• Home
  • »
  • News
  • »
  • trend
  • »
  • School Memories: ಅಕ್ಷರ ಕಲಿಸಿದ ಶಿಕ್ಷಕಿಗೆ ವಿದ್ಯಾರ್ಥಿಗಳಿಂದ ಭಾವನಾತ್ಮಕ ವಿದಾಯ!

School Memories: ಅಕ್ಷರ ಕಲಿಸಿದ ಶಿಕ್ಷಕಿಗೆ ವಿದ್ಯಾರ್ಥಿಗಳಿಂದ ಭಾವನಾತ್ಮಕ ವಿದಾಯ!

ಪ್ರೀತಿಯ ಶಿಕ್ಷಕರಿಗೆ ವಿದಾಯ

ಪ್ರೀತಿಯ ಶಿಕ್ಷಕರಿಗೆ ವಿದಾಯ

ಚಿಕ್ಕವರಾಗಿದ್ದಾಗ ನಾವು ಮೊದಲು ಅಕ್ಷರಗಳನ್ನು ಕಲಿಯುವುದೇ ಮನೆಯಲ್ಲಿ ತಂದೆ-ತಾಯಿಯಿಂದ ಮತ್ತು ಶಾಲೆಯಲ್ಲಿರುವ ಶಿಕ್ಷಕ ಮತ್ತು ಶಿಕ್ಷಕಿಯರಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಂತಹ ಪ್ರೀತಿಯ ಶಿಕ್ಷಕರು ತಮ್ಮ ನಿವೃತ್ತಿ ಹೊಂದುವುದನ್ನು ಕಂಡಾಗ ಕಣ್ಣಿಂಚಲ್ಲಿ ನೀರು ಬರುವುದು ಪಕ್ಕಾ. ಇಲ್ಲಿದೇ ನೋಡಿ ಇಂತಹದೇ ಒಂದು ಸ್ಟೋರಿ.

ಮುಂದೆ ಓದಿ ...
  • Share this:

ಚಿಕ್ಕವರಾಗಿದ್ದಾಗ ನಾವು ಮೊದಲು ಅಕ್ಷರಗಳನ್ನು ಕಲಿಯುವುದೇ ಮನೆಯಲ್ಲಿ ತಂದೆ-ತಾಯಿಯಿಂದ ಮತ್ತು ಶಾಲೆಯಲ್ಲಿರುವ ಶಿಕ್ಷಕ ಮತ್ತು ಶಿಕ್ಷಕಿಯರಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ.  ಬಹುಶಃ ಆದ್ದರಿಂದಲೇ ಅನ್ನಿಸುತ್ತೆ ನಮಗೆ ಶಾಲೆಯಲ್ಲಿ ಶಿಕ್ಷಕ ಮತ್ತು ಶಿಕ್ಷಕಿ ಮತ್ತು ಮನೆಯಲ್ಲಿ ಅಪ್ಪ ಅಮ್ಮನ ಬಗ್ಗೆ ಅಷ್ಟೊಂದು ಪ್ರೀತಿ ಮತ್ತು ಗೌರವ ಇರುತ್ತದೆ ಅಂತ. ನಾವು ದೊಡ್ಡವರಾಗುತ್ತಾ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಹೋಗುತ್ತಿರುವಾಗ ಅನೇಕ ಶಿಕ್ಷಕರು ಮತ್ತು ಶಿಕ್ಷಕಿಯರು ನಮಗೆ ಬೇರೆ ಬೇರೆ ವಿಷಯಗಳ ಬಗ್ಗೆ ಪಾಠ ಮಾಡಿ ಜೀವನದಲ್ಲಿ ಒಳ್ಳೆಯ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುವ ಮಾತುಗಳನ್ನು ಹೇಳಿಕೊಡುವುದರೊಂದಿಗೆ ನಮ್ಮ ವ್ಯಕ್ತಿತ್ವದ ಮೇಲೆ ಒಂದು ಅಗಾಧವಾದ ಪ್ರಭಾವ ಬೀರಿರುತ್ತಾರೆ ಅಂತ ಹೇಳಬಹುದು.


ನಾವು ಹತ್ತನೇ ತರಗತಿ ಮುಗಿಸಿಕೊಂಡು ಆ ಶಾಲೆ ಬಿಟ್ಟು ಕಾಲೇಜಿಗೆ ಹೋಗುವಾಗ ನಮ್ಮ ನೆಚ್ಚಿನ ಶಿಕ್ಷಕರನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿರುತ್ತೇವೆ ಎಂದರೆ ಅವರ ಹೆಸರು ಮತ್ತು ಅವರು ಹೇಳಿದ ಮಾತುಗಳು ನಮ್ಮ ಜೀವನದುದ್ದಕ್ಕೂ ನೆನಪಿನಲ್ಲಿರುತ್ತವೆ ಅಂತ ಹೇಳಬಹುದು.


ಇದರ ಮಧ್ಯೆ ಎಷ್ಟೋ ಶಿಕ್ಷಕರು ಸಹ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿರುತ್ತಾರೆ. ಅವರಿಗೂ ಸಹ ತಮ್ಮ ಕೆಲಸ ಮುಗಿಸಿ ಹೋಗುವಾಗ ಮಕ್ಕಳ ಜೊತೆಗಿರುವ ಆ ಬಾಂಧವ್ಯ ಒಂದು ಕ್ಷಣ ಕಣ್ತುಂಬಿ ಕೊಳ್ಳುವಂತೆ ಮಾಡುತ್ತವೆ ಅಂತ ಹೇಳಬಹುದು.


ಶಿಕ್ಷಕಿಗೆ ಭಾವನಾತ್ಮಕ ವಿದಾಯ ನೀಡಿದ ವಿದ್ಯಾರ್ಥಿಗಳು..


ಇಲ್ನೋಡಿ.. 30 ವರ್ಷ ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಕಡೆಗೆ ಒಂದು ದಿನ ನಿವೃತ್ತಿಯಾದಾಗ, ಆ ಶಿಕ್ಷಕಿಗೆ ವಿದ್ಯಾರ್ಥಿಗಳು ಯಾವ ರೀತಿಯ ಭಾವನಾತ್ಮಕ ವಿದಾಯ ನೀಡಿದ್ದಾರೆ ಅಂತ. ಅದಕ್ಕೆ ಪುರಾವೆ ಎನ್ನುವಂತಿದೆ ಈ ವೀಡಿಯೋ. ಈ ವೀಡಿಯೋದಲ್ಲಿರುವ ಭಾವನಾತ್ಮಕ ಅಂಶಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವೀಡಿಯೋ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಪ್ರೀತಿಯ ಶಿಕ್ಷಕರಿಗೆ ವಿದಾಯ


ಈಗ ವೈರಲ್ ಆಗಿರುವ ಈ ವೀಡಿಯೋವನ್ನು ಗುಡ್ ನ್ಯೂಸ್ ಮೂವ್ಮೆಂಟ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ. ಈ ಕಿರು ಕ್ಲಿಪ್ ನಲ್ಲಿ ವಿದೇಶಿ ಭಾಷಾ ಶಿಕ್ಷಕರಾಗಿರುವ ಪ್ರೊಫೆಸರ್ ಲೂರ್ಡೆಸ್ ತಮ್ಮ ಕೊನೆಯ ತರಗತಿಯನ್ನು ಮುಗಿಸಿಕೊಂಡು ಹೊರ ಬರುವುದನ್ನು ನಾವು ನೋಡಬಹುದು.


ಇದನ್ನೂ ಓದಿ:  Viral Video: ಆನೆಯೂ ವಿಡಿಯೋ ನೋಡುತ್ತಂತೆ ಈ ಊರಲ್ಲಿ! ಹೀಗೂ ಉಂಟಾ? ನೀವೇ ನೋಡಿ


ಅವರಿಗೆ ಆಶ್ಚರ್ಯವಾಗುವಂತೆ, ಹಜಾರದಲ್ಲಿ ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ಚೆಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿತು. ಅವರು ಕೊನೆಯದಾಗಿ ಕೆಳಗೆ ನಡೆಯುತ್ತಿದ್ದಂತೆ ಅವರು ಶಿಕ್ಷಕಿಯನ್ನು ಹುರಿದುಂಬಿಸಿದರು ಮತ್ತು ಚಪ್ಪಾಳೆ ತಟ್ಟಿದರು.


ವೀಡಿಯೋ ಅಷ್ಟೇ ಸುಂದರವಾಗಿತ್ತು ಈ ಶೀರ್ಷಿಕೆ..


ಶೀರ್ಷಿಕೆ ಪ್ರಕಾರ, ಪ್ರೊಫೆಸರ್ ಲೂರ್ಡೆಸ್ 30 ವರ್ಷಗಳ ನಂತರ ನಿವೃತ್ತರಾಗಿದ್ದರು. "ಹ್ಯಾಪಿ ರಿಟೈರ್ಮೆಂಟ್: ವಿದೇಶಿ ಭಾಷೆಗಳನ್ನು ಕಲಿಸಿದ 30 ವರ್ಷಗಳ ನಂತರ, ಪ್ರೊಫೆಸರ್ ಲೂರ್ಡೆಸ್ ಅವರು ಉತ್ತಮ ನಿವೃತ್ತಿಯನ್ನು ಆನಂದಿಸಲು ಸಕ್ರಿಯ ಬೋಧನೆಗೆ ವಿದಾಯ ಹೇಳುತ್ತಾರೆ. ಎಲ್ಲದಕ್ಕೂ ಧನ್ಯವಾದಗಳು, ಟೀಚರ್!" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.


ಈ ವೀಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ ಒಂದು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು. ನೆಟ್ಟಿಗರು ವಿದ್ಯಾರ್ಥಿಗಳ ಹಾವಭಾವವನ್ನು ಇಷ್ಟಪಟ್ಟರು ಮತ್ತು ಕಾಮೆಂಟ್ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು.


ಇದನ್ನೂ ಓದಿ: Insects in the Environment: ಚಿಕ್ಕ ಕೀಟ ಅಂತ ಕೊಲ್ಲದಿರಿ, ಪರಿಸರ ರಕ್ಷಣೆಗೆ ಇವುಗಳ ಕೊಡುಗೆಯೂ ಇದೆ!


"ಇದು ನನ್ನನ್ನು ಕಣ್ಣೀರಿಡುವಂತೆ ಮಾಡಿತು. ಒಳ್ಳೆಯ ಜನರು ಯಾವಾಗಲೂ ಒಂದು ಗುರುತನ್ನು ಬಿಟ್ಟು ಹೋಗುತ್ತಾರೆ ಮತ್ತು ಆ ಗುರುತು ನಮ್ಮ ಮಧ್ಯೆ ಒಂದು ಸಿಹಿಯಾದ ನೆನಪಾಗಿ ಉಳಿದು ಬಿಡುತ್ತದೆ, ವಿದ್ಯಾರ್ಥಿಗಳು ನೀಡಿದ ಆ ವಿದಾಯ ನೋಡಿ ನನಗೆ ಸಂತೋಷವಾಗಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.


ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಎಷ್ಟು ಸುಂದರವಾಗಿದೆ! ಆ ಎಲ್ಲಾ ಮಕ್ಕಳು ವಿದಾಯ ಹೇಳುವುದನ್ನು ನೋಡಿ ನನಗೆ ಅಳು ಬಂತು. ದೇವರು ಶಿಕ್ಷಕಿಯನ್ನು ಆಶೀರ್ವದಿಸಲಿ" ಎಂದು ಹೇಳಿದ್ದಾರೆ.

Published by:Precilla Olivia Dias
First published: