Indian Railways: ಭಾರತೀಯ ರೈಲುಗಳ ಮೇಲೆ X ಹಾಗೂ LV ಎಂದು ಬರೆಯುವುದರ ಅರ್ಥ ಗೊತ್ತಾ..?

meaning of X and LV: ರೈಲುಗಳ ಕೊನೆಯ ಬೋಗಿಯ ಹಿಂದೆ ಸುರಕ್ಷತೆ ಮತ್ತು ಭದ್ರತೆಯ ಉದ್ದೇಶಕ್ಕಾಗಿ ವಿವಿಧ ರೀತಿಯ ಚಿಹ್ನೆಗಳನ್ನು ಹಾಕಲಾಗಿರುತ್ತದೆ.. ಚಿನ್ನೆಗಳು ಒಂದಲ್ಲ ಹಲವು ಅರ್ಥಗಳನ್ನು ಹೊಂದಿವೆ. ಈ ರೈಲಿನಲ್ಲಿ ಈ ಗುರುತು ಇಲ್ಲದಿದ್ದರೆ, ರೈಲಿನಲ್ಲಿ ಏನಾದರೂ ಸಮಸ್ಯೆ ಇದೆ ಅಥವಾ ರೈಲಿನ ಕೆಲವು ಕೋಚ್ ತಪ್ಪಿಹೋಗಿದೆ ಎಂದರ್ಥ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ ರೈಲ್ವೆ(Indian Railway) ದೇಶದ ಜನರ ಜೀವನಾಡಿ.. ಬಸ್ ಗಳನ್ನು(Bus) ಹೊರತುಪಡಿಸಿ ಅತಿ ಹೆಚ್ಚು ಜನರು ಬಳಸುವ ಸಾರ್ವಜನಿಕ ಸಾರಿಗೆಗಳಲ್ಲಿ(Public transport) ಭಾರತೀಯ ರೈಲು(Indian Railway) ಕೂಡ ಒಂದು.. ಪ್ರತಿನಿತ್ಯ ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಬೆಳೆಸುತ್ತಾರೆ.. ವಿಶ್ವದ ನಾಲ್ಕನೇ ಅತ್ಯಂತ ದೊಡ್ಡ ರೈಲ್ವೆ ಜಾಲ ವಾಗಿರುವ ಭಾರತೀಯ ರೈಲ್ವೆಯನ್ನು ಪ್ರತಿದಿನ 13 ಮಿಲಿಯನ್ ಗೂ ಅಧಿಕ ಜನರು ಬಳಸುವ ಮೂಲಕ, ಭಾರತೀಯ ರೈಲು ಜನಸಾಮಾನ್ಯರ ಪಾಲಿಗೆ ಎಷ್ಟು ಮಹತ್ವ ಎಂದು ತಿಳಿಸಿಕೊಟ್ಟಿದ್ದಾರೆ. 60000 ಕಿಲೋಮೀಟರ್ ಉದ್ದದ ರೈಲು ಹಳಿಗಳ ಮೇಲೆ ಪ್ರತಿನಿತ್ಯ 11000 ಅಧಿಕ ರೈಲುಗಳು ಸಂಚಾರ ಮಾಡುತ್ತವೆ..

    ಭಾರತದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಭೌಗೋಳಿಕ ಮೇಲ್ಮೈ ಇರುವುದರಿಂದ ಭಾರತೀಯ ರೈಲುಗಳ ಬಗ್ಗೆ ತಿಳಿದುಕೊಳ್ಳುವ ಮಾಹಿತಿ ಸಾಕಷ್ಟು ಇದೆ.. ಗಲ್ಲು ಭಾರತೀಯ ರೈಲುಗಳ ಬೋಗಿಗಳಲ್ಲಿ ಹಲವಾರು ಅಚ್ಚರಿಯ ಮಾಹಿತಿಗಳಿದ್ದು ಅವುಗಳಲ್ಲಿ ಬರೆಯುವ ಸಂಖ್ಯೆಗಳು ಕೂಡ ನಮ್ಮನ್ನು ಕುತೂಹಲ ಪಡಿಸುತ್ತವೆ.
    ಅದ್ರಲ್ಲೂ ರೈಲಿನ ಕೊನೆಯಲ್ಲಿ ಬರೆದಿರುವ X ಚಿನ್ನೆಯನ್ನು ನಾವು ಎಲ್ಲರೂ ಗಮನಿಸಿರುತ್ತೇವೆ ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.. ಈ ಚಿಹ್ನೆಯ ಅರ್ಥವು ತುಂಬಾ ಆಳವಾಗಿದೆ ಎಂಬುದು ಇಲಿ ವಿಶೇಷ. ಹಾಗಾದರೆ ಬನ್ನಿ ರೈಲಿಗೆ ಸಂಬಂಧಿಸಿದ ಇಂತಹ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಇದನ್ನೂ ಓದಿ: IRCTCಯಿಂದ ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರ ಪ್ರವಾಸ; 14ದಿನಗಳ ಟೂರ್​ ಮಾಹಿತಿ ಇಲ್ಲಿದೆ

    ಭಾರತೀಯ ರೈಲುಗಳ ಮೇಲಿರಲಿದೆ ವಿವಿಧ ಚಿಹ್ನೆಗಳು

    ಭಾರತದಲ್ಲಿ ಸಂಚಾರ ಮಾಡುವ ಪ್ರತಿಯೊಂದು ಪ್ಯಾಸೆಂಜರ್ ರೈಲುಗಳ ಹಿಂಭಾಗದಲ್ಲಿ X  ಚಿಹ್ನೆ ಇದ್ದೇ ಇರುತ್ತದೆ.. ಕೊನೆಯ ಬೋಗಿಯ ಹಿಂಭಾಗದಲ್ಲಿ ದೊಡ್ಡದಾಗಿ ಇರುವ X  ಚಿಹ್ನೆ ಯಾಕೆ ಹಾಕಲಾಗಿದೆ ಎಂಬುದು ಅನೇಕರಿಗೆ ಕುತೂಹಲದ ವಿಷಯವಾಗಿರುತ್ತದೆ. ಅಲ್ಲದೇ ಭಾರತೀಯ ರೈಲ್ವೆ ಇಲಾಖೆ ಗಳ ನಿಯಮಗಳ ಪ್ರಕಾರ ಎಲ್ಲಾ ಪ್ರಯಾಣಿಕ ರೈಲುಗಳು ಕೊನೆಯಲ್ಲಿ ಈ X ಗುರುತು ಹಾಕುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ ಕೊನೆಯ ರೈಲು ಬೋಗಿಗಳ ಮೇಲೆ ಬಿಳಿ ಮತ್ತು ಹಳದಿ ಬಣ್ಣದಿಂದ ಮಾಡಲಾಗಿರುತ್ತದೆ.. ಇನ್ನು ಅನೇಕ ರೈಲುಗಳಲ್ಲಿ LV ) ಅನ್ನು ಸಹ ನೋಡಿರಬೇಕು. ಇದಲ್ಲದೆ, ರೈಲಿನ ಹಿಂಭಾಗದಲ್ಲಿ ಕೆಂಪು ಮಿಟುಕಿಸುವ ದೀಪವೂ ಇರುತ್ತದೆ.

    ಸುರಕ್ಷತೆ ಮತ್ತು ಭದ್ರತೆಯ ಉದ್ದೇಶಕ್ಕಾಗಿ ರೈಲಿನ ಮೇಲೆ ವಿವಿಧ ಚಿನ್ನೆ

    ಇನ್ನು ರೈಲುಗಳ ಕೊನೆಯ ಬೋಗಿಯ ಹಿಂದೆ ಸುರಕ್ಷತೆ ಮತ್ತು ಭದ್ರತೆಯ ಉದ್ದೇಶಕ್ಕಾಗಿ ವಿವಿಧ ರೀತಿಯ ಚಿಹ್ನೆಗಳನ್ನು ಹಾಕಲಾಗಿರುತ್ತದೆ.. ಚಿನ್ನೆಗಳು ಒಂದಲ್ಲ ಹಲವು ಅರ್ಥಗಳನ್ನು ಹೊಂದಿವೆ. ಈ ರೈಲಿನಲ್ಲಿ ಈ ಗುರುತು ಇಲ್ಲದಿದ್ದರೆ, ರೈಲಿನಲ್ಲಿ ಏನಾದರೂ ಸಮಸ್ಯೆ ಇದೆ ಅಥವಾ ರೈಲಿನ ಕೆಲವು ಕೋಚ್ ತಪ್ಪಿಹೋಗಿದೆ ಎಂದರ್ಥ. ಇದು ರೈಲ್ವೆ ಸಿಬ್ಬಂದಿಗೆ ಎಚ್ಚರಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಗುರುತು ಇಲ್ಲದಿದ್ದರೆ ಅಪಘಾತ ಸಂಭವಿಸುವ ಮೊದಲೇ ಅವರು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರಯಾಣಿಕರಾಗಿ ಸುರಕ್ಷಿತವಾಗಿ ಉಳಿಯುವ ಉದ್ದೇಶದಿಂದ, ರೈಲಿನಲ್ಲಿ ಪ್ರಯಾಣಿಸುವ ಮೊದಲು ಕೊನೆಯ ಬೋಗಿಯಲ್ಲಿ ಈ ಗುರುತು ನೋಡಿ ನೀವು ಸಹ ನೆಮ್ಮದಿಯಾಗಿ ಪ್ರಯಾಣಿಸಬಹುದು.

    ಇದನ್ನೂ ಓದಿ: ರೈಲು ಎಷ್ಟು ಮೈಲೇಜ್ ನೀಡುತ್ತೆ ಗೊತ್ತಾ? ಗೊತ್ತಿಲ್ಲಾ ಅಂದ್ರೆ ಇಲ್ಲಿ ಕೇಳಿ…

    LV ಬರೆಯುವುದರ ಅರ್ಥವೇನು?

    LV ಎಂದು ಬರೆಯಲಾದ 'X' ಇರುವ ಬೋಗಿ ಕೂಡ ಇರುತ್ತದೆ. LV ಯ ಪೂರ್ಣ ರೂಪವು 'ಕೊನೆಯ ವಾಹನ' ಅಂದರೆ ಕೊನೆಯ ಕಂಪಾರ್ಟ್ಮೆಂಟ್ ಎಂದರ್ಥ. 'X' ಗುರುತು ಜೊತೆಗೆ, LV ಇದು ರೈಲಿನ ಕೊನೆಯ ಕೋಚ್ ಎಂದು ರೈಲ್ವೆ ಉದ್ಯೋಗಿಗಳಿಗೆ ತಿಳಿಸುತ್ತದೆ. ಯಾವುದೇ ಸಂದರ್ಭದಲ್ಲಿ, ರೈಲಿನ ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿ ಈ ಎರಡರ ಚಿಹ್ನೆಯೂ ಇಲ್ಲದಿದ್ದರೆ, ಅದು ತುರ್ತು ಪರಿಸ್ಥಿತಿ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ, ರೈಲಿನ ಕೊನೆಯ ಕೆಲವು ಬೋಗಿಗಳು ಉಳಿದ ರೈಲಿನಿಂದ ಬೇರ್ಪಡುತ್ತವೆ. ಇದನ್ನು ನೋಡಿದ ರೈಲ್ವೆ ಸಿಬ್ಬಂದಿ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ.
    Published by:ranjumbkgowda1 ranjumbkgowda1
    First published: