HOME » NEWS » Trend » WHAT NEXT COVID CYCLONE EARTHQUAKE IS GIVING EVERYONE 2020 FLASHBACKS STG LG

ಕೊರೋನಾ, ಸೈಕ್ಲೋನ್, ಇದೀಗ ಭೂಕಂಪ; ಹರಿದಾಡಿದವು ವ್ಯಂಗ್ಯಭರಿತ ಮೀಮ್ಸ್

ಚಂಡಮಾರುತ ಮಾತ್ರ ನೈಸರ್ಗಿಕ ವಿಪತ್ತಲ್ಲ. ಭೂಕಂಪವು ಸಹ ನೈಸರ್ಗಿಕ ವಿಪತ್ತಾಗಿದ್ದು, ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಸೌರಾಷ್ಟ್ರದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಸೋಮವಾರ ನಸುಕಿನ ಜಾವ 3.37ರ ಸುಮಾರಿಗೆ ಉಂಟಾಗಿದ್ದು, ಇದರ ತೀವ್ರತೆ 4.5ರಷ್ಟು ಇತ್ತು ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:May 18, 2021, 12:08 PM IST
ಕೊರೋನಾ, ಸೈಕ್ಲೋನ್, ಇದೀಗ ಭೂಕಂಪ; ಹರಿದಾಡಿದವು ವ್ಯಂಗ್ಯಭರಿತ ಮೀಮ್ಸ್
ಮೀಮ್ಸ್​
  • Share this:
2020 ಒಂದು ಶಾಪಗ್ರಸ್ಥ ವರ್ಷವೆಂದೇ ಎಲ್ಲರಿಗೂ ಭಾಸವಾಗಿತ್ತು. ಕಳೆದ ವರ್ಷ ಸಂಭವಿಸಿದ ಮಾರಣಾಂತಿಕ ಘಟನೆಗಳು, ದೃಶ್ಯಗಳು ಎಲ್ಲರಲ್ಲೂ ನಡುಕ ಹುಟ್ಟಿಸಿದ್ದವು. ಅಂದರೆ ಕೊರೋನಾ ವೈರಸ್‍ನಿಂದ ಹಿಡಿದು ಭೂಕಂಪಗಳು, ಚಂಡಮಾರುತಗಳವರೆಗೆ ಪ್ರತಿಯೊಂದು ಘಟನೆಗಳು ಮೇಲೆ ಮೇಲೆ ಸಂಭವಿಸಿ ಜನರ ನಿದ್ದೆಗೆಡಿಸಿದ್ದವು. ಮುಂದಿನ ವರ್ಷ ಅಂದರೆ 2021 ವರ್ಷವು ಹೊಸ ಚೈತನ್ಯ ತುಂಬಲಿದೆ. ಇದೆಲ್ಲವೂ ತೊಲಗಿ ಸಮಾಜ ಎಂದಿನಂತೆ ನೆಮ್ಮದಿ ನೀಡಲಿದೆ ಎಂದು ಪ್ರತಿಯೊಬ್ಬರು ತಿಳಿದಿದ್ದರು. ಆದರೆ ಈ ಆಲೋಚನೆಯು ತಲೆಕೆಳಗಾಗಿದ್ದು 2021ರಲ್ಲಿ ಕೊರೋನಾ ಎರಡನೇ ಅಲೆ ಎಲ್ಲರನ್ನು ಹಿಂಸಿಸುತ್ತಿದೆ. ಭಯದಲ್ಲೇ ಜೀವನ ಮಾಡುವ ಸ್ಥಿತಿ ತಂದೊಡ್ಡಿದೆ. ಜೊತೆಗೆ ಸೋಮವಾರ ಉಂಟಾದ ತೌತೆ ಚಂಡಮಾರುತದ ಅಬ್ಬರವು ಎಷ್ಟೋ ಮನೆ ಮಠಗಳನ್ನು ಧ್ವಂಸ ಮಾಡಿದೆ. ಈ ಚಂಡಮಾರುತ ಅತ್ಯಂತ ತೀವ್ರ ಚಂಡಮಾರುವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಸೋಮವಾರದಿಂದ ಇದರ ತೀವ್ರತೆ ಹೆಚ್ಚಾಗಿದ್ದು, ಇನ್ನು ಇದರ ತೀವ್ರತೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಈ ಚಂಡಮಾರುತವು ಗಂಟೆಗೆ 180-190ಕಿ.ಮೀ ವೇಗ ಹೊಂದಿದ್ದು, ಗಾಳಿಯು 120 ಕಿ.ಮೀ ವೇಗದಲ್ಲಿ ಬೀಸಲಿದೆ. ಆದರೂ, ಗುಜರಾತ್ ಕರಾವಳಿಯನ್ನು ಅಪ್ಪಳಿಸಿದಾಗ ಅದರ ತೀವ್ರತೆಯು ಕಡಿಮೆಯಾಗುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. "ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲಿರುವ ಅತ್ಯಂತ ತೀವ್ರವಾದ ಚಂಡಮಾರುತ 'ತೌತೆ' ಕಳೆದ ಆರು ಗಂಟೆಗಳಲ್ಲಿ ಸುಮಾರು 20 ಕಿ.ಮೀ ವೇಗದಲ್ಲಿ ಉತ್ತರ-ವಾಯುವ್ಯ ದಿಕ್ಕಿಗೆ ಸಾಗಿ, ಅತ್ಯಂತ ತೀವ್ರಗೊಂಡಿತು ಎಂದು ಐಎಂಡಿಯ ಚಂಡಮಾರುತ ವಿಭಾಗ ತಿಳಿಸಿದೆ.

ಕೋವಿಡ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆ

ಇನ್ನು, ಚಂಡಮಾರುತ ಮಾತ್ರ ನೈಸರ್ಗಿಕ ವಿಪತ್ತಲ್ಲ. ಭೂಕಂಪವು ಸಹ ನೈಸರ್ಗಿಕ ವಿಪತ್ತಾಗಿದ್ದು, ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಸೌರಾಷ್ಟ್ರದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಸೋಮವಾರ ನಸುಕಿನ ಜಾವ 3.37ರ ಸುಮಾರಿಗೆ ಉಂಟಾಗಿದ್ದು, ಇದರ ತೀವ್ರತೆ 4.5ರಷ್ಟು ಇತ್ತು ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವುದೇ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಅಜಯ್ ಪ್ರಕಾಶ್ ಹೇಳಿದ್ದಾರೆ.

ಈ ಎಲ್ಲಾ ವಿಪತ್ತುಗಳ ಕುರಿತು ಮೀಮ್‍ಗಳು ಹರಿದಾಡುತ್ತಿದ್ದು, ಜನರು ಈ ಮೂಲಕ ತಮ್ಮ ಬೇಸರ ಹೊರ ಹಾಕಿದ್ದಾರೆ.

ನಾನು ಮನೆಯಲ್ಲೇ ಇದ್ದರೆ ಕೋವಿಡ್‍ನಿಂದ ಸಾಯುವುದಿಲ್ಲ, ಆದರೆ ಭೂಕಂಪ ಮತ್ತು ಸೈಕ್ಲೋನ್‍ನಿಂದ? ಎಂದು ಸರಸ್ವತ್ ಟ್ವೀಟ್ ಮಾಡಿದ್ದಾರೆ. ಲಾಕ್‍ಡೌನ್‍ನಿಂದ ನಾವೆಲ್ಲಾ ಒಳಗೆ, ಹೊರಗಡೆ ಭೂಕಂಪ ಉಂಟಾಗುತ್ತಿದೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳ್ಳೆಯದು ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.

ಮೊದಲು ಕೋವಿಡ್, ನಂತರ ಸೈಕ್ಲೋನ್, ಇದೀಗ ಭೂಕಂಪ…ಏನ್ರೋ ಇದು ಎಂದು ಆಶಿಶ್ ತ್ಯಾಗಿ ಎಂಬು ವವರು ಟ್ವೀಟ್ ಮಾಡಿದ್ದಾರೆ. 2021 ಕೊರೋನಾ, ಸೈಕ್ಲೋನ್, ಭೂಕಂಪ..ನೀವು ಇವೆಲ್ಲದರ ಖುಷಿಯನ್ನು ಅನುಭವಿಸುತ್ತಿದ್ದೀರಾ ಎಂಬ ಭರವಸೆ ನನ್ನಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
Youtube Video

ಸೋಮವಾರ 24 ಗಂಟೆಗಳಲ್ಲಿ ಚಂಡಮಾರುತದಿಂದಾಗಿ ಗುಜರಾತ್‍ನ 21 ಜಿಲ್ಲೆಗಳ 84 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ. 6 ತಾಲೂಕುಗಳಲ್ಲಿ ಒಂದು ಇಂಚಿನಷ್ಟು ಮಳೆಯಾಗಿದೆ ಎಂದು ತಿಳಿಸಿದ್ದಾರೆ. ಭಾರತ ಹವಾಮಾನ ಇಲಾಖೆಯ (ಐಎಮ್‍ಡಿ) ಇತ್ತೀಚಿನ ಬುಲೆಟಿನ್ ಪ್ರಕಾರ, ತೌತೆ ಚಂಡಮಾರುತವು "ಅತ್ಯಂತ ತೀವ್ರವಾದ ಚಂಡಮಾರುತ. ಸೋಮವಾರ ಮತ್ತು ಮಂಗಳವಾರ ದಕ್ಷಿಣ ಜಿಲ್ಲೆಗಳಾದ ಸೌರಾಷ್ಟ್ರ, ಡಿಯು ಮತ್ತು ಗುಜರಾತ್ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ ಎಂದು ಐಎಂಡಿ ತಿಳಿಸಿದೆ.
Published by: Latha CG
First published: May 18, 2021, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories