ಏಪ್ರಿಲ್ 20 (April 20) ರಂದು ಸಂಭವಿಸಲಿರುವ ಹೈಬ್ರಿಡ್ ಸೂರ್ಯಗ್ರಹಣ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಈ ಸಮಯದಲ್ಲಿ ಚಂದ್ರನು ಭೂಮಿಯ ಕಡೆಗೆ ಬರುವ ಸೂರ್ಯನ ಬೆಳಕನ್ನು ನಿರ್ಬಂಧಿಸುತ್ತಾನೆ ಎಂಬುದಾಗಿ ಶಾಸ್ತ್ರಜ್ಞರು ತಿಳಿಸಿದ್ದಾರೆ. ಅತ್ಯಂತ ಅಪರೂಪದ ವಿದ್ಯಮಾನವಾಗಿರುವ ಹೈಬ್ರಿಡ್ ಸೌರಗ್ರಹಣವನ್ನು ಪ್ರಪಂಚದ ಕೆಲವು ಭಾಗಗಳಲ್ಲಿ ಮಾತ್ರ ವೀಕ್ಷಿಸಲು ಸಾಧ್ಯವಾಗುತ್ತದೆ ಎಂಬುದು ವಿಶೇಷವಾಗಿದೆ. ಹೈಬ್ರಿಡ್ ಸೌರ ಗ್ರಹಣವು ಚಂದ್ರನ ನೆರಳನ್ನು ಆವರಿಸಿರುವ ಎಲ್ಲಾ ಮೂರು ಪ್ರದೇಶಗಳನ್ನು ಒಳಗೊಂಡಿರುತ್ತದೆ. ಅಂಬ್ರಾ (ಚಂದ್ರನ ನೆರಳಿನ ಗಾಢವಾದ ಭಾಗ), ಪೆನಂಬ್ರಾ ಮತ್ತು ಆಂಟಂಬ್ರಾ (ಅಂಬ್ರಾ ಕೊನೆಗೊಳ್ಳುವ ಅರ್ಧ ನೆರಳು), ಮತ್ತು ನಂತರ ಎಲ್ಲಾ ಮೂರು ರೀತಿಯ ಸೌರ ಗ್ರಹಣಗಳನ್ನು ಸಂಯೋಜಿಸುತ್ತದೆ.
ಹೈಬ್ರಿಡ್ ಗ್ರಹಣವು ಭೂಮಿಯು ಚಂದ್ರನ ಅಂಬ್ರಾ (ಚಂದ್ರನ ನೆರಳಿನ ಗಾಢವಾದ ಭಾಗ) ಅದರ ಆಂಟಂಬ್ರಾವನ್ನು ಸಂಧಿಸುವ ಪ್ರದೇಶದ ಮೂಲಕ ಚಲಿಸಿದಾಗ ಸಂಭವಿಸುತ್ತದೆ, ಇದು ಅಂಬ್ರಾ ಕೊನೆಗೊಳ್ಳುವ ಅರ್ಧ ನೆರಳಿನ ಭಾಗವಾಗಿದೆ.
ಸೌರ ಗ್ರಹಣ ಎಂದರೇನು? ಏನಿದರ ವಿಶೇಷತೆ?
ಸೂರ್ಯಗ್ರಹಣವು ಒಂದು ಖಗೋಳ ವಿದ್ಯಮಾನವಾಗಿದ್ದು, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ, ಸೂರ್ಯನ ಬೆಳಕು ಭೂಮಿಯನ್ನು ತಲುಪದಂತೆ ತಡೆಯುತ್ತದೆ. ಈ ಸಮಯದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ ಅಂತೆಯೇ ಸುತ್ತಮುತ್ತಲಿನ ಪ್ರಪಂಚದ ಕೆಲವು ಭಾಗಗಳಲ್ಲಿ ತಾತ್ಕಾಲಿಕ ಕತ್ತಲೆಯನ್ನು ಸೃಷ್ಟಿಸುತ್ತದೆ.
ಮೂರು ವಿಧದ ಸೂರ್ಯಗ್ರಹಣ ಯಾವುವು? ಒಂದಕ್ಕಿಂತ ಒಂದು ವಿಶೇಷವಾದುದು ಏಕೆ?
ಮೂರು ವಿಧದ ಸೂರ್ಯಗ್ರಹಣಗಳಿವೆ ಒಂದು ಪೂರ್ಣ ಪ್ರಮಾಣ ಸೂರ್ಯಗ್ರಹಣ, ಇನ್ನೊಂದು ಭಾಗಶಃ ಸೂರ್ಯಗ್ರಹಣ ಹಾಗೂ ವಾರ್ಷಿಕ ಸೂರ್ಯಗ್ರಹಣ. ಸಂಪೂರ್ಣ ಸೂರ್ಯಗ್ರಹಣದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತಾನೆ ಮತ್ತು ಸೂರ್ಯನ ಹೊರಗಿನ ವಾತಾವರಣವು ತೆಳುವಾದ ಪದರದಂತೆ ಕಾಣುತ್ತದೆ.
ಇದನ್ನೂ ಓದಿ: ಈ ಮೀನುಗಳ ಬೆಲೆ 25 ಲಕ್ಷದಿಂದ 1 ಕೋಟಿ ರೂಪಾಯಿ! ಜನಸಾಮ್ಯಾನರ ಹೊಟ್ಟೆ ಸೇರಲ್ಲ ಬಿಡಿ ಈ ಫಿಶ್!
ಭಾಗಶಃ ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಭಾಗಶಃ ಮಾತ್ರ ಆವರಿಸುತ್ತಾನೆ ಮತ್ತು ಸೂರ್ಯನ ಬೆಳಕಿನ ಒಂದು ಭಾಗವು ಇನ್ನೂ ಗೋಚರಿಸುತ್ತದೆ. ವಾರ್ಷಿಕ ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನಿಗಿಂತ ಚಿಕ್ಕದಾಗಿ ಕಾಣಿಸುತ್ತಾನೆ ಮತ್ತು ಸೂರ್ಯನ ಬೆಳಕಿನ ಉಂಗುರವು ಚಂದ್ರನ ಸುತ್ತಲೂ ಗೋಚರಿಸುತ್ತದೆ.
ಹೈಬ್ರಿಡ್ ಸೌರ ಗ್ರಹಣ ಎಂದರೇನು? ಏನಿದರ ಮಹತ್ವ
ಏಪ್ರಿಲ್ 20 ರಂದು ಗುರುವಾರ ನಡೆಯಲಿರುವ ಸೂರ್ಯಗ್ರಹಣ ಹೈಬ್ರಿಡ್ ಸೂರ್ಯಗ್ರಹಣವಾಗಿದ್ದು, ಇದೊಂದು ಅಪರೂಪದ ವಿದ್ಯಮಾನವಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ಬಣ್ಣಿಸಿದ್ದಾರೆ. ಇದು ವಾರ್ಷಿಕ ಸೂರ್ಯಗ್ರಹಣ ಅಥವಾ ಸೂರ್ಯಗ್ರಹಣವನ್ನು ವೀಕ್ಷಿಸುವ ಸ್ಥಳವನ್ನು ಅವಲಂಬಿಸಿ ಸಂಪೂರ್ಣ ಸೂರ್ಯಗ್ರಹಣದಂತೆ ಕಾಣುತ್ತದೆ.
ಇದನ್ನೂ ಓದಿ: ಪ್ರತಿದಿನ ಒಂದು ಕಿವಿ ಹಣ್ಣು ತಿಂದ್ರೆ ಸಾವಿರ ಆರೋಗ್ಯ ಸಮಸ್ಯೆಗೆ ಮುಕ್ತಿ ಸಿಗುತ್ತೆ
ಸಮಯ ಮತ್ತು ದಿನಾಂಕದ ಪ್ರಕಾರ, ಹೈಬ್ರಿಡ್ ಸೂರ್ಯಗ್ರಹಣದ ಸಮಯದಲ್ಲಿ, ಭೂಮಿಯ ವಕ್ರತೆಯು ಗ್ರಹಣದ ಹಾದಿಯ ಕೆಲವು ವಿಭಾಗಗಳನ್ನು ಚಂದ್ರನ ನೆರಳಿನ ಗಾಢವಾದ ಭಾಗಕ್ಕೆ ತರುತ್ತದೆ ಹಾಗಾಗಿ ನೆರಳಿನ ಕಪ್ಪಗಿನ ಭಾಗವು ಸಂಪೂರ್ಣ ಸೂರ್ಯಗ್ರಹಣವನ್ನು ಸೃಷ್ಟಿಸುತ್ತದೆ ಆದರೆ ಇತರ ಪ್ರದೇಶಗಳು ನೆರಳಿನ ಭಾಗದಿಂದ ಹೊರಗುಳಿಯುತ್ತವೆ ಹಾಗೂ ಇದರಿಂದ ವೃತ್ತಾಕಾರದ ಗ್ರಹಣ ಸಂಭವಿಸುತ್ತದೆ.
18 ತಿಂಗಳಿಗೊಮ್ಮೆ ಮಾತ್ರ ಸೌರಗ್ರಹಣ ಸಂಭವಿಸುತ್ತದೆ
18 ತಿಂಗಳಿಗೊಮ್ಮೆ ಮಾತ್ರ ಸೌರಗ್ರಹಣಗಳು ಸಂಭವಿಸುವುದರಿಂದ ಇವು ಅಪರೂಪದ ವಿದ್ಯಮಾನ ಎಂದೆನಿಸಿವೆ. ಇನ್ನು ಸೌರಗ್ರಹಣವನನ್ನು ಪ್ರಪಂಚದ ಕೆಲವು ಭಾಗಗಳಿಂದ ಮಾತ್ರ ವೀಕ್ಷಿಸಬಹುದಾಗಿದೆ ಅಂತೆಯೇ ಗ್ರಹಣವು ಗೋಚರಿಸುವ ಪ್ರದೇಶಗಳು ಬೇರೆ ಬೇರೆ ರೀತಿಯ ಕತ್ತಲೆಯಿಂದ ಆವರಿಸಿಕೊಂಡಿರುತ್ತವೆ.
ಕೌತುಕ ವಿಷಯ
ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಇನ್ನೊಂದು ಕೌತುಕಮಯವಾದ ಸುದ್ದಿ ಎಂದರೆ ಇದು ಏಕಾಂಗಿಯಾಗಿ ಸಂಭವಿಸುವ ವಿದ್ಯಮಾನವಲ್ಲ. ಸರ್ಯಗ್ರಹಣ ಸಂಭವಿಸುವುದಕ್ಕೂ ಕೆಲವು ವಾರಗಳ ಮೊದಲು ಅಥವಾ ಗ್ರಹಣ ಸಂಭವಿಸಿದ ನಂತರ ಉಂಟಾಗುವ ಚಂದ್ರಗಹಣದ ಜೊತೆ ಜೊತೆಗೆ ಸೌರಗ್ರಹಣ ಕಂಡುಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ