ನಿಮ್ಮ ಮನೆಯ ಮುದ್ದು ನಾಯಿಯನ್ನು (Dog) ಕಟ್ಟಿ ಹಾಕಿದರೆ ಅಥವಾ ಗೂಡಲ್ಲಿ ಕೂಡು ಹಾಕಿದರೆ, ಅವುಗಳಿಗೆ ಖಂಡಿತಾ ಸಂತೋಷ ಆಗುವುದಿಲ್ಲ. ನಿಮ್ಮ ಮೇಲಿನ ಪ್ರೀತಿಯಿಂದಲೋ, ಭಯದಿಂದಲೋ ಅವು ತೆಪ್ಪಗಿರುತ್ತವೆ. ಕೆಲವೊಮ್ಮೆ ಕುಂಯ್ಯ್ ಕುಂಯ್ಯ್ ಎಂದೋ ಅಥವಾ ಜೋರಾಗಿ ಬೊಗಳಿಯೋ ಅಥವಾ ನೆಲವನ್ನು ಕೆರೆದೋ ತಮ್ಮ ಅಸಮಾಧಾನವನ್ನು ಕೂಡ ತೋರಿಸುವುದು ಉಂಟು. ಏಕೆಂದರೆ, ನಾಯಿಗಳಿಗೆ ಸ್ವಚ್ಚಂದವಾಗಿ ಓಡಾಡಿಕೊಂಡು ಇರುವುದರಲ್ಲೇ ಹೆಚ್ಚಿನ ಖುಷಿ. ಸರಿ, ಹಾಗಿದ್ದರೆ, ಆರಾಮಾಗಿ ಓಡಾಡಲು ಬಯಸುವ ನಿಮ್ಮ ನಾಯಿಯ ಕಾಲಿಗೆ ಮೊದಲ ಬಾರಿಗೆ ಶೂ ತೊಡಿಸಿ (Shoe), ಓಡಲು ಬಿಟ್ಟರೆ ಅದು ಹೇಗೆ ವರ್ತಿಸಬಹುದು ಎಂಬ ಕುತೂಹಲ ಇದೆಯೇ..? ಅವು ಉತ್ಸಾಹ ತೋರಬಹುದು ಅಥವಾ ತೋರಿಸದೆಯೂ ಇರಬಹುದು. ನಿಮಗೆ ಶೂ ತೊಟ್ಟ ನಿಮ್ಮ ನಾಯಿ ಹೇಗಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ, ಪ್ರಸ್ತುತ ಇಂಟರ್ನೆಟ್ನಲ್ಲಿ ಇರುವ, ಶೂ ತೊಟ್ಟು ಓಡಾಡಿದ ನಾಯಿಯೊಂದರ ಹೊಸ ವಿಡಿಯೋವನ್ನು (Video) ನೋಡಿ, ಕುತೂಹಲ ತಣಿಸಿಕೊಳ್ಳಬಹುದು.
ಯುಎಸ್ನ ನಾರ್ತ್ ಡಕೋಟದಲ್ಲಿರುವ ಸೂಪರ್ ಸ್ಟೋರ್ಒಂದರಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೋ ಅದು. ತಾನು ಶೂ ಹಾಕಿಕೊಂಡಿರುವುದಕ್ಕೆ ಮೊಂಟಾನ ಎಂಬ ಹೆಸರಿನ ಆ ನಾಯಿ ಉತ್ಸುಕಗೊಂಡಿದ್ದರೆ, ತನ್ನ ನಾಯಿ ಶೂ ಹಾಕಿಕೊಂಡು ನಡೆಯುತ್ತಿರುವುದನ್ನು ನೋಡಿ ಅದರ ಪಾಲಕ ಕೂಡ ಉತ್ಸುಕರಾಗಿದ್ದರು.
“ಮೊಂಟಾನ ಮೊದಲ ಬಾರಿಗೆ ಪ್ರಯಾಣಿಸುತ್ತಿರುವ ಒಂದು ಸೇವಾ ನಾಯಿಯಾಗಿದೆ ಮತ್ತು ನಾವು ಮೊದಲ ಬಾರಿಗೆ ಪೆಟ್ಸ್ಮಾರ್ಟ್ನಲ್ಲಿ ಅವಳಿಗೆ ಶೂ ತೊಡಿಸಿದ್ದೇವೆ” ಎಂದು ನಾಯಿಯನ್ನು ನೋಡಿಕೊಳ್ಳುವವರು ಹೇಳಿದ್ದಾರೆ.
9 ಸೆಕುಂಡುಗಳ ವಿಡಿಯೋ ವೈರಲ್
ಈ ವಿಡಿಯೋ 9 ಸೆಕೆಂಡ್ಗಳ ಅವಧಿಯದ್ದಾಗಿದ್ದು, ವೈರಲ್ಹಾಗ್ ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ. ತನ್ನ ಕಾಲುಗಳಿಗೆ ಹಾಕಲಾದ ಪುಟ್ಟ ಶೂಗಳನ್ನು ನೋಡಿ ಕೊಂಚ ಮಟ್ಟಿಗೆ ಗೊಂದಲಗೊಂಡಿರುವ ಹೆಣ್ಣು ನಾಯಿ ಮೊಂಟಾನಳನ್ನು ಅದರಲ್ಲಿ ಕಾಣಬಹುದು. ವಿಡಿಯೋದಲ್ಲಿ ಅವಳನ್ನು , ನಾಯಿಯ ಪಾಲಕ ಮೊಂಟೋನಾ ಎಂದು ಕರೆಯುತ್ತಿರುವುದು ಕೂಡ ನಮಗೆ ಕೇಳಿಸುತ್ತದೆ.
ಮೊಂಟಾನಳ ಈ ವಿಡಿಯೋ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಹಲವಾರು ಮಂದಿ ಖುಷಿಯಾದ ಪ್ರತಿಕ್ರಿಯೆಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral News: ಮದ್ವೆ ನಂತ್ರ ಈ ಕೆಲಸಗಳನ್ನು ಮಾಡಬಾರದು..! ವರನಿಗೆ ವಧು ಕೊಟ್ಟ ಕೋರ್ಟ್ ಅಗ್ರಿಮೆಂಟ್
“ತಣ್ಣಗಿನ ನೆಲದಲ್ಲಿ ಶೂಗಳಿಲ್ಲದೆ ಓಡಾಡುತ್ತಿರುವ ನಾನು” ಎಂದು ಹ್ಯಾಸ್ಸಿ ಕೆ ಎಂಬ ನೆಟ್ಟಿಗ ಬರೆದಿದ್ದರೆ, ಎಲ್ಲಾ ಬೇಬಿ ಎಂಬ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ “ಅದು ತುಂಬಾ ಮಜವಾಗಿದೆ. ನನ್ನ ಅಜ್ಜಿ ಅವರ ನಾಯಿಗೆ ಶೂಗಳನ್ನು ಹಾಕಿದಾಗ, ಅದು ಕೂಡ ಇದೇ ರೀತಿ ವರ್ತಿಸಿತು” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಸಿ ಬಾರ್ನೆಸ್’ ಎಂಬ ಯೂಸರ್ ನೇಮ್ ಹೊಂದಿರುವ ಇನ್ನೊಬ್ಬ ನೆಟ್ಟಿಗರು. ಆ ನಾಯಿಯ ಮೇಲೆ ಬೇರೆಯವರಿಗಿಂತ ಹೆಚ್ಚಿನ ಅನುಭೂತಿ ತೋರಿಸಿದ್ದು, “ನೀವು ಈಗ ನಕ್ಕು ಬಿಡಿ. ಒಂದು ವೇಳೆ ಮೊಂಟಾನ ಸೂಪರ್ ಗ್ಲೂ ಅನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಂಡರೆ ಇನ್ನು ಮಜವಾಗಿರುತ್ತದೆ. ನಿಮ್ಮ ಮನೆಯ ಎಲ್ಲಾ ಸಾಮಾನುಗಳು ನಿಮ್ಮ ಇಡೀ ದೇಹಕ್ಕೆ ಅಂಟಿಕೊಂಡಿರುತ್ತದೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: Viral News: ಪಟ್ಟೆಗಳಿಲ್ಲದ ಅಪರೂಪದ ಜೀಬ್ರಾ, ವಿಡಿಯೋ ನೋಡಿ ತಲೆ ಕೆರೆದುಕೊಂಡ ನೆಟ್ಟಿಗರು
ತನ್ನ ನಾಯಿ ಕೂಡ ತಾನು ಶೂ ಹಾಕಿಕೊಂಡು ನಡೆಯಲು ಪ್ರಯತ್ನಿಸಿದಾಗ ಇದೇ ರೀತಿ ವರ್ತಿಸಿದೆ ಎಂದು ಹೇಳಿರುವ ಟ್ರೂಡಿ ಕ್ಯಾಸ್ಟ್ರೋ ಎಂಬ ಹೆಸರಿನ ನೆಟ್ಟಿಗ, “ನನ್ನ ನಾಯಿ ಕೂಡ. ತುಂಬಾ ನಗು ಬಂತು” ಎಂದು ಬರೆದುಕೊಂಡಿದ್ದಾರೆ.
ಆದರೆ ಈ ವಿಡಿಯೋದಲ್ಲಿ ಯಾವುದೇ ಮಜವಾದ ಸಂಗತಿ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ವೀಕ್ಷಕರು ಕೂಡ ಇದ್ದಾರೆ. ಅಂತವರಲ್ಲಿ ಒಬ್ಬರಾದ, ಡೆಬ್ಬೀ ಸ್ಕಾಟ್ ಎಂಬವರು, “ ನಾಯಿ ಈ ರೀತಿ ಇದೆ, ತುಂಬಾ ಅವಮಾನಕರವಾಗಿದೆ” ಎಂದು ಬರೆದಿದ್ದಾರೆ.
ಪ್ರಾಣಿ ಹಿಂಸೆ ಎಂದ ಜನ
ಶಾಲ್ ಡಾಗ್ ಎಂಬವರು, “ಪ್ರಾಣಿ ಹಿಂಸೆ. ನೀವು ಮತ್ತು ಇದನ್ನು ಕಂಡು ನಗುವವರು ಅವರ ಬಗ್ಗೆಯೇ ನಾಚಿಕೆ ಪಡಬೇಕು. ಭಯಾನಕವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಲೈ ಫೊಂತಾನ ಎಂಬುವರು, “ ಪಾಪದ ಜೀವಿ” ಎಂದು ಕನಿಕರ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ