ನಮಗೆ ಒಂದು ಕಪ್ ಬಿಸಿ ಬಿಸಿ ಚಹಾ ಮತ್ತು ಅದರ ಜೊತೆಗೆ ತಿನ್ನಲು ಗರಿಗರಿಯಾದ ಸಮೋಸಾ ಇದ್ದರೆ ಸಾಕು, ಬೇರೆ ಏನೂ ಬೇಕಾಗಿರುವುದಿಲ್ಲ. ಹೌದು, ಸಂಜೆಯ ಹೊತ್ತಿನಲ್ಲಿ ಇವೆರಡರ ಕಾಂಬಿನೇಷನ್ (Combination) ತುಂಬಾನೇ ಅದ್ಭುತವಾಗಿರುತ್ತದೆ. ಅಷ್ಟೇ ಅಲ್ಲದೆ ಇದು ತುಂಬಾನೇ ಕಡಿಮೆ ಬೆಲೆಯಲ್ಲಿ ಸಿಗುವಂತದ್ದು ಅಂತ ಹೇಳಬಹುದು. ನಾವು ನಗರದ ಯಾವುದೋ ಒಂದು ಬೇಕರಿಯಲ್ಲಿ ಅಥವಾ ಕೆಫೆಯಲ್ಲಿ ಈ ಕಾಂಬಿನೇಷನ್ ಅನ್ನು ಸವಿದರೆ ಅದರ ರುಚಿ ಚೆನ್ನಾಗಿರುತ್ತದೆ ಮತ್ತು ಅದಕ್ಕೆ ನಮಗೆ ಅಬ್ಬಬ್ಬಾ ಅಂದ್ರೆ 50 ರಿಂದ 100 ರೂಪಾಯಿ ಖರ್ಚಾಗಬಹುದು. ಆದರೆ ಅದೇ ದೊಡ್ಡ ದೊಡ್ಡ ಶಾಪಿಂಗ್ (Shoping) ಮಾಲ್ ಗಳಲ್ಲಿರುವ ಫುಡ್ ಕೋರ್ಟ್ ಗಳಲ್ಲಿ (Food Court) ಅಥವಾ ಈ ವಿಮಾನ ನಿಲ್ದಾಣಗಳಲ್ಲಿ ಇವುಗಳನ್ನು ತಿಂದರೆ ಭಾರಿ ಬೆಲೆಯನ್ನು ನಾವು ಕೊಡಬೇಕಾಗುತ್ತದೆ. ಇಲ್ಲೊಂದು ಬಿಲ್ ಅನ್ನು ನೋಡಿದರೆ ನಿಮಗೆ ‘ಇಷ್ಟೊಂದು ದುಬಾರಿಯಾ ಈ ಚಾಯ್ ಸಮೋಸಾ’ ಅಂತ ಅಂದು ಕೊಳ್ಳುವುದಂತೂ ಗ್ಯಾರೆಂಟಿ.
ಚಾಯ್ ಸಮೋಸಾಗೆ ಎಷ್ಟೊಂದು ಬಿಲ್ ಬಂದಿದೆ ನೋಡಿ..
ಹೌದು.. ಇತ್ತೀಚೆಗೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಚಾಯ್ ಮತ್ತು ಸಮೋಸಾ ಗಳನ್ನು ಸವಿದ ಪತ್ರಕರ್ತೆ ಫರಾಹ್ ಖಾನ್ ಅವರ ಟ್ವೀಟ್ ನೀವು ನೋಡಿದ್ದರೆ ನಿಮಗೆ ಇದರ ಬಿಲ್ ಎಷ್ಟಾಗಿತ್ತು ಅಂತ ತಿಳಿಯುತ್ತದೆ.
ಚಾಯ್ ಸಮೋಸಾದ ಬಿಲ್ ನಿಜಕ್ಕೂ ಟ್ವಿಟ್ಟರ್ ಬಳಕೆದಾರರನ್ನು ಆಘಾತ ಪಡಿಸುವಂತೆ ಇದೆ ಅಂತ ಹೇಳಬಹುದು. ಮುಂಬೈ ವಿಮಾನ ನಿಲ್ದಾಣದಲ್ಲಿ ಇಷ್ಟಕ್ಕೆ 490 ರೂಪಾಯಿ ಬಿಲ್ ಬಂದಿದೆ ನೋಡಿ.
ಇದನ್ನೂ ಓದಿ: ಸಣ್ಣ ಮ್ಯಾಟರ್ಗೇ ಹಾರುತ್ತಿರೋ ಫ್ಲೈಟ್ನಲ್ಲೇ ಡಿಶುಂ ಡಿಶುಂ, ಮುಖ ಮೂತಿ ನೋಡದೇ ಬಡಿದಾಡಿಕೊಂಡ ಯುವಕರು!
"ಇದರಲ್ಲಿ ಎರಡು ಸಮೋಸಾ, ಒಂದು ಚಾಯ್ ಮತ್ತು ಒಂದು ನೀರಿನ ಬಾಟಲಿ ಬಂದಿದೆ ಅಷ್ಟೇ. ತುಂಬಾನೇ ಒಳ್ಳೆಯ ದಿನಗಳು ಬಂದಿವೆ” ಎಂದು ಫರಾಹ್ ಖಾನ್ ಡಿಸೆಂಬರ್ 28, 2022 ರಂದು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.
"ಮುಂಬೈ ವಿಮಾನ ನಿಲ್ದಾಣದಲ್ಲಿ 490 ರೂಪಾಯಿಗೆ ಎರಡು ಸಮೋಸಾಗಳು, ಒಂದು ಚಾಯ್ ಮತ್ತು ಒಂದು ನೀರಿನ ಬಾಟಲಿ!”ತುಂಬಾ ಉತ್ತಮ ದಿನಗಳು ಬಂದಿವೆ" ಎಂದು ಟ್ವಿಟರ್ ಬಳಕೆದಾರರು ಡಿಸೆಂಬರ್ 28 ರಂದು ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಅವರು ಹಂಚಿಕೊಂಡ ಕ್ಲಿಕ್ ಗಳಲ್ಲಿ, ಒಂದು ಕಪ್ ಚಹಾದೊಂದಿಗೆ ಬಡಿಸಲಾದ ಎರಡು ಸಾಮಾನ್ಯ ಗಾತ್ರದ ಸಮೋಸಾಗಳನ್ನು ನಾವು ನೋಡಬಹುದು. ಆಹಾರವು ರುಚಿಕರವಾಗಿ ಕಾಣುತ್ತಿದ್ದರೂ, ಇವುಗಳ ಬೆಲೆ ಮಾತ್ರ ತುಂಬಾನೇ ಜಾಸ್ತಿಯಾಯಿತು.
ಸಾಮಾನ್ಯವಾಗಿ, ಸಮೋಸಾ ಮತ್ತು ಚಾಯ್ ಇಷ್ಟೊಂದು ದುಬಾರಿಯಾಗಿರುವುದಿಲ್ಲ. ವಾಸ್ತವವಾಗಿ, ಈ ಕಾಂಬಿನೇಷನ್ ಇಷ್ಟೊಂದು ಜನಪ್ರಿಯವಾಗಲು ಕಾರಣವೆಂದರೆ ಇದು ಕಡಿಮೆ ವೆಚ್ಚದ್ದು ಮತ್ತು ಹೇರಳವಾಗಿ ಲಭ್ಯವಿದೆ ಅಂತ.
ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ಪೋಸ್ಟ್..
ಚಾಯ್ ಸಮೋಸಾದ ಭಾರಿ ಮೊತ್ತದ ಬಿಲ್ ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, 1.3 ಮಿಲಿಯನ್ ವೀಕ್ಷಣೆಗಳು, 10,000ಕ್ಕೂ ಹೆಚ್ಚು ಲೈಕ್ ಗಳು ಮತ್ತು ಸಾವಿರಾರು ರೀಟ್ವೀಟ್ ಗಳನ್ನು ಗಳಿಸಿದೆ.
ಹಲವಾರು ಬಳಕೆದಾರರು ಟ್ವೀಟ್ ಗೆ ತಮ್ಮ ಕಾಮೆಂಟ್ ಗಳನ್ನು ಹಾಕಿದ್ದಾರೆ. "ವಿಮಾನ ನಿಲ್ದಾಣದಲ್ಲಿ ಸಮೋಸಾ ತಿನ್ನುವ ಜನರು ಅದರ ವೆಚ್ಚದ ಬಗ್ಗೆ ಎಂದಿಗೂ ದೂರು ನೀಡುವುದಿಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.
Two samosas, one chai and one water bottle for 490 Rs at Mumbai airport!! Kafi ache din aa gae hain. #Vikas pic.twitter.com/aaEkAD9pmb
— Farah khan (@farah17khan) December 28, 2022
Two samosas, one chai and one water bottle for 490 Rs at Mumbai airport!! Kafi ache din aa gae hain. #Vikas pic.twitter.com/aaEkAD9pmb
— Farah khan (@farah17khan) December 28, 2022
“ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಂದು ಇಡ್ಲಿ ಮತ್ತು ಒಂದು ವಡಾ ತಲಾ 100 ರೂಪಾಯಿ. ಒಂದು ಕಿತ್ತಳೆ ಹಣ್ಣಿನ ರಸವು ಕೊಳೆತು ಹೋಗಿದ್ದರೂ ಸಹ ಅದು ಕೂಡ 150 ರೂಪಾಯಿ. ಎಂತಹ ದಿನಗಳಿವೆ ನೋಡಿ” ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
“ಕೆಲವು ದಿನಗಳ ಹಿಂದೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ಕೋಲ್ಕತಾಗೆ ಬರುತ್ತಿದ್ದಾಗ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾನು ಸಮೋಸಾದ ಬೆಲೆಯನ್ನು ಕೇಳಿದೆ, ಅವರು ಅದಕ್ಕೆ ಎರಡು ಸಮೋಸಾಗಳ ಬೆಲೆ 250 ರೂಪಾಯಿ ಎಂದು ಹೇಳಿದರು. ಅದರ ನಂತರ ನಾನು ಬೇರೆ ಏನನ್ನೂ ಕೇಳಲಿಲ್ಲ, ನಾನು ತಕ್ಷಣವೇ ಅಲ್ಲಿಂದ ಹೊರಟು ಬಂದೆ” ಎಂದು ನಾಲ್ಕನೆಯವರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ