ದಿವಂಗತ Bappi Lahiri ಧರಿಸುತ್ತಿದ್ದ ಬಂಗಾರವನ್ನು ಅವರ ಕುಟುಂಬ ಏನು ಮಾಡಲಿದೆಯಂತೆ ಗೊತ್ತಾ?

'ಆ ಚಿನ್ನ ನನ್ನ ಅಪ್ಪನಿಗೆ ಕೇವಲ ಒಂದು ಫ್ಯಾಷನ್ ಸ್ಟೇಟ್‌ಮೆಂಟ್‌ಗಳಾಗಿರಲಿಲ್ಲ, ಅದು ಅವರಿಗೆ ಅದೃಷ್ಟವಾಗಿತ್ತು. ಅದನ್ನೆಲ್ಲಾ ಹಾಕಿಕೊಳ್ಳದೆ ಅವರು ಎಂದಿಗೂ ಪ್ರಯಾಣಿಸಲಿಲ್ಲ.'

ಬಪ್ಪಿ ಲಹಿರಿ

ಬಪ್ಪಿ ಲಹಿರಿ

 • Share this:
  ಸಾಮಾನ್ಯವಾಗಿ ಬಹುತೇಕ ಸಂಗೀತ ನಿರ್ದೇಶಕರು (Music Director) ಮತ್ತು ಗಾಯಕರನ್ನು (Singers) ನೋಡಿದರೆ, ಅವರು ಸಾದಾ ಉಡುಪುಗಳನ್ನು ಧರಿಸಿ ತುಂಬಾನೇ ಸಿಂಪಲ್ ಆಗಿ ಇರುತ್ತಾರೆ ಎಂದು ಹೇಳಬಹುದು. ಆದರೆ ಕೆಲವು ಸಂಗೀತ ನಿರ್ದೇಶಕರು ಮತ್ತು ಗಾಯಕರು ಸ್ವಲ್ಪ ಮಟ್ಟಿಗೆ ಅವರ ಒಲವು ಸಂಗೀತವನ್ನು (Music) ಹೊರತು ಪಡಿಸಿ ಯಾವುದಾದರೊಂದು ವಸ್ತುವಿನ ಮೇಲೆ ಇರುತ್ತದೆ ಎಂದರೆ ಅದು ಅವರು ಹಾಕಿಕೊಳ್ಳುವ ಸ್ಟೈಲಿಷ್ ಬಟ್ಟೆ ಮತ್ತು ಚಿನ್ನದ ಒಡವೆಗಳು ಆಗಿರುತ್ತವೆ. ಹೀಗೆ ನಾವು ಸಂಗೀತ ನಿರ್ದೇಶಕರು ಸ್ಟೈಲಿಷ್ ಆಗಿ ಬಟ್ಟೆ ಹಾಕಿಕೊಂಡು ಒಡವೆ ಧರಿಸಿರುವವರು ಎಂದು ನಾವು ಹೇಳುವಾಗ ನಮಗೆ ಥಟ್ಟನೆ ಕಣ್ಮುಂದೆ ಬರುವ ವ್ಯಕ್ತಿಯೇ ಬಪ್ಪಿ ಲಹರಿಯವರು ( Bappa Lahiri ) ಎಂದು ಹೇಳಿದರೆ ತಪ್ಪಾಗುವುದಿಲ್ಲ.

  ಇದನ್ನೂ ಓದಿ: Upendra: ರಿಯಲ್​ ಸ್ಟಾರ್​ ಉಪ್ಪಿಗೆ ಇದೇನಾಯ್ತು? ಎಲ್ಲಾ ಓಕೆ.. ಹಿಜಾಬ್​ ಹಾಕಿ ಬಂದಿದ್ಯಾಕೆ?

  ಬಪ್ಪಿ ಲಹರಿ ನೆನಪು

  ಹೌದು.. ಬಪ್ಪಿ ಲಹರಿ ಅವರು ಇತ್ತೀಚೆಗೆ ವಿಧಿವಶರಾದದ್ದು ಎಲ್ಲಾ ಅವರ ಅಭಿಮಾನಿಗಳಿಗೆ ತುಂಬಾನೇ ಬೇಸರ ತಂದಿತ್ತು ಎಂದು ಹೇಳಬಹುದು. ನವೆಂಬರ್ 27, 1952ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಬಪ್ಪಿ ಲಹರಿ ಅವರು ತಮ್ಮ ವಿವಿಧ ಹಾಡುಗಳ ಮೂಲಕ ಬಹಳ ಪ್ರಸಿದ್ಧಿ ಪಡೆದಿದ್ದರು. ಆಗಿನ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅಭಿನಯದ ಡಿಸ್ಕೋ ಡ್ಯಾನ್ಸರ್‌ ಸೇರಿದಂತೆ ವಿವಿಧ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.

  ಬಪ್ಪಿ ಅಂದರೆ ಬಂಗಾರ 

  ತಮ್ಮ ವಿಶಿಷ್ಟವಾದ ಸಂಗೀತ ಶೈಲಿಯಿಂದ ಪ್ರಸಿದ್ಧಿ ಪಡೆದಿದ್ದ ಬಪ್ಪಿ ಲಹರಿ ಅವರು ತಾವು ತೊಡುತ್ತಿದ್ದಂತಹ ಚಿನ್ನಾಭರಣಗಳ ಮೂಲಕವೂ ಅಭಿಮಾನಿಗಳ ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿದ್ದರು. ಅವರು ಅಷ್ಟೊಂದು ಆಭರಣಗಳನ್ನು ಏಕೆ ಧರಿಸುತ್ತಾರೆ ಎಂಬ ಪ್ರಶ್ನೆ ಬಹುತೇಕವಾಗಿ ಅವರನ್ನು ನೋಡಿದವರಿಗೆಲ್ಲಾ ಅನ್ನಿಸದೆ ಇರದು. ಅವರಿಗೆ ತಮ್ಮ ಸಂಗೀತದ ನಂತರ ಯಾವುದಾದರೂ ಒಂದು ವಸ್ತುವಿನ ಮೇಲೆ ಅಪಾರ ಪ್ರೀತಿ ಎಂದರೆ ಅದು ಚಿನ್ನದ ಒಡವೆಗಳು ಎಂದು ಹೇಳಿದರೆ ಸುಳ್ಳಲ್ಲ.

  ಈ ದಿವಂಗತ ಸಂಗೀತ ಸಂಯೋಜಕ ತನ್ನ ಸಿಗ್ನೇಚರ್ ಫ್ಯಾಷನ್ ಹೇಳಿಕೆಗಾಗಿ ಜನಪ್ರಿಯನಾಗಿದ್ದು. ಅದರಲ್ಲಿ ಅವರ ಕೈಗಳು ಮತ್ತು ಕುತ್ತಿಗೆಗೆ ಸಾಕಷ್ಟು ಚಿನ್ನದ ಪರಿಕರಗಳನ್ನು ಧರಿಸುತ್ತಿದ್ದರು. ಸುದ್ದಿ ಮಾಧ್ಯಮಕ್ಕೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಅವರ ಮಗ ಬಪ್ಪ ಲಹರಿಯವರು ತಮ್ಮ ತಂದೆ ಚಿನ್ನದೊಂದಿಗೆ ತುಂಬಾನೇ ಗಾಢವಾದ ಸಂಬಂಧವನ್ನು ಹೊಂದಿದ್ದರು ಎಂದು ಬಹಿರಂಗಪಡಿಸಿದರು.

  ಚಿನ್ನವೇ ಅಪ್ಪನ ಶಕ್ತಿ ಆಗಿತ್ತು 

  "ಆ ಚಿನ್ನ ನನ್ನ ಅಪ್ಪನಿಗೆ ಕೇವಲ ಒಂದು ಫ್ಯಾಷನ್ ಸ್ಟೇಟ್‌ಮೆಂಟ್‌ಗಳಾಗಿರಲಿಲ್ಲ, ಅದು ಅವರಿಗೆ ಅದೃಷ್ಟವಾಗಿತ್ತು. ಅದನ್ನೆಲ್ಲಾ ಹಾಕಿಕೊಳ್ಳದೆ ಅವರು ಎಂದಿಗೂ ಪ್ರಯಾಣಿಸಲಿಲ್ಲ. ಅವರು ಬೆಳಗ್ಗೆ 5 ಗಂಟೆಯ ಸುಮಾರಿಗೆ ಹೋಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೂ, ಅವರು ಎಲ್ಲಾ ಚಿನ್ನವನ್ನು ಧರಿಸುತ್ತಿದ್ದರು. ಅದು ಅವರಿಗೆ ಒಂದು ಶಕ್ತಿಯಂತೆ ಇತ್ತು. ಅವರು ತಾವು ಧರಿಸುವ ಚಿನ್ನದೊಂದಿಗೆ ಆಧ್ಯಾತ್ಮಿಕವಾಗಿ ಸಂಪರ್ಕ ಹೊಂದಿದ್ದರು" ಎಂದು ಬಪ್ಪಿ ಅವರ ಮಗ ಹೇಳಿದರು.

  ಇದನ್ನೂ ಓದಿ: RRR: ಕರ್ನಾಟಕದಲ್ಲಿ ಬಾಯ್​ಕಾಟ್​ `ಆರ್​ಆರ್​ಆರ್’ ಅಭಿಯಾನ ಶುರು! ಶಿವಣ್ಣನಿಗೆ ಕೊಟ್ಟ ಮಾತು ಮುರಿದ್ರಾ ರಾಜಮೌಳಿ?

  ಬಪ್ಪಿ ಅವರ ಚಿನ್ನದ ಸಂಗ್ರಹದೊಂದಿಗೆ ಕುಟುಂಬವು ಏನು ಮಾಡಲು ಯೋಜಿಸುತ್ತಿದೆ ಎಂದು ಕೇಳಿದಾಗ, ಅವರ ಮಗ "ಅದನ್ನು ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲು ನಾವು ಯೋಜಿಸುತ್ತಿದ್ದೇವೆ” ಎಂದು ಹೇಳಿದರು. ದೇಶದಲ್ಲಿ ಡಿಸ್ಕೋ ಧ್ವನಿಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಸಿದ್ಧರಾಗಿದ್ದ 69 ವರ್ಷದ ಬಪ್ಪಿ ಲಹರಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಫೆಬ್ರವರಿ 15 ರಂದು ಮೃತಪಟ್ಟಿದ್ದರು.

  ಈ ಚಿನ್ನಾಭರಣಗಳ ಬಗ್ಗೆ ಬಪ್ಪಿ ಬದುಕಿದ್ದಾಗ ಹೇಳಿದ್ದೇನು ನೋಡಿ

  ಬಪ್ಪಿಯವರು ಬದುಕಿದ್ದಾಗ ನೀಡಿದ ಒಂದು ಹಳೆಯ ಸಂದರ್ಶನವೊಂದರಲ್ಲಿ, ಬಪ್ಪಿ ಅವರು ಚಿನ್ನವು ತನಗೆ ಅದೃಷ್ಟ ಎಂದು ಹೇಳಿದರು ಮತ್ತು ಅವರ ಯಶಸ್ಸಿನ ಹಿಂದೆ ಅವರು ಧರಿಸುವ ಆಭರಣಗಳ ಶಕ್ತಿಯೇ ಕಾರಣ ಎಂದು ಹೇಳಿದ್ದರು. ಹರೇ ರಾಮ ಹರೇ ಕೃಷ್ಣ ಲಾಕೆಟ್‌ನೊಂದಿಗೆ ತನ್ನ ತಾಯಿ ತನಗೆ ಚಿನ್ನದ ಸರವನ್ನು ನೀಡಿದರು. ನಂತರ ಅವರು ತಮ್ಮ ಮೊದಲ ಬ್ಲಾಕ್ ಬಸ್ಟರ್ ಅನ್ನು ಪಡೆದರು ಎಂದು ಅವರು ಹೇಳಿದರು. ಚಿನ್ನವು ತನಗೆ ಅದೃಷ್ಟ ಎಂದು ತನ್ನ ತಾಯಿಯೇ ಹೇಳಿದರು ಎಂದು ಬಹಿರಂಗಪಡಿಸಿದ್ದರು.

  “ನನ್ನ ತಾಯಿಯ ನಂತರ, 1977 ರಲ್ಲಿ ನನ್ನ ಜನ್ಮದಿನದಂದು, ನನ್ನ ಪತ್ನಿ ಚಿತ್ರಾನಿ ಅವರು ದೊಡ್ಡ ಗಣಪತಿ ಲಾಕೆಟ್ ಹೊಂದಿರುವ ಮತ್ತೊಂದು ಚಿನ್ನದ ಸರವನ್ನು ನನಗೆ ಉಡುಗೊರೆಯಾಗಿ ನೀಡಿದರು. ಇದು ‘ಆಪ್ಕಿ ಕಿ ಖಾತಿರ್’ ನಂತಹ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿತು" ಎಂದು ಅವರು ಹೇಳಿದ್ದರು. "ನನ್ನ ಬಳಿ ಏಳು ಚಿನ್ನದ ಸರಗಳಿವೆ ಮತ್ತು ಗಣಪತಿ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ನಾನು ಸಿದ್ಧಿವಿನಾಯಕನ ಭಕ್ತ” ಎಂದು ಹೇಳಿಕೊಂಡಿದ್ದರು.
  Published by:Kavya V
  First published: