Water: ನೀರಿನ ಒಳ ರಚನೆ ಹೇಗಿರುತ್ತೆ? ಈ ಕುತೂಹಲಕಾರಿ ವಿಷಯ ತಿಳ್ಕೊಬೇಕಾ ಈ ಸ್ಟೋರಿ ಓದಿ

ನೀರು ಏಕೆ ಪದೇ ಪದೇ ತನ್ನ ಆಕಾರವನ್ನು ಬದಲಾಯಿಸುತ್ತದೆ? ಹಿಮಾಲಯದಂತಹ ಪ್ರದೇಶದ ಕೆಲವು ತಾಪಮಾನದಲ್ಲಿ ನೀರು ಹೆಪ್ಪುಗಟ್ಟಿ ಮಂಜುಗಡ್ಡೆ ಏಕಾಗುತ್ತದೆ? ಇನ್ನು ಕೆಲವು ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಆವಿಯಾಗುತ್ತದೆ ಏಕೆ? ಎಂಬ ಪ್ರಶ್ನೆಗಳು ಆಗಾಗ ಕಾಡುತ್ತಿರುತ್ತವೆ. ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯ ಮತ್ತು ಸಪಿಯೆಂಜಾ ಯೂನಿವರ್ಸಿಟಾ ಡಿ ರೋಮಾದ ಸಂಶೋಧಕರು ನೀರಿನ ಗುಣಲಕ್ಷಣವನ್ನು ಒಂದನ್ನು ಬಹಿರಂಗಪಡಿಸಿದ್ದಾರೆ.

ನೀರಿನ ಹನಿ

ನೀರಿನ ಹನಿ

  • Share this:
ನೀರಿನ ಹನಿಗಳೊಳಗೆ (Honey) ಏನಾಗುತ್ತದೆಂದು ನೀವು ಎಂದಾದರೂ ಯೋಚಿಸಿದ್ದೀರಾ? ನೀರು ಏಕೆ ಪದೇ ಪದೇ ತನ್ನ ಆಕಾರವನ್ನು ಬದಲಾಯಿಸುತ್ತದೆ? ಹಿಮಾಲಯದಂತಹ (Himalayas) ಪ್ರದೇಶದ ಕೆಲವು ತಾಪಮಾನದಲ್ಲಿ ನೀರು ಹೆಪ್ಪುಗಟ್ಟಿ ಮಂಜುಗಡ್ಡೆ ಏಕಾಗುತ್ತದೆ? ಇನ್ನು ಕೆಲವು ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಆವಿಯಾಗುತ್ತದೆ ಏಕೆ? ಎಂಬ ಪ್ರಶ್ನೆಗಳು (Question) ಆಗಾಗ ಕಾಡುತ್ತಿರುತ್ತವೆ. ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾನಿಲಯ ಮತ್ತು ಸಪಿಯೆಂಜಾ ಯೂನಿವರ್ಸಿಟಾ ಡಿ ರೋಮಾದ ಸಂಶೋಧಕರು ಮೂರು ದಶಕಗಳ ಹಿಂದೆ ಪ್ರಸ್ತಾಪಿಸಲಾದ ವಿಶಿಷ್ಟವಾದ ನೀರಿನ ಗುಣಲಕ್ಷಣವನ್ನು ಒಂದನ್ನು ಬಹಿರಂಗಪಡಿಸಿದ್ದಾರೆ. ನೀರು (Water) ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆ ಆಗುವ ಹಂತವನ್ನು ಹಂತ ಪರಿವರ್ತನೆ ಎಂದು ಕರೆಯಲಾಗುತ್ತದೆ. ಇದರ ಅರ್ಥ ಎರಡು ವಿಭಿನ್ನ ದ್ರವಗಳಾಗಿ ನೀರು ಬದಲಾಗಬಹುದು.

ಜೊತೆಗೆ, ಇದು ಅತ್ಯಂತ ತಂಪಾದ ತಾಪಮಾನದಲ್ಲಿ ಎರಡು ವಿಭಿನ್ನ ದ್ರವಗಳಾಗಿ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆದರೆ, ಕಡಿಮೆ ತಾಪಮಾನದಲ್ಲಿ ನೀರು ಘನವಾಗಿ ಮಂಜುಗಡ್ಡೆಯಾಗಿ ಬದಲಾಗುವುದಿಲ್ಲವೇ?
ಹೌದು, ಇದು ಕೂಡ ಸಂಭವಿಸುತ್ತದೆ. ಸುಮಾರು 30 ವರ್ಷಗಳಿಂದ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸುತ್ತಿದ್ದ ಸಿದ್ಧಾಂತವನ್ನು ದೃಢೀಕರಿಸುವಲ್ಲಿ ಅದು ದೊಡ್ಡ ಸವಾಲಾಗಿ ಉಳಿದಿದೆ. ನೀರಿನೊಳಗೆ ಅಡಗಿರುವ ರಾಸಾಯನಿಕ ಸಂಯೋಜನೆಗಳ ಕಾರಣಕ್ಕಾಗಿ ಅದು ಹೇಗೆ ದ್ರವವಾಗಿ ಬದಲಾಗುತ್ತದೆ ಎಂಬುದರ ಬಗ್ಗೆ ಇನ್ನು ಹೆಚ್ಚು ತಿಳಿದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ಈ ಸಂಶೋಧನಾ ಅಧ್ಯಯನದ ಆವಿಷ್ಕಾರಗಳನ್ನು ನೇಚರ್ ಫಿಸಿಕ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಿಂದ ತಿಳಿದು ಬಂದ ವಿಷಯವೆಂದರೆ ದ್ರವದ ನೀರಿನ ಪ್ರಮುಖ ಲಕ್ಷಣವೆಂದರೆ ತಂಪಾಗಿಸುವಾಗ ಅದರ ಥರ್ಮೋಡೈನಾಮಿಕ್ ಪ್ರತಿಕ್ರಿಯೆಯ ಕಾರ್ಯಗಳ ವಿಲಕ್ಷಣ ವರ್ತನೆ ಎಂದು ಹೇಳುತ್ತದೆ, ಸುತ್ತುವರಿದ ಒತ್ತಡದಲ್ಲಿ ಗರಿಷ್ಠ ಸಾಂದ್ರತೆಯು ನೀರಿನ ಹನಿಯ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಸಪಿಯೆಂಜಾ ಯೂನಿವರ್ಸಿಟಾ ಡಿ ರೋಮಾದಲ್ಲಿ ಪ್ರಾಧ್ಯಾಪಕ ಮತ್ತು ಅಧ್ಯಯನದ ಸಹ-ಲೇಖಕ ಫ್ರಾನ್ಸೆಸ್ಕೊ ಸಿಯೊರ್ಟಿನೊ ಅವರು 1992 ರಲ್ಲಿ ನೀರಿನಲ್ಲಿ ಉಂಟಾಗುವ ದ್ರವ-ದ್ರವ ಹಂತದ ಪರಿವರ್ತನೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು.

ಅಧ್ಯಯನದ ಬಗ್ಗೆ ಫ್ರಾನ್ಸೆಸ್ಕೊ ಏನಂದ್ರು?
"ಈ ಅಧ್ಯಯನದಲ್ಲಿ ನಾವು ಮೊದಲ ಬಾರಿಗೆ, ನೆಟ್‌ವರ್ಕ್ ಎಂಟ್ಯಾಂಗಲ್‌ಮೆಂಟ್ ಐಡಿಯಾಗಳ ಆಧಾರದ ಮೇಲೆ ದ್ರವ-ದ್ರವ ಹಂತದ ಪರಿವರ್ತನೆಯ ದೃಷ್ಟಿಕೋನವನ್ನು ಪ್ರಸ್ತಾಪಿಸಿದ್ದೇವೆ. ಈ ಅಧ್ಯಯನವು ಟೋಪೋಲಾಜಿಕಲ್ ಪರಿಕಲ್ಪನೆಗಳ ಆಧಾರದ ಮೇಲೆ ಸೈದ್ಧಾಂತಿಕ ಮಾದರಿಯನ್ನು ಪ್ರೇರೇಪಿಸುತ್ತದೆ ಎಂಬುದು ನನಗೆ ಸ್ಪಷ್ಟನೆ ಇದೆ” ಎಂದು ಹೇಳಿಕೆಯಲ್ಲಿ ಫ್ರಾನ್ಸೆಸ್ಕೊ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Tongue Cut: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ದ ಪ್ರಕಾರ, ಸಿಮ್ಯುಲೇಶನ್‌ನಲ್ಲಿ ನೀರಿನ ಕಲಿಲಗಳ ಮಾದರಿಯನ್ನು ಬಳಸಿದರು ಮತ್ತು ನಂತರ ಬಳಸಿದ ನೀರಿನ ಆಣ್ವಿಕ ಮಾದರಿಗಳನ್ನು ಬಳಸಿದರು. ಕಲಿಲಗಳು ಒಂದೇ ನೀರಿನ ಅಣುವಿಗಿಂತ ಸಾವಿರ ಪಟ್ಟು ದೊಡ್ಡದಾದ ಕಣಗಳಾಗುತ್ತವೆ ಎಂಬುದನ್ನು ಈ ಅಧ್ಯಯನದಲ್ಲಿ ತಿಳಿಸಿದ್ದಾರೆ. "ನೀರಿನ ಈ ಕಲಿಲಗಳ ಮಾದರಿಯು ಆಣ್ವಿಕ ನೀರಿಗೆ ದರ್ಪಣವನ್ನು ಒದಗಿಸುತ್ತದೆ ಮತ್ತು ಎರಡು ದ್ರವಗಳ ಕುರಿತ ಅದಕ್ಕೆ ಸಂಬಂಧಿಸಿದ ನೀರಿನ ಬಗ್ಗೆ ಹೇಳಲು ನಮಗೆ ಇದು ಅನುವು ಮಾಡಿಕೊಡುತ್ತದೆ” ಎಂದು ಅಧ್ಯಯನ ಪತ್ರಿಕೆಯ ಪ್ರಮುಖ ಲೇಖಕ ಡಾ. ದ್ವೈಪಯನ್ ಚಕ್ರವರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಧ್ಯಯನದಿಂದ ತಿಳಿದು ಬಂದಿದ್ದೇನು?
ಈ ಅಧ್ಯಯನ ಸಂಶೋಧನೆಯು ನೀರಿನೊಳಗೆ ಏನಿದೆ, ಯಾವ ರೀತಿಯ ರಚನೆಯನ್ನು ಹೊಂದಿದೆ ಎಂದು ತಿಳಿಯಲು ಮತ್ತು ಆಣ್ವಿಕ ಆಧಾರದಲ್ಲಿ ನಡೆಯುವ ಚಲನೆಗಳು ಮತ್ತು ರಸಾಯನಶಾಸ್ತ್ರವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದೆ. ಅದನ್ನು ಮತ್ತಷ್ಟು ವಿಶ್ಲೇಷಿಸಬಹುದು ಮತ್ತು ಅನ್ವೇಷಿಸಬಹುದು ಎಂದು ತಿಳಿಸುತ್ತದೆ.

ಇದನ್ನೂ ಓದಿ: Viral News: ಪ್ರೀತಿಪಾತ್ರರ ಮೃತ ದೇಹವನ್ನು ತಿಂದರೆ, ಶತ್ರುವಿನ ಮೃತ ದೇಹವನ್ನು ಏನ್​ ಮಾಡ್ತಾರೆ ನೋಡಿ ಈ ಬುಡಕಟ್ಟು ಜನಾಂಗದವರು

ಈ ಅಧ್ಯಯನದಿಂದ ನಮಗೆ ತಿಳಿದು ಬಂದ ಸಂಗತಿ ಎಂದರೆ ನೀರು ತನ್ನೊಳಗೆ ಹೈಡ್ರೊಜನ್‌ ಬಂಧವನ್ನು ಪುನರ್‌ರಚಿಸುವ ರೀತಿಯನ್ನು ಗಮನಿಸಿದರೆ ಅದನ್ನು ನೋಡುವುದೇ ಒಂದು ಸಂತೋಷದ ಸಂಗತಿ. ಅಣುಗಳ ಜೊತೆ ರಾಸಾಯನಿಕ ಬಂಧಗಳನ್ನು ವಿನಿಮಯ ಮಾಡಿಕೊಳ್ಳುವುದು ಹೀಗೆ ನೀರಿನ ಒಳ ರಚನೆಯು ಬಹಳ ಅದ್ಭುತವಾಗಿ ಇರುತ್ತದೆ ಎಂಬುದು ತಿಳಿದು ಬರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
Published by:Ashwini Prabhu
First published: