ನಾವು ವಿಭಿನ್ನವಾಗಿರುವಂತಹ ಪ್ರಾಣಿ ಮತ್ತು ಪಕ್ಷಿಗಳನ್ನು ನೋಡಬೇಕು ಅಂದ್ರೆ ಝೂಗಳಿಗೆ (Zoo) ಭೇಟಿ ನೀಡುತ್ತೇವೆ. ಹೆಸರೇ ಗೊತ್ತಿಲ್ಲದಂತಹ ಪ್ರಾಣಿಗಳು ಕೂಡ ಈ ಜುಗಳಲ್ಲಿ ವಾಸ ಮಾಡ್ತಾ ಇರ್ತವೆ. ಇದಂತೂ ಮಕ್ಕಳಿಗೆ ಮನಸ್ಸಿಗೆ ಮುದ ನೀಡುವಂತಹ ಸ್ಥಳ ಎಂದೇ ಹೇಳಬಹುದು. ವೀಕೆಂಡ್ ಗಳಿಗೆ (Weekend) ಟ್ರಿಪ್ ಹೋಗಬಹುದು ಮತ್ತು ನೀವು ಆ ರಜೆಯನ್ನು ಚೆನ್ನಾಗಿ ಎಂಜಾಯ್ ಮಾಡ್ಬೋದು. ದೂರದ ದೇಶಗಳಿಂದ ಕೂಡ ಈ ಪ್ರಾಣಿಗಳನ್ನು (Animals) ಕರೆತರಲಾಗುತ್ತೆ. ಅದಕ್ಕೆ ಬೇಕಾಗುವಂತಹ ವಾತಾವರಣ ಮತ್ತು ಆಹಾರವನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಝೂವಿನ ಅಧಿಕಾರಿಗಳು ತೆಗೆದುಕೊಂಡಿರುತ್ತಾರೆ. ಇದರ ಜೊತೆಗೆ ಇತ್ತೀಚಿಗಿನ ಕಾಲದಲ್ಲಿ ಡಿಫ್ರೆಂಟ್ ಆಗಿರುವಂತಹ ಪ್ರಾಣಿ ಹಾಗೂ ಪಕ್ಷಿಗಳು ವಿಜ್ಞಾನ ಲೋಕಕ್ಕೆ ಎಂಟ್ರಿ ಕೊಡ್ತಾ ಇದೆ.
ಈ ಹಿಂದೆ ಬಿಳಿ ಬಣ್ಣದ ನಾಯಿಯನ್ನು ಸಂಶೋಧಕರು ಪತ್ತೆ ಹಚ್ಚಿದ್ರು. ಅದೇ ರೀತಿಯಾಗಿ ಡೈನೋಸಾರೆಸ್ ಮೊಟ್ಟೆ ಕೂಡ ದೊರೆತಿದೆ ಎಂಬುದಾಗಿ ಹಿಂಟ್ ನೀಡಿದ್ದರು. ಇದೇ ರೀತಿಯಾಗಿ ಇದೀಗ ಮತ್ತೊಂದು ತಳಿಯ ಜಿಂಕೆ ಮರಿ ಹೊರ ಬಂದಿದೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್, ಮಚ್ಚೆಯುಳ್ಳ ಜಿಂಕೆಯ ಫೋಟೋ ಸಖತ್ ವೈರಲ್ ಆಗ್ತಾ ಇದೆ. ಉತ್ತರ ಪ್ರದೇಶದ ಕತರ್ನೀಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಬೈನೋ ಜಿಂಕೆ ಸೋಮವಾರ ಸಂಜೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.
ಅಲ್ಬೈನೋ ಅಂದ್ರೆ ಅದೇನೋ ಕಾಯಿಲೆ ಅಲ್ಲ. ಮನುಷ್ಯನಲ್ಲಿಯೂ ಈ ಚರ್ಮ ಇರೋದು ಕಾಣಬಹುದಾಗಿದೆ. ಅದೇ ರೀತಿಯಾಗಿ ಇಲ್ಲೊಂದು ಜಿಂಕೆಗೂ ಕೂಡ ಚರ್ಮವೂ ಕಾಣಿಸಿಕೊಂಡಿದೆ. ಇದೀಗ ಸಖತ್ ವೈರಲ್ ಆಗ್ತಾ ಇದೆ.
Akash Deep Badhawan, IFS ಇವರ ಟ್ವಿಟರ್ ಖಾತೆಯಲ್ಲಿ ಈ ಫೋಟೋಸ್ ಹಾಕಿಕೊಂಡಿದ್ದಾರೆ. ಸಖತ್ ಕ್ಯೂಟ್ ಆಗಿರುವಂತಹ ಈ ಫೋಟೋಸ್ ನೋಡೋಕಂತು ಬಹಳ ಸುಂದರವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಾ ಇದ್ದಾರೆ.
Staying true to its tagline, “Katarniaghat- Where rare is common”, an albino spotted deer fawn was sighted this morning.
PC - Pulkit Gupta, Gharial Conservation Team pic.twitter.com/KPYCQzTp1P
— Akash Deep Badhawan, IFS (@aakashbadhawan) March 9, 2023
ಈ ರೀತಿಯ ಫೋಟೋಸ್ ಪ್ರತಿನಿತ್ಯ ಅಧಿಕಾರಿಗಳು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ, ಸಾಮಾನ್ಯ ಪ್ರಾಣಿಗಳಲ್ಲಿ ಇದು ಅಸಮಾನ್ಯವಾಗಿ ಬೆಳಕಿಗೆ ಬಂದಿದೆ. ಆದರೆ, ಈ ಜಿಂಕೆ ಮರಿ ಯಾವುದೇ ಕಾಯಿಲೆಯಿಂದ ಬಳಲುತ್ತಾಇಲ್ಲ ಎಂಬುದು ಸ್ಪಷ್ಟವಾಗಿರುವ ವಿಚಾರವೇ ಸರಿ.
ಇದನ್ನೂ ಓದಿ: ತನ್ನನ್ನ ತಾನೇ ಮದುವೆ ಆದಳು ಈಕೆ, ಒಂದೇ ದಿನದಲ್ಲಿ ಸಾಕಾಗಿ ಡಿವೋರ್ಸ್ ಕೊಟ್ಟುಕೊಂಡ್ಲಂತೆ!
ಅಲ್ಬೈನೋ ಪ್ರಾಣಿಗಳಲ್ಲಿ ಮೆಲನಿನ್ ಚರ್ಮಕ್ಕೆ ಬಣ್ಣ ನೀಡುವ ಪದಾರ್ಥವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಇರೋದಿಲ್ಲ. ಸಾಮಾನ್ಯವಾಗಿ ಅವು ಮೆಲನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಎರಡೂ ಪೋಷಕರಿಂದ ರೂಪಾಂತರಗೊಂಡ ಜೀನ್ಗಳನ್ನು ಪಡೆದುಕೊಳ್ಳುತ್ತವೆ.
ನೋಡೋಕೆ ಸಖತ್ ಕ್ಯೂಟ್ ಆಗಿರುವ ಈ ಜಿಂಕೆ ಮರಿಯ ಅಂದವನ್ನು ಹೊಗಳಲು ಸಾಧ್ಯವಿಲ್ಲ. ನೀವೇ ಇದರ ಫೋಟೋವನ್ನು ನೋಡಬೇಕಾಗಿದೆ. ಟ್ವಿಟ್ಟರ್ನಲ್ಲಿ ಫುಲ್ ವೈರಲ್ ಆಗ್ತಾ ಇದೆ ಈ ಜಿಂಕೆ ಮರಿಯ ಫೋಟೋಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ