• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳು ತಿನ್ನೋದೇನು..? ಆಹಾರ ಕ್ರಮದ ಬಗ್ಗೆ ವಿವರಿಸಿದ ನಾಸಾ ವಿಜ್ಞಾನಿ

ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳು ತಿನ್ನೋದೇನು..? ಆಹಾರ ಕ್ರಮದ ಬಗ್ಗೆ ವಿವರಿಸಿದ ನಾಸಾ ವಿಜ್ಞಾನಿ

Image credits: NASA.

Image credits: NASA.

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಮ್ಮ ಶಕ್ತಿ ಉಳಿಸಿಕೊಳ್ಳುತ್ತಾರೆ. ಎಷ್ಟು ಆಕ್ಟೀವ್ ಆಗಿರುತ್ತಾರೆ. ಇದೆಲ್ಲದರ ಜೊತೆಗೆ ಅಲ್ಲಿ ಅವರು ಸೇವಿಸುವ ಆಹಾರ ಶರೀರದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾಸಾ ವಿಜ್ಞಾನಿ ಡಾ. ಗ್ರೇಸ್ ಡೌಗ್ಲಾಸ್ ಅಧ್ಯಯನ ನಡೆಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಮೇ 2 ರಂದು ಬಾಹ್ಯಾಕಾಶದಿಂದ ಮರಳಿದ ಗಗನಯಾತ್ರಿಗಳಲ್ಲಿ ಒಬ್ಬರು ವಿಕ್ಟರ್ ಗ್ಲೋವರ್. ಇತ್ತೀಚಿನ ಬಾಹ್ಯಾಕಾಶ ಮಿಷನ್ ಪೈಲೆಟ್ ಮತ್ತು ಎರಡನೇ ಕಮಾಂಡ್ ಗ್ಲೋವರ್ ಅವರು ಇದೇ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದರು. ಈ ಅಭೂತಪೂರ್ವ ಪಯಣದಲ್ಲಿ ನಾಸಾದ ಮಾನವ ಸಂಶೋಧನಾ ಕಾರ್ಯಕ್ರಮದ ಒಂದು ಭಾಗವಾಗಿದ್ದರು ವಿಕ್ಟರ್. ಇನ್ನು, ಬಾಹ್ಯಾಕಾಶಕ್ಕೆ ಹೋದಾಗ ಗಗನ ಯಾತ್ರಿಗಳ ದೇಹದಲ್ಲಿ ಯಾವೆಲ್ಲಾ ಬದಲಾವಣೆ ಉಂಟಾಗುತ್ತದೆ ಎನ್ನುವ ಅಧ್ಯಯನವನ್ನು ವಿಕ್ಟರ್ ಅವರ ಮೇಲೆ ಮಾಡಲಾಗಿತ್ತು.


ಪ್ರಸ್ತುತ ಬಾಹ್ಯಾಕಾಶದ ಹಾರಾಟದಲ್ಲಿ ಮಾನವನ ದೈಹಿಕ ಆರೋಗ್ಯ ಸುಧಾರಣೆ ಬಗ್ಗೆ ಗಮನಹರಿಸಿದೆ. ಗಗನಯಾತ್ರಿಗಳ ಆಹಾರ ಕ್ರಮವನ್ನು ಅಗತ್ಯಕ್ಕೆ ತಕ್ಕಂತೆ ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಂಡುಹಿಡಿಯಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತಿದೆ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಮ್ಮ ಶಕ್ತಿ ಉಳಿಸಿಕೊಳ್ಳುತ್ತಾರೆ. ಎಷ್ಟು ಆಕ್ಟೀವ್ ಆಗಿರುತ್ತಾರೆ. ಇದೆಲ್ಲದರ ಜೊತೆಗೆ ಅಲ್ಲಿ ಅವರು ಸೇವಿಸುವ ಆಹಾರ ಶರೀರದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾಸಾ ವಿಜ್ಞಾನಿ ಡಾ. ಗ್ರೇಸ್ ಡೌಗ್ಲಾಸ್ ಅಧ್ಯಯನ ನಡೆಸುತ್ತಿದ್ದಾರೆ.


ಹೂಸ್ಟನ್‌ನ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಡೌಗ್ಲಾಸ್ ಅವರು ಈ ಸುಧಾರಿತ ಆಹಾರ ತಂತ್ರಜ್ಞಾನ ಯೋಜನೆಯ ಪ್ರಮುಖ ವಿಜ್ಞಾನಿಯಾಗಿದ್ದಾರೆ.


ಸಾಮಾನ್ಯ ಗಗನಯಾತ್ರಿಗಳು ಸೇವಿಸುವ ಆಹಾರಕ್ಕೆ ಹೋಲಿಸಿದರೆ, ಗ್ಲೋವರ್ ಅವರಿಗೆ ಉತ್ತಮ ದರ್ಜೆಯ ಆಹಾರವನ್ನು ನೀಡಲಾಗಿತ್ತು. ಈ ಆಹಾರವನ್ನು ಅವರ ಬಾಹ್ಯಾಕಾಶ ಮಿಷನ್ ಆರಂಭಕ್ಕೂ ಮುನ್ನವೇ ಅಭಿವೃದ್ಧಿಪಡಿಸಲಾಗಿತ್ತು. ತ್ವಚೆ, ಹಲ್ಲು, ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಮೆಗಾ 3 ಫ್ಯಾಟಿ ಆಸಿಡ್ಸ್ , ಚೈತನ್ಯ ಉತ್ಪತ್ತಿ ಮಾಡುವ ಲೈಕೋಪೀನ್‌ (ಟೊಮ್ಯಾಟೋದಲ್ಲೂ ಲೈಕೋಪೀನ್ ಅಂಶವಿದೆ) ದೇಹದ ಸೆಲ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸಲು, ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆ ಪೂರಕವಾದ ಫ್ಲೇವನಾಯ್ಡ್‌ಗಳನ್ನು ಕೂಡ ನೀಡಲಾಗಿತ್ತು.


ಈ ಉತ್ತಮ ದರ್ಜೆಯ ವರ್ಧಿತ ಆಹಾರವು ಗಗನಯಾತ್ರಿಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಣಯಿಸಲು, ಗ್ಲೋವರ್ ಅವರಿಗೆ ತಪ್ಪದೇ ಡಯೆಟ್ ಪಾಲಿಸುವಂತೆ ಹೇಳಲಾಗಿತ್ತು. ಅಲ್ಲದೇ ವಾರಕ್ಕೊಮ್ಮೆ ಇದಕ್ಕೆ ಸಂಬಂಧಿಸಿದಂತೆ ಸಲಹೆ, ಬದಲಾವಣೆ ಮತ್ತು ನವೀಕರಣಕ್ಕಾಗಿ ಅವರು ಪ್ರತಿ ವಾರ ಡೌಗ್ಲಾಸ್ ತಂಡವನ್ನು ಸಂಪರ್ಕಿಸಬೇಕಾಗಿತ್ತು.


ಈ ಸುಧಾರಿತ ಆಹಾರದ ಪ್ರಾಜೆಕ್ಟ್‌ನಲ್ಲಿ ಭಾಗವಹಿಸುವವರು ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಮತ್ತು ನಂತರ ಕೆಲವೊಂದು ಟೆಸ್ಟ್‌ಗಳಿಗೆ ಒಳಗಾಗಬೇಕು. ರಕ್ತ, ಮೂತ್ರ, ಲಾಲಾರಸ ಮತ್ತು ಮಲದ ಮಾದರಿಗಳನ್ನು ಒದಗಿಸಬೇಕು. ಇನ್ನೂ ಈ ಪ್ರಾಜೆಕ್ಟ್‌ನಲ್ಲಿ ಗ್ಲೋವರ್‌ ಅವರಿಗೂ ಮುಂಚಿತವಾಗಿ, ಕ್ರಿಸ್ಟೋಫರ್ ಕ್ಯಾಸಿಡಿ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಏಪ್ರಿಲ್ 2020 ರಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಅಕ್ಟೋಬರ್‌ನಲ್ಲಿ ಮರಳಿದ್ದರು.


ಭೂಮಿಯ ರಕ್ಷಣಾ ವಲಯದಿಂದ ಮಾನವ ದೇಹ ದೂರವಾದಾಗ ಹಲವಾರು ಬದಲಾವಣೆಗೆ ಒಳಪಡುತ್ತದೆ. ಬಾಹ್ಯಾಕಾಶದಲ್ಲಿ ವಿಕಿರಣಗಳನ್ನು ಬಿಟ್ಟು ಯಾವ ಕಿರಾಣಿ ಅಂಗಡಿಯೂ ಇಲ್ಲ. ಆದ ಕಾರಣ ಅಲ್ಲಿ ಗಗನ ಯಾತ್ರಿಗಳು ಉಳಿಯಲು ಇಲ್ಲಿಂದಲೇ ಆಹಾರವನ್ನು ಸಿದ್ಧ ಮಾಡಿಕೊಂಡಿರಬೇಕು. ಸ್ಪೇಸ್ ಕ್ರಾಫ್ಟ್‌ನಲ್ಲಿ ಬ್ರೌನಿ, ಸಮುದ್ರದ ಆಹಾರ, ಚಿಕನ್, ಬೀಫ್, ಹಣ್ಣುಗಳು, ಬೀಜಗಳು, ಪೀನಟ್ ಬಟರ್ (ಕಡಲೆಬೀಜದ ಬೆಣ್ಣೆ) ಇವುಗಳನ್ನು ಒಯ್ಯಬಹುದಾಗಿದೆ.ಇನ್ನು ಈ ಆಹಾರಗಳು ಹಾಳಾಗುವುದನ್ನು ತಪ್ಪಿಸಲು ಇವುಗಳಲ್ಲಿ ಹೆಚ್ಚಿನವುಗಳನ್ನು ಶೀತಲೀಕರಿಸಲಾಗುತ್ತದೆ ಮತ್ತು ಒಣಗಿಸಲಾಗುತ್ತದೆ. ಆ ಮೂಲಕ ಇದು ವರ್ಷದ ತನಕ ಕೆಡದೇ ಇರುತ್ತದೆ. ಈ ಆಹಾರಗಳು ಬಾಹ್ಯಾಕಾಶ ನೌಕೆಯ ಭಾರದ ಲೆಕ್ಕಚಾರದಲ್ಲಿ ದೊಡ್ಡ ಪಾಲನ್ನೇ ಹೊಂದಿವೆ. ಸದ್ಯ ಗಗನ ಯಾತ್ರಿಗಳಿಗೆ ಪೂರಕವಾದ ಮತ್ತು ಹೆಚ್ಚು ಪರಿಣಾಮಕಾರಿಯಾದ ಆಹಾರವನ್ನು ಅಭಿವೃದ್ಧಿಪಡಿಸುವ ಮೂಲಕ ಹಗುರವಾದ ಸ್ಪೇಸ್ ಶಿಪ್‌ಗಳ ನಿರ್ಮಾಣದೆಡೆಗೆ ಕಾರ್ಯ ಕೆಲಸಗಳು ನಡೆಯುತ್ತಿವೆ.

First published: