Black Water: ಸೆಲಬ್ರಿಟಿಗಳೆಲ್ಲಾ ಕಪ್ಪು ನೀರನ್ನೇ ಕುಡಿಯೋದಂತೆ ! ಏನಿದು ಬ್ಲಾಕ್ ವಾಟರ್, ಇದರ ಪ್ರಯೋಜನಗಳೇನು?

ಮಲೈಕಾ ಅರೋರಾ (Malaika Arora), ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli), ಶೃತಿ ಹಾಸನ್ (Shruthi Hassan) ಸೇರಿದಂತೆ ಅನೇಕ ಖ್ಯಾತನಾಮರು ಈಗ ಈ ಕಪ್ಪು ನೀರನ್ನೇ ಕುಡಿಯೋದಂತೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್? ಎಲ್ಲಿ ಸಿಗುತ್ತೆ? ಇದ್ರಿಂದ ಏನು ಪ್ರಯೋಜನ? ಫುಲ್ ಡೀಟೆಲ್ಸ್ ಇಲ್ಲಿದೆ.

ಮಲೈಕಾ ಅರೋರ

ಮಲೈಕಾ ಅರೋರ

  • Share this:
Healthy Habit: ಆರೋಗ್ಯಕ್ಕೆ ಒಳ್ಳೆದು, ಇದ್ರಿಂದ ಸಿಕ್ಕಾಪಟ್ಟೆ ಪ್ರಯೋಜನ ಇದೆ ಅಂತ ಆದ್ರೆ ಅದನ್ನು ಮೊದಲು ಶುರು ಮಾಡೋದು ನಮ್ಮ ಸೆಲಬ್ರಿಟಿಗಳು. ಹೊಸಾ ಬಗೆ ಡಯೆಟ್ ಇರ್ಲಿ, ಕಂಡು ಕೇಳರಿಯದ ಆಹಾರ ಪದ್ಧತಿ ಇರ್ಲಿ ಅವ್ರು ಅದೆಲ್ಲಿಂದಲೋ ತಿಳಿದುಕೊಂಡು ಫಾಲೋ ಮಾಡೋಕೆ ಶುರು ಮಾಡ್ತಾರೆ. ತಮ್ಮ ನೆಚ್ಚಿನ ತಾರೆಯರು ಏನೋ ಮಾಡ್ತಿದ್ದಾರೆ ಅಂದ್ರೆ ಜನ ಸುಮ್ನೆ ಇರ್ತಾರಾ? ತಾವೂ ಇದನ್ನ ಟ್ರೈ ಮಾಡೋಣ ಅಂತ ಅವ್ರೂ ಹೊರಟುಬಿಡ್ತಾರೆ. ಇಷ್ಟೆಲ್ಲಾ ಪೀಠಿಕೆ ಹಾಕ್ತಾ ಇರೋದು ಬ್ಲಾಕ್ ವಾಟರ್ ಅಥವಾ ಬ್ಲಾಕ್ ಆಲ್ಕಲೈನ್ ವಾಟರ್ ಎನ್ನುವ ವಿಶೇಷ ನೀರಿನ ಬಗ್ಗೆ. ಮಲೈಕಾ ಅರೋರಾ (Malaika Arora), ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli), ಶೃತಿ ಹಾಸನ್ (Shruthi Hassan) ಸೇರಿದಂತೆ ಅನೇಕ ಖ್ಯಾತನಾಮರು ಈಗ ಈ ಕಪ್ಪು ನೀರನ್ನೇ ಕುಡಿಯೋದಂತೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್? ಎಲ್ಲಿ ಸಿಗುತ್ತೆ? ಇದ್ರಿಂದ ಏನು ಪ್ರಯೋಜನ? ಫುಲ್ ಡೀಟೆಲ್ಸ್ ಇಲ್ಲಿದೆ.

ಇತ್ತೀಚೆಗೆ ನಟಿ ಮತ್ತು ಫಿಟ್ನೆಸ್ ಎಕ್ಸ್​ಪರ್ಟ್ ಮಲೈಕಾ ಅರೋರಾ ತಮ್ಮ ರೆಗ್ಯುಲರ್ ವರ್ಕೌಟ್ ಗಾಗಿ ಹೋಗುತ್ತಿದ್ದಾಗ ಛಾಯಾಗ್ರಹಕರ ಕಣ್ಣಿಗೆ ಬಿದ್ದಿದ್ದಾರೆ. ನಗುತ್ತಾ ಒಂದೆರಡು ಕ್ಷಣ ನಿಂತು ಪೋಸ್ ಕೂಡಾ ಕೊಟ್ಟಿದ್ದಾರೆ. ಬಿಳಿ ಬಣ್ಣದ ಶಾರ್ಟ್ಸ್ ಮತ್ತು ಕಪ್ಪು ಕ್ರಾಪ್ ಟಾಪ್ ಧರಿಸಿದ್ದ ಮಲೈಕಾ ಎಂದಿನಂತೆ ಸೂಪರ್ ಹಾಟ್ ಆಗಿ ಕಾಣಿಸ್ತಿದ್ದಾರೆ. ಆದ್ರೆ ಅಲ್ಲಿ ಗಮನ ಸೆಳೆದಿದ್ದು ಅವರ ಕೈಯಲ್ಲಿದ್ದ ನೀರಿನ ಬಾಟಲಿ.

ಪುಟ್ಟದೊಂದು ನೀರಿನ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ರು ಮಲೈಕಾ. ಪಾರದರ್ಶಕವಾಗಿದ್ದ ಅದರೊಳಗೆ ಕಪ್ಪಗಿನ ದ್ರವವೊಂದು ಇರೋದು ಕಾಣ್ತಿತ್ತು. ಅದನ್ನು ಗಮನಿಸಿದ ಫೊಟಾಗ್ರಫರ್ ಒಬ್ಬರು “ಮೇಡಮ್… ಅದು ಬ್ಲಾಕ್ ವಾಟರ್​ ಆ?” ಎಂದು ಕೇಳಿದ್ದಾರೆ. ಅದಕ್ಕೆ ನಗುತ್ತಾ ಉತ್ತರಿಸಿದ ಮಲೈಕಾ “ಹೌದು, ಇದು ಬ್ಲಾಕ್ ಆಲ್ಕಲೈನ್ ವಾಟರ್” ಎಂದಿದ್ದಾರೆ.

ಇದನ್ನೂ ಓದಿ: Afghanistan Crisis: ನಮ್ಮ ಕತೆ ಏನಾದ್ರೂ ಆಗ್ಲಿ, ಮಕ್ಕಳಾದರೂ ಬದುಕಲಿ ಎಂದು ತಂತಿ ಬೇಲಿಯಾಚೆ ಮಕ್ಕಳನ್ನು ಸೈನಿಕರೆಡೆಗೆ ದಾಟಿಸುತ್ತಿದ್ದಾರೆ ಅಫ್ಘನ್ ಜನ

ಗುಜರಾತ್​ನ ವಡೋದರಾದಲ್ಲಿರುವ ಸ್ಟಾರ್ಟ್​​ ಅಪ್ ಒಂದು ಬ್ಲಾಕ್ ವಾಟರ್ ನ್ನು ಭಾರತದಲ್ಲಿ ಪರಿಚಯಿಸಿದೆ. ಒಂದು ಬಾಟಲ್ ಬ್ಲಾಕ್ ವಾಟರ್ ಬೆಲೆ 100 ರೂ ಇದೆ. ಇದು ಹೆಸರಿಗೆ ತಕ್ಕಂತೆ ನೋಡೋಕೆ ಕಪ್ಪಗೆ ಇರೋದು ಮಾತ್ರವಲ್ಲ, ಅದರಲ್ಲಿ ಸುಮಾರು 70 ವಿವಿಧ ಬಗೆಯ ಖನಿಜಾಂಶಗಳಿವೆ ಎನ್ನಲಾಗಿದೆ. ಇವು ದೇಹದ ಜೀರ್ಣಶಕ್ತಿ ಹೆಚ್ಚಿಸಿ, ಅಸಿಡಿಟಿ ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎನ್ನಲಾಗಿದೆ. ಈ ನೀರಿನ ಪಿಎಚ್ ಪ್ರಮಾಣ 7ಕ್ಕಿಂತ ಹೆಚ್ಚಿದ್ದು ವಯಸ್ಸಾಗುವುದನ್ನು ನಿಧಾನಿಸುತ್ತದೆ ಎನ್ನುತ್ತದೆ ತಯಾರಿಕಾ ಸಂಸ್ಥೆ. ಆದ್ರೆ ವೈಜ್ಞಾನಿಕವಾಗಿ ಬ್ಲಾಕ್ ವಾಟರ್​ನಿಂದ ಇಷ್ಟೆಲ್ಲಾ ಪ್ರಯೋಜನಗಳು ಇರುವ ಬಗ್ಗೆ ಎಲ್ಲೂ ನಿರೂಪಿಸಿಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: