• Home
  • »
  • News
  • »
  • trend
  • »
  • Lost Oxygen: ಆಮ್ಲಜನಕವಿಲ್ಲದೇ 550 ಮಿಲಿಯನ್ ವರ್ಷಗಳ ಹಿಂದೆ ನಡೆದಿತ್ತು ಘೋರ ದುರಂತ! ಏನದು?

Lost Oxygen: ಆಮ್ಲಜನಕವಿಲ್ಲದೇ 550 ಮಿಲಿಯನ್ ವರ್ಷಗಳ ಹಿಂದೆ ನಡೆದಿತ್ತು ಘೋರ ದುರಂತ! ಏನದು?

ಸಾಂದರ್ಭಿ ಚಿತ್ರ

ಸಾಂದರ್ಭಿ ಚಿತ್ರ

Lost Oxygen: ಭೂಮಿಯ ಪ್ರತಿಜೀವಿಗೂ ಆಮ್ಲಜನಕ ಅತ್ಯಗತ್ಯ. ಈಗಾಗ್ಲೇ ನಾವು ನಮ್ಮ ಸ್ವಾರ್ಥದ ಫಲವಾಗಿ ಆಮ್ಲಜನಕವನ್ನು ಖರೀದಿ ಮಾಡುವ ಪರಿಸ್ಥಿತಿಯಲ್ಲಿ ಇದ್ದೇವೆ. ಹೀಗೆ ಎಲ್ಲವೂ ನಾಶವಾಗುತ್ತಿದ್ದರೆ ಮಾನವ ಕೂಡ ಅಳಿವಿನಂಚಿನ ಪ್ರಾಣಿಯಾಗಬಹುದು.

  • Trending Desk
  • 5-MIN READ
  • Last Updated :
  • Share this:

ಒಂದಿಲ್ಲೊಂದು ಕಾರಣದಿಂದಾಗಿ ಇಂದು ಅರಣ್ಯ (Forest) ಪ್ರದೇಶ ಕಡಿಮೆಯಾಗುತ್ತಲೇ ಇದೆ. ಕಾಡ್ಗಿಚ್ಚು ಅಥವಾ ಮಾನವನ ಚಟುವಟಿಕೆಗಳಿಂದ ಅರಣ್ಯದಲ್ಲಿನ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗೆ ಪರಿಸರ (Environment) ನಾಶವಾಗುತ್ತಿದ್ದರೆ ನಾವೆಲ್ಲಾ ಏನಾಗಬಹುದು?ಈ ಸ್ಥಿತಿಯನ್ನು ಊಹೆ ಮಾಡುವುದು ಸಹ ಕಷ್ಟ. ಆದರೆ ಅನೇಕ ಶತಮಾನಗಳ ಹಿಂದೆ ಈ ರೀತಿ ಒಮ್ಮೆ ಆಗಿತ್ತು. ಹೌದು, ಆಮ್ಲಜನಕವೇ (Oxygen) ಇಲ್ಲದಂತಾಗಿ ದೊಡ್ಡ ದುರಂತವೇ ನಡೆದಿತ್ತು. ಏನಿದು ದುರಂತ? ಹೇಗೆ ಸಂಭವಿಸಿತು? ಎಂಬ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಇಂಟ್ರಸ್ಟಿಂಗ್​ ಉತ್ತರ.


ಆಮ್ಲಜನಕ ಇಲ್ಲದಿದ್ದರೆ ಏನಾಗಬಹುದು?:


ಭೂಮಿಯ ಪ್ರತಿಜೀವಿಗೂ ಆಮ್ಲಜನಕ ಅತ್ಯಗತ್ಯ. ಈಗಾಗ್ಲೇ ನಾವು ನಮ್ಮ ಸ್ವಾರ್ಥದ ಫಲವಾಗಿ ಆಮ್ಲಜನಕವನ್ನು ಖರೀದಿ ಮಾಡುವ ಪರಿಸ್ಥಿತಿಯಲ್ಲಿ ಇದ್ದೇವೆ. ಹೀಗೆ ಎಲ್ಲವೂ ನಾಶವಾಗುತ್ತಿದ್ದರೆ ಮಾನವ ಕೂಡ ಅಳಿವಿನಂಚಿನ ಪ್ರಾಣಿಯಾಗಬಹುದು. ಹೀಗೆ ಹಿಂದೆ ನಡೆದ ಒಂದು ಅಳಿವಿನ ಘಟನೆಯನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಘಟನೆಯು ಸುಮಾರು 550 ಮಿಲಿಯನ್ ವರ್ಷಗಳ ಹಿಂದಿನದು ಎನ್ನಲಾಗಿದೆ.


550 ಮಿಲಿಯನ್ ವರ್ಷಗಳ ಹಿಂದೆ ನಡೆದಿತ್ತು ಘೋರ ದುರಂತ:


ಹೌದು, ಬಹುಪಾಲು ಪ್ರಾಣಿಗಳ ನಷ್ಟಕ್ಕೆ ಕಾರಣವಾದ ಭೂಮಿಯ ಮೇಲಿನ ಮೊದಲ ಸಾಮೂಹಿಕ ಅಳಿವಿನ ಘಟನೆಯ ಕಾರಣವನ್ನು ಭೂವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಸಾಮೂಹಿಕ ಅಳಿವಿನ ಘಟನೆಯು ಸುಮಾರು 550 ಮಿಲಿಯನ್ ವರ್ಷಗಳ ಹಿಂದೆ ಎಡಿಯಾಕಾರನ್ ಅವಧಿಯ ಅಂತ್ಯದ ವೇಳೆಗೆ ಸಂಭವಿಸಿದೆ ಎನ್ನಲಾಗಿದೆ. ಈ ಅಳಿವಿಗೆ ಪ್ರಮುಖ ಕಾರಣ ಆಮ್ಲಜನಕದ ಕೊರತೆಯಾಗಿತ್ತು ಎಂದು ಭೂವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.


ಸಂಶೋಧನೆ ವೇಳೆ ತೆಗೆದ ಫೋಟೋ


ಅಳಿವಿನ ಘಟನೆಯು ವಿವಿಧ ರೀತಿಯ ಪ್ರಾಣಿಗಳ ಅವನತಿಯನ್ನು ಒಳಗೊಂಡಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಜಾಗತಿಕ ಆಮ್ಲಜನಕದ ಲಭ್ಯತೆಯಲ್ಲಿನ ಪ್ರಮುಖ ಇಳಿಕೆಯಿಂದಾಗಿ ಈ ಘೋರ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.


ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಅಧ್ಯಯನ:


ಈ ಅಧ್ಯಯನವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟಿಸಲಾಗಿದೆ, ಇದು ಸಾಮೂಹಿಕ ಅಳಿವುಗಳು ಈ ಗ್ರಹದ ಜೀವನದ ವಿಕಸನೀಯ ಪಥದಲ್ಲಿ ಗಮನಾರ್ಹ ಹಂತಗಳಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳುತ್ತದೆ. "ಈ ಅಳಿವಿಗೆ ಕಾರಣ ಯಾಂತ್ರಿಕತೆಯಾಗಿ ಕಡಿಮೆಯಾದ ಜಾಗತಿಕ ಆಮ್ಲಜನಕದ ಅಲಭ್ಯತೆ" ಎಂದು ಪತ್ರಿಕೆ ತಿಳಿಸಿದೆ.


ಪಳೆಯುಳಿಕೆ ಮುದ್ರೆಗಳನ್ನು ಬಳಸಿ ಅಧ್ಯಯನ:


ಈ ಅಳಿವಿನ ಘಟನೆಯಲ್ಲಿ ನಾಶವಾದ ಜೀವಿಗಳು ಹೇಗೆ ಕಾಣುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಬಂಡೆಗಳಲ್ಲಿನ ಪಳೆಯುಳಿಕೆ ಮುದ್ರೆಗಳನ್ನು ಅಧ್ಯಯನ ಮಾಡಿದರು. ಈ ಅಳಿವಿನ ಮೊದಲು ಅವರು ಕಂಡುಕೊಂಡ ಪಳೆಯುಳಿಕೆಗಳು ಇಂದು ನಾವು ಪ್ರಾಣಿಗಳನ್ನು ವರ್ಗೀಕರಿಸುವ ವಿಧಾನಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದರು. ನಮಗೆ ತಿಳಿದಿರುವಂತೆ ಈ ದುರಂತ ಪ್ರಾಣಿಗಳ ವಿಕಾಸಕ್ಕೆ ದಾರಿ ಮಾಡಿಕೊಡಲು ಸಹಾಯ ಮಾಡಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.


ವರ್ಜೀನಿಯಾ ಟೆಕ್ ಕಾಲೇಜ್ ಆಫ್ ಸೈನ್ಸ್‌ನ ಭಾಗವಾಗಿರುವ ಭೂವಿಜ್ಞಾನ ವಿಭಾಗದ ಪೋಸ್ಟ್‌ಡಾಕ್ಟರಲ್ ಸಂಶೋಧಕ ಸ್ಕಾಟ್ ಇವಾನ್ಸ್ ನೇತೃತ್ವದಲ್ಲಿ, ಸಂಶೋಧಕರು ಜಾಗತಿಕ ತಾಪಮಾನ ಮತ್ತು ಆಮ್ಲಜನಕರಹಿತ ಘಟನೆಗಳಂತಹ ಪರಿಸರ ಬದಲಾವಣೆಗಳು ಪ್ರಾಣಿಗಳ ಬೃಹತ್ ಅಳಿವಿಗೆ ಕಾರಣವಾಗಬಹುದು ಎಂದು ತೋರಿಸಿದ್ದಾರೆ. ಈ ಅಧ್ಯಯನವು ಜೀವಗೋಳದ ಮೇಲೆ ಪ್ರಸ್ತುತ ಪರಿಸರ ಬದಲಾವಣೆಗಳ ದೀರ್ಘಕಾಲೀನ ಪ್ರಭಾವದ ಬಗ್ಗೆ ನಮಗೆ ತಿಳಿಸುತ್ತದೆ ಎಂದು ಅಧ್ಯಯನದ ಸಹ-ಲೇಖಕ ಶುಹೈ ಕ್ಸಿಯಾವೊ ಹೇಳಿದರು.


ಇದನ್ನೂ ಓದಿ: Girls Matter: OMG, ಹುಡುಗಿಯರು ರಾತ್ರಿ ಇಂಟರ್‌ನೆಟ್‌ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್‌ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!


ಭೂಮಿಯು ಆಮ್ಲಜನಕವನ್ನು ಕಳೆದುಕೊಂಡಿದ್ದಾದರೂ ಏಕೆ?:


ಈವರೆಗೆ ಭೂಮಿಯು ಐದು ಪ್ರಮುಖ ಸಾಮೂಹಿಕ ಅಳಿವಿನ ಘಟನೆಗಳನ್ನು ದಾಖಲಿಸಿದೆ. ಮೊದಲನೆಯದು ಆರ್ಡೋವಿಶಿಯನ್-ಸಿಲುರಿಯನ್ ಅಳಿವು (440 ದಶಲಕ್ಷ ವರ್ಷಗಳ ಹಿಂದೆ), ನಂತರ ಡೆವೊನಿಯನ್ ಅಳಿವು (370 ದಶಲಕ್ಷ ವರ್ಷಗಳ ಹಿಂದೆ), ಪೆರ್ಮಿಯನ್-ಟ್ರಯಾಸಿಕ್ ಅಳಿವು (250 ದಶಲಕ್ಷ ವರ್ಷಗಳ ಹಿಂದೆ), ಟ್ರಯಾಸಿಕ್-ಜುರಾಸಿಕ್ ಅಳಿವು (200 ಮಿಲಿಯನ್ ವರ್ಷಗಳ ಹಿಂದೆ), ಮತ್ತು ಕ್ರಿಟೇಶಿಯಸ್-ಪಾಲಿಯೋಜೀನ್ ಅಳಿವು (65 ಮಿಲಿಯನ್ ವರ್ಷಗಳ ಹಿಂದೆ) ಸಂಭವಿಸಿದೆ.


ಮೊದಲ ಸಾಮೂಹಿಕ ಅಳಿವಿನ ಘಟನೆಗೆ ಪ್ರಮುಖವಾಗಿರುವ ಭೂಮಿ ಮೇಲಿನ ಆಮ್ಲಜನಕದ ಮಟ್ಟದಲ್ಲಿನ ಹಠಾತ್ ಕುಸಿತದ ಬಗ್ಗೆ ಹಿಂದಿನ ಕಾರಣವನ್ನು ಸಂಶೋಧಕರು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದರೂ, ಇದು ಅವಧಿಯಲ್ಲಿ ಸಂಭವಿಸುವ ಹಲವಾರು ಘಟನೆಗಳ ಸಂಯೋಜನೆಯಾಗಿರಬಹುದು ಎಂದು ಅವರು ಊಹಿಸಿದ್ದಾರೆ.


ಈ ಘಟನೆ ಜ್ವಾಲಾಮುಖಿ ಸ್ಫೋಟಗಳು, ಟೆಕ್ಟೋನಿಕ್ ಪ್ಲೇಟ್ ಚಲನೆ, ಕ್ಷುದ್ರಗ್ರಹ ಪ್ರಭಾವ, ಇತ್ಯಾದಿಗಳಿಂದಲೂ ಸಂಭವಿಸಿರಬಹುದು. ಆದರೆ ನಮಗೆ ಸಿಕ್ಕಿರುವ ದಾಖಲೆಗಳು ಆಮ್ಲಜನಕದ ಕೊರತೆಯಿಂದ ಸಂಭವಿಸಿದೆ ಎಂದು ಬಲವಾಗಿ ತೋರಿಸುತ್ತಿವೆ ಎಂಬುದಾಗಿ ಇವಾನ್ಸ್ ತಿಳಿಸಿದರು.


ಆಮ್ಲಜನಕದ ಕೊರತೆ ಹೇಗಾಗುತ್ತಿದೆ?:


ವಿಶ್ವದ ಶುದ್ಧ ನೀರಿನ ಮೇಲೆ ಪರಿಣಾಮ ಬೀರುವ ಆಮ್ಲಜನಕದ ಲಭ್ಯತೆಯ ನಷ್ಟದ ವರದಿಗಳ ಮಧ್ಯೆ ಈ ಅಧ್ಯಯನವು ಬಂದಿದೆ. ಈ ಆಮ್ಲಜನಕದ ನಷ್ಟದ ಹಿಂದಿನ ಕಾರಣವೆಂದರೆ ಹವಾಮಾನ ಬದಲಾವಣೆಯಿಂದ ಉಂಟಾಗುವ ನೀರಿನ ತಾಪಮಾನ ಮತ್ತು ಭೂ ಬಳಕೆಯಿಂದ ಹೆಚ್ಚಿನ ಮಾಲಿನ್ಯಕಾರಕ ಹರಿವು. ಸಮುದ್ರದ ನೀರಿನ ಹೆಚ್ಚುತ್ತಿರುವ ತಾಪಮಾನವು ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳುವ ಶುದ್ಧ ನೀರಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.


"ನಮ್ಮ ಅಧ್ಯಯನವು ಮೊದಲ ಸಾಮೂಹಿಕ ಅಳಿವು ಪ್ರಮುಖ ಹವಾಮಾನ ಬದಲಾವಣೆಯಿಂದ ಉಂಟಾಗಿದೆ ಎಂದು ತೋರಿಸುತ್ತದೆ. ಪ್ರಾಣಿಗಳ ಜೀವನಕ್ಕೆ ನಮ್ಮ ಪ್ರಸ್ತುತ ಹವಾಮಾನ ಬಿಕ್ಕಟ್ಟಿನ ಅಪಾಯಗಳನ್ನು ಸೃಷ್ಟಿಸುವ ಎಚ್ಚರಿಕೆ ಘಂಟೆಯಾಗಿದೆ ಎಂದು ಅಧ್ಯಯನ ಹೇಳಿದೆ.


ಪ್ರಕೃತಿಯಲ್ಲಿ ಕಾಣುವ ಏರು-ಪೇರುಗಳಿಗೆ ನೇರವಾಗಿ ಮಾನವರಾದ ನಾವೇ ಕಾರಣರು. ಪರಿಸರ ಕೇವಲ ನಮ್ಮದಲ್ಲ, ಸಕಲ ಪ್ರಾಣಿ, ಜೀವರಾಶಿಗಳಿಗೂ ಜೀವಿಸುವ ಹಕ್ಕಿದೆ. ಅದನ್ನ ಅರ್ಥಮಾಡಿಕೊಂಡು ಹವಮಾನವನ್ನು, ಪರಿಸರವನ್ನು ಹಾಳು ಮಾಡದಿದ್ದರೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ, ಆಮ್ಲಜನಕವನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿಯೂ ಬರುವುದಿಲ್ಲ.

Published by:shrikrishna bhat
First published: