Bank Loan: ಬ್ಯಾಂಕಿನಿಂದ ಲೋನ್ ಬೇಕಾ? ಹಾಗಿದ್ರೆ ಈ ದಾಖಲೆಗಳನ್ನು ರೆಡಿ ಇಟ್ಕೊಳ್ಳಿ.. ಯಾವ ಲೋನ್​ಗೆ ಯಾವ ಡಾಕ್ಯುಮೆಂಟ್ಸ್? ಇಲ್ಲಿದೆ ಫುಲ್ ಡೀಟೆಲ್ಸ್

Loan Documents: ಅನೇಕ ಬಾರಿ ಯಾವ ಲೋನ್​ಗೆ ಯಾವ ಡಾಕ್ಯುಮೆಂಟ್ಸ್ ಕೊಡಬೇಕು ಎನ್ನುವ ಮಾಹಿತಿ ಮೊದಲೇ ತಿಳಿದಿದ್ದರೆ ಕೆಲಸ ಮತ್ತಷ್ಟು ಸುಲಭವಾಗುತ್ತದೆ. ಪ್ರಮುಖವಾದ ಕೆಲವು ಲೋನ್​ಗಳಿಗೆ ಅತ್ಯಗತ್ಯವಾಗಿ ಇರಬೇಕಾದ ದಾಖಲೆಗಳ ವಿವರಗಳು ಇಲ್ಲಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Bank Loan: ಲೋನ್ ತೆಗೆದುಕೊಳ್ಳದವರು ಬಹಳ ಅಪರೂಪ. ಜೀವನದ ಅನೇಕ ಘಟ್ಟಗಳಲ್ಲಿ ನಾನಾ ಕಾರಣಗಳಿಗಾಗಿ ಎಲ್ಲರೂ ಬ್ಯಾಂಕುಗಳಿಂದ ವಿವಿಧ ರೀತಿಯ ಲೋನ್​ಗಳನ್ನು ಪಡೆದೇ ಇರುತ್ತೇವೆ. ಅನೇಕ ಸಂದರ್ಭಗಳಲ್ಲಿ ಒಂದು ಸಣ್ಣ ಲೋನ್​ಗಾಗಿ ದಿನಗಟ್ಟಲೆ, ವಾರಗಟ್ಟಲೆ ಅಲೆದಿರುತ್ತೇವೆ. ಲೋನ್ ಕೊಡಲು ಬಹುತೇಕ ಎಲ್ಲಾ ಬ್ಯಾಂಕುಗಳೂ ತುದಿಗಾಲಲ್ಲಿ ನಿಂತಿರುತ್ತವೆ. ಆದರೂ ಲೋನ್ ಪಡೆಯೋಕೆ ಜನ ಕಷ್ಟಪಡೋಕೆ ಮೂಲ ಕಾರಣ ದಾಖಲೆಗಳು ಅಥವಾ ಡಾಕ್ಯುಮೆಂಟ್ಸ್. ಬ್ಯಾಂಕಿಗೆ ನಾವು ನೀಡಬೇಕಾದ ದಾಖಲೆಗಳು ಸರಿಯಾಗಿದ್ದರೆ ಲೋನ್ ಸಿಗುವುದು ಅಷ್ಟೇನೂ ಕಷ್ಟವಾಗುವುದಿಲ್ಲ. ಅನೇಕ ಬಾರಿ ಯಾವ ಲೋನ್​ಗೆ ಯಾವ ಡಾಕ್ಯುಮೆಂಟ್ಸ್ ಕೊಡಬೇಕು ಎನ್ನುವ ಮಾಹಿತಿ ಮೊದಲೇ ತಿಳಿದಿದ್ದರೆ ಕೆಲಸ ಮತ್ತಷ್ಟು ಸುಲಭವಾಗುತ್ತದೆ. ಪ್ರಮುಖವಾದ ಕೆಲವು ಲೋನ್​ಗಳಿಗೆ ಅತ್ಯಗತ್ಯವಾಗಿ ಇರಬೇಕಾದ ದಾಖಲೆಗಳ ವಿವರಗಳು ಇಲ್ಲಿವೆ.

ಆಸ್ತಿಯನ್ನು ಅಡವಿಟ್ಟು ಪಡೆಯುವ ಲೋನ್​ಗೆ ಬೇಕಾದ ದಾಖಲೆಗಳು:

ವೇತನಸಹಿತ ಉದ್ಯೋಗಿಗಳಿಗೆ:

  1. ಮನೆಯ ಸಾಕ್ಷಿ: ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್ ಅಥವಾ ಓಟರ್ ಐಡಿ ಅಥವಾ ದೂರವಾಣಿಯ ಬಿಲ್

  2. ಗುರುತಿನ ಸಾಕ್ಷಿ: ಓಟರ್ ಐಡಿ ಅಥವಾ ಆಧಾರ್ ಕಾರ್ಡ್ ಅಥವಾ ಡ್ರೈವರ್ಸ್ ಲೈಸೆನ್ಸ್ ಅಥವಾ ಉದ್ಯೋಗದ ಕಾರ್ಡ್

  3. ಕಳೆದ 6 ತಿಂಗಳಿನ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ನಿಮ್ಮ ವೇತನ ಬರುವ ಅಕೌಂಟಿನ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.

  4. ಕಳೆದ ಎರಡು ವರ್ಷಗಳ Form 16

  5. ಅಡವಿಡುವ ಆಸ್ತಿಯ ಎಲ್ಲಾ ದಾಖಲೆ ಪತ್ರಗಳು


ಸ್ವ-ಉದ್ಯೋಗಿಗಳಿಗೆ:

  1. ಕಳೆದ 2 ವರ್ಷಗಳ ಫೈನಾನ್ಶಿಯಲ್ ಸ್ಟೇಟ್ಮೆಂಟ್

  2. ಮನೆಯ ಸಾಕ್ಷಿ: ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್ ಅಥವಾ ಓಟರ್ ಐಡಿ ಅಥವಾ ದೂರವಾಣಿಯ ಬಿಲ್

  3. ಗುರುತಿನ ಸಾಕ್ಷಿ: ಓಟರ್ ಐಡಿ ಅಥವಾ ಆಧಾರ್ ಕಾರ್ಡ್ ಅಥವಾ ಡ್ರೈವರ್ಸ್ ಲೈಸೆನ್ಸ್ ಅಥವಾ ಉದ್ಯೋಗದ ಕಾರ್ಡ್

  4. ಕಳೆದ 6 ತಿಂಗಳಿನ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ನಿಮ್ಮ ವೇತನ ಬರುವ ಅಕೌಂಟಿನ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.

  5. ಅಡವಿಡುವ ಆಸ್ತಿಯ ಎಲ್ಲಾ ದಾಖಲೆ ಪತ್ರಗಳು


ಪರ್ಸನಲ್ ಲೋನ್​ ಪಡೆಯಲು ಬೇಕಾದ ದಾಖಲೆಗಳು:

  1. ಗುರುತಿನ ಸಾಕ್ಷಿ: ಪಾಸ್​ಪೋರ್ಟ್ ಅಥವಾ ಓಟರ್ ಐಡಿ ಅಥವಾ ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್

  2. ವಿಳಾಸದ ಸಾಕ್ಷಿ: ಪಾಸ್​ಪೋರ್ಟ್ ಅಥವಾ ಓಟರ್ ಐಡಿ ಅಥವಾ ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್

  3. ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಕಳೆದ 6 ತಿಂಗಳ ಪಾಸ್​ಬುಕ್ ಸ್ಟೇಟ್ಮೆಂಟ್

  4. ಇತ್ತೀಚಿನ ಸ್ಯಾಲರಿ ಸ್ಲಿಪ್ ಅಥವಾ ಇತ್ತೀಚಿನ ಸ್ಯಾಲರಿ ಸರ್ಟಿಫಿಕೇಟ್ (Form 16 ಸಹಿತ)


ಬ್ಯುಸಿನೆಸ್ ಲೋನ್ ಪಡೆಯಲು ಬೇಕಾದ ದಾಖಲೆಗಳು:

  1. ಪ್ಯಾನ್ ಕಾರ್ಡ್

  2. ಆಧಾರ್ ಕಾರ್ಡ್ ಅಥವಾ ಪಾಸ್​ಪೋರ್ಟ್ ಅಥವಾ ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್

  3. ವಿಳಾಸದ ಪ್ರೂಫ್​ಗಾಗಿ: ಆಧಾರ್ ಕಾರ್ಡ್, ಓಟರ್ ಐಡಿ, ಪಾಸ್​ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್

  4. ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್



ಎಲ್ಲಾ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಇಟ್ಟುಕೊಳ್ಳಿ. ಜೊತೆಗೆ ನಿಮ್ಮದೊಂದಷ್ಟು ಪಾಸ್​ಪೋರ್ಟ್ ಅಳತೆಯ ಹಾಗೂ ಸ್ಟಾಂಪ್ ಅಳತೆಯ ಫೋಟೋಗಳನ್ನೂ ಜೊತೆಗಿಟ್ಟುಕೊಂಡಿರಿ. ಈ ದಾಖಲೆಗಳ ಒರಿಜಿನಲ್ ಮತ್ತು ನಕಲು ಪ್ರತಿಗಳನ್ನೆಲ್ಲಾ ನೀವು ರೆಡಿ ಇಟ್ಟುಕೊಂಡು ಬ್ಯಾಂಕಿಗೆ ಹೋದರೆ ಆಗ ನಿಮ್ಮ ಲೋನ್​ ಕೆಲಸ ಅಂದುಕೊಂಡದ್ದಕ್ಕಿಂತ ವೇಗವಾಗಿ ಸಾಗುತ್ತದೆ. ಬ್ಯಾಂಕ್ ಸಿಬ್ಬಂದಿಗೂ ಕೆಲಸ ಸರಾಗವಾಗುತ್ತದೆ.
Published by:Soumya KN
First published: