• Home
  • »
  • News
  • »
  • trend
  • »
  • Success: ಜೀವನದ ನಿಜವಾದ ಸಕ್ಸಸ್ ಯಾವುದು? ಈ ವಿಡಿಯೋ ನೋಡಿ ಗೊತ್ತಾಗುತ್ತೆ

Success: ಜೀವನದ ನಿಜವಾದ ಸಕ್ಸಸ್ ಯಾವುದು? ಈ ವಿಡಿಯೋ ನೋಡಿ ಗೊತ್ತಾಗುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಒಬ್ಬರಿಗೆ ಎಲ್ಲರೆದುರು ಗುರುತಿಸಿಕೊಳ್ಳುವುದೇ ಯಶಸ್ಸಾದರೆ ಮತ್ತೊಬ್ಬರಿಗೇ ತಮ್ಮದೆನ್ನುವ ಪುಟ್ಟ ಪ್ರಪಂಚದಲ್ಲಿ ಬದುಕುವುದೇ ದೊಡ್ಡ ಸಕ್ಸಸ್.‌ ಹಾಗೆಯೇ ಯಶಸ್ಸಿನ ಮಜಲುಗಳನ್ನು ವಿವರಿಸುವ ಪುಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದನ್ನು ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಅವರು ಹಂಚಿಕೊಂಡಿರುವ ಒಂದು ಪೋಸ್ಟ್‌ ಯಶಸ್ಸಿನ ಕುರಿತದ್ದಾಗಿದೆ.

ಮುಂದೆ ಓದಿ ...
  • Share this:

ಯಶಸ್ಸನ್ನು (Success) ಎಲ್ಲರೂ ಅವರವರ ಭಾವಕ್ಕೆ ಅರ್ಥೈಸಿಕೊಳ್ತಾರೆ. ಒಬ್ಬರಿಗೆ ಹಣ ಗಳಿಸುವುದೇ ಜೀವನದ ಯಶಸ್ಸಾದರೆ ಮತ್ತೊಬ್ಬರಿಗೆ ನೆಮ್ಮದಿಯಾಗಿ ಬದುಕುವುದೇ ಯಶಸ್ಸು. ಒಬ್ಬರಿಗೆ ಎಲ್ಲರೆದುರು ಗುರುತಿಸಿಕೊಳ್ಳುವುದೇ ಯಶಸ್ಸಾದರೆ ಮತ್ತೊಬ್ಬರಿಗೇ ತಮ್ಮದೆನ್ನುವ ಪುಟ್ಟ ಪ್ರಪಂಚದಲ್ಲಿ (World) ಬದುಕುವುದೇ ದೊಡ್ಡ ಸಕ್ಸಸ್.‌ ಹಾಗೆಯೇ ಯಶಸ್ಸಿನ ಮಜಲುಗಳನ್ನು ವಿವರಿಸುವ ಪುಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ. ಅದನ್ನು ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಅವರು ಹಂಚಿಕೊಂಡಿರುವ ಒಂದು ಪೋಸ್ಟ್‌ ಯಶಸ್ಸಿನ ಕುರಿತದ್ದಾಗಿದೆ. ಈ ಪೋಸ್ಟ್‌ನಲ್ಲಿ ಶರಣ್ ಅವರು ಜೀವನದ ವಿವಿಧ ಹಂತಗಳಲ್ಲಿ ಯಶಸ್ಸಿನ ಅರ್ಥವನ್ನು ಹೇಳುವಂಥ ವೀಡಿಯೊವನ್ನು ಹಂಚಿಕೊಂಡಿದ್ದಾರೆ.


ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ?
ತಮ್ಮ ವಿಡಿಯೋಕ್ಕೆ "ಯಶಸ್ಸು," ಅನ್ನೋ ಕ್ಯಾಪ್ಶನ್‌ ಕೊಟ್ಟಿರುವ ಅವನೀಶ್‌ ಶರಣ್ ಅವರು ಈ ಸೋಮವಾರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ 140-ಸೆಕೆಂಡ್‌ಗಳ ಕ್ಲಿಪ್ ಆಗಿದ್ದು, ಶಿಶುವಿನ ಒಂದು ವರ್ಷದ ವಯಸ್ಸಿನಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿ ಶಿಶುವಿನ ಅತ್ಯುತ್ತಮ ಯಶಸ್ಸು ಯಾರ ಸಹಾಯವೂ ಇಲ್ಲದೇ ಸ್ವತಂತ್ರವಾಗಿ ನಡೆಯುವುದಾಗಿರುತ್ತೆ. 4 ನೇ ವರ್ಷ ವಯಸ್ಸಿನಲ್ಲಿ ಸಾಧನೆ ಎಂದರೆ ಪ್ಯಾಂಟ್‌ ಒದ್ದೆ ಮಾಡಿಕೊಳ್ಳದೇ ಇರೋದು. 8 ನೇ ವರ್ಷದಲ್ಲಿ ಸಕ್ಸಸ್‌ ಎಂದರೆ ಮನೆಯ ದಾರಿ ನೆನಪಿಟ್ಟುಕೊಳ್ಳುವುದು.12 ನೇ ವಯಸ್ಸಿನಲ್ಲಿ ಯಶಸ್ಸೆಂದರೆ ಸ್ನೇಹಿತರನ್ನು ಹೊಂದುವುದು. 18 ನೇ ವಯಸ್ಸಿನಲ್ಲಿ ಯಶಸ್ಸೆಂದರೆ ಡ್ರೈವಿಂಗ್‌ ಲೈಸೆನ್ಸ್‌ ಹೊಂದುವುದು.


23 ನೇ ವಯಸ್ಸಿನ ಯಶಸ್ಸು, ಯುನಿವರ್ಸಿಟಿಯಲ್ಲಿ ಗ್ರಾಜುಯೇಟ್‌ ಆಗುವುದು. 25 ನೇ ವಯಸ್ಸಿನಲ್ಲಿ ದುಡಿಯಲು ಶುರು ಮಾಡುವುದು ಯಶಸ್ಸು. 30 ನೇ ವರ್ಷದ ಸಕ್ಸಸ್‌ ಫ್ಯಾಮಿಲಿ ಮ್ಯಾನ್‌ ಆಗುವುದು. 35 ವರ್ಷ ವಯಸ್ಸಿಗೆ ಹಣ ಗಳಿಸೋದು ಸಕ್ಸಸ್.‌


ಇದನ್ನೂ ಓದಿ:  Viral Video: 3 ವರ್ಷದ ಪುಟ್ಟ ಮಗುವಿಗೆ ಐಬ್ರೋ ಮಾಡಿದ ತಾಯಿ, ವೈರಲ್ ಆಯ್ತು ವಿಡಿಯೋ


ವಿಡಿಯೋ ಹೀಗೆಯೇ ಸಾಗಿ ಬದುಕಿನ ಕೊನೆಯ ಯಶಸ್ಸು ಯಾವುದು ಎನ್ನುವುದನ್ನು ಹೇಳುವ ಪ್ರಯತ್ನ ಮಾಡುತ್ತವೆ. ಇದರಲ್ಲಿ ಯಶಸ್ಸಿನ ಅರ್ಥವು ವ್ಯಕ್ತಿಯ ವಯಸ್ಸಿನೊಂದಿಗೆ ಬದಲಾಗುತ್ತದೆ. ಜೀವನದ ಕೊನೆಯ ಹಂತಗಳು ಪ್ರಾರಂಭವಾದಾಗ, ಅದು ಕ್ರಮವಾಗಿ ಆರಂಭಿಕ ವಯಸ್ಸಿನೊಂದಿಗೆ ಹೋಲುತ್ತದೆ. ಈ ವೀಡಿಯೋ ಕ್ಲಿಪ್ ಬಾಲ್ಯ ಮತ್ತು ಪ್ರೌಢಾವಸ್ಥೆಯ ಕೊನೆಯಲ್ಲಿ ಹೇಗೆ ಗಮನಾರ್ಹ ಸಮಾನಾಂತರಗಳನ್ನು ಹೊಂದಿದೆ ಎಂಬುದನ್ನು ಅದ್ಭುತವಾಗಿ ತೋರಿಸುತ್ತದೆ.


ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಕಾಮೆಂಟ್ಸ್!
ಬದುಕಿನ ಬಗ್ಗೆ ಚಿಂತನೆ ಮಾಡುವಂತೆ ಪ್ರೇರೇಪಿಸುವ ಶರಣ್ ಅವರ ವೀಡಿಯೊ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಸದ್ಯ ಈ ವಿಡಿಯೋ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 25,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಪೋಸ್ಟ್ ಅನ್ನು 6000 ಕ್ಕೂ ಹೆಚ್ಚು ಬಾರಿ ರಿ ಟ್ವೀಟ್‌ ಮಾಡಲಾಗಿದೆ.


ಪೋಸ್ಟ್‌ನ ಕಾಮೆಂಟ್ ‌ ಹಲವಾರು ಬಳಕೆದಾರರು ಹೃದಯಸ್ಪರ್ಶಿ ಕಾಮೆಂಟ್‌ ಗಳನ್ನು ಮಾಡಿದ್ದಾರೆ. . ಒಬ್ಬ ಟ್ವಿಟ್ಟರ್‌ ಬಳಕೆದಾರರು "ಎಷ್ಟು ನಿಜ! ನಾನು ಈ ಎಲ್ಲಾ ಯಶಸ್ಸನ್ನು ಬಯಸುತ್ತೇನೆ” ಎಂದಿದ್ದಾರೆ. ಇನ್ನೊಬ್ಬರು, “ನಿಜ ಸರ್ ಮತ್ತು ಅದ್ಭುತವಾಗಿ ವಿವರಿಸಿದ್ದೀರಿ. ನನ್ನ ತಂದೆಯ ವಯಸ್ಸು 86 ವರ್ಷಗಳು. ಚೆನ್ನಾಗಿರಿ ಡ್ಯಾಡ್ ಎಂದಿದ್ದಾರೆ. ಮತ್ತೊಬ್ಬರು ನಿಜ, ಆದರೆ ದುಃಖದ ವಿಷಯವೆಂದರೆ ಸಮಯದ ಜೊತೆಗೆ ಪ್ರತಿಯೊಬ್ಬರೂ ಈ ಸತ್ಯವನ್ನು ಮರೆತುಬಿಡುತ್ತಾರೆ," ಎಂದಿದ್ದಾರೆ.


ಇದನ್ನೂ ಓದಿ:  Viral Video: ಈ ನಾಯಿ ಬೈಕ್ ಸವಾರಿಯನ್ನು ಹೇಗೆ ಆನಂದಿಸುತ್ತಿದೆ ನೋಡಿ! ನೆಟ್ಟಿಗರು ಫುಲ್ ಖುಷ್


ಒಟ್ಟಾರೆ, ಬದುಕಿನ ವಿವಿಧ ಹಂತಗಳಲ್ಲಿ ಯಶಸ್ಸನ್ನು ವಿಡಿಯೋದಲ್ಲಿ ಅದ್ಭುತವಾಗಿ ಹೇಳಲಾಗಿದೆ. ಇದನ್ನು ನೋಡಿದ ಮೇಲೆ ಮನಸ್ಸು ಒಮ್ಮೆ ಚಿಂತನೆಯಲ್ಲಿ ತೊಡಗದೇ ಇರೋಕೆ ಸಾಧ್ಯವೇ ಇಲ್ಲ.

Published by:Ashwini Prabhu
First published: