• Home
  • »
  • News
  • »
  • trend
  • »
  • ವ್ಯಕ್ತಿ ಸತ್ತ ಬಳಿಕ ಆತನ ಹೆಸರಲ್ಲಿರುವ ಇನ್ಶೂರೆನ್ಸ್​​​ ಪಾಲಿಸಿಯನ್ನು ಕುಟುಂಬಸ್ಥರು ಏನು ಮಾಡಬೇಕು?

ವ್ಯಕ್ತಿ ಸತ್ತ ಬಳಿಕ ಆತನ ಹೆಸರಲ್ಲಿರುವ ಇನ್ಶೂರೆನ್ಸ್​​​ ಪಾಲಿಸಿಯನ್ನು ಕುಟುಂಬಸ್ಥರು ಏನು ಮಾಡಬೇಕು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮನೆಯ ಏಕೈಕ ಮಾಲೀಕರಾಗಿರುವ ಪಾಲಿಸಿದಾರರು ಸತ್ತರೆ, ಅದಕ್ಕೆ ಲಗತ್ತಿಸಲಾದ ಮನೆ ವಿಮಾ ರಕ್ಷಣೆಯನ್ನು ಸಹ ಹೊಸ ಮಾಲೀಕರಿಗೆ ವರ್ಗಾಯಿಸಬೇಕಾಗುತ್ತದೆ.

  • Share this:

ತಮ್ಮ ಕುಟುಂಬದ ಸದಸ್ಯ ಯಾವುದೋ ಅಪಘಾತದಲ್ಲಿ ಅಥವಾ ಯಾವುದೋ ಕಾಯಿಲೆಯಿಂದ ಹಠಾತ್ತನೆ ಮರಣ ಹೊಂದಿದ್ದರೆ, ನೋವಿನಲ್ಲಿರುವಂತಹ ಆ ಕುಟುಂಬವು ಎಷ್ಟೋ ಬಾರಿ ಮರಣಕ್ಕೀಡಾದ ವ್ಯಕ್ತಿಯ ವಿಮೆಗಳನ್ನು ಮರೆತೇ ಬಿಡುತ್ತಾರೆ. ಅನಂತರ ಅದು ಅವರಿಗೆ ನೆನಪಿಗೆ ಬಂದರೂ ಅದನ್ನು ಹೇಗೆ ಮುಂದುವರೆಸಿಕೊಂಡು ಹೋಗುವುದು ಎನ್ನುವ ಗೊಂದಲ ಅವರಿಗಿರುತ್ತದೆ. ಜೀವ ವಿಮಾ ಕ್ಲೈಮ್‌ಗಳನ್ನು ಸಲ್ಲಿಸುವುದು ಸಾಮಾನ್ಯವಾಗಿ ಕುಟುಂಬಗಳ ಆದ್ಯತೆಯ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿರುತ್ತದೆ. ಆದರೆ ಮನೆ, ವಾಹನ ಅಥವಾ ಆರೋಗ್ಯ ವಿಮೆಯಂತಹ ಇತರ ಕೆಲವು ವಿಮೆಗಳತ್ತ ಸಮಾನ ಗಮನ ನೀಡಲು ಆಗುವುದಿಲ್ಲ. ಆದರೂ, ಭವಿಷ್ಯದಲ್ಲಿ ವಿಮೆಗಳ ಹಿಂಪಡೆಯುವಿಕೆ ಮತ್ತು ಮುಂದುವರೆಸಿಕೊಂಡು ಹೋಗುವಂತಹ ಕಾರ್ಯವಿಧಾನದಲ್ಲಿ ಆಗುವಂತಹ ಬದಲಾವಣೆಗಳಿಂದ ತಪ್ಪಿಸಿಕೊಳ್ಳಲು ಈ ವಿಮೆಗಳನ್ನು ಕುಟುಂಬದ ಬೇರೆ ವ್ಯಕ್ತಿಯ ಹೆಸರಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಮುಖ್ಯವಾಗಿದೆ.


ಆರೋಗ್ಯ ವಿಮೆ


ಮುಖ್ಯ ಪಾಲಿಸಿದಾರರು ನಿಧನರಾದರೆ ಪಾಲಿಸಿಗೆ ಏನಾಗುತ್ತದೆ..? ಇದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಲು ಉಳಿದಿರುವ ಕುಟುಂಬದ ಸದಸ್ಯರು ಘಟನೆಯ ಬಗ್ಗೆ ವಿಮಾದಾರರಿಗೆ ತಿಳಿಸಬೇಕು ಮತ್ತು ಕವರೇಜ್ ವಿವರಗಳನ್ನು ಮಾರ್ಪಡಿಸಬೇಕು.


"ಕುಟುಂಬದ ಫ್ಲೋಟರ್ ಪಾಲಿಸಿಯಲ್ಲಿ, ಉಳಿದಿರುವ ಸದಸ್ಯರಿಗಾಗಿ ಪಾಲಿಸಿಯನ್ನು ಸರಿಪಡಿಸಲಾಗುತ್ತದೆ, ಇದರಿಂದ ಭವಿಷ್ಯದಲ್ಲಿ ಸೂಚನೆಯನ್ನು ಸೂಕ್ತವಾಗಿ ಪಡೆಯಲಾಗುತ್ತದೆ. ವಿಮಾದಾರರ ಕುಟುಂಬದ ಸದಸ್ಯರ ಅರ್ಜಿಯ ಆಧಾರದ ಮೇಲೆ, ಮರಣಿಸಿದ ಸದಸ್ಯರಿಗೆ ಪಾಲಿಸಿಯ ಅಡಿಯಲ್ಲಿ ಯಾವುದೇ ಕ್ಲೈಮ್ ಸಲ್ಲಿಸದಿದ್ದರೆ, ಪಾಲಿಸಿಯ ನಿಯಮಗಳು ಮತ್ತು ಷರತ್ತಿನ ಪ್ರಕಾರ ವಿಮಾದಾರರು ಅವಧಿ ಮೀರಿದ ಪಾಲಿಸಿ ಅವಧಿಯ ಪ್ರೀಮಿಯಂ ಮರುಪಾವತಿಸುತ್ತಾರೆ,” ಎಂದು ಬಜಾಜ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಟಿ.ಎ ರಾಮಲಿಂಗಂ ವಿವರಿಸುತ್ತಾರೆ.


ಇದನ್ನೂ ಓದಿ:5 ತಿಂಗಳಿಗೆ ಜನಿಸಿದ ಮಗು ಬದುಕಿದ್ದೇ ಪವಾಡ; ಕಳೆದ ವರ್ಷ ಸೇಬಿನ ತೂಕದಷ್ಟಿದ್ದ ಮಗು ಈಗ ಎಷ್ಟು ಕೆ.ಜಿ ಇದೆ ಗೊತ್ತಾ?

ಆದ್ದರಿಂದ, ಅಸ್ತಿತ್ವದಲ್ಲಿರುವ ವಿಮಾ ಮೊತ್ತವು ಹಾಗೇ ಉಳಿಯುತ್ತದೆ ಮತ್ತು ಇದು ಪಾಲಿಸಿಯ ಅಡಿಯಲ್ಲಿ ವಿಮೆ ಮಾಡಿಸಿದ ಉಳಿದ ಸದಸ್ಯರನ್ನು ಒಳಗೊಳ್ಳುತ್ತದೆ.


"ವಿಮಾ ಕಂಪನಿಯು ಪ್ರತಿಪಾದಕರನ್ನು ಅದರಿಂದ ತೆಗೆದುಹಾಕುತ್ತದೆ ಮತ್ತು ಕುಟುಂಬದ ಇನ್ನೊಬ್ಬ ಸದಸ್ಯನನ್ನು ತನ್ನ ದಾಖಲೆಯಲ್ಲಿ ಹೊಸ ಪ್ರಸ್ತಾಪಕರನ್ನಾಗಿ ಮಾಡುತ್ತದೆ" ಎಂದು ವಿಮಾ ಸಂಗ್ರಾಹಕ ಸಂಸ್ಥೆಯಾದ ಇನ್ಸ್ಯೂರೆನ್ಸ್ ದೇಖೋ ಸಿಇಒ ಅಂಕಿತ್ ಅಗರವಾಲ್ ಹೇಳುತ್ತಾರೆ.


ಗೃಹ ವಿಮೆ


ಮನೆಯ ಏಕೈಕ ಮಾಲೀಕರಾಗಿರುವ ಪಾಲಿಸಿದಾರರು ಸತ್ತರೆ, ಅದಕ್ಕೆ ಲಗತ್ತಿಸಲಾದ ಮನೆ ವಿಮಾ ರಕ್ಷಣೆಯನ್ನು ಸಹ ಹೊಸ ಮಾಲೀಕರಿಗೆ ವರ್ಗಾಯಿಸಬೇಕಾಗುತ್ತದೆ. "ಉದಾಹರಣೆಗೆ, ಸಂಗಾತಿಯು ವರ್ಗಾವಣೆಯನ್ನು ಅನುಮೋದಿಸಲು ವಿಮಾ ಕಂಪನಿಗೆ ಲಿಖಿತ ವಿನಂತಿಯನ್ನು ಕಳುಹಿಸಬಹುದು.


ಮೊದಲ ಹಂತವಾಗಿ, ಸಂಗಾತಿ ಅಥವಾ ಇತರ ಕಾನೂನುಬದ್ಧ ಉತ್ತರಾಧಿಕಾರಿಗಳು ಪಾಲಿಸಿದಾರನ ಸಾವಿನ ಬಗ್ಗೆ ವಿಮಾ ಕಂಪನಿಗೆ ತಿಳಿಸಬೇಕು ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು.


"ಮುಕ್ತಾಯ ದಿನಾಂಕದವರೆಗೆ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಹಾಗೆಯೇ ಇರಿಸಿಕೊಳ್ಳಲು ಈ ಹಂತಗಳು ಕುಟುಂಬ ಸದಸ್ಯರಿಗೆ ಸಹಾಯ ಮಾಡುತ್ತದೆ. ಅಂತಿಮವಾಗಿ, ಅಸ್ತಿತ್ವದಲ್ಲಿರುವ ಪಾಲಿಸಿಯ ಸಿಂಧುತ್ವ ಅವಧಿ ಮುಗಿದ ನಂತರ ಸಂಗಾತಿಯು ಹೊಸ ವಿಮಾ ಪಾಲಿಸಿಯನ್ನು ಪಡೆಯಬೇಕಾಗುತ್ತದೆ, ”ಎಂದು ರಾಮಲಿಂಗಂ ವಿವರಿಸುತ್ತಾರೆ.


ಕಾರಿನ ವಿಮೆ


ಕಾರಿನ ವಿಮೆಯು ಈ ಮೇಲಿನ ಪಾಲಿಸಿಗಳಿಗಿಂತ ಭಿನ್ನವಾಗಿದೆ. ವ್ಯಕ್ತಿಯ ಸಾವಿನ ನಂತರ ಮೋಟಾರು ವಿಮಾ ಪಾಲಿಸಿಗಳು ಕೊನೆಗೊಳ್ಳುವುದಿಲ್ಲ.


ಇದನ್ನೂ ಓದಿ:Coronavirus Bengaluru: ಬೆಂಗಳೂರಿನಲ್ಲಿ 160 ಮೈಕ್ರೋ ಕಂಟೈನ್ಮೆಂಟ್​ ಝೋನ್​ಗಳು, ಕ್ವಾರಂಟೈನ್​ನಲ್ಲಿ 5860 ಮಂದಿ

"ವಿಮಾದಾರನ ಸಾವಿನ ದಿನಾಂಕದಿಂದ ಅಥವಾ ಪಾಲಿಸಿಯ ಅವಧಿ ಮುಗಿಯುವವರೆಗೆ, ಯಾವುದು ಮೊದಲು ಇದೆಯೋ ಅದು ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯಲ್ಲಿ, ವಿಮೆ ಮಾಡಿದ ವಾಹನದ ಕಸ್ಟಡಿ ಮತ್ತು ಬಳಕೆಯನ್ನು ಅಂಗೀಕರಿಸಿದ ವಿಮೆದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು ಮೋಟಾರು ವಿಮಾ ಪಾಲಿಸಿಯನ್ನು ವಾರಸುದಾರರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಬಹುದು'' ಎಂದು ರಾಮಲಿಂಗಂ ಹೇಳುತ್ತಾರೆ.


ನೀವು ಪಾಲಿಸಿದಾರನ ಮರಣ ಪ್ರಮಾಣಪತ್ರ, ಕಾರಿನ ಮತ್ತು ಮೂಲ ಪಾಲಿಸಿಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಪಾಲಿಸಿದಾರನ ಮರಣದ ನಂತರ, ವಿಮೆ ಮಾಡಲಾದ ವಾಹನ ಮಾರಾಟ ಮಾಡಲು ಇಚ್ಚಿಸಿದ್ದರೆ, ವಿಮಾ ಪಾಲಿಸಿ, ಆರ್‌ಸಿ ಪುಸ್ತಕವನ್ನು ಹೊಸ ಮಾಲೀಕರ ಹೆಸರಿನೊಂದಿಗೆ ಅಪ್‌ಡೇಟ್ ಮಾಡಿ ಮಾರಾಟವನ್ನು ಪೂರ್ಣಗೊಳಿಸಬೇಕು ಎಂದು ವಿಮಾ ಅಧಿಕಾರಿಗಳು ಹೇಳುತ್ತಾರೆ.


Published by:Latha CG
First published: