• Home
  • »
  • News
  • »
  • trend
  • »
  • Star of Bethlehem: ಕ್ರಿಸ್​ಮಸ್​ ದಿನ ಆಕಾಶದಲ್ಲಿ ಮಿನುಗುವ ತಾರೆ ವಿಶೇಷವಾದದ್ದು ಅಂತೆ!

Star of Bethlehem: ಕ್ರಿಸ್​ಮಸ್​ ದಿನ ಆಕಾಶದಲ್ಲಿ ಮಿನುಗುವ ತಾರೆ ವಿಶೇಷವಾದದ್ದು ಅಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನೇನು ಕ್ರಿಸ್‌ಮಸ್‌ ಬಂತು, ಈ ಸಂದರ್ಭದಲ್ಲಿ ಆಕಾಶದ ಕೌತುಕ ಬೆಥ್ ಲೆಹೆಮ್ ನಕ್ಷತ್ರದ ಬಗ್ಗೆ ನಾವಿಲ್ಲಿ ತಿಳಿಯೋಣ.

  • Trending Desk
  • 4-MIN READ
  • Last Updated :
  • Share this:

ಈಗಲೂ ಸಹ ಆಕಾಶ ಎಂದರೆ ಅದು ದೇವರುಗಳ (God) ಸಾಮ್ರಾಜ್ಯ ಎಂಬ ನಂಬಿಕೆ ಇದೆ. ಧರ್ಮ ಭೇದವಿಲ್ಲದೇ ಜಗತ್ತಿನಾದ್ಯಂತ ಅಸಂಖ್ಯಾತ ಧರ್ಮಗಳ ನಂಬಿಕೆ ಇದು. ಧೂಮಕೇತು, ಗ್ರಹಣ, ಯುಗಾದಿ ಚಂದ್ರ, ಬೆಥ್ ಲೆಹೆಮ್ ನಕ್ಷತ್ರ ಹೀಗೆ ಹತ್ತಾರು ಧಾರ್ಮಿಕ ಆಚರಣೆಗಳಿಗೆ ಆಕಾಶ ಸಾಕ್ಷಿಯಾಗಿ ನಿಲ್ಲುತ್ತದೆ. 17 ನೇ ಶತಮಾನದ ನಂತರ ಕ್ರಮೇಣ ಈ ವಿದ್ಯಮಾನಗಳು ವಿಜ್ಞಾನದ ಭಾಗವಾಗಲು ಆರಂಭವಾಯಿತು. ಪ್ರಸ್ತುತ ಖಗೋಳ ಎಂಬುವುದು ಹಲವು ಕೌತುಕಗಳಿಗೆ ಕಾರಣವಾಗಿದ್ದು, ಹತ್ತಾರು ವಿಚಾರಗಳು ಹೊರಬರುತ್ತಿವೆ. ಆಕಾಶದಲ್ಲಿ ಉಂಟಾಗುವ ಧೂಮಕೇತು ಎಂದರೇನು? ಗ್ರಹಣ ಏಕೆ ಸಂಭವಿಸುತ್ತದೆ? ಹೀಗೆ ಹಲವು ಪ್ರಶ್ನೆಗಳ ಜೊತೆಗೆ ಬೆಥ್ ಲೆಹೆಮ್ ಸ್ಟಾರ್ (‌Star of Bethlehem) ಅಥವಾ ನಕ್ಷತ್ರ ಏನು ಎಂಬುದರ ಬಗ್ಗೆಯೂ ಸಹಜವಾದ ಕುತೂಹಲ ಎಲ್ಲರಲ್ಲೂ ಇದೆ. ಈಗಾಗ್ಲೇ ಇಂತಹ ಪ್ರಶ್ನೆಗಳಿಗೆ ನಮಗೆ ಉತ್ತರ ಕೂಡ ಸಿಕ್ಕಾಗಿದೆ. ಇನ್ನೇನು ಕ್ರಿಸ್‌ಮಸ್‌ ಬಂತು, ಈ ಸಂದರ್ಭದಲ್ಲಿ ಆಕಾಶದ ಕೌತುಕ ಬೆಥ್ ಲೆಹೆಮ್ ನಕ್ಷತ್ರದ ಬಗ್ಗೆ ನಾವಿಲ್ಲಿ ತಿಳಿಯೋಣ.


ಏನಿದು ಬೆಥ್ ಲೆಹೆಮ್ ನಕ್ಷತ್ರ?


ಕ್ರಿಸ್ತನ ಜನನಕ್ಕೆ ಸಂಬಂಧಿಸಿದ ಮಹಾನ್ ರಹಸ್ಯಗಳಲ್ಲಿ ಸ್ಟಾರ್ ಆಫ್ ಬೆಥ್ ಲೆಹೆಮ್ ಕೂಡ ಒಂದು. ಇದು ಸಂತ ಮ್ಯಾಥ್ಯೂನ ಆವಿಷ್ಕಾರ. ಜೀಸಸ್ ಜನಿಸಿದಾಗ ಪೂರ್ವ ಆಕಾಶದಲ್ಲಿ ಪ್ರಕಾಶಮಾನವಾದ ನಕ್ಷತ್ರವು ಕಾಣಿಸಿಕೊಂಡಿತು ಎಂದು ಹೇಳಲಾಗಿದೆ.


ಅಂದಿನಿಂದ ಇದನ್ನು ಬೆಥ್ ಲೆಹೆಮ್ ನಕ್ಷತ್ರ ಎನ್ನಲಾಗುತ್ತದೆ. ಮ್ಯಾಥ್ಯೂ, ಮ್ಯಾಗಿ, ಹೇರೋಡಾ ಸೇರಿ ಈ ಮೂವರು ಬುದ್ಧಿವಂತರು ಹೊಸ ನಕ್ಷತ್ರವನ್ನು ಯಹೂದಿಗಳ ರಾಜನ ಜನನದ ಸಂಕೇತವಾಗಿ ನೋಡಿದ್ದರ ಬಗ್ಗೆ ಬೈಬಲ್ ವಿವರಿಸುತ್ತದೆ.


ಗುರು ಮತ್ತು ಶನಿಯ ಮಹಾ ಸಂಯೋಗ


ಗುರು ಮತ್ತು ಶನಿಯ ಮಹಾ ಸಂಯೋಗ ಎಂದು ಕರೆಯಲ್ಪಡುವ ಇದನ್ನು 'ಸ್ಟಾರ್ ಆಫ್ ಬೆಥ್ ಲೆಹೆಮ್' ಎಂದೂ ಕರೆಯುತ್ತಾರೆ. ಏಕೆಂದರೆ ಎರಡು ಗ್ರಹಗಳು ವಾಸ್ತವವಾಗಿ ಒಂದು ದೊಡ್ಡ ನಕ್ಷತ್ರವಾಗಿದೆ.


ವಾಸ್ತವವಾಗಿ, ಬೆಥ್ ಲೆಹೆಮ್ ನಕ್ಷತ್ರ ಯಾವುದು ಎಂದು ತಿಳಿದಿಲ್ಲವಾದರೂ ಇದು ನಿಸ್ಸಂಶಯವಾಗಿ ಕ್ರಿಸ್ತನ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. ಇದು ಧಾರ್ಮಿಕ ಅಥವಾ ಐತಿಹಾಸಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ವೈಜ್ಞಾನಿಕ ದೃಷ್ಟಿಕೋನದಿಂದ ಕೂಡ ಒಂದು ದೊಡ್ಡ ಕೌತುಕವಾಗಿದೆ.


ಇದನ್ನೂ ಓದಿ: ಮೇಕಪ್‌ಗೆ ದುಡ್ಡು ಕೊಡದ ಗಂಡನ ಜೊತೆ ಬಾಳಲಾರೆ! ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ ಹೆಂಡತಿ!


2016 ರಲ್ಲಿ ಪ್ರಕಟವಾದ ಪುಸ್ತಕ, ದಿ ಸ್ಟಾರ್ ಆಫ್ ಬೆಥ್ಲೆಹೆಮ್ ಮತ್ತು ಮ್ಯಾಗಿ, ಖಗೋಳಶಾಸ್ತ್ರಜ್ಞ ಪೀಟರ್ ಬಾರ್ತೆಲ್ ಮತ್ತು ದೇವತಾಶಾಸ್ತ್ರಜ್ಞ ಜಾರ್ಜ್ ವ್ಯಾನ್ ಕೂಟೆನ್ ಅವರು ಸಂಪಾದಿಸಿದ್ದಾರೆ.


ಪುಸ್ತಕದಲ್ಲಿನ ಲೇಖನಗಳು ಖಗೋಳಶಾಸ್ತ್ರಜ್ಞ ಮೈಕೆಲ್ ಮೊಲ್ನಾರ್ ಅವರ ಹಿಂದಿನ ಅಧ್ಯಯನಕ್ಕೆ ಪ್ರತಿಕ್ರಿಯೆಯಾಗಿದ್ದು, ಅವರ ಪುಸ್ತಕ ದಿ ಸ್ಟಾರ್ ಆಫ್ ಬೆಥ್ ಲೆಹೆಮ್: ದಿ ಲೆಗಸಿ ಆಫ್ ದಿ ಮ್ಯಾಗಿಯಲ್ಲಿ ಪ್ರಕಟಿಸಲಾಗಿದೆ. ನಕ್ಷತ್ರವು ವಾಸ್ತವವಾಗಿ ಖಗೋಳ ಘಟನೆಯಾಗಿದೆ ಎಂದು ಮೊಲ್ನಾರ್ ಇಲ್ಲಿ ಹೇಳಿದ್ದಾರೆ.


ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಕಂಡುಬಂದಿದ್ದ ನಕ್ಷತ್ರ


ಪುಸ್ತಕದ ಪ್ರಕಾರ ಮೇಷ ರಾಶಿಯಲ್ಲಿ ಸೂರ್ಯ, ಚಂದ್ರ ಮತ್ತು ಶನಿಯೊಂದಿಗೆ ಗುರು ಗ್ರಹದ ಗೋಚರಿಸುವಿಕೆಯಾಗಿದೆ. ಇದು ಆಧುನಿಕ ಆಕಾಶ ಯಂತ್ರಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ 6 BCE ವರ್ಷದಲ್ಲಿ ಏಪ್ರಿಲ್ 17 ರಂದು ಸಂಭವಿಸಿದೆ ಎಂದು ಹೇಳಲಾಗಿದೆ.


What was the real Star of Bethlehem, What did the Star of Bethlehem represent, Story of Christmas, What does the Bible say about the Star of Bethlehem, kannada news, karnataka news, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಸ್ಟಾರ್​ ಆಫ್​ ಬೆತ್ಲೇಹಮ್​ ಅಂದ್ರೆ ಏನು, ಕ್ರಿಸ್​ಮಸ್​ ಹಬ್ಬದ ವಿಶೇಷತೆಗಳೇನು, ಏಸುಕ್ರಿಸ್ತನ ಕಥೆ ಏನು
ಸಾಂದರ್ಭಿಕ ಚಿತ್ರ


ಈ ವಿದ್ಯಮಾನವನ್ನು 'ಸ್ಟಾರ್ ಆಫ್ ಬೆಥ್ ಲೆಹೆಮ್' ಅಥವಾ 'ಕ್ರಿಸ್ಮಸ್ ಸ್ಟಾರ್' ಎಂದು ಕರೆಯಲಾಗುತ್ತದೆ. ಕ್ರಿಶ್ಚಿಯನ್ ಧರ್ಮದಲ್ಲಿ ಯೇಸುವಿನ ಜನ್ಮವನ್ನು ಗುರುತಿಸುವ ಹಬ್ಬದ ಸಂದರ್ಭದಲ್ಲಿ ರಾತ್ರಿಯ ಆಕಾಶದಲ್ಲಿ ಗೋಚರಿಸುತ್ತದೆ. ಕೆಲವು ಆಸಕ್ತ ಖಗೋಳಶಾಸ್ತ್ರಜ್ಞರು ಬೆಥ್ ಲೆಹೆಮ್ ನಕ್ಷತ್ರವು ಭೂಮಿಯ ಸಮೀಪ ಹಾದುಹೋಗುವ ಧೂಮಕೇತು ಎಂದು ಸೂಚಿಸಿದ್ದಾರೆ

First published: