Online Money Transfer: ಆನ್ಲೈನ್ ಮೂಲಕ ಹಣ ಟ್ರಾನ್ಸ್ಫರ್ ಮಾಡುವುದು ಬಹಳ ಅನುಕೂಲಕರ. ಅನೇಕರು ಎಷ್ಟರಮಟ್ಟಿಗೆ ಇದರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅದೆಷ್ಟೋ ಜನ ಅಕೌಂಟ್ ನಂಬರ್ ಸ್ವಲ್ಪ ವ್ಯತ್ಯಾಸ ಆಗಿಯೋ ಅಥವಾ ಹೆಸರಿನಲ್ಲಿ ಅಕ್ಷರಗಳು ತಪ್ಪಾಗಿಯೋ ಎಡವಟ್ಟಾಗಿ ಪೇಚಿಗೆ ಸಿಲುಕಿಸಿಬಿಡುತ್ತೆ. ಎಷ್ಟೊಂದು ಸಲ ಒಂದು ಸಂಖ್ಯೆಯೋ ಅಥವಾ ಹೆಸರಿನ ಒಂದು ಅಕ್ಷರವೋ ತಪ್ಪಾಗಿ ನಮೂದಿಸಿ ಹಣ ಎಲ್ಲಿ ಬೇರೆಯವರ ಅಕೌಂಟ್ಗೆ ಹೋಗಿಬಿಡುತ್ತದೋ ಎನ್ನುವ ಆತಂಕದಲ್ಲೇ ಇಡೀ ದಿನ ಕೊರಗುತ್ತೇವೆ, ಟೆನ್ಶನ್ನಲ್ಲೇ ಕಳೆಯುತ್ತೇವೆ. ಆದ್ರೆ ಈ ಸಮಸ್ಯೆಗಳು ಎದುರಾದಾಗ ಗಾಬರಿಯಲ್ಲಿ ಏನು ಮಾಡಬೇಕು ಎಂದು ಹೊಳೆಯುವುದೇ ಇಲ್ಲ. ಆದ್ರೆ ಗಾಬರಿಯಾಗ್ಬೇಡಿ.. ಈ ವಿಚಾರಗಳನ್ನು ಸರಿಯಾಗಿ ತಿಳ್ಕೊಂಡಿದ್ರೆ ನಿಮಗೆ ಮಾತ್ರ ಅಲ್ಲ, ನಿಮ್ಮಂತೆಯೇ ಸಮಸ್ಯೆಯಲ್ಲಿ ಸಿಲುಕಿಕೊಂಡ ಮತ್ತಷ್ಟು ಜನರಿಗೂ ಉಪಯೋಗವಾಗುತ್ತದೆ.
ತಪ್ಪು ಅಕೌಂಟ್ ನಂಬರ್ ಹಣ ಕಳಿಸಿಬಿಟ್ಟರೆ ಕಾನೂನು ಪ್ರಕಾರವಾಗಿ ಮೊದಲು ಮಾಡಬೇಕಾದ ಕೆಲಸದ ಬಗ್ಗೆ ಗಮನಹರಿಸಿ. ಯಾಕೆಂದ್ರೆ ಆನ್ಲೈನ್ ಟ್ರಾನ್ಸ್ಫರ್ನಲ್ಲಿ ಅಕೌಂಟ್ ನಂಬರ್ ಗೇ ಹೆಚ್ಚಿನ ಮಹತ್ವ ಇರುವುದು. ಹೆಸರಿನ ಅಕ್ಷರಗಳು ಒಂದು ವೇಳೆ ಸ್ವಲ್ಪ ಹೆಚ್ಚು ಕಮ್ಮಿ ಆದರೂ ನಡೆಯುತ್ತದೆ. ಆದರೆ ಅಕೌಂಟ್ ನಂಬರ್ ಮಾತ್ರ ಸರಿಯಾಗಿ ಇರುವುದು ಕಡ್ಡಾಯ. ಹಾಗಿದ್ದರೂ ಒಂದು ವೇಳೆ ನೀವು ತಪ್ಪು ಅಕೌಂಟ್ ನಂಬರ್ ನಮೂದಿಸಿ, ಆ ನಂಬರ್ ಅಸ್ತಿತ್ವದಲ್ಲೇ ಇಲ್ಲದಿದ್ರೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಯಾಕೆಂದರೆ ಹಣ ತಾನಾಗಿಯೇ ನಿಮ್ಮ ಅಕೌಂಟ್ಗೆ ಮರಳುತ್ತದೆ. ಆದರೂ ಈ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಬ್ಯಾಂಕ್ಗೆ ಮನವಿ ಮಾಡಬಹುದು.
ಇದನ್ನೂ ಓದಿ: ಗರ್ಭಿಣಿಯಾಗಿದ್ದಾಗ ತೊಟ್ಟ ಬಟ್ಟೆಗಳನ್ನೆಲ್ಲಾ ಹರಾಜು ಹಾಕಿದ್ದಾರೆ ಅನುಷ್ಕಾ ಶರ್ಮಾ ! ಏನಿದು ಸರ್ಕ್ಯುಲರ್ ಫ್ಯಾಷನ್ ಟ್ರೆಂಡ್ ?
ಮೊದಲು ಬ್ಯಾಂಕ್ ಗೆ ಹೋಗಿ ಅಲ್ಲಿ ಈ ವಿಚಾರವನ್ನು ತಿಳಿಸಿ. ನೀವು ಆನ್ಲೈನ್ನಲ್ಲಿ ಮಾಡಿರುವ ಟ್ರಾನ್ಸಾಕ್ಷನ್ ಬಗ್ಗೆ ಪೂರ್ಣ ವಿವರ ನೀಡಿ. ಫಲಾನುಭವಿಯ ಹೆಸರು ಸರಿಯಾಗಿದ್ದು, ಅಕೌಂಟ್ ನಂಬರ್ ತಪ್ಪಾಗಿದ್ದಲ್ಲಿ ಕೂಡಲೇ ನಿಮ್ಮ ಬ್ಯಾಂಕ್ ಗೆ ತೆರಳಿ ಅಗತ್ಯ ದಾಖಲೆ ನೀಡಿ. ಅಮೌಂಟ್ ಟ್ರಾನ್ಸ್ ಫರ್ ನಲ್ಲಿ ಪ್ರಮಾದ ಆಗಿರುವ ಬಗ್ಗೆ ಸೂಕ್ತ ದಾಖಲೆ ಇದ್ದರೆ ಬ್ಯಾಂಕ್ ನವರೇ ಖುದ್ದಾಗಿ ಖಾತೆದಾರರನ್ನು ಸಂಪರ್ಕಿಸಿ ಹಣ ಮರಳಿಸುವಂತೆ ಮನವಿ ಮಾಡುತ್ತಾರೆ.
ನೀವು ತಪ್ಪಾಗಿ ಅಕೌಂಟ್ ನಂಬರ್ ನಮೂದಿಸಿದಾಗ ಫಲಾನುಭವಿಯ ಬದಲು ಅದೇ ಹೆಸರಿನ ಇನ್ಯಾರಿಗೋ ಹಣ ಟ್ರಾನ್ಸ್ ಫರ್ ಆದಾಗ ಆ ವಹಿವಾಟು ತಪ್ಪು ಅನ್ನೋದನ್ನು ನೀವು ಬ್ಯಾಂಕ್ ನವರಿಗೆ ಸಾಬೀತು ಮಾಡಬೇಕು. ಈ ಮೂರು ಸಂದರ್ಭಗಳಲ್ಲೂ ಬ್ಯಾಂಕ್ ನಿಮ್ಮ ಹಣವನ್ನು ವಾಪಸ್ ಪಡೆದು ಕೊಡಲು ಸಾಧ್ಯವಿಲ್ಲ. ಆದ್ರೆ ಮಧ್ಯವರ್ತಿಯಾಗಿ ನಿಮಗೆ ಅನುಕೂಲ ಮಾಡಿಕೊಡಬಹುದು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ