India's Capital: ದೆಹಲಿಯಲ್ಲ, ನಿಜವಾಗಿಯೂ ಇದು ಭಾರತದ ರಾಜಧಾನಿ ಆಗಬೇಕಿತ್ತು!

ಇಂದು ನಮಗೆಲ್ಲಾ ತಿಳಿದಿರುವ ನವದೆಹಲಿಗೆ 1911 ರಲ್ಲಿಯೇ ಕಿಂಗ್ ಜಾರ್ಜ್ V ಅಡಿಗಲ್ಲು ಹಾಕಿದ್ದರು. ಇದು ಸ್ವಾತಂತ್ರ್ಯಕ್ಕೆ ಕೇವಲ 16 ವರ್ಷಗಳ ಮೊದಲು 1931 ರಲ್ಲಿ ಮಾತ್ರ ಭಾರತದ ಹೊಸ ರಾಜಧಾನಿಯಾಗಿ ಉದ್ಘಾಟನೆಗೊಂಡಿತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮಲ್ಲಿ ಅನೇಕರು ಆಗ್ನೇಯ ಏಷ್ಯಾ (Southeast Asia) ಮತ್ತು ಥೈಲ್ಯಾಂಡ್, ಕಾಂಬೋಡಿಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾದಂತಹ ದೇಶಗಳಿಗೆ ಭೇಟಿ ನೀಡಿದ್ದೇವೆ. ಈ ಸಮಯದಲ್ಲಿ ನಮ್ಮ ಮನದಲ್ಲಿ ಮೂಡುವ ವಿಚಾರವೆಂದರೆ ಇಲ್ಲಿರುವ ಕೆಲವು ಪ್ರದೇಶಗಳೊಂದಿಗೆ ಭಾರತದ ಸಂಸ್ಕೃತಿ (Indian culture), ಪರಂಪರೆ, ಇತಿಹಾಸಕ್ಕಿರುವ ಸಂಪರ್ಕಗಳಾಗಿವೆ. ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣ, ಇಂಡೋನೇಷ್ಯಾದ ಬಾಲಿ ದ್ವೀಪದ ಕಾಂಬೋಡಿಯಾದಲ್ಲಿನ ಅಂಕೋರ್ ವಾಟ್ ದೇವಾಲಯದಲ್ಲಿ ಹಿಂದೂ ಧರ್ಮದ ಆಚರಣೆಗಳನ್ನು ಮುಕ್ತವಾಗಿ ನಡೆಸಲಾಗುತ್ತದೆ ಇನ್ನು ರಾಮನ ವಿಗ್ರಹಗಳನ್ನು ಹೇರಳವಾಗಿ ಕಾಣಬಹುದು. ಇಂಡೋನೇಷ್ಯಾದ (Indonesia) ಗರುಡ ವಿಮಾನಯಾನ, ಸಿಂಹಪುರಂ ನಿಂದ ಹೆಸರು ಪಡೆದುಕೊಂಡ ಸಿಂಗಾಪುರ (Singapore) ಇವೆಲ್ಲವೂ ಈ ಭಾಗಗಳಲ್ಲಿ ಭಾರತೀಯ (ಹೆಚ್ಚು ನಿಖರವಾಗಿ, ದಕ್ಷಿಣ ಭಾರತೀಯ) ಪ್ರಭಾವಗಳನ್ನು ಸೂಚಿಸುತ್ತದೆ.

ಆಕ್ರಮಣಕಾರರ ಬಗ್ಗೆಯೇ ಹೆಚ್ಚಿನ ವಿಚಾರಗಳನ್ನು ತಿಳಿಸುತ್ತಿರುವ ಪಾಠಗಳು 
ದೆಹಲಿ ಹಾಗೂ ಉತ್ತರ ಭಾರತವನ್ನು ಕೇಂದ್ರೀಕರಿಸಿರುವ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾರತದ ಇತಿಹಾಸದ ಕುರಿತು ಗೊತ್ತೂ ಇಲ್ಲ ಹಾಗೂ ಪಾಠಗಳಲ್ಲಿ ಅವನ್ನು ತಿಳಿಸುವುದೂ ಇಲ್ಲ. ಆಕ್ರಮಣಕಾರರ ಬಗ್ಗೆಯೇ ಹೆಚ್ಚಿನ ವಿಚಾರಗಳನ್ನು ಪಾಠಗಳು ತಿಳಿಸುತ್ತವೆ. ಇನ್ನು ದೆಹಲಿಯನ್ನು ಆಳಿದ ಬೇರೆ ಬೇರೆ ರಾಜಮನೆತನಗಳ ಬಗ್ಗೆ ರಾಜ ಕುಟುಂಬಸ್ಥರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದರಿಂದ ಇದನ್ನು ಕಲಿತ ಮಕ್ಕಳು ಕೂಡ ನಮ್ಮ ದೇಶದ ಇತಿಹಾಸ ಇಷ್ಟೇ ಎಂದು ಸುಮ್ಮನಾಗಿಬಿಡುತ್ತಾರೆ.

ಇಂದು ಆಗ್ನೇಯ ಏಷ್ಯಾಕ್ಕೆ ಮೊದಲ ಬಾರಿಗೆ ಭೇಟಿ ನೀಡುವವರು ಈ ದೇಶಗಳಲ್ಲಿ ಸಮ್ಮಿಳಿತಗೊಂಡಿರುವ ಭಾರತೀಯ ಪ್ರಭಾವವನ್ನು ಕಂಡಾಗ ಬಹಳ ಸಂತೋಷಕಾರಿಯಾಗಿ ಆಶ್ಚರ್ಯಪಡುತ್ತಾರೆ ಮತ್ತು ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಸಾಮ್ರಾಜ್ಯಗಳು ಇಲ್ಲಿ ಗಾಢವನ್ನು ಪ್ರಭಾವವನ್ನುಂಟು ಮಾಡಿದೆ ಎಂದು ಅರಿತುಕೊಳ್ಳುತ್ತಾರೆ.

ದೆಹಲಿಗಿರುವ ಐತಿಹಾಸಿಕ ಮಹತ್ವ
ಒಂದು ಕಾಲದಲ್ಲಿ ಇಂದ್ರಪ್ರಸ್ಥ ಎಂದು ಕರೆಯಲ್ಪಡುವ ದೆಹಲಿಯು ಮಹಾಭಾರತದ ಸಮಯದಲ್ಲಿ ಪ್ರಾಮುಖ್ಯತೆಗೆ ಬಂದಿತು. ಮಧ್ಯಕಾಲೀನ ಯುಗದಲ್ಲಿ, ದೆಹಲಿ ಸುಲ್ತಾನರನ್ನು ಸ್ಥಾಪಿಸಿದಾಗ, ದೆಹಲಿಯು ಅದರ ರಾಜಧಾನಿಯಾಯಿತು. ಆಧುನಿಕ ಯುಗದಲ್ಲಿ, ದೆಹಲಿಯನ್ನು 1911 ರಲ್ಲಿ ಭಾರತದ ರಾಜಧಾನಿಯಾಗಿ ಮರು-ಸ್ಥಾಪಿಸಲಾಯಿತು. ಬ್ರಿಟಿಷರು ಭಾರತದಲ್ಲಿ ಅಧಿಕಾರಕ್ಕೆ ಏರಿದಾಗಿನಿಂದ, ಅಲ್ಲಿ ನಿರಂತರ ಅಶಾಂತಿಯವರೆಗೆ (1905 ರಲ್ಲಿ ಬಂಗಾಳದ ವಿಭಜನೆಗೆ ಸಂಬಂಧಿಸಿದಂತೆ) ಕೊಲ್ಕತ್ತಾದಿಂದ (ಕಲ್ಕತ್ತಾ) ಆಳುತ್ತಿದ್ದರು. ಬ್ರಿಟಿಷರು ದೆಹಲಿಯನ್ನು ಆರಿಸಿಕೊಂಡರು ಏಕೆಂದರೆ ಈ ಸ್ಥಳವು ರಾಜಧಾನಿಯಾಗಿ, ಭಾರತದ ಹೆಚ್ಚಿನ ಭಾಗದ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುತ್ತದೆ ಎಂಬ ಕಾರಣವನ್ನು ಅವರು ನೀಡಿದ್ದಾರೆ.

ಇದನ್ನೂ ಓದಿ: Do You Know This: ಈ 6 ಪ್ರಾಣಿ, ಪಕ್ಷಿಗಳ ಪ್ರಭೇದಗಳು ಶೀಘ್ರವೇ ಪ್ರಪಂಚದಿಂದ ಕಣ್ಮರೆಯಾಗಲಿವೆ!

ದೆಹಲಿ ರಾಜಧಾನಿಯಾಗಿದ್ದು ಹೇಗೆ?
ವಾಯುವ್ಯದಿಂದ ಭಾರತವನ್ನು ಪ್ರವೇಶಿಸಿದ ದರೋಡೆಕೋರರು ದೆಹಲಿಯನ್ನು ರಾಜಧಾನಿಯಾಗಿ ಆರಿಸಿಕೊಂಡರು ಇದು ಆಕ್ರಮಣದ ಮಾರ್ಗದಲ್ಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ಆಕ್ರಮಣಕಾರರೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ ಎಂಬುದು ಇವರ ಲೆಕ್ಕಾಚಾರವಾಗಿತ್ತು. ಆದರೆ ಕಾಲ ಬದಲಾಗಿದೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಭಾರತದ ಮೇಲೆ ಆಕ್ರಮಣವನ್ನು ನಡೆಸಲು ಯಾರಾದರೂ ಇಂದು ಪ್ರಯತ್ನಿಸಿದರೆ, ಆಧುನಿಕ ಭಾರತದಲ್ಲಿ ಎಲ್ಲಿಂದಲಾದರೂ ತಡೆಯಬಹುದು ಬರಿಯ ದೆಹಲಿಯಿಂದ ಮಾತ್ರವಲ್ಲ ಎಂಬುದು ಇಂದು ಸಾಧ್ಯವಾಗಿದೆ.

ಬ್ರಿಟಿಷರು, ವಾಸ್ತವವಾಗಿ, 17 ನೇ ಶತಮಾನದಲ್ಲಿ ಪಶ್ಚಿಮ ಕರಾವಳಿಯ ಸೂರತ್ ಮೂಲಕ ಭಾರತಕ್ಕೆ ಬಂದರು ಮತ್ತು ನಂತರ ಎಲ್ಲೆಡೆ ವಿಸ್ತಾರವಾಗಿ ಪ್ರಾಬಲ್ಯ ಗಳಿಸಿದರು. ಈ ಪರಮಾಣು ಯುಗದಲ್ಲಿ, ಭಾರತದ ಯಾವುದೇ ಸ್ಥಳವನ್ನು ಬೇರೆ ಯಾವುದೇ ಸ್ಥಳದಿಂದ ಪ್ರವೇಶಿಸಬಹುದು.

ಬ್ರಿಟಿಷರು ಕಲ್ಕತ್ತಾವನ್ನು ರಾಜಧಾನಿಯಾಗಿ ಆರಿಸಿಕೊಂಡಿದ್ದು ಏಕೆ 
ಇನ್ನು ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರ ಹಿತಾಸಕ್ತಿಗಳು ಕಲ್ಕತ್ತಾದಲ್ಲಿಯೇ ಇದ್ದುದರಿಂದ ಬ್ರಿಟಿಷರು ಕಲ್ಕತ್ತಾವನ್ನು ರಾಜಧಾನಿಯಾಗಿ ಆರಿಸಿಕೊಂಡರು. ಇಂದು ನಮಗೆಲ್ಲಾ ತಿಳಿದಿರುವ ನವದೆಹಲಿಗೆ 1911 ರಲ್ಲಿಯೇ ಕಿಂಗ್ ಜಾರ್ಜ್ V ಅಡಿಗಲ್ಲು ಹಾಕಿದ್ದರು. ಇದು ಸ್ವಾತಂತ್ರ್ಯಕ್ಕೆ ಕೇವಲ 16 ವರ್ಷಗಳ ಮೊದಲು 1931 ರಲ್ಲಿ ಮಾತ್ರ ಭಾರತದ ಹೊಸ ರಾಜಧಾನಿಯಾಗಿ ಉದ್ಘಾಟನೆಗೊಂಡಿತು.

ಇದನ್ನೂ ಓದಿ:  Viral Story: ಹಾರುವ ವಿಮಾನವನ್ನೇ ನೆಲಕ್ಕುರುಳಿಸಿದ ಫುಟ್​ಬಾಲ್​ ಆಟಗಾರ! ಇದು ರೀಲ್​ ಅಲ್ಲ, ರಿಯಲ್​ ಸ್ಟೋರಿ

ನಮ್ಮ ಇತಿಹಾಸದಲ್ಲಿ ಅನೇಕ ಸಾಮ್ರಾಜ್ಯಗಳು ದಕ್ಷಿಣ ಭಾರತದಿಂದ ಆಳ್ವಿಕೆ ನಡೆಸಿದವು, ಅಲ್ಲಿ ಹೊಸ ರಾಜಧಾನಿಯನ್ನು ಕಂಡುಹಿಡಿಯುವುದು ಹೊಸ ದೃಷ್ಟಿಕೋನವನ್ನು ತರುತ್ತದೆ. ರಾಷ್ಟ್ರದ ರಾಜಧಾನಿಯನ್ನು ಸ್ಥಳಾಂತರಿಸುವುದು ಹೊಸ ಭೌತಿಕ ಸ್ಥಳವನ್ನು ಮಾತ್ರವಲ್ಲ, ಹೊಸ ಪ್ರಭಾವಗಳನ್ನೂ ಸಹ ಅರ್ಥೈಸುತ್ತದೆ ದಕ್ಷಿಣ ಭಾರತದಲ್ಲಿ ಹೊಸ ರಾಜಧಾನಿಯು ಈ ಪ್ರದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಆದರೆ ವಾಸ್ತವವಾಗಿ ಭಾರತೀಯ ಗಣರಾಜ್ಯ ಮತ್ತು ಅದು ಪ್ರತಿನಿಧಿಸುವ ಮೌಲ್ಯಗಳನ್ನು ಮರುರೂಪಿಸಬಹುದು.

ದಕ್ಷಿಣ ಭಾರತದಲ್ಲಿ ರಾಜಧಾನಿ ಎಲ್ಲಿದ್ದರೆ ಉತ್ತಮ?
ದಕ್ಷಿಣ ಭಾರತದಲ್ಲಿ ರಾಜಧಾನಿ ಎಲ್ಲಿರಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಾದರೆ ಕಿಕ್ಕಿರಿದ ಜನಸಂಖ್ಯೆಯನ್ನೊಳಗೊಂಡ ನಗರಗಳು ಬೇಡ ಏಕೆಂದರೆ ಇದು ಪುನಃ ದೆಹಲಿಯ ಅದೇ ನೋಟವನ್ನುಂಟು ಮಾಡಬಹುದು. ರಾಜಧಾನಿಯಾಗಿ ಮಧ್ಯಮ ಜನಸಂಖ್ಯೆ ಹಾಗೂ ಉತ್ತಮ ಹವಾಮಾನವಿರುವ ನಗರವನ್ನು ಆಯ್ಕೆಮಾಡುವುದು ಉತ್ತಮ. ಮೈಸೂರಿನಂತಹ ಸ್ಥಳ, ಬೆಂಗಳೂರಿನಿಂದ ಆಂಧ್ರದ ಗಡಿಗೆ ಹೋಗುವಲ್ಲಿ ಗ್ರೀನ್‌ಫೀಲ್ಡ್ ಸೈಟ್ ಕೂಡ ಉತ್ತಮ ಆಯ್ಕೆಯಾಗಿದೆ. ಹಂಪಿ ಕೂಡ ರಾಜಧಾನಿಯಾಗಿ ಒಂದೊಳ್ಳೆ ಆಯ್ಕೆಯಾಗಿದೆ. ಹೀಗೆ ದಕ್ಷಿಣ ಭಾರತದಲ್ಲಿ ಅನೇಕ ಆಯ್ಕೆಗಳಿವೆ.
Published by:Ashwini Prabhu
First published: