Good Friday ಎಂದರೇನು? ಇಂದು ಪವಿತ್ರ ದಿನವೇ? ಈಸ್ಟರ್ ದಿನಾಂಕದ ಹೆಸರಿನ ಹಿಂದಿನ ಅರ್ಥ ಹೀಗಿದೆ ನೋಡಿ

Easter: ಕ್ರೈಸ್ತ ಕ್ಯಾಲೆಂಡರ್‌ ಪ್ರಕಾರ ಗುಡ್‌ ಫ್ರೈಡೇ ಈಸ್ಟರ್‌ನ ಪವಿತ್ರ ವಾರದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಇದನ್ನು ಈ ವರ್ಷ ಏಪ್ರಿಲ್‌ 15 ರಂದು ಅಂದರೆ, ಇಂದು ಆಚರಿಸಲಾಗುತ್ತದೆ. ಇನ್ನು, ಗುಡ್‌ ಫ್ರೈಡೇ ಅನ್ನೋ ಹೆಸರಲ್ಲೇ ಶುಕ್ರವಾರವೂ ಇದೆ ಅಲ್ವಾ.. ಅದೇ ರೀತಿ, ಪ್ರತಿ ಬಾರಿ ಇದನ್ನು ಶುಕ್ರವಾರವೇ ಆಚರಿಸಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದು ಗುಡ್‌ ಫ್ರೈಡೇ (Good Friday). ಈ ಹಿನ್ನೆಲೆ ಇಂದು ರಾಜ್ಯ ಸೇರಿ ದೇಶದಲ್ಲಿ ಸರ್ಕಾರಿ ರಜೆ (Govt Holiday). ಈ ಹಿನ್ನೆಲೆ, ಅಬ್ಬಾ ಈ ವಾರ ನಮ್ಮ ವೀಕೆಂಡ್‌ (week end) ದೊಡ್ಡದಾಗಿದೆ, ಬೇಗನೇ ಅರಂಭವಾಗಿದೆ ಎಂದು ಹಲವರು ರಜೆಯ (Holiday) ಮೋಜು ಮಾಡುತ್ತಿರುತ್ತಾರೆ. ಆದರೆ, ಇಂದಿನ ದಿನದ ವಿಶೇಷತೆ ಏನು, ಗುಡ್‌ ಫ್ರೈಡೇ ಯ ಆಚರಣೆಯ ಹಿಂದಿನ ಅರ್ಥವೇನು ಎಂಬುದೇ ಅನೇಕರಿಗೆ ಗೊತ್ತಿರುವುದಿಲ್ಲ. ಬನ್ನಿ, ಗುಡ್‌ ಫ್ರೈಡೇ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ..

  ಕ್ರೈಸ್ತ ಕ್ಯಾಲೆಂಡರ್‌ ಪ್ರಕಾರ ಗುಡ್‌ ಫ್ರೈಡೇ ಈಸ್ಟರ್‌ನ ಪವಿತ್ರ ವಾರದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಇದನ್ನು ಈ ವರ್ಷ ಏಪ್ರಿಲ್‌ 15 ರಂದು ಅಂದರೆ, ಇಂದು ಆಚರಿಸಲಾಗುತ್ತದೆ. ಇನ್ನು, ಗುಡ್‌ ಫ್ರೈಡೇ ಅನ್ನೋ ಹೆಸರಲ್ಲೇ ಶುಕ್ರವಾರವೂ ಇದೆ ಅಲ್ವಾ.. ಅದೇ ರೀತಿ, ಪ್ರತಿ ಬಾರಿ ಇದನ್ನು ಶುಕ್ರವಾರವೇ ಆಚರಿಸಲಾಗುವುದು. ಅಲ್ಲದೆ, ಗುಡ್‌ ಫ್ರೈಡೇ ಯಾವಾಗಲೂ ಈಸ್ಟರ್ ಭಾನುವಾರದ ಎರಡು ದಿನಗಳ ಮೊದಲು ಬರುತ್ತದೆ.

  ಆದರೆ, ಗುಡ್‌ ಫ್ರೈಡೇ ಆಚರಣೆಯ ಹಿಂದಿನ ಕಥೆ ಏನು ಮತ್ತು ಅದನ್ನು "ಶುಭ ಶುಕ್ರವಾರ" ಅಥವಾ ‘’ಗುಡ್‌ ಫ್ರೈಡೇ’’ ಎಂದು ಕರೆಯುವುದು ಏಕೆ ಗೊತ್ತಾ..?

  ಗುಡ್‌ ಫ್ರೈಡೇ ಹಿಂದಿನ ಕ್ರೈಸ್ತರ ಅರ್ಥವೇನು..?

  ಗುಡ್ ಫ್ರೈಡೇ ಪ್ಯಾಶನ್ ಅನ್ನು ನೆನಪಿಸುತ್ತದೆ - ಪ್ಯಾಶನ್‌ ಅಂದರೆ ಕ್ಯಾಲ್ವರಿಯಲ್ಲಿ ಯೇಸು ಕ್ರಿಸ್ತನ ಶಿಲುಬೆಗೇರಿಸಿದ ಬೈಬಲ್‌ನ ಕಥೆ. ಶುಕ್ರವಾರದ ದಿನದಂದೇ ಯೇಸು ಕ್ರಿಸ್ತನ ಮರಣ ದಿನ ಎಂಬುದು ಅವರ ನಂಬಿಕೆ. ಹಾಗೂ, 2 ದಿನಗಳ ಬಳಿಕ ಜೀಸಸ್‌ ಮರುಜನ್ಮ ಪಡೆದು ಪುನರುತ್ಥಾನ ಪಡೆದುಕೊಳ್ಳುತ್ತಾರೆ. ಆ ದಿನವನ್ನು ಈಸ್ಟರ್‌ ಭಾನುವಾರ ಎಂದೂ ಆಚರಿಸಲಾಗುತ್ತದೆ.

  ಯೇಸು ಕ್ರಿಸ್ತನ ಮರಣದ ನಿಖರವಾದ ದಿನಾಂಕವು ಹೆಚ್ಚು ಚರ್ಚೆಯ ಮೂಲವಾಗಿದ್ದರೂ, ಬೈಬಲ್‌ನ ವಿದ್ವಾಂಸರು ಇದು 30-33AD ನಡುವೆ ಶುಕ್ರವಾರದಂದು ಅಥವಾ ಪಾಸ್ಓವರ್‌ಗೆ ಸಮೀಪದಲ್ಲಿ ಬಂದಿತು ಎಂದು ಒಪ್ಪಿಕೊಳ್ಳುತ್ತಾರೆ.

  ಬೈಬಲ್ ಪ್ರಕಾರ, ಜೀಸಸ್ ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು (ಲಾಸ್ಟ್‌ ಸಪ್ಪರ್‌) ಹಂಚಿಕೊಂಡರು, ಅದನ್ನು ಈಗ ಮಾಂಡಿ ಗುರುವಾರ ಎಂದು ಗುರುತಿಸಲಾಗಿದೆ.

  ಇದನ್ನೂ ಓದಿ: Black Thread: ಕಪ್ಪು ದಾರ ಕಟ್ಟಿಕೊಳ್ಳುವುದು ಯಾವ ರಾಶಿಯವರಿಗೆ ಒಳ್ಳೆಯದು? ಯಾರಿಗೆ ದುರಾದೃಷ್ಟ?

  ನಂತರ ಯೇಸು ಕ್ರಿಸ್ತನ ಅನುಯಾಯಿ ಜುದಾಸ್ ಇಸ್ಕರಿಯೊಟ್‌ ಜೀಸಸ್‌ಗೆ ದ್ರೋಹ ಬಗೆಯುತ್ತಾರೆ. 30 ಬೆಳ್ಳಿಯ ತುಂಡುಗಳಿಗೆ ಪ್ರತಿಯಾಗಿ ರೋಮನ್ ಸೈನಿಕರಿಗೆ ಯೇಸು ಕ್ರಿಸ್ತ ಇರುವ ಸ್ಥಳವನ್ನು ಆತ ಬಹಿರಂಗಪಡಿಸುತ್ತಾನೆ.

  ಹೊಸ ಒಡಂಬಡಿಕೆಯ ನಾಲ್ಕು ಕ್ಯಾನೋನಿಕಲ್‌ ಗಾಸ್ಪೆಲ್‌ಗಳಾದ ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಮತ್ತು ಜಾನ್ ಎಲ್ಲವೂ ಯೇಸುವಿನ ಬಂಧನದಿಂದ ಅವರ ಅಂತಿಮ ಮರಣದವರೆಗಿನ ವಿವರವಾದ ಖಾತೆಯೊಂದಿಗೆ ಮುಕ್ತಾಯಗೊಳ್ಳುತ್ತವೆ.

  ಯೆಹೂದಿಯ ರೋಮನ್ ಗವರ್ನರ್ ಪಾಂಟಿಯಸ್ ಪಿಲೇಟ್ ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆಗೆ ಮುನ್ನ ಯೇಸು ಕ್ರಿಸ್ತನು ಮೊದಲು ಸನ್‌ಹೆಡ್ರಿನ್‌ನ ಯಹೂದಿ ನ್ಯಾಯಾಂಗ ಸಂಸ್ಥೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಾರೆ.

  ಯೇಸು ಕ್ರಿಸ್ತನನ್ನು ದೇವರ ಮಗ ಎಂಬ ಧರ್ಮನಿಂದೆಯ ಹೇಳಿಕೆಗೆ ಅವರನ್ನು ತಪ್ಪಿತಸ್ಥನೆಂದು ಯಹೂದಿ ಅಧಿಕಾರಿಗಳು ಕಂಡುಕೊಂಡರೂ, ಅವರ ಅಪರಾಧಗಳು ಮರಣದಂಡನೆಗೆ ಅರ್ಹವೆಂದು ಪಿಲೇಟ್‌ಗೆ ಮನವರಿಕೆಯಾಗಲಿಲ್ಲ.

  ಇದನ್ನೂ ಓದಿ:  Relationship Tips: ಹುಡುಗರು ಅಪ್ಪಿ ತಪ್ಪಿಯೂ ಈ ವಿಷಯಗಳನ್ನು ಹುಡುಗಿಯರಿಗೆ ಹೇಳಬಾರದಂತೆ!

  ಆದರೂ, ಜನಸಮೂಹದಿಂದ ಪ್ರಭಾವಿತನಾದ ರೋಮನ್‌ ನಾಯಕ ಪಿಲೇಟ್‌, ಜೀಸಸ್‌ನನ್ನು ಶಿಲುಬೆಗೇರಿಸಲು ಒಪ್ಪಿಸುತ್ತಾನೆ.

  ಜೆರುಸಲೇಮ್‌ನ ಹೊರಗಿನ ಕ್ಯಾಲ್ವರಿಯಲ್ಲಿ ಶಿಲುಬೆಯಲ್ಲಿ ಸಾಯಲು ಯೇಸು ಆರು ಗಂಟೆಗಳನ್ನು ತೆಗೆದುಕೊಂಡರು ಎಂದು ಬೈಬಲ್ ಹೇಳುತ್ತದೆ: “ನನ್ನ ದೇವರೇ, ನನ್ನ ದೇವರೇ, ನೀನು ನನ್ನನ್ನು ಏಕೆ ಕೈಬಿಟ್ಟೆ..?” ಎಂಬ ಪ್ರಸಿದ್ಧ ಪದಗಳೊಂದಿಗೆ ತನ್ನ ಜೀವನವನ್ನು ಕೊನೆಗೊಳಿಸಿದರಂತೆ.

  'ಗುಡ್‌ ಫ್ರೈಡೇ' ಎಂದು ಏಕೆ ಕರೆಯುತ್ತಾರೆ..?

  ಯೇಸುವಿನ ಮರಣವನ್ನು ಕ್ರೈಸ್ತರು ಈಸ್ಟರ್‌ನ ಪವಿತ್ರ ವಾರದ ಭಾಗವಾಗಿ ಕನಿಷ್ಠ ನಾಲ್ಕನೇ ಶತಮಾನದಷ್ಟು ಹಿಂದೆಯೇ ಸ್ಮರಿಸುತ್ತಾರೆ ಎಂದು ಭಾವಿಸಲಾಗಿದೆ.

  ಅಲ್ಲದೆ, ಮರಣದಂತಹ ಗಂಭೀರವಾದ ವಿಷಯವನ್ನು ಗುಡ್‌ ಫ್ರೈಡೇ ಎಂಬ ಲವಲವಿಕೆಯ ಹೆಸರಿನೊಂದಿಗೆ ಆಚರಣೆಯನ್ನು 13ನೇ ಶತಮಾನದ ಉತ್ತರಾರ್ಧದಲ್ಲಿ ಜಾರಿಗೆ ತರಲಾಯಿತು ಎನ್ನಲಾಗಿದೆ.

  ಆದರೂ, ಈ ಹೆಸರಿನ ಬಗ್ಗೆ ಈಗಲೂ ಸಹ ಕೆಲವು ವಿವಾದಗಳಿವೆ. ಕೆಲವರು ಇದನ್ನು ‘’ದೇವರ ಶುಕ್ರವಾರ’’ ಅಂದರೆ ‘’God’s Friday’’ ಎನ್ನುತ್ತಾರೆ. ಹಾಗೂ, ‘’God’s Friday’’ ಹೋಗಿ ‘’Good Friday’’ ಆಯಿತು ಎಂದು ಸೂಚಿಸುತ್ತಾರೆ. ಮತ್ತು ಇತರ ತಜ್ಞರು ‘’Good’’ ಎಂಬ ವಿಶೇಷಣವನ್ನು ಚರ್ಚ್ ಆಚರಿಸುವ ಯಾವುದೇ ಪವಿತ್ರ ದಿನವನ್ನು ಸೂಚಿಸಲು ಸರಳವಾಗಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

  ಆದರೆ ಕ್ರೈಸ್ತರಲ್ಲದವರಿಗೆ, ಇದನ್ನು ಒಳ್ಳೆಯ ದಿನವೆಂದು ಏಕೆ ಪರಿಗಣಿಸಬಹುದು ಎಂಬುದರಲ್ಲಿ ಸಂದೇಹವಿಲ್ಲ: ಯಾಕೆಂದರೆ ಇದು ಲಾಂಗ್‌ ವೀಕೆಂಡ್‌ನ ಆರಂಭವಾಗಿದೆ.

  ಇದನ್ನು ಭಾರತ, ಯುಕೆ ಸೇರಿ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಸರ್ಕಾರಿ ಹಾಗೂ ಬ್ಯಾಂಕ್‌ ರಜಾ ದಿನವೆಂದು ಪರಿಗಣಿಸಲಾಗಿದೆ.
  Published by:Harshith AS
  First published: