• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಯುಪಿಐ ವಹಿವಾಟಿನ ಗರಿಷ್ಠ ಮಿತಿ ಎಷ್ಟು ಗೊತ್ತಾ..?: ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ

ಯುಪಿಐ ವಹಿವಾಟಿನ ಗರಿಷ್ಠ ಮಿತಿ ಎಷ್ಟು ಗೊತ್ತಾ..?: ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಫೋನ್ ಪೇ ಮತ್ತು ಗೂಗಲ್ ಪೇಗಳಂತೆ, ಪೇಟಿಎಂನಲ್ಲಿಯೂ ಪ್ರತಿ ವಹಿವಾಟಿನಲ್ಲಿ 1 ಲಕ್ಷ ರೂ. ವರ್ಗಾವಣೆ ಮಾಡಬಹುದಾಗಿದೆ. ಆದರೆ 24 ಗಂಟೆಗಳಲ್ಲಿ ನೀವು 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ರವಾನಿಸಲು ಸಾಧ್ಯವಿಲ್ಲ.

  • Share this:

    ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್‌ ಪಾವತಿಯನ್ನು ಸ್ವೀಕರಿಸುತ್ತಾರೆ. ಡಿಜಿಟಲ್ ಇಂಡಿಯಾದಲ್ಲಿ ಯುನಿಫೈಡ್‌ ಪೇಮೆಂಟ್‌ ಇಂಟರ್ಫೇಸ್(ಯುಪಿಐ) ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿದೆ. ಯುಪಿಐ ಮೂಲಕ ಎಲ್ಲ ರೀತಿಯ ಹಣಕಾಸು ವ್ಯವಹಾರ, ಬ್ಯಾಂಕಿನ ವ್ಯವಹಾರ ತುಂಬಾ ಸುಲಭವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಸ್ವೀಕೃತಿಯನ್ನು ಇದು ತುಂಬಾ ಸುಲಭಗೊಳಿಸಿದೆ.


    ಯುಪಿಐ ಎನ್‌ಪಿಸಿಐ ಅಭಿವೃದ್ಧಿಪಡಿಸಿದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಮೊಬೈಲ್ ಪ್ಲಾಟ್ಫಾರ್ಮ್ ಮೂಲಕ ಎರಡು ಬ್ಯಾಂಕುಗಳ ನಡುವೆ ಹಣವನ್ನು ತ್ವರಿತವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ. ಇದರಿಂದ ಎಸ್ಎಂಎಸ್ ಕಳಿಸಿದಷ್ಟೇ ಸರಳವಾಗಿ ಬೇರೊಬ್ಬರಿಗೆ ಹಣ ಪಾವತಿ ಮಾಡಬಹುದಾಗಿದೆ.


    ಯುಪಿಐ ವಹಿವಾಟು ಮಿತಿಯ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು


    • ಯುಪಿಐ ವಹಿವಾಟು ಮಿತಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಬಹುದು.

    • ಯುಪಿಐ ಬಳಸಿ ಮಾಡುವ ವಹಿವಾಟು ಮಿತಿ ದಿನಕ್ಕೆ 1 ಲಕ್ಷ ರೂ. ಆಗಿದೆ

    • ಯುಪಿಐ ವಹಿವಾಟಿನ ಗರಿಷ್ಠ ಸಂಖ್ಯೆ ಸಾಮಾನ್ಯವಾಗಿ (ಹೆಚ್ಚಿನ ಸಂದರ್ಭಗಳಲ್ಲಿ) 20ಕ್ಕೆ ಸೀಮಿತವಾಗಿರುತ್ತದೆ.

    • ಪ್ರತಿ ಯುಪಿಐ ವಹಿವಾಟಿನಲ್ಲಿ 1 ಲಕ್ಷ ರೂ. ಗರಿಷ್ಠ ಮಿತಿಯು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಇದು 10 ಸಾವಿರದಿಂದ 1 ಲಕ್ಷ ರೂ.ವರೆಗೂ ಇರುತ್ತದೆ.

    • ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಎನ್‌ಪಿಸಿಐ ವಹಿವಾಟು ಮಿತಿ ನಿಗದಿಗೊಳಿಸಿದೆ. ಯುಪಿಐ ಬಳಸಿ ದಿನಕ್ಕೆ ನಿರ್ದಿಷ್ಟ ಮೊತ್ತದ ವಹಿವಾಟು ನಡೆಸಲು ಅವಕಾಶವಿದೆ. ಪ್ರಸ್ತುತ ಪ್ರತಿ ಯುಪಿಐ ವಹಿವಾಟಿನಲ್ಲಿ ಬಳಕೆದಾರರು 1 ಲಕ್ಷ ರೂ.ವರೆಗೆ ಹಣ ರವಾನಿಸಬಹುದಾಗಿದೆ.

    • ಭೀಮ್ ಯುಪಿಐ ವಹಿವಾಟು ಮಿತಿ ಪ್ರತಿ ವಹಿವಾಟಿಗೆ 40 ಸಾವಿರ ರೂ. ಮತ್ತು 24 ಗಂಟೆಗಳಲ್ಲಿ 40 ಸಾವಿರ ರೂ. ಆಗಿದೆ. ಈ ವಹಿವಾಟು ಮಿತಿ ಭೀಮ್ ಯುಪಿಐಗೆ ಲಿಂಕ್ ಆಗಿರುವ ಖಾತೆಗಳಿಗೆ ಲಭ್ಯವಿರುತ್ತದೆ

    • ಯುಪಿಐ ಐಎಂಪಿಎಸ್ ತಂತ್ರಜ್ಞಾನವನ್ನು ಆಧರಿಸಿರುವುದರಿಂದ ಈ ಮಿತಿಯನ್ನು ನಿಗದಿಪಡಿಸಲಾಗಿದೆ.

    • ವ್ಯಾಪಾರಿಗಳ ನಡೆಸುವ ವಹಿವಾಟಿನ ಗರಿಷ್ಠ ಮೊತ್ತ 24 ಗಂಟೆಯಲ್ಲಿ 2 ಲಕ್ಷ ರೂ. ಆಗಿದೆ.

    • ಒಂದು ವೇಳೆ ನಿಮ್ಮ ಮೊಬೈಲ್ ಹ್ಯಾಂಡ್‌ಸೆಟ್, ಮೊಬೈಲ್ ಸಂಖ್ಯೆ ಅಥವಾ ಯುಪಿಐ ಪಿನ್ ಅನ್ನು ನೀವು ಬದಲಾಯಿಸಿದರೆ, ನೀವು ಗರಿಷ್ಠ 5 ಸಾವಿರ ರೂ. ಮಾತ್ರ ವಹಿವಾಟು ನಡೆಸಬಹುದು. ಈ ಕಡ್ಡಾಯ ಮಿತಿ ಮೊದಲ 24 ಗಂಟೆಗಳ ಕಾಲ ಜಾರಿಯಲ್ಲಿರುತ್ತದೆ.


    ವಿವಿಧ ಬ್ಯಾಂಕ್ ಖಾತೆಗಳಿಗೆ ಯುಪಿಐ ವಹಿವಾಟು ಮಿತಿ ವಿಭಿನ್ನವಾಗಿದೆ. ಪ್ರತಿ ವಹಿವಾಟು ಮತ್ತು ಪ್ರತಿದಿನದ ಯುಪಿಐ ವಹಿವಾಟು ಮಿತಿಗಳನ್ನು ಹೊಂದಿರುವ ಕೆಲವು ಬ್ಯಾಂಕುಗಳು ಇಲ್ಲಿವೆ.


    1) ಎಸ್‌ಬಿಐ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂ. ಮಿತಿ, 24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟು ಮಾಡಬಹುದು


    2) ಎಚ್‌ಡಿಎಫ್‌ಸಿ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂ. ಮಿತಿ


    3) ಸೆಂಟ್ರಲ್ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂ. ಮಿತಿ


    4). ಐಡಿಎಫ್‌ಸಿ ಫಸ್ಟ್ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂ. ಮಿತಿ


    5) ಬ್ಯಾಂಕ್ ಆಫ್ ಇಂಡಿಯಾ: ಪ್ರತಿ ವಹಿವಾಟಿಗೆ 10 ಸಾವಿರ ರೂ. ಮಿತಿ


    6) ಕೊಟಕ್ ಮಹೀಂದ್ರಾ ಬ್ಯಾಂಕ್: ಪ್ರತಿ ವಹಿವಾಟಿಗೆ 25 ಸಾವಿರ ರೂ ಮಿತಿ., ದಿನಕ್ಕೆ 2 ವಹಿವಾಟು ಮಾಡಬಹುದು


    7) ಐಸಿಐಸಿಐ ಬ್ಯಾಂಕ್: ಪ್ರತಿ ವಹಿವಾಟಿಗೆ 1 ಲಕ್ಷ ರೂ ಮಿತಿ., ಐಸಿಐಸಿಐ ಬ್ಯಾಂಕಿನ ಖಾತೆದಾರರು 24 ಗಂಟೆಗಳಲ್ಲಿ 20 ಬಾರಿ ಹಣ ವರ್ಗಾವಣೆ ಮಾಡಬಹುದು.


    ಫೋನ್ ಪೇ ಮತ್ತು ಗೂಗಲ್ ಪೇಗಳಂತೆ, ಪೇಟಿಎಂನಲ್ಲಿಯೂ ಪ್ರತಿ ವಹಿವಾಟಿನಲ್ಲಿ 1 ಲಕ್ಷ ರೂ. ವರ್ಗಾವಣೆ ಮಾಡಬಹುದಾಗಿದೆ. ಆದರೆ 24 ಗಂಟೆಗಳಲ್ಲಿ ನೀವು 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ರವಾನಿಸಲು ಸಾಧ್ಯವಿಲ್ಲ.


    ಕ್ರಮ ಸಂಖ್ಯೆ ಬ್ಯಾಂಕ್ ಹೆಸರು ಪ್ರತಿ ವಹಿವಾಟಿನ ಗರಿಷ್ಠ ಮಿತಿ ಪ್ರತಿ ವಹಿವಾಟಿನ ಮಿತಿ


    1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ಲಕ್ಷ ರೂ. 1 ಲಕ್ಷ ರೂ.


    2) ಕೆನರಾ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    3) ಆಕ್ಸಿಸ್ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    4) ಕಾರ್ಪೊರೇಶನ್ ಬ್ಯಾಂಕ್ 50 ಸಾವಿರ ರೂ. 1 ಲಕ್ಷ ರೂ.


    5) ಎಚ್‌ಡಿಎಫ್‌ಸಿ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    6) ಐಸಿಐಸಿಐ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    7) ಆಂಧ್ರ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    8) ಸೆಂಟ್ರಲ್ ಬ್ಯಾಂಕ್ 20 ಸಾವಿರ ರೂ. 50 ಸಾವಿರ ರೂ.


    9) ಸಿಟಿ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    10) ಬ್ಯಾಂಕ್ ಆಫ್ ಬರೋಡಾ 25 ಸಾವಿರ ರೂ. 50 ಸಾವಿರ ರೂ.


    11) ಬ್ಯಾಂಕ್ ಆಫ್ ಮಹಾರಾಷ್ಟ್ರ 1 ಲಕ್ಷ ರೂ. 20 ಸಾವಿರ ರೂ.


    12) ಬ್ಯಾಂಕ್ ಆಫ್ ಇಂಡಿಯಾ 10 ಸಾವಿರ ರೂ. 1 ಲಕ್ಷ ರೂ.


    13) ದೇನಾ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    14) ಸಿಟಿ ಯೂನಿಯನ್ ಬ್ಯಾಂಕ್ 1 ಲಕ್ಷ ರೂ. 1 ಲಕ್ಷ ರೂ.


    ಗ್ರಾಹಕರಿಗೆ ಬ್ಯಾಂಕುಗಳ ನೀಡುವ ಗರಿಷ್ಠ ಸಂಖ್ಯೆಯ ವಹಿವಾಟು ನಡೆಸಿದ್ದರೆ, ಹೆಚ್ಚಿನ ಯುಪಿಐ ವಹಿವಾಟು ಮಾಡಲು ಸಾಧ್ಯವಿಲ್ಲ. ದಿನದ ಮೊದಲ ವಹಿವಾಟಿನ ನಂತರ 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ.

    Published by:MAshok Kumar
    First published: