Viral News: ಶತಮಾನದ ಅಂತ್ಯದ ವೇಳೆಗೆ ಕುಸಿದು ಬೀಳಲಿದೆ 80 ಸಾವಿರ ಮನೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗ್ಲೋಬಲ್ ವಾರ್ಮಿಂಗ್ ಪ್ರಸ್ತುತ ದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಇದರಿಂದಾಗಿ ಹವಮಾನ ಬದಲಾವಣೆ, ತಾಪಮಾನ ಏರಿಕೆ, ನೀರು ಆವಿಯಾಗುವಿಕೆ, ಗ್ಲೇಶಿಯರ್ ಕರಗುವಿಕೆ, ಸಮುದ್ರದ ಮಟ್ಟ ಹೆಚ್ಚಾಗುವಿಕೆ ಹೀಗೆ ಹತ್ತಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ.

  • Trending Desk
  • 2-MIN READ
  • Last Updated :
  • Share this:

ಕಡಲಿನ ಅಲೆಗಳು (Sea Waves) ಯಾವ ಘಳಿಗೆಯಲ್ಲಿ ಮನೆಗೆ ನುಗ್ಗಿ ಆಪೋಷನ ಪಡೆಯುತ್ತವೆಯೋ ಎಂಬ ಆತಂಕದಿಂದ ಕರ್ನಾಟಕ ಸೇರಿ ಹಲವಡೆ ಕಡಲತಡಿಯ ಮಂದಿ ಜೀವಭಯದಿಂದ ಬದುಕುತ್ತಿದ್ದಾರೆ ಎನ್ನಬಹುದು. ಕಡಲ ಅಲೆ, ಉಬ್ಬರವಿಳಿತಕ್ಕೆ ಮುಖ್ಯ ಕಾರಣ ಈ ಗ್ಲೋಬಲ್ ವಾರ್ಮಿಂಗ್. ಗ್ಲೋಬಲ್ ವಾರ್ಮಿಂಗ್ ಪ್ರಸ್ತುತ ದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಇದರಿಂದಾಗಿ ಹವಮಾನ ಬದಲಾವಣೆ, ತಾಪಮಾನ ಏರಿಕೆ, ನೀರು ಆವಿಯಾಗುವಿಕೆ, ಗ್ಲೇಶಿಯರ್ ಕರಗುವಿಕೆ, ಸಮುದ್ರದ ಮಟ್ಟ (Sea Level) ಹೆಚ್ಚಾಗುವಿಕೆ ಹೀಗೆ ಹತ್ತಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಇದರ ಜೊತೆಗೆ ಕರಾವಳಿ ಸವೆತ ಕೂಡ ಗ್ಲೋಬಲ್ ವಾರ್ಮಿಂಗ್ ಪರಿಣಾಮದಿಂದ ಸಂಭವಿಸುತ್ತದೆ. ವಿಶ್ವದಾದ್ಯಂತ (World) ಕರಾವಳಿ ತೀರಕ್ಕೆ ದೊಡ್ಡ ಕಂಟಕವಾಗಿರುವ ಕರಾವಳಿ ಸವೆತ ಜನರನ್ನು ಆತಂಕಕ್ಕೀಡು ಮಾಡಿದೆ. ಹವಾಮಾನ ಅಧ್ಯಯನ ಗುಂಪು ನಡೆಸಿದ ಹೊಸ ಅಧ್ಯಯನವು ಭಾರತದ ಜೋಶಿಮಠದಂತೆಯೇ ಬ್ರಿಟನ್ ಇಂತಹ ಒಂದು ಬಿಕ್ಕಟ್ಟನ್ನು ಎದುರಿಸಬಹುದು ಎಂದು ಬಹಿರಂಗಪಡಿಸಿದೆ. ಕರಾವಳಿ ಸವೆತದಿಂದ ಪ್ರಭಾವಿತವಾಗಿರುವ ಅಲ್ಲಿನ ಹಲವಾರು ಕರಾವಳಿ ಪ್ರದೇಶಗಳಲ್ಲಿನ ಮನೆಗಳು ಅಪಾಯದಲ್ಲಿದೆ ಎಂದು ವರದಿ ತಿಳಿಸಿದೆ.


584 ಮಿಲಿಯನ್ ಪೌಂಡ್‌ ಮೌಲ್ಯದ ಮನೆಗಳು ಸಮುದ್ರ ಪಾಲಾಗಬಹುದು - ವರದಿ
ಹೌದು, ಕರಾವಳಿ ಸವೆತದಿಂದಾಗಿ 2100ರ ವೇಳೆಗೆ ಯುಕೆಯಲ್ಲಿ ಸುಮಾರು 584 ಮಿಲಿಯನ್ ಪೌಂಡ್‌ ಮೌಲ್ಯದ 21 ಕರಾವಳಿ ಹಳ್ಳಿಗಳು ಮತ್ತು ಕುಗ್ರಾಮಗಳ ಒಟ್ಟು 80,000 ಮನೆಗಳು ಅಪಾಯದಲ್ಲಿದ್ದು, ಸಮುದ್ರಕ್ಕೆ ಬೀಳುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ.


"ಎನ್ವಿರಾನ್ಮೆಂಟ್ ಏಜೆನ್ಸಿಯ ರಾಷ್ಟ್ರೀಯ ಕರಾವಳಿ ಸವೆತ ಅಪಾಯದ ಮ್ಯಾಪಿಂಗ್ (NCERM) ನಿಂದ ಡೇಟಾವನ್ನು ಬಳಸಿಕೊಂಡು, ಸಂಸ್ಥೆಯು ಪ್ರದೇಶವಾರು ಯೋಜಿತ ನಷ್ಟದ ಮೊತ್ತವನ್ನು ಮತ್ತು ಪ್ರತಿ ಪ್ರದೇಶದಲ್ಲಿನ ಆಸ್ತಿಗಳ ಸರಾಸರಿ ಬೆಲೆಯನ್ನು ಲೆಕ್ಕ ಹಾಕಿದೆ" ಎಂದು ಮಿರರ್ ವರದಿ ಮಾಡಿದೆ.


ಯಾವೆಲ್ಲಾ ಪ್ರದೇಶಗಳು ಡೇಂಜರ್‌ ಜೋನ್‌ನಲ್ಲಿವೆ?
ಅಧ್ಯಯನ ನಡೆಸಿದ ಹವಮಾನ ತಂಡ ಒನ್ ಹೋಮ್, "ಮುಳುಗುವ ಅಪಾಯದಲ್ಲಿರುವ ಪ್ರದೇಶಗಳಲ್ಲಿ ಕಾರ್ನ್‌ವಾಲ್, ಕುಂಬ್ರಿಯಾ, ಡಾರ್ಸೆಟ್, ಈಸ್ಟ್ ಯಾರ್ಕ್‌ಷೈರ್, ಎಸ್ಸೆಕ್ಸ್, ಕೆಂಟ್, ಐಲ್ ಆಫ್ ವೈಟ್, ನಾರ್ತಂಬರ್‌ಲ್ಯಾಂಡ್, ನಾರ್ಫೋಕ್ ಮತ್ತು ಸಸೆಕ್ಸ್‌ನಲ್ಲಿನ ಕಡಲತೀರದ ಹಳ್ಳಿಗಳು ಸೇರಿವೆ. ಈ ಎಲ್ಲಾ ಪ್ರದೇಶಗಳ 584 ಮಿಲಿಯನ್ ಪೌಂಡ್ ಮೌಲ್ಯ ಎಂದು ತಿಳಿಸಿದೆ.


ಇದನ್ನೂ ಓದಿ: ಬಡವರು, ನಿರುದ್ಯೋಗಿಗಳಿಗೆ ಏನೂ ಕೊಟ್ಟಿಲ್ಲ ಎಂದು ಬಜೆಟ್ ಪ್ರತಿಯನ್ನು ಕಸದ ಬುಟ್ಟಿಗೆ ಎಸೆದ ಪಿ ಚಿದಂಬರಂ!


ಬ್ರಿಟನ್‌ನಲ್ಲಿ ದಾಖಲೆಯ ತಾಪಮಾನ
ಬ್ರಿಟನ್ ಕರಾವಳಿ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆ ಮತ್ತು ಕರಾವಳಿ ಸವೆತದ ಪರಿಣಾಮವನ್ನು ವಿವರಿಸಿದ ಒನ್ ಹೋಮ್, "ಸಮುದ್ರ ಮಟ್ಟದಲ್ಲಿನ ಏರಿಕೆಯು ಇಂಗ್ಲೆಂಡ್‌ನ ಕರಾವಳಿಯ ವೇಗದ ಸವೆತಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.


364 ವರ್ಷಗಳ ಹಿಂದೆ ದಾಖಲೆಗಳು ಪ್ರಾರಂಭವಾದಾಗಿನಿಂದ ಕಳೆದ ವರ್ಷ 2022 ಅನ್ನು ಇಂಗ್ಲೆಂಡ್‌ನಲ್ಲಿ ಅತ್ಯಂತ ಬೆಚ್ಚಗಿನ ವರ್ಷ ಎಂದು ಉಲ್ಲೇಖಿಸಲಾಗಿದ್ದು, ಆ ಮಟ್ಟಿಗೆ ಇಲ್ಲಿ ತಾಪಮಾನ ಏರಿಕೆಯಾಗಿದೆ ಎಂದು ವರದಿ ಹೇಳಿದೆ.


ತಾಪಮಾನ ಏರಿಕೆಯಾಗಿ ಪ್ರಪಂಚವು ಬೆಚ್ಚಗಾಗುತ್ತದೆ, ಬಿರುಗಾಳಿಗಳು ತೀವ್ರಗೊಳ್ಳುತ್ತವೆ, ಮಂಜುಗಡ್ಡೆಯು ವೇಗವಾಗಿ ಕರಗುತ್ತದೆ ಮತ್ತು ಸಾಗರಗಳು ವಿಸ್ತರಿಸುತ್ತವೆ, ಇದರಿಂದಾಗಿ ಸಮುದ್ರ ಮಟ್ಟವು ಹೆಚ್ಚಾಗುತ್ತದೆ.ಇದರಿಂದ ಸಹಜವಾಗಿಯೇ ಕಡಲ ಕೊರೆತ ಉಂಟಾಗುತ್ತದೆ.


"ಹವಾಮಾನ ಬದಲಾವಣೆ ಅಪಾಯದ ಸಂಕೇತ"
2021 ರ ಯುಎನ್ ವರದಿಯ ಪ್ರಕಾರ, ಹವಾಮಾನ ಬದಲಾವಣೆಯನ್ನು ಅಪಾಯದ ಗುಣಕ ಎಂದು ಉಲ್ಲೇಖಿಸಲಾಗಿದ್ದು, ಇದು ಆರ್ಥಿಕ ಮತ್ತು ಆಸ್ತಿ ನಷ್ಟಗಳ ಜೊತೆಗೆ ಸಮುದಾಯಗಳು ಮತ್ತು ರಾಜ್ಯಗಳ ಸ್ಥಿರತೆ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.




ಕಡಲ ಕೊರತೆಯಿಂದ ಈಗಲೂ ಸಹ ಅಕ್ಕಪಕ್ಕದ ಪ್ರದೇಶಗಳು ಕೆಟ್ಟ ಪರಿಸ್ಥಿತಿಗಳನ್ನು ಎದುರಿಸುಸುತ್ತಲೇ ಇವೆ. ದುರ್ಘಟನೆಗಳನ್ನು ತಡೆಯಲು ಕಲ್ಲು ಸುರಿಯುವಂತಹ ಹಾರ್ಡ್‌ ಸೊಲ್ಯೂಷನ್‌ ವಿಧಾನದ ಜೊತೆ ಲಾವಂಚ, ನಿತ್ಯಪುಷ್ಪ, ಬೀಳು ಜಾತಿಯ ಗಿಡಗಳು, ತೆಂಗು, ತಾಳೆ ಇನ್ನಿತರ ಸಸ್ಯಗಳನ್ನು ನೆಡುವುದು, ಅವುಗಳ ರಕ್ಷಣೆಗೆ ತಾಳೆ ಮರದ ಗರಿಗಳ ತಡೆಬೇಲಿ ಕಟ್ಟುವಂತಹ ಸಾಫ್ಟ್‌ ಸೊಲ್ಯೂಷನ್‌ ವಿಧಾನವನ್ನು ಸಹ ಕರ್ನಾಟಕ ಸೇರಿ ಹಲವು ಕಡೆ ಅನುಷ್ಠಾನಕ್ಕೆ ತರಲಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು