Viral Video: ದೆಹಲಿಗೆ ಬಂದು ಮುಂಬೈ ಸ್ಟೈಲ್ ಪಾನಿಪುರಿ ಕೇಳಿದ್ರೆ ಹೇಗೆ? ಈ ವಿಡಿಯೋ ನೋಡಿ

ಇತ್ತೀಚೆಗೆ ಒಂದು ವೀಡಿಯೋ ಸಾಮಾಜಿಯ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ತುಂಬಾನೇ ಜೋರಾಗಿ ಹರಿದಾಡುತ್ತಿದೆ ನೋಡಿ. ಈ ವೀಡಿಯೋವು ಮುಂಬೈ ನಗರದಲ್ಲಿ ವಾಸ ಮಾಡುವವರು ದೆಹಲಿಗೆ ಬಂದಾಗ ಪಾನಿಪುರಿ ತಿನ್ನಲು ನಿರ್ಧರಿಸಿದಾಗ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಪಾನಿಪುರಿ (Panipuri) ತಿನ್ನಲು ಇಷ್ಟಪಡುವವರಾಗಿದ್ದರೆ, ಈ ಸುದ್ದಿಯನ್ನು ನೀವು ತಪ್ಪದೆ ಓದಲೇ ಬೇಕು. ನಾವು ಈ ಪಾನಿಪುರಿಗಳ ಬಗ್ಗೆ ಅನೇಕ ರೀತಿಯ ವಿಡಿಯೋಗಳನ್ನು (Video) ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡಿರುತ್ತೇವೆ. ಆದರೆ ಇಂತಹ ವಿಡಿಯೋ ಎಂದಿಗೂ ನೋಡಿರುವುದಿಲ್ಲ. ಪಾನಿಪುರಿ ಮಾಡುವ ಸಾಮಗ್ರಿಗಳು ಒಂದೇ ಆಗಿದ್ದರೂ ಸಹ ಮಾಡುವ ವಿಧಾನ ಮತ್ತು ರುಚಿ ರಾಜ್ಯದಿಂದ ರಾಜ್ಯಕ್ಕೆ ತುಂಬಾನೇ ವಿಭಿನ್ನವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು. ನೀವು ಉದಾಹರಣೆಗೆ ಮುಂಬೈಯಲ್ಲಿ ನೆಲೆಸಿದ್ದು, ಮುಂಬೈಯಲ್ಲಿನ (Mumbai) ಪಾನಿಪುರಿ ರುಚಿಯನ್ನು ತುಂಬಾನೇ ಇಷ್ಟಪಡುತ್ತಿದ್ದರೆ, ಬೇರೆ ರಾಜ್ಯಕ್ಕೆ ಹೋದಾಗ ಅದೇ ರೀತಿಯ ರುಚಿಯನ್ನು (Taste) ನೀವು ನಿರೀಕ್ಷಿಸಲೇ ಬೇಡಿ.

ರುಚಿ ಹಾಗಿರಲಿ ಮುಂಬೈ ಭಾಷೆಯಲ್ಲಿ ನೀವು ಪಾನಿಪುರಿ ಮಾರುವವನಿಗೆ ಏನಾದರೂ ಕೇಳಿದರೂ ಸಹ ಅವನಿಗೆ ಅದು ಅರ್ಥವಾಗದೆ ಇರಬಹುದು. ಇದು ಸಹಜ ಬಿಡಿ, ರಾಜ್ಯದಿಂದ ರಾಜ್ಯಕ್ಕೆ ಭಾಷೆ ಮತ್ತು ಭಾಷೆಯ ಶೈಲಿ ತುಂಬಾನೇ ಬೇರೆಯಾಗಿರುತ್ತದೆ. ಒಂದು ವಸ್ತುವನ್ನು ಮುಂಬೈನ ಜನರು ಹೇಳುವಂತೆ ಹೇಳಿದರೆ ಅದು ದೆಹಲಿಯ ಜನರಿಗೆ ಸ್ವಲ್ಪವೂ ಅರ್ಥವಾಗದೆ ಇರಬಹುದಾದಂತಹ ಸಾಧ್ಯತೆಗಳು ತುಂಬಾನೇ ಹೆಚ್ಚಿರುತ್ತವೆ.

ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಯಿತು ಪಾನಿಪುರಿಯ ವಿಡಿಯೋ

ಇತ್ತೀಚೆಗೆ ಒಂದು ವಿಡಿಯೋ ಸಾಮಾಜಿಯ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ತುಂಬಾನೇ ಜೋರಾಗಿ ಹರಿದಾಡುತ್ತಿದೆ ನೋಡಿ. ಈ ವೀಡಿಯೋವು ಮುಂಬೈ ನಗರದಲ್ಲಿ ವಾಸ ಮಾಡುವವರು ದೆಹಲಿಗೆ ಬಂದಾಗ ಪಾನಿಪುರಿ ತಿನ್ನಲು ನಿರ್ಧರಿಸಿದಾಗ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ ನೋಡಿ.

ಮುಂಬೈನ ಮಹಿಳೆಯೊಬ್ಬರು ದೆಹಲಿಗೆ ಬಂದಿದ್ದಾರೆ. "ದೆಹಲಿಯಲ್ಲಿ ರಗ್ಡಾ ಇಲ್ಲ. ನಾನು ಈಗ ಏನು ಮಾಡಬೇಕು? ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಮುಂಬೈ ಪಾನಿಪುರಿಯನ್ನು ಹೆಚ್ಚು ಇಷ್ಟಪಡುತ್ತೇನೆ. ದೆಹಲಿಯಲ್ಲಿ ಕೇವಲ ಖಟ್ಟಾ ಪಾನಿ ಎಂದರೆ ಹುಳಿ ನೀರು ಮಾತ್ರ ಇರುತ್ತದೆ. ಇದನ್ನು ಅವರು ಮಸಾಲೆಯುಕ್ತ ನೀರು ಎಂದು ಕರೆಯುತ್ತಾರೆ, ಇದು ಮಸಾಲೆಯುಕ್ತವಲ್ಲ" ಎಂದು ದಿಶಾ ಕೌಶಿಕ್ ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋಗೆ ಶೀರ್ಷಿಕೆಯನ್ನು ಬರೆದಿದ್ದಾರೆ.

ಇದನ್ನೂ ಓದಿ:  Elephant Saves Calf: ಕೊಚ್ಚಿ ಹೋಗ್ತಿದ್ದ ಮರಿಯಾನೆಯನ್ನು ರಕ್ಷಿಸಿದ ಅಮ್ಮ! ವಿಡಿಯೋ ವೈರಲ್

"ಮುಂಬೈಕರ್ ಒಬ್ಬರು ದೆಹಲಿಯಲ್ಲಿ ಪಾನಿ ಪುರಿ ತಿನ್ನಲು ಬಯಸಿದಾಗ" ಎಂದು ವಿಡಿಯೋದಲ್ಲಿ ಪಠ್ಯವನ್ನು ಸೇರಿಸಲಾಗಿದೆ. ವಿಡಿಯೋದಲ್ಲಿ ಕೌಶಿಕ್ ಗೋಲ್ಗಪ್ಪಾ ಅಂಗಡಿಯಲ್ಲಿ ನಿಂತು ತಿಂಡಿಯ ಬಗ್ಗೆ ಮಾರಾಟಗಾರನನ್ನು ಕೇಳುವುದನ್ನು ತೋರಿಸುತ್ತದೆ. ನೀವು ವಿಡಿಯೋವನ್ನು ಸಂಪೂರ್ಣವಾಗಿ ಆನಂದಿಸಲು ಕೊನೆಯವರೆಗೂ ನೋಡಿ.




ಈ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ

ಈ ವಿಡಿಯೋವನ್ನು ಒಂದು ವಾರದ ಹಿಂದೆ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಹಂಚಿಕೊಂಡಾಗಿನಿಂದ, ಇದು 2.45 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ಅನೇಕ ರೀತಿಯ ಕಾಮೆಂಟ್ ಗಳನ್ನು ಸಹ ಇದು ಪಡೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ವಿಡಿಯೋ ಸಾವಿರಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಗಳಿಸಿದೆ.

ಈ ವಿಡಿಯೋ ನೋಡಿ "ನಾವು ಗೋಲ್ಗಪಾದಲ್ಲಿ ಆಲೂ ಚೋಲೆಯನ್ನು ಇರಿಸಿದ್ದೇವೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಉಲ್ಲೇಖಿಸಿ ತಮ್ಮ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ್ದಾರೆ. "ನಾನು ಮುಂಬೈನಿಂದ ಚಂಡೀಗಢಕ್ಕೆ ಶಿಫ್ಟ್ ಆದಾಗ ನನ್ನ ಪರಿಸ್ಥಿತಿಯೂ ಇದೇ ಆಗಿತ್ತು" ಎಂದು ಇನ್ನೊಬ್ಬರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. "ದೆಹಲಿಯ ಆಹಾರವು ಅತ್ಯುತ್ತಮವಾಗಿದೆ ಮತ್ತು ಯಾವಾಗಲೂ ಇರುತ್ತದೆ" ಎಂದು ಮೂರನೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:   Python Caught: 100 ಕೆಜಿ ಭಾರದ ಗರ್ಭಿಣಿ ಹೆಬ್ಬಾವು ಪತ್ತೆ, ದಾಖಲೆಯ 122 ಮೊಟ್ಟೆ

"ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಅವರು ರಗ್ಡಾವನ್ನು ಪಾನಿಪುರಿಯಲ್ಲಿ ಹಾಕುತ್ತಾರೆ. ಭಾರತದ ಉಳಿದ ಭಾಗಗಳಲ್ಲಿ ಪಾನಿಪುರಿಯಲ್ಲಿ ಆಲೂ ಮತ್ತು ಮಸಾಲಾ ಹಾಕಿ ಕೊಡಲಾಗುತ್ತದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿ ಗಮನ ಸೆಳೆದರು. "ಕೋಲ್ಕತಾದ ಪುಚ್ಕಾ ಅತ್ಯುತ್ತಮವಾಗಿದೆ, ಪ್ರತಿಯೊಬ್ಬ ಮುಂಬೈಕರ್ ಮತ್ತು ದೆಹಲಿಗರಿಗೆ ಇದು ತಿಳಿದಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: