Saif - Kareena: ಸೈಫ್ - ಕರೀನಾ ಎರಡನೇ ಮಗನ ಹೆಸರಿನ ಅರ್ಥವೇನು? ಭವಿಷ್ಯದಲ್ಲಿ ಕುಟುಂಬದಿಂದ ದೂರವಾಗ್ತಾನೆ ಎಂದಿದ್ದಾರೆ ಜ್ಯೋತಿಷಿಗಳು !

Saif Kareena: ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿ ತಮ್ಮ ಎರಡನೇ ಮಗನಿಗೆ ಜೇ ಎಂದು ಹೆಸರಿಡ್ತಾರೆ ಎಂದು ತಿಳಿದಿದ್ದೇ ತಡ, ಆಗಲೇ ಮಗುವಿನ ಜಾತಕವನ್ನೇ ತಯಾರಿಸಿದ್ದಾರೆ ಜನ. ಅಷ್ಟೇ ಅಲ್ಲ, ಆ ಹೆಸರಿನ ಆಧಾರಾದ ಮೇಲೆ ಆತನ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನೂ ಲೆಕ್ಕಾ ಹಾಕಿದ್ದಾರೆ ಜ್ಯೋತಿಷಿಗಳು.

ಸೈಫ್ - ಕರೀನಾ ಕುಟುಂಬ

ಸೈಫ್ - ಕರೀನಾ ಕುಟುಂಬ

  • Share this:
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ (Saif Ali Khan and Kareena Kapoor) ದಂಪತಿಗಳಿಗೆ ಎರಡನೇ ಮಗುವಾಗಿದ್ದ ವಿಚಾರ ಎಲ್ಲರಿಗೂ ತಿಳಿದ ವಿಚಾರವೇ.ಆದರೆ ಮಗು ಗಂಡೋ ಹೆಣ್ಣೋ ಮತ್ತೆ ಮಗು ಗಂಡಾದರೆ ಏನು ಹೆಸರಿಟ್ಟಿದ್ದಾರೆ, ಮಗು ಒಂದು ವೇಳೆ ಹೆಣ್ಣು ಮಗುವಾಗಿದ್ದರೆ ಆ ಮಗುವಿನ ಹೆಸರು ಏನು ಇಟ್ಟಿದ್ದಾರೆ ಎಂದು ಅಭಿಮಾನಿಗಳಲ್ಲಿ ಒಂದು ಕುತೂಹಲ ಇದ್ದೆ ಇರುತ್ತೆ.ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಹೌದು ಈ ಕುತೂಹಲಕ್ಕೆ ತೆರೆ ಎಳೆದಿದ್ದು ಕರೀನಾ ತಂದೆ ರಣಧೀರ್ ಕಪೂರ್ ಅವರು. ಸೈಫ್ ಮತ್ತು ಕರೀನಾರ ಎರಡನೇ ಮಗುವಿನ ಹೆಸರು 'ಜೆಹ್' ಎಂದು ಇಡಲಾಗಿದೆ ಎಂದು ಕರೀನಾ ತಂದೆ ಹೇಳಿದ್ದಾರೆ. ಈ ಗಂಡು ಮಗುವು ಫೆಬ್ರುವರಿಯಲ್ಲಿ ಜನಿಸಿದ್ದು, ಮಗುವಿನ ಹೆಸರಿನ ಅರ್ಥ ಏನೆಂದು ತಿಳಿದುಕೊಳ್ಳಲು ನಿಮಗೆ ಕುತೂಹಲ ಇರಬೇಕಲ್ಲ. ಈ ಕುತೂಹಲ ತುಂಬಾ ಸಹಜ, ತಮ್ಮ ನೆಚ್ಚಿನ ನಟ ನಟಿಯರ ಮಕ್ಕಳ ಹೆಸರಿನ ಅರ್ಥ ಏನೆಂದು ತಿಳಿಯಲು ಎಲ್ಲಾ ಅಭಿಮಾನಿಗಳಲ್ಲಿ ಇರುತ್ತದೆ.


ಜೆಹ್ ಹೆಸರಿನ ಅರ್ಥ ಏನು ಗೊತ್ತೇ?

ಜೆಹ್ ಎಂಬ ಹೆಸರು ಪಾರ್ಸಿ ಭಾಷೆಗೆ ಸೇರಿದ್ದು, ಇದರ ಅರ್ಥ ಇಂಗ್ಲೀಷ್‌ನಲ್ಲಿ "ಟು ಕಮ್" ಎಂದು ಮತ್ತು ಹೆಸರು ತುಂಬಾ ಸಕಾರಾತ್ಮಕವಾದ ಮತ್ತು ತುಂಬಾ ಚೆನ್ನಾಗಿರುವ ಹೆಸರಾಗಿದ್ದು, ಇದರ ಒಳ ಅರ್ಥ ಮಗು ತನ್ನ ಕುಟುಂಬಕ್ಕೆ ಮತ್ತು ಪ್ರಪಂಚಕ್ಕೆ ಸಂತೋಷವನ್ನು ತಂದು ಕೊಡುತ್ತದೆ ಎಂದು ಅರ್ಥ ಎಂದು ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞ ಮತ್ತು ಕೈಯಲ್ಲಿರುವಂತಹ ಗೆರೆಗಳನ್ನು ನೋಡಿ ಜ್ಯೋತಿಷ್ಯ ಹೇಳುವಂತಹವರೊಬ್ಬರು ಈ ವಿಷಯವನ್ನು ಹೇಳಿದ್ದಾರೆ.




ಜೆಹ್ ಹೆಸರಿನ ಮಹತ್ವ

ಮಗುವಿನ ಹೆಸರನ್ನು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಒಟ್ಟು ಗೂಡಿಸಿದರೆ ಏಳು ಸಂಖ್ಯೆ ಬರುತ್ತದೆ ಮತ್ತು ಹೀಗೆ ಸಾಮಾನ್ಯವಾಗಿ ಯಾವ ಮಕ್ಕಳ ಹೆಸರನ್ನು ಒಟ್ಟು ಗೂಡಿಸಿದರೆ ನಾಲ್ಕು, ಏಳು ಮತ್ತು ಎಂಟು ಎಂದು ಬರುತ್ತದೆಯೋ ಅಂತಹ ಮಕ್ಕಳು ಸಾಮಾನ್ಯವಾಗಿ ಅಧ್ಯಾತ್ಮದ ಕಡೆಗೆ ವಾಲುವುದು ಹೆಚ್ಚಾಗಿ ಕಂಡು ಬಂದಿರುವಂತಹ ಸಂಗತಿಯಾಗಿದೆ ಎಂದು ಜ್ಯೋತಿಷಿ, ಸಂಖ್ಯಶಾಸ್ತ್ರಜ್ಞ ಮತ್ತು ಕೈಯಲ್ಲಿರುವಂತಹ ಗೆರೆಗಳನ್ನು ನೋಡಿ ಜ್ಯೋತಿಷ್ಯ ಹೇಳುವಂತಹವರೊಬ್ಬರು ಈ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.


ಯಾವ ಹೆಸರಿನ ಒಟ್ಟು ಸಂಖ್ಯೆಯು ಈ ಮೇಲಿನ ಸಂಖ್ಯೆಗೆ ಹೋಲುತ್ತದೆಯೋ ಅಂತಹವರು ಈ ಪ್ರಾಪಂಚಿಕ ಮತ್ತು ಭೌತಿಕವಾದಂತಹ ಜೀವನದಿಂದ ದೂರವಿರುತ್ತಾರೆ. ಮಗುವು ತಾಯಿಯ ಜೊತೆಗೆ ತುಂಬಾ ಭಾವುಕತೆಯ ಸಂಬಂಧವನ್ನು ಹೊಂದಿರುತ್ತದೆ ಮತ್ತು ಈ ಮಕ್ಕಳು ದೊಡ್ಡವರಾದ ಮೇಲೆ ಅನೇಕ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಅಥವಾ ದಾನ ಧರ್ಮದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಎಂದು ಸಹ ಇವರು ಹೇಳುತ್ತಾರೆ.





ಈ ಹೆಸರುಗಳ ಒಟ್ಟು ಸಂಖ್ಯೆಯು ನಾಲ್ಕು, ಏಳು ಮತ್ತು ಎಂಟು ಇದ್ದರೇ, ಮಕ್ಕಳು ತುಂಬಾ ಸಹೃದಯಿ ಮತ್ತು ತುಂಬಾ ಮೃದು ಸ್ವಭಾವವನ್ನು ಹೊಂದಿರುವಂತಹ ಮಕ್ಕಳಾಗಿರುತ್ತಾರೆ ಮತ್ತು ಇವರು ದೊಡ್ಡವರಾದ ನಂತರವೂ ಹೆಚ್ಚು ಕಮ್ಮಿ ಇವರ ಸ್ವಭಾವ ಹೀಗೆ ಇರುತ್ತದೆ ಎಂದು ಸಹ ಹೇಳಿದ್ದಾರೆ.
Published by:Soumya KN
First published: