆ. ಆದರೆ, ಈ ಒಂದು ಬಗೆಯ ಪಕ್ಷಿ ಜಗತ್ತಿನ ಯಾವ ಭಾಗಗಳಲ್ಲೂ ಕಂಡುಬರದೆ ಕೇವಲ ಭಾರತದಲ್ಲಿ (India) ಅದರಲ್ಲೂ ನಿರ್ದಿಷ್ಟವಾಗಿ ಒಡಿಶಾ (Odisha) ರಾಜ್ಯದಲ್ಲಿ ಕಂಡುಬರುತ್ತದೆ ಎನ್ನಲಾಗಿದೆ. ಹಾಗಾದರೆ, ಅಂತಹ ವಿಶೇಷ ಪಕ್ಷಿ ಯಾವುದಪ್ಪ ಎಂದು ನಿಮಗೆ ಕುತೂಹಲ ಉಂಟಾಗಿರಬಹುದಲ್ಲವೆ? ಅದಕ್ಕೆ ಉತ್ತರ ಎಂದರೆ ಬೂದುತಲೆಯ ಸ್ವಾಂಪ್‍ಹೆನ್ (Swamphen). ಸ್ವಾಂಪ್‍ಹೆನ್ ಎಂದರೆ ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಕಂಡುಬರುವ ನೀರು ಹಕ್ಕಿ (Water bird) ಎಂದು ಹೇಳಬಹುದಾಗಿದೆ. ಈ ನೀರು ಹಕ್ಕಿಗಳು ಸಾಕಷ್ಟು ಪ್ರಭೇದಗಳಲ್ಲಿದ್ದರೂ ಗ್ರೇ ಹೆಡೆಡ್ (Gray Headed) ಅಂದರೆ ಬೂದು ಬಣ್ಣದ ತಲೆಯುಳ್ಳ ಸ್ವಾಂಪ್‍ಹೆನ್ ಬಲು ವಿಶೇಷ ಹಕ್ಕಿಯಾಗಿದ್ದು ಕೇವಲ ಭಾರತದ ಒಡಿಶಾದ ಉತ್ತರ ಭಾಗದಲ್ಲಿ ಸ್ಥಿತವಿರುವ ಚಿಲ್ಕಾ ಲಗೂನ್ (ಜೌಗು ಪ್ರದೇಶ) (Chilka Lagoon) ಪ್ರದೇಶದ ಮಂಗಳಾಜೋಡಿ ಎಂಬಲ್ಲಿ ಕಂಡುಬರುತ್ತದೆ ಎಂದು ಅಧ್ಯಯನ ವರದಿಯೊಂದರಲ್ಲಿ ತಿಳಿಸಲಾಗಿದೆ.

ವಿಶಿಷ್ಟ ಪ್ರಭೇದದ ಹಕ್ಕಿ

ಈ ವಿಷಯವನ್ನು ಇತ್ತೀಚೆಗೆ ಪ್ರತಿಷ್ಠಿತ 'ವಿಲ್ಸನ್ ಜರ್ನಲ್ ಆಫ್ ಆರ್ನಿಥಾಲಾಜಿ' (Wilson Journal of Ornithology) ಆನ್ಲೈನ್ ವಿಭಾಗದ ಲೇಖನಗಳ ವಿಭಾಗದಡಿಯಲ್ಲಿ " ಬೂದು-ತಲೆಯ ಸ್ವಾಂಪ್‍ಹೆನ್ (ಪೋರ್ಫಿರಿಯೊ ಪೋಲಿಯೊಸೆಫಾಲಸ್) ನಲ್ಲಿ ದುರ್ಬಲಗೊಂಡ ಪುಕ್ಕಗಳ ಮೊದಲ ವರದಿ ಮತ್ತು ಜೌಗು ಪ್ರದೇಶದಲ್ಲಿನ ಬಣ್ಣ ವಿರೂಪಗಳ ವಿಮರ್ಶೆ" ಎಂಬ ಶಿರ್ಷಿಕೆಯಲ್ಲಿ ಪ್ರಕಟಿಸಲಾಗಿದೆ. ಮೇ 3 ರಂದು ಈ ಲೇಖನವನ್ನು ಪ್ರಕಾಶಿಸಲಾಗಿದೆ.

ಈ ವಿಶಿಷ್ಟ ಪ್ರಭೇದದ ಹಕ್ಕಿಯನ್ನು ಮೂರು ಜನ ಪರಿಣಿತರಿದ್ದ ತಂಡವೊಂದು ಗುರುತಿಸಿದೆ ಎನ್ನಲಾಗಿದೆ. ಈ ತಂಡದಲ್ಲಿ ಗೌರವಾನ್ವಿತ ವನ್ಯಜೀವಿ ವಾರ್ಡನ್ ಆಗಿರುವ ಸುಭೆಂದು ಮಲ್ಲಿಕ್, ಶ್ರೀ ಶ್ರೀ ವಿವಿಯ ಸಹಾಯಕ ಪ್ರಾಧ್ಯಕರಾದ ಶಕ್ತಿ ನಂದಾ ಹಾಗೂ ಅರಣ್ಯಗಳ ಸಹಾಯಕ ಸಂರಕ್ಷಕರಾದ ಅಶುತೋಶ್ ಮಲ್ಲಿಕ್ ಅವರು ಉಪಸ್ಥಿತರಿದ್ದರೆಂದು ತಿಳಿದುಬಂದಿದೆ.

ಪಕ್ಷಿಯ ಶರೀರ ವೈವಿಧ್ಯತೆ

ಈ ಹಕ್ಕಿ ಬಲು ವಿಶೇಷ ಎಂದು ಹೇಳಲಾಗಿದೆ. ಏಕೆಂದರೆ, ಈ ಹಕ್ಕಿ ಸಾಮಾನ್ಯವಾಗಿ ಎಲ್ಲ ಸ್ವಾಂಪ್‍ಹೆನ್ ಹೊಂದಿರುವಂತೆ ಬಣ್ಣದ ಕಣ್ಣುಗಳನ್ನು ಹೊಂದಿದೆಯಾದರೂ ಆನುವಂಶಿಕತೆಯ ದುರ್ಬಲತೆಯಿಂದಾಗಿ ಇದರ ಎಲ್ಲ ರೆಕ್ಕೆ ಗರಿಗಳು ಬಿಳಿ ಬಣ್ಣದಿಂದ ಕೂಡಿವೆ. ಈ ವಿಶಿಷ್ಟ ಬೂದು ತಲೆಯುಳ್ಳ ಹಕ್ಕಿಗಳು ಕೆರೆಗಳ ತಟದ ಜೊಂಡು ಪ್ರದೇಶಗಳಲ್ಲಿ (Rectal area) ಅಥವಾ ಜೌಗು ಪ್ರದೇಶಗಳಲ್ಲಿ (swamp area) ಕಂಡುಬರುತ್ತವೆ. ಕೋಳಿ ಗಾತ್ರದಷ್ಟಿರುವ ಈ ಹಕ್ಕಿಗಳು ನೇರಳೆ ಹಾಗೂ ನೀಳ ವರ್ಣಗಳ ಮಿಶ್ರಣವನ್ನು ಹೊಂದಿದ್ದು ದೊಡ್ಡದಾದ ಕೆಂಪು ಬಣ್ಣದ ಕೊಕ್ಕು ಹಾಗೂ ಬಿಳಿ ಬಣ್ಣದ ಬಾಲದ ರೆಕ್ಕೆಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Fitness: ವರ್ಕೌಟ್ ಮಾಡಲು ಸಮಯವಿಲ್ವಾ? ಹಾಗಿದ್ರೆ ಫಿಟ್ ಆಗಿರಲು ಈ ಟಿಪ್ಸ್ ಪಾಲಿಸಿ

ಈ ಬಗ್ಗೆ ಅಧ್ಯಯನ ನಡೆಸಿರುವ ಪರಿಣಿತರು, ಹೇಳುತ್ತಾರೆ, ವಿಶೇಷವಾಗಿ ಈ ಪಕ್ಷಿಗಳ ಪುಕ್ಕಗಳು ಆನುವಂಶಿಕತೆಯ ದುರ್ಬಲತೆಯಿಂದಾಗಿ ಬಿಳಿ ಬಣ್ಣಕ್ಕೆ ತಿರುಗಿರುವುದನ್ನು ನೈಜವಾಗಿ ಪತ್ತೆ ಹಚ್ಚುವುದು ಬಲು ಕಷ್ಟಕರ ಪ್ರಕ್ರಿಯೆಯಾಗಿದೆ, ಏಕೆಂದರೆ ಅವುಗಳನ್ನು ಒಂದು ನಿರ್ದಿಷ್ಟ ದೂರದಿಂದ ಗಮನಿಸಬೇಕಾಗಿದ್ದು ಅಂತರವು ಸ್ಪಷ್ಟವಾಗಿ ನೋಡಬೇಕಾದುದನ್ನು ತಡೆಯುತ್ತದೆ, ಅಲ್ಲದೆ ಅವುಗಳ ಚಲನವಲನವೂ ಸಹ ಅವುಗಳ ಮೇಲೆ ಸಾಕಷ್ಟು ಗಮನ ಕೇಂದ್ರೀಕರಿಸಲು ಅಡೆ-ತಡೆ ಉಂಟು ಮಾಡಿದರೆ, ಸರಿಯಾದ ರೀತಿಯ ಬೆಳಕು ಅದರ ಮೇಲೆ ಬಿಳುವುದನ್ನು ಖಚಿತಪಡಿಸಿಕೊಂಡು ಅದರ ವಿಕ್ಷಣೆ ಮಾಡುವುದು ಕಠಿಣವಾಗಿರುತ್ತದೆ ಎಂಬ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಈ ತಂಡವು ತಾವು ದಾಖಲಿಸಿರುವ ಅಂಶಗಳಿಗೆ ಸಂಬಂಧಿಸಿದಂತೆ ಅವುಗಳ ಉಪಸ್ಥಿತಿ ಹಾಗೂ ಇತರೆ ಹಲವು ವಿವರಗಳ ಬಗ್ಗೆ ಸಾಕಷ್ಟು ವಿಮರ್ಶಕರು ಪ್ರಶ್ನೆಗಳನ್ನು ಕೇಳಿದ್ದು ಆ ಎಲ್ಲ ಪ್ರಶ್ನೆಗಳಿಗೆ ನಾವು ಸಮರ್ಪಕವಾಗಿ ಉತ್ತರಿಸಲು ಸಮರ್ಥರಾಗಿರುವುದಾಗಿ ಅಧ್ಯಯನ ತಂಡದ ಸುಭೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Vegetarian lifestyle: ಸಸ್ಯಾಹಾರಿಗಳಲ್ಲಿ ಎಷ್ಟು ವೆರೈಟಿ ಇದೆ ಗೊತ್ತಾ? ನೀವು ಇದರಲ್ಲಿ ಯಾವ ವಿಧ?

ಅಂತಿಮವಾಗಿ ಈ ಜಾತಿಯ ಹಕ್ಕಿ ನಮ್ಮ ಭಾರತದಲ್ಲಿ ಮಾತ್ರವೆ ಕಂಡುಬರುತ್ತವೆ ಎನ್ನುವುದಾದರೆ ಅವುಗಳನ್ನು ಸಂರಕ್ಷಿಸಿ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಸರ್ಕಾರ ಹಾಗೂ ಜನರ ಕರ್ತವ್ಯ ಎಂದಷ್ಟೇ ಹೇಳಬಹುದು.

ಸ್ವಾಂಪ್‍ಹೆನ್

ಸ್ವಾಂಪ್‍ಹೆನ್ ಎಂಬುದು ಜಲ ಕೋಳಿ ಅಥವಾ ನೀರು ಕೋಳಿ ಎನ್ನಬಹುದಾದ ಪಕ್ಷಿಗಳ ವಿಧವಾಗಿದ್ದು ರೈಲ್ ಕುಟುಂಬಕ್ಕೆ ಸೇರಿವೆ. ಈ ಪಕ್ಷಿಗಳು ಆಫ್ರಿಕಾ ಮೂಲದಿಂದ ಬಂದಿರುವುದಾಗಿ ಪಕ್ಷಿವಿಜ್ಞಾನ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ
Published by:Ashwini Prabhu
First published: