White/Yellow Stripes: ರೈಲು ಕೋಚ್‌ಗಳಲ್ಲಿ ಬಿಳಿ ಅಥವಾ ಹಳದಿ ಪಟ್ಟಿಗಳ ಸಂಕೇತವೇನು?

ರೈಲು ಕೋಚ್‌ಗಳಲ್ಲಿರುವ ಹಳದಿ ಪಟ್ಟಿಗಳು

ರೈಲು ಕೋಚ್‌ಗಳಲ್ಲಿರುವ ಹಳದಿ ಪಟ್ಟಿಗಳು

ರೈಲು ಪ್ರಯಾಣದ ಸಮಯದಲ್ಲಿ ನಾವು ರೈಲ್ವೇ ಗುರುತುಗಳು ಹಾಗೂ ಚಿಹ್ನೆಗಳನ್ನು ಕಂಡಿರುತ್ತೇವೆ. ಈ ಚಿಹ್ನೆ ಹಾಗೂ ಗುರುತುಗಳಲ್ಲಿ ಕೆಲವು ತುಂಬಾ ಪ್ರಾಮುಖ್ಯವಾದುದು ಹಾಗೂ ಇವುಗಳ ಬಗ್ಗೆ ನಾವು ಅರಿತಿರಲೇಬೇಕು. ಅದರಲ್ಲೊಂದು ಕೋಚ್‌ಗಳಲ್ಲಿ ಕಂಡುಬರುವ ಬಣ್ಣದ ಪಟ್ಟಿಗಳ ಸಂಕೇತಗಳು ಈ ಪಟ್ಟಿಯ ಅರ್ಥವೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ

ಮುಂದೆ ಓದಿ ...
  • Share this:

ನಾವೆಲ್ಲರೂ ರೈಲು ಪ್ರಯಾಣವನ್ನು (Train Travel) ಹೆಚ್ಚಾಗಿ ಆನಂದಿಸಿರುತ್ತೇವೆ ಹಾಗೂ ಬಾಲ್ಯ ಮಾತ್ರವಲ್ಲದೆ ಮುಪ್ಪಿನ ಕಾಲದಲ್ಲಿಯೂ ಅತ್ಯಂತ ವಿಶಿಷ್ಟವಾದ ಅನುಭವವನ್ನು ರೈಲು ಪ್ರಯಾಣ ನೀಡುತ್ತದೆ ಎಂಬುದಂತೂ ಸತ್ಯ. ರೈಲು ಪ್ರಯಾಣವೆಂದರೆ ಅದೊಂದು ರೀತಿಯ ಮೋಜು. ಸುತ್ತಲಿನ ಪ್ರಕೃತಿಯ ನೋಟ, ಬೇರೆ ಬೇರೆ ಊರುಗಳು, ರೈಲಿನಲ್ಲಿ ಮಾರಿಕೊಂಡು ಬರುವ ಚಾ, ಕಾಫಿ, ತಿಂಡಿ ಹೀಗೆ ರೈಲು ಪ್ರಯಾಣ ಒಂದು ರೀತಿಯ ವೈವಿಧ್ಯತೆಯ ಪರಿಚಯವನ್ನು ನಮಗೆ ಉಣಬಡಿಸುತ್ತದೆ. ರೈಲಿನಲ್ಲಿ ಸಾಕಷ್ಟು ಸ್ಥಳವಕಾಶ (Place) ಕೂಡ ಇರುವುದರಿಂದ ಪ್ರಯಾಣ ಕೂಡ ಆರಾಮವಾಗಿಯೇ ನಡೆಯುತ್ತದೆ. ಹೀಗಾಗಿಯೇ ಇತರ ಎಲ್ಲಾ ಪ್ರಯಾಣಗಳಿಗಿಂತಲೂ ರೈಲು ಪ್ರಯಾಣ ಹೆಚ್ಚು ಸ್ಮರಣೀಯವಾಗಿದೆ. ಇನ್ನು ದೂರ ಪ್ರಯಾಣದ ಸಮಯದಲ್ಲಿ (Travel time) ರೈಲು ಪ್ರಯಾಣವೇ ಹೆಚ್ಚು ಅನುಕೂಲಕರವಾಗಿದೆ.


ರೈಲ್ವೇ ಗುರುತು ಹಾಗೂ ಚಿಹ್ನೆಗಳ ಮಹತ್ವ
ಹೀಗೆ ಪ್ರಯಾಣದ ಸಮಯದಲ್ಲಿ ನಾವು ರೈಲ್ವೇ ಗುರುತುಗಳು ಹಾಗೂ ಚಿಹ್ನೆಗಳನ್ನು ಕಂಡಿರುತ್ತೇವೆ. ಈ ಚಿಹ್ನೆ ಹಾಗೂ ಗುರುತುಗಳಲ್ಲಿ ಕೆಲವು ತುಂಬಾ ಪ್ರಾಮುಖ್ಯವಾದುದು ಹಾಗೂ ಇವುಗಳ ಬಗ್ಗೆ ನಾವು ಅರಿತಿರಲೇಬೇಕು. ಅದರಲ್ಲೊಂದು ಕೋಚ್‌ಗಳಲ್ಲಿ ಕಂಡುಬರುವ ಬಣ್ಣದ ಪಟ್ಟಿಗಳ ಸಂಕೇತಗಳು ಈ ಪಟ್ಟಿಯ ಅರ್ಥವೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ


ಹಳದಿ ಅಥವಾ ಬಿಳಿ ಬಣ್ಣದ ಪಟ್ಟಿ ಏನು ಸೂಚಿಸುತ್ತದೆ?
ನೀವು ನೀಲಿ ICF (ಇಂಟಿಗ್ರಲ್ ಕೋಚ್ ಫ್ಯಾಕ್ಟ್ರಿ) ಯಲ್ಲಿ ಪ್ರಯಾಣಿಸುತ್ತಿದ್ದರೆ, ಕೊನೆಯ ಕಿಟಕಿಯ ಮೇಲೆ ಹಳದಿ ಅಥವಾ ಬಿಳಿ ಬಣ್ಣದ ಪಟ್ಟಿಯನ್ನು ನೋಡಿರಬಹುದು. ಬಿಳಿ ಬಣ್ಣವು ಕಾಯ್ದಿರಿಸದೇ ಇರುವ ದ್ವಿತೀಯ ದರ್ಜೆಯ ಕೋಚ್‌ಗಳನ್ನು ಸೂಚಿಸುತ್ತದೆ.


ಇದನ್ನೂ ಓದಿ:  Viral Video: ಮಳೆಯಿಂದಾದ ಸಮಸ್ಯೆ ನಡುವೆಯೂ ಹಣ ಸಂಪಾದಿಸಿದ ವ್ಯಕ್ತಿ!


ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗಾಗಿ ಸಾಮಾನ್ಯ (ಜನರಲ್) ಕೋಚ್ ಅನ್ನು ಹುಡುಕುವುದು ಕಷ್ಟವಾಗುತ್ತದೆ. ಹಾಗಾಗಿ ರೈಲು ಸ್ಟೇಶನ್‌ಗೆ ಆಗಮಿಸಿದಾಗ ಈ ಗುರುತನ್ನು ಆಧರಿಸಿ ಅವರು ಸುಲಭವಾಗಿ ಜನರಲ್ ಕೋಚ್ ಅನ್ನು ಕಂಡುಹಿಡಿಯಬಹುದಾಗಿದೆ.


ನೇರ ರೇಖೆಯ ಹಳದಿ ಪಟ್ಟಿ ಏನನ್ನು ಸೂಚಿಸುತ್ತದೆ?
ನೀಲಿ ಹಾಗೂ ಕೆಂಪು ಕೋಚ್‌ಗಳಲ್ಲಿ ಬಿಡಿಸಿರುವ ನೇರ ರೇಖೆಯ ಹಳದಿ ಪಟ್ಟಿಗಳನ್ನು ಕಂಡಲ್ಲಿ ಈ ಬೋಗಿಯು ದೈಹಿಕವಾಗಿ ಅಂಗವಿಕಲರಾದ ಅಂತೆಯೇ ಅನಾರೋಗ್ಯಕ್ಕೊಳಗಾದ ಪ್ರಯಾಣಿಕರಿಗೆ ಮೀಸಲು ಎಂಬರ್ಥವಾಗಿದೆ. ಇದರಿಂದ ದೈಹಿಕ ನ್ಯೂನತೆಗೊಳಗಾದವರು ಹಾಗೂ ಅನಾರೋಗ್ಯಕ್ಕೊಳಗಾದ ಪ್ರಯಾಣಿಕರು ತಮ್ಮ ಕೋಚ್‌ಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.


ಬೂದು ಬಣ್ಣದ ಕೋಚ್‌ನಲ್ಲಿರುವ ಹಸಿರು, ಕೆಂಪು ಪಟ್ಟಿಗಳು
ಇನ್ನು ಇದೇ ರೀತಿ ಬೂದು ಬಣ್ಣದ ಕೋಚ್‌ನಲ್ಲಿ ಹಸಿರು ಹಾಗೂ ಕೆಂಪು ಪಟ್ಟಿಗಳನ್ನು ಕಾಣಬಹುದು. ಹಸಿರು ಪಟ್ಟಿಯು ಮಹಿಳೆಯರಿಗೆ ಮೀಸಲಿರುವ ಕೋಚ್ ಅನ್ನು ತಿಳಿಸಿದರೆ, ಕೆಂಪು ಪಟ್ಟಿಯು ನಿರ್ದಿಷ್ಟವಾಗಿ ಮುಂಬೈ ರೈಲು ನಿಲ್ದಾಣಗಳಲ್ಲಿ EMU/MEMU ರೈಲುಗಳಲ್ಲಿರುವ ಪ್ರಥಮ ದರ್ಜೆ ಕ್ಯಾಬಿನ್‌ಗಳನ್ನು ಸೂಚಿಸುತ್ತದೆ.


ಪ್ರತಿಯೊಬ್ಬನೂ ತಿಳಿದುಕೊಂಡಿರಬೇಕಾದ ಮಾಹಿತಿ
ಈ ಮಾಹಿತಿಗಳನ್ನು ಪ್ರತಿಯೊಬ್ಬ ನಾಗರಿಕನು ಅರಿತುಕೊಂಡಿರುವುದು ಮುಖ್ಯವಾಗಿದ್ದು, ಇದರಿಂದ ಕೊನೆಯ ಕ್ಷಣದಲ್ಲಿ ಉಂಟಾಗುವ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದು ಅಂತೆಯೇ ಯಾವ ಬಣ್ಣದ ಪಟ್ಟಿಯು ಏನನ್ನು ಸೂಚಿಸುತ್ತದೆ? ಕೋಚ್ ಯಾರಿಗೆ ಮೀಸಲು ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ.


ಇದನ್ನೂ ಓದಿ: Viral Video: ದಾರಿ ಮಧ್ಯೆ ಲವ್ವರ್ ಜೊತೆ ಸಿಕ್ಕ ಪತ್ನಿ; ಇದನ್ನು ನೋಡಿದ ಗಂಡ ಮಾಡಿದ್ದೇನು ನೋಡಿ

top videos


    ಏಷ್ಯಾದ ಅತಿದೊಡ್ಡ ರೈಲು ಜಾಲ
    ಏಷ್ಯಾದ ಅತಿದೊಡ್ಡ ರೈಲು ಜಾಲವಾಗಿರುವ ಭಾರತೀಯ ರೈಲ್ವೇ, ವಿಶ್ವದಲ್ಲೇ ನಿರ್ವಹಣೆಯ ವಿಷಯದಲ್ಲಿ ಎರಡನೇ ಅತಿದೊಡ್ಡದಾಗಿದೆ. 14 ಬೋಗಿಗಳನ್ನು ಹೊಂದಿರುವ ಮೊದಲ ಪ್ರಯಾಣಿಕ ರೈಲು 1853 ರ ಏಪ್ರಿಲ್ 16 ರಂದು ಬಾಂಬೆಯಿಂದ (ಈಗಿನ ಮುಂಬೈ) ಥಾಣೆಗೆ 400 ಪ್ರಯಾಣಿಕರನ್ನೊಳಗೂಡಿ 34 ಕಿಮೀ ದೂರವನ್ನು ಕ್ರಮಿಸಿತು. ಅಂದಿನಿಂದ ಏಪ್ರಿಲ್ 16 ಅನ್ನು ಭಾರತೀಯ ರೈಲು ಸಾರಿಗೆ ದಿನವಾಗಿ ಆಚರಿಸಲಾಗುತ್ತದೆ.

    First published: