Chandra Grahan 2023: ಈ ವರ್ಷದ ಮೊದಲ ಚಂದ್ರ ಗ್ರಹಣ ಯಾವಾಗ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಚಂದ್ರ ಗ್ರಹಣ 2023

ಚಂದ್ರ ಗ್ರಹಣ 2023

ಕೆಲ ಗ್ರಹಣಗಳನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಆದರೆ ಈ ಗ್ರಹಣವು ಬರಿಗಣ್ಣಿಗೆ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

  • Share this:

ಖಗೋಳ ಲೋಕದಲ್ಲಿ ಮತ್ತೊಂದು ಕೌತುಕ ವಿಚಾರವೆಂದರೆ ಗ್ರಹಣ (Eclipse). ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೊದಲ ಚಂದ್ರ ಗ್ರಹಣ ಮುಂಬರುವ ಮೇ ತಿಂಗಳಲ್ಲಿ ಸಂಭವಿಸಲಿದೆ. 2023ರ ವರ್ಷದ ಮೊದಲ ಚಂದ್ರ ಗ್ರಹಣವು ಮೇ 5, ಶುಕ್ರವಾರ ಸಂಭವಿಸುತ್ತದೆ ಮತ್ತು ಇದು ಪೆನಂಬ್ರಲ್ ಚಂದ್ರ ಗ್ರಹಣವಾಗಿರುತ್ತದೆ. ದೃಕ್ ಪಂಚಾಂಗದ ಪ್ರಕಾರ ಈ ಚಂದ್ರ ಗ್ರಹಣದ ಪೆನಂಬ್ರಲ್ ಪ್ರಮಾಣವು 0.95 ಆಗಿರುತ್ತದೆ. ಪೆನಂಬ್ರಲ್ ಚಂದ್ರ ಗ್ರಹಣದಲ್ಲಿ, ಭೂಮಿಯ (Earth) ನೆರಳು ಚಂದ್ರನ ಹೊರ ಭಾಗದಲ್ಲಿ ಬೀಳುತ್ತದೆ. ಈ ಸಮಯದಲ್ಲಿ ಚಂದ್ರನ ಬೆಳಕು ಮಬ್ಬಾಗಿರುತ್ತದೆ. ಕೆಲ ಗ್ರಹಣಗಳನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಆದರೆ ಈ ಗ್ರಹಣವು ಬರಿಗಣ್ಣಿಗೆ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು (Scientist) ಹೇಳಿದ್ದಾರೆ.


ಚಂದ್ರ ಗ್ರಹಣ 2023 : ಭಾರತದಲ್ಲಿ ದಿನಾಂಕ ಮತ್ತು ಸಮಯ
2023ರ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023 ರಂದು ರಾತ್ರಿ 8:45 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 1:00 ಕ್ಕೆ ಕೊನೆಗೊಳ್ಳುತ್ತದೆ. ಸುಮಾರು 4 ಗಂಟೆ 15 ನಿಮಿಷ 34 ಸೆಕೆಂಡುಗಳು ಪೆನಂಬ್ರಾ ಗ್ರಹಣ ಇರುತ್ತದೆ.
ಈ ಚಂದ್ರಗ್ರಹಣವು ಬರಿಗಣ್ಣಿಗೆ ಗೋಚರಿಸದ ಹೊರತು, ಅದಕ್ಕೆ ಯಾವುದೇ ಮಹತ್ವವಿಲ್ಲ, ಯಾವುದೇ ಧಾರ್ಮಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ದೃಕ್ ಪಂಚಾಂಗ ವಿವರಿಸಿದೆ.


ಚಂದ್ರ ಗ್ರಹಣ 2023 : ಎಲ್ಲೆಲ್ಲಿ ಕಾಣುತ್ತದೆ?
ದೃಕ್ ಪಂಚಾಂಗ್ ಪ್ರಕಾರ, ಚಂದ್ರ ಗ್ರಹಣವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಹಿಂದೂ ಮಹಾಸಾಗರ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ ಮತ್ತು ಅಂಟಾರ್ಟಿಕಾದಿಂದ ಗೋಚರಿಸುತ್ತದೆ. ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಬಹುತೇಕ ಭಾಗಗಳಿಂದ ಯಾವುದೇ ಗ್ರಹಣ ಗೋಚರಿಸುವುದಿಲ್ಲ. ಏತನ್ಮಧ್ಯೆ, ಪೆನಂಬ್ರಾಲ್ ಗ್ರಹಣವು ಭಾರತ, ಪಾಕಿಸ್ತಾನ, ನೇಪಾಳ, ಮಾರಿಷಸ್ ಮತ್ತು ಸಿಂಗಾಪುರದಲ್ಲಿ ಗೋಚರಿಸುತ್ತದೆ.


ಇದನ್ನೂ ಓದಿ: ಯುಕೆಯ ಮೊದಲ ಜಗನ್ನಾಥ ದೇವಸ್ಥಾನಕ್ಕೆ 250 ಕೋಟಿ ದೇಣಿಗೆ ನೀಡಿದ ಭಾರತೀಯ ಬಿಲಿಯನೇರ್!


ಭಾರತದಲ್ಲಿ ಎಲ್ಲೆಲ್ಲಿ ಗ್ರಹಣ ಗೋಚರ?
ಪೆನಂಬ್ರಾಲ್ ಚಂದ್ರ ಗ್ರಹಣವು ಭಾರತದ ಕೆಲವು ಜನಪ್ರಿಯ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ಗೋಚರಿಸುತ್ತದೆ.


ಜಗತ್ತಿನಲ್ಲಿ ಚಂದ್ರ ಗ್ರಹಣದ ಗೋಚರತೆ
ಪ್ಯಾರಿಸ್, ರೋಮ್, ರಿಯಾದ್, ಕರಾಚಿ, ಬರ್ಲಿನ್, ಮಾಸ್ಕೋ, ಟೋಕಿಯೋ, ಸಿಡ್ನಿ, ಬೀಜಿಂಗ್, ಮ್ಯಾಡ್ರಿಡ್, ಕೈರೋ, ದುಬೈ, ಅಬುಧಾಬಿ, ಜೆಡ್ಡಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ.


ಮುಂದಿನ ಚಂದ್ರ ಗ್ರಹಣ ಯಾವಾಗ?
2023 ರ ಎರಡನೇ ಚಂದ್ರಗ್ರಹಣವು ಅಕ್ಟೋಬರ್ 28 ರಂದು ಸಂಭವಿಸಲಿದ್ದು, ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಸದ್ಯದ ಸಮಯ ಮತ್ತು ದಿನಾಂಕದ ಪ್ರಕಾರ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೇರಿಕಾ, ಉತ್ತರ/ಪೂರ್ವ ದಕ್ಷಿಣ ಅಮೇರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಭಾಗಶಃ ಚಂದ್ರಗ್ರಹಣದ ಕೆಲವು ಭಾಗಗಳು ಗೋಚರಿಸಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: Beer ಫೋಟೋವನ್ನು ಫೇಸ್‌ಬುಕ್​ಗೆ ಹಾಕಿದ್ದಕ್ಕೆ ಈ ವ್ಯಕ್ತಿಗೆ ಬಿತ್ತು ಭಾರಿ ದಂಡ!


ಹೇಗೆ ಸಂಭವಿಸುತ್ತದೆ ಚಂದ್ರ ಗ್ರಹಣ?
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತವೆ. ಇದರಿಂದಾಗಿ ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ. ಕೆಲವು ಗ್ರಹಣಗಳು ಅಷ್ಟೊಂದು ಅಡ್ಡಪರಿಣಾಮಗಳನ್ನು ಬೀರದಿದ್ದರೂ, ಇನ್ನು ಕೆಲವೊಂದು ಗ್ರಹಣಗಳು ಭೂಮಿಯ ಮೇಲೆ ಸಾಕಷ್ಟು ಅಡ್ಡಪರಿಣಾಮವನ್ನು ಬೀರುತ್ತದೆ.


top videos    ನಮ್ಮ ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಈ ಸೂರ್ಯ ಮತ್ತು ಚಂದ್ರ ಗ್ರಹಣಗಳು ಜ್ಯೋತಿಷ್ಯ ವಿಚಾರವಾಗಿ ಬಹಳ ಮುಖ್ಯವಾಗಿದೆ. ಅದರಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಈ ಚಂದ್ರ ಗ್ರಹಣ ಅಂತಹ ಯಾವುದೇ ಪ್ರಾಮುಖ್ಯತೆ ಪಡೆದಿಲ್ಲ ಎನ್ನಲಾಗಿದೆ.

    First published: