• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Tokyo Olympics: ಒಲಿಂಪಿಕ್ಸ್ ಕ್ರೀಡಾಪಟುಗಳ ಆಹಾರ ಪದ್ಧತಿ ಹೇಗಿದೆ? ಸಾಮಾನ್ಯ ಜನರೂ ಇದನ್ನು ಅನುಸರಿಸಬಹುದಾ?

Tokyo Olympics: ಒಲಿಂಪಿಕ್ಸ್ ಕ್ರೀಡಾಪಟುಗಳ ಆಹಾರ ಪದ್ಧತಿ ಹೇಗಿದೆ? ಸಾಮಾನ್ಯ ಜನರೂ ಇದನ್ನು ಅನುಸರಿಸಬಹುದಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Diet Plan: ಒಲಿಂಪಿಕ್ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟು ಕೂಡ ತನ್ನ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅಂದರೆ ಕಾರ್ಬ್ಸ್, ಪ್ರೊಟೀನ್ ಹಾಗೂ ಕೊಬ್ಬಿನ ಸಮತೋಲಿತ ಆಹಾರ ಪದ್ಧತಿ.

  • Share this:

Health Tips: ಒಲಿಂಪಿಕ್ ಕ್ರೀಡಾಂಗಣದಲ್ಲಿ ಚಟುವಟಿಕೆಯಿಂದ ಎಲ್ಲಾ ಕ್ರೀಡೆಗಳಲ್ಲೂ ಪಾಲ್ಗೊಂಡು ಸಾಕಷ್ಟು ಪದಕಗಳನ್ನು ತಮ್ಮ ತೆಕ್ಕೆಗೆ ಬಾಚಿಕೊಳ್ಳುವ ಕ್ರೀಡಾಪಟುಗಳನ್ನು ನೋಡಿ ನಮಗೆ ಆನಂದವಾಗುತ್ತದೆ. ಇವರಿಗೆ ಇಷ್ಟೆಲ್ಲಾ ಆಟವಾಡುವಾಗ ಶ್ರಮವೆನಿಸುವುದಿಲ್ಲವೇ? ಇವರು ತಿನ್ನುವ ಆಹಾರವಾದರೂ ಏನು..? ಕ್ರೀಡೆಗೆ ಬೇಕಾದ ಮೈಕಟ್ಟನ್ನು ಇವರು ಹೇಗೆ ನಿರ್ವಹಿಸುತ್ತಾರೆ..? ಮೊದಲಾದ ಯೋಚನೆಗಳು ನಮ್ಮ ಮನಸ್ಸಿನಲ್ಲಿ ದಾಳಿ ಇಡುತ್ತಿರುತ್ತದೆ. ಹಾಗಾದರೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಈ ಲೇಖನ ಸೂಕ್ತ ಉತ್ತರವನ್ನು ನೀಡಲಿದೆ.ಒಲಿಂಪಿಕ್ ಕ್ರೀಡಾಳುಗಳ ಆಹಾರ ಕ್ರಮ, ಅಭ್ಯಾಸ ಕ್ರಮ ಹೀಗೆ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ. ಒಲಿಂಪಿಕ್ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟು ಕೂಡ ತನ್ನ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅಂದರೆ ಕಾರ್ಬ್ಸ್, ಪ್ರೊಟೀನ್ ಹಾಗೂ ಕೊಬ್ಬಿನ ಸಮತೋಲಿತ ಆಹಾರ ಪದ್ಧತಿ. ಏಕೆಂದರೆ ದಿನದಲ್ಲಿ ಇಂತಿಷ್ಟೇ ಕ್ಯಾಲೋರಿ ಸೇವಿಸಬೇಕೆಂಬ ನಿಯಮವನ್ನು ನಿಗದಿ ಮಾಡಲಾಗಿರುತ್ತದೆ. ಇನ್ನು ಕೆಲವೊಮ್ಮೆ ಅವರ ವ್ಯಾಯಾಮಗಳಿಗೆ ಹಾಗೂ ಕ್ರೀಡೆಗಳನ್ನು ಅವಲಂಬಿಸಿ ಆಹಾರ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.


ಒಲಿಂಪಿಯನ್ಸ್ ಯಾವ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ?


ಅಮರಿಕದ ಚಿನ್ನದ ಪದಕ ವಿಜೇತೆ ಜಿಮ್ನಾಸ್ಟಿಯನ್ ಬೈಲ್ಸ್ ಕ್ಯಾಲೊರಿ ಟ್ರ್ಯಾಕಿಂಗ್‌ ಕಡೆ ಗಮನ ನೀಡುವುದೇ ಇಲ್ಲವಂತೆ. ಬದಲಿಗೆ ತನಗೆ ಇಷ್ಟವಾಗಿರುವುದನ್ನು, ಆದರೆ ಹಿತಮಿತವಾಗಿ ಸೇವಿಸುತ್ತಾಳೆ. ಜಿಮ್ನಾಸ್ಟಿಕ್‌ಗಾಗಿ ಹೆಚ್ಚು ಸಮಯ ಆಕೆ ಜಿಮ್‌ನಲ್ಲಿಯೇ ಇರಬೇಕಾಗಿರುತ್ತದೆ.


ಇನ್ನು ಕೆಲವು ಕ್ರೀಡಾಪಟುಗಳು ಕಾರ್ಬ್ಸ್ ಅನ್ನು ಸಂಪೂರ್ಣವಾಗಿ ತಮ್ಮ ಆಹಾರದಿಂದ ತೆಗೆದುಹಾಕುತ್ತಾರೆ. ಟೋಸ್ಟ್, ಸ್ಯಾಂಡ್‌ವಿಚ್, ಬೆರ್ರಿ, ಚಿಕನ್ ಹೀಗೆ ಹಗುರವಾದ ಆಹಾರ ಸೇವಿಸುತ್ತಾರೆ. ಟೆನಿಸ್ ತಾರೆ ಒಸಾಕಾ ಆಹಾರ ಕ್ರಮ ಬೆಳಗ್ಗೆ ಎದ್ದೊಡನೆ ಹಸಿ ತರಕಾರಿಗಳ ಜ್ಯೂಸ್ ಸೇವಿಸುವುದಾಗಿದೆ. ಪಂದ್ಯಗಳ ಮುನ್ನ ಆಕೆ ಪ್ಲೇನ್ ಪಾಸ್ತಾ ಸೇವಿಸುತ್ತಾರೆ. ಇದಕ್ಕೆ ಅಗತ್ಯವಾದಲ್ಲಿ ಒಲೈವ್ಸ್ ಅಥವಾ ಚಿಕನ್ ಸೇರಿಸುತ್ತಾರೆ.


ಒಲಿಂಪಿಕ್ ಆಟಗಾರರು ಆಹಾರ ಕ್ರಮವನ್ನು ಏಕೆ ಅಳವಡಿಸಿಕೊಳ್ಳುತ್ತಾರೆ?


ಕೊಲಂಬಸ್‌ನ ಕ್ರೀಡಾ ಆಹಾರ ತಜ್ಞೆ ಕೇಸಿ ಹೇಳುವಂತೆ ಕ್ರೀಡಾಳುಗಳಿಗೆ ಕ್ರೀಡಾಂಗಣದಲ್ಲಿ ಮುಖ್ಯವಾಗಿ ಬೇಕಾಗಿರುವುದು ಶಕ್ತಿಯಾಗಿದೆ. ಉತ್ಸಾಹಭರಿತರಾಗಿ ಕ್ರೀಡೆಯನ್ನಾಡಲು ಹಗುರವಾದ, ಪ್ರೋಟೀನ್‌, ವಿಟಮಿನ್ ಭರಿತವಾದ ಆಹಾರಗಳನ್ನು ನೀಡಲಾಗುತ್ತದೆ. ಕ್ರೀಡೆಯಲ್ಲಿ ಅವರಿಗೆ ಹೆಚ್ಚು ಸುಸ್ತು, ಬಳಲಿಕೆ, ಆಯಾಸವಾಗದ ರೀತಿಯಲ್ಲಿ ಡಯೆಟ್ ನಿರ್ವಹಣೆ ಮಾಡಲಾಗುತ್ತದೆ.


ಇದನ್ನೂ ಓದಿ: ಯಾರಾದ್ರೂ ಸತ್ರೆ ಸಾಕು, ಈ ಊರಿನ ಜನರಿಗೆಲ್ಲಾ ತಲೆಬಿಸಿ ಶುರುವಾಗುತ್ತೆ...ಯಾದಗಿರಿಯ ಈ ಊರಿನ ಸಮಸ್ಯೆಯೇ ವಿಚಿತ್ರ!

ಕ್ರೀಡಾಪಟುಗಳ ಕ್ರೀಡೆಗಳನ್ನು ಆಧರಿಸಿ ಅವರಿಗೆ ಆಹಾರದ ಪೂರೈಕೆ ಮಾಡಲಾಗುತ್ತದೆ. ಓಟಗಾರರಿಗೆ, ಈಜುಗಾರರಿಗೆ, ವೇಟ್ ಲಿಫ್ಟರ್‌ಗೆ, ಬಾಕ್ಸರ್‌ಗೆ, ಟೆನಿಸ್ ಆಟಗಾರರಿಗೆ, ಹಾಕಿ ಸ್ಪರ್ಧಿಗಳಿಗೆ ಹೀಗೆ ಅವರ ಕ್ರೀಡೆಗೆ ಬೇಕಾದ ಶಕ್ತಿಯನ್ನು ಆಧರಿಸಿ ಆಹಾರ ನೀಡಲಾಗುತ್ತದೆ.


ಇನ್ನು ಕ್ರೀಡಾಳುಗಳು ಸಾಕಷ್ಟು ನೀರು ಸೇವಿಸುವುದು ಮುಖ್ಯವಾಗಿದ್ದು ಬಿಸಿಲಿನಲ್ಲಿ ಅಭ್ಯಾಸ ನಿರತರಾಗಿರುವಾಗ ಶಕ್ತಿಕುಂದದಂತೆ ಅವರಿಗೆ ದ್ರವ ಆಹಾರಗಳು ಹಾಗೂ ಎಲೆಕ್ಟ್ರೋಲೈಟ್ಸ್‌ ನೀಡಬೇಕು ಎಂದು ಆಹಾರ ತಜ್ಞೆ ತಿಳಿಸುತ್ತಾರೆ.


ಸಾಮಾನ್ಯ ಜನರು ಒಲಿಂಪಿಕ್ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದೇ?


ಸಾಮಾನ್ಯ ಜನರು ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದಾದಲ್ಲಿ ಕ್ರೀಡಾಪಟುಗಳು ಅನುಸರಿಸುವ ಆಹಾರ ಕ್ರಮವನ್ನು ಅನುಸರಿಸಬೇಕಾಗಿಲ್ಲ. ದಿನಕ್ಕೆ 5000 ಕ್ಯಾಲೋರಿಯಿಂದ 8000 ಕ್ಯಾಲೋರಿ ಆಹಾರ ಸೇವಿಸಿದರೆ ಹೆಚ್ಚಿನ ತೂಕಕ್ಕೆ ಕಾರಣವಾಗಬಹುದು. ವ್ಯಾಯಾಮ ಮಾಡಿದರೂ ಅನವಶ್ಯಕ ಬೊಜ್ಜು ದೇಹವನ್ನು ಸೇರಬಹುದು. ಸಾಮಾನ್ಯರು ಸಂಪೂರ್ಣ ನಿಯಂತ್ರಿತ ರೀತಿಯಲ್ಲಿ ಸಾಕಷ್ಟು ತರಕಾರಿ ಹಾಗೂ ಹಣ್ಣುಗಳ ಸೇವನೆಯನ್ನು ಮಾಡಬೇಕು. ಪ್ರೋಟೀನ್ ಮೂಲಗಳು, ಸಂಪೂರ್ಣ ಧಾನ್ಯ, ಆರೋಗ್ಯಪೂರ್ಣ ಕೊಬ್ಬು.




ವ್ಯಾಯಾಮ ಮಾಡುವ ಮುನ್ನ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ವರ್ಕ್‌ಔಟ್ ಸಮಯದಲ್ಲಿ ಸುಸ್ತು ನಿಮ್ಮನ್ನು ಕಾಡುವುದಿಲ್ಲ. ಹಾಲು, ಹಣ್ಣು ಮೊದಲಾದ ಲಘು ಆಹಾರವನ್ನು ವ್ಯಾಯಾಮ ಮಾಡುವ ಒಂದು ಗಂಟೆಯ ಮೊದಲು ಸೇವಿಸಿ. ಉತ್ತಮ ಆಹಾರದ ಆಯ್ಕೆ ಮಾಡಿಕೊಳ್ಳಿ. ಪೋಷಕಾಂಶ ಭರಿತ ಆಹಾರದ ಆಯ್ಕೆ ನಿಮ್ಮದಾಗಿರಲಿ. ಹಣ್ಣು ತರಕಾರಿಗಳ ಸೇವನೆಯನ್ನು ಯಥೇಚ್ಛವಾಗಿ ಮಾಡಿ.

Published by:Soumya KN
First published: