ಸಾವಿರ ನಾಯಿಗಳು ಈ ಹಾಡುಗಳನ್ನು ಅದೆಷ್ಟು ತನ್ಮಯವಾಗಿ ಕೇಳುತ್ತಿವೆ ಅಂದ್ರೆ, ನಿಮ್ಮ ನಾಯಿಗೂ ಇದನ್ನು ಕೇಳಿಸಬಹುದು ನೋಡಿ!

ಅಧ್ಯಯನದ ಪ್ರಕಾರ, ಶೇ. 23ರಷ್ಟು ಶ್ವಾನಗಳು ಹಾಡುಗಳನ್ನು ಕೇಳುತ್ತಿದ್ದಂತೆ ಚುರುಕಾದವಲ್ಲದೆ; ತಮ್ಮ ಸಂಗೀತದ ಅಭಿರುಚಿಗೆ ತಕ್ಕಂತೆ ಬಾಲಗಳನ್ನು ಅಲ್ಲಾಡಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಾಣಿಗಳಿಗೂ (Animals) ಸಂಗೀತ(Music) ಇಷ್ಟವಾಗುತ್ತದೆ ಎಂಬುದನ್ನು ಹಲವಾರು ಸಂಶೋಧನೆಗಳು (Numerous researches ) ದೃಢಪಡಿಸಿವೆ. ಆದರೆ, ಬ್ರಿಟನ್‌ನಲ್ಲೊಂದು ಅಪರೂಪದ ಸಮೀಕ್ಷೆ ನಡೆದಿದೆ. ಕ್ರಿಸ್‌ಮಸ್ ಹತ್ತಿರವಾಗುತ್ತಿರುವಂತೆಯೇ 1000 ಶ್ವಾನಗಳಿಗೆ(1,000 dogs) ಕ್ರಿಸ್ ಮಸ್ ಹಾಡುಗಳನ್ನು (Christmas songs)ಕೇಳಿಸಿರುವ ದತ್ತಿ ಸಂಸ್ಥೆಯೊಂದು, ಶ್ವಾನಗಳು ಕ್ರಿಸ್‌ಮಸ್ ಹಾಡುಗಳನ್ನು (Listening) ತನ್ಮಯದಿಂದ ಆಲಿಸುತ್ತಿವೆ ಎಂದು ತನ್ನ ಸಮೀಕ್ಷೆಯಲ್ಲಿ ಹೊರಗೆಡವಿದೆ.

ಕ್ರಿಸ್‌ಮಸ್ ಹಾಡು
ಕಳೆದ ವರ್ಷ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಬ್ರಿಟನ್‌ನಲ್ಲಿ ಕ್ರಿಸ್‌ಮಸ್ ಆಚರಣೆ ಕಳೆಗುಂದಿತ್ತು. ಈ ವರ್ಷ ಕೊರೊನಾ ಬಹುತೇಕ ತಹಬಂದಿಗೆ ಬಂದಿರುವುದರಿಂದ ಕ್ರಿಸ್‌ಮಸ್ ಆಚರಣೆಗೆ ಅಲ್ಲಿ ಭರಪೂರ ತಯಾರಿಗಳು ನಡೆಯತೊಡಗಿವೆ. ಸಂಗೀತ ಹಾಗೂ ಪ್ರದರ್ಶನಗಳಿಗಾಗಿ ಭಾರಿ ಸಿದ್ಧತೆಗಳು ನಡೆಯತೊಡಗಿವೆ.

ಇದನ್ನೂ ಓದಿ: Christmas Colors: ಕ್ರಿಸ್‌ಮಸ್‌ನಲ್ಲಿ ಹೆಚ್ಚಾಗಿ ಕೆಂಪು ಮತ್ತು ಹಸಿರು ಬಣ್ಣಗಳನ್ನು ಬಳಸೋದು ಇದೇ ಕಾರಣಕ್ಕೆ

ಈ ಬಾರಿ ಕ್ರಿಸ್‌ಮಸ್ ರಾತ್ರಿಯನ್ನು ವರ್ಣರಂಜಿತವಾಗಿಸಲು ಸಂಗೀತ ಹಾಗೂ ದೀಪದ ಸರಪಣಿಗಳು ಸಜ್ಜಾಗತೊಡಗಿವೆ. ಇದು ಮನುಷ್ಯರಲ್ಲಿ ಮಾತ್ರವಲ್ಲದೆ ಶ್ವಾನಗಳಲ್ಲೂ ಉತ್ಸುಕತೆಯನ್ನುಂಟು ಮಾಡಿದೆ ಎನ್ನುತ್ತದೆ ಸಮೀಕ್ಷೆಯೊಂದು. ಶ್ವಾನಗಳು ತಾಳಬದ್ಧ ಸಂಗೀತಕ್ಕೆ ತಲೆದೂಗುತ್ತಿದ್ದು, ಕ್ರಿಸ್‌ಮಸ್ ಹಾಡುಗಳನ್ನು ಅತ್ಯಂತ ಪ್ರೀತಿಯಿಂದ ಆಲಿಸುತ್ತಿವೆಯಂತೆ. ಈ ಕುರಿತು 1000 ಮಾಲೀಕರ ಶ್ವಾನಗಳ ಮೇಲೆ ಸಮೀಕ್ಷೆ ನಡೆಸಿರುವ ದತ್ತಿ ಸಂಸ್ಥೆಯೊಂದು ಇಂತಹ ಕುತೂಹಲಕಾರಿ ಮಾಹಿತಿ ಹೊರಗೆಡವಿದೆ.

ಶೇ. 22ರಷ್ಟು ಶ್ವಾನಗಳಿಗೆ ಪ್ರಿಯ
ಸಮೀಕ್ಷೆಯ ಪ್ರಕಾರ, ಶೇ. 22ರಷ್ಟು ಶ್ವಾನಗಳು ಭಾರಿ ಸದ್ದಿನ ಸಂಗೀತವನ್ನು ಇಷ್ಟಪಟ್ಟಿವೆಯಂತೆ. ಮೆಲುದನಿಯ ಸಂಗೀತವನ್ನು ಶೇ. 18ರಷ್ಟು ಶ್ವಾನಗಳು ಆಸ್ವಾದಿಸಿವೆಯಂತೆ. ಮೆಲುದನಿಯ ಹಾಡುಗಳನ್ನು ಈ ಶ್ವಾನಗಳು ಬಾಲ ಅಲ್ಲಾಡಿಸುತ್ತಾ ಕೇಳಿಸಿಕೊಂಡಿವೆಯಂತೆ. ಇನ್ನು ಶೇ. 14ರಷ್ಟು ಶ್ವಾನಗಳು ವಾದ್ಯ ಮತ್ತು ನಿಧಾನಗತಿಯ ಸಂಗೀತವನ್ನು ಆಸಕ್ತಿಯಿಂದ ಆಲಿಸಿವೆಯಂತೆ.

ಸಮೀಕ್ಷೆಯ ಪ್ರಕಾರ ವಾಮ್ ಸಂಗೀತ ನಿರ್ದೇಶಿಸಿರುವ ‘ಲಾಸ್ಟ್ ಕ್ರಿಸ್‌ಮಸ್’ ಹಾಡು ಶ‍್ವಾನಗಳ ನಡುವೆ ಅತ್ಯಂತ ಖ್ಯಾತಗೊಂಡಿದೆ ಎಂದು ಡೈಲ್ ಮೇಲ್ ವರದಿ ಮಾಡಿದೆ. ‘ಲಾಸ್ಟ್ ಕ್ರಿಸ್‌ಮಸ್’ ನಂತರ ‘ಜಿಂಗಲ್ ಬೆಲ್ಸ್’ ಹಾಗೂ ‘ಆಲ್ ಐ ವಾಂಟ್ ಫಾರ್ ಕ್ರಿಸ್‌ಮಸ್ ಇಸ್ ಯು’ ಕ್ರಮವಾಗಿ ಮೆಚ್ಚುಗೆಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶಾಂತವಾಗಿ ನಿದ್ದಗೆ ಜಾರುವ ಶ್ವಾನ
ಸಮೀಕ್ಷೆಯು ಹಾಡುಗಳಿಗೆ ಶ್ವಾನಗಳ ಪ್ರತಿಕ್ರಿಯೆಯ ಬಗ್ಗೆ ಮಾತ್ರ ಅಧ್ಯಯನ ನಡೆಸಿಲ್ಲ; ಬದಲಿಗೆ ಹಾಡುಗಳು ಶ್ವಾನಗಳ ಮೇಲೆ ಎಂಥ ಪರಿಣಾಮ ಬೀರಿವೆ ಎಂಬುದರ ಕುರಿತೂ ಅಧ್ಯಯನ ನಡೆಸಿದೆ. ಈ ಅಧ್ಯಯನದ ಪ್ರಕಾರ, ಶೇ. 23ರಷ್ಟು ಶ್ವಾನಗಳು ಹಾಡುಗಳನ್ನು ಕೇಳುತ್ತಿದ್ದಂತೆ ಚುರುಕಾದವಲ್ಲದೆ; ತಮ್ಮ ಸಂಗೀತದ ಅಭಿರುಚಿಗೆ ತಕ್ಕಂತೆ ಬಾಲಗಳನ್ನು ಅಲ್ಲಾಡಿಸಿವೆ. ಮತ್ತೊಂದೆಡೆ ಶೇ.12ರಷ್ಟು ಶ‍್ವಾನಗಳು ಶಾಂತವಾದರೆ, ಶೇ. 11ರಷ್ಟು ಶ್ವಾನಗಳು ತಮ್ಮ ಪ್ರಿಯವಾದ ಹಾಡುಗಳನ್ನು ಕೇಳಿಸಿಕೊಂಡು ನಿದ್ರೆಗೆ ಜಾರಿವೆ.

ಇದನ್ನೂ ಓದಿ: Christmas ಟೈಮಲ್ಲಿ ಕರ್ನಾಟಕದ ಈ ಅದ್ಭುತ ಚರ್ಚ್​​ಗಳಿಗೆ ವಿಸಿಟ್ ಮಾಡಿ

ವಾರಕ್ಕೊಮ್ಮೆಯಾದರೂ ಸಂಗೀತ ಕೇಳಿಸಲು ಶುರು
ಶ‍್ವಾನಗಳ ಇಂತಹ ಪ್ರತಿಕ್ರಿಯೆಯಿಂದ ಅವುಗಳ ಮಾಲೀಕರು ತಮ್ಮ ಶ್ವಾನಗಳಿಗಾಗಿ ವಾರಕ್ಕೊಮ್ಮೆಯಾದರೂ ಸಂಗೀತ ಕೇಳಿಸಲು ಶುರು ಮಾಡಿದ್ದಾರೆ. ಶ‍್ವಾನಗಳ ಮಾಲೀಕರೀಗ ಅವುಗಳಿಗೆ ಇಷ್ಟವಾದ ಹಾಡುಗಳನ್ನು ಕೇವಲ ವಿನೋದಕ್ಕಾಗಿ ಮಾತ್ರವಲ್ಲದೆ ಅವುಗಳನ್ನು ಆರಾಮವಾಗಿಡಲೂ ಕೇಳಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಶೇ. 33ರಷ್ಟು ಶ್ವಾನಗಳು ಮಾಲೀಕರು ತಮ್ಮ ಶ್ವಾನಗಳು ಇಷ್ಟಪಡುವ ಹಾಡುಗಳನ್ನು ಕೇಳಿಸುವುದನ್ನು ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಮನೆಗಳಲ್ಲಿ ವ್ಯಕ್ತಿಗಳ ಅಭಿರುಚಿಗೆ ಬದಲಾಗಿ ಶ್ವಾನಗಳ ಅಭಿರುಚಿಗೆ ತಕ್ಕಂತೆ ಕ್ರಿಸ್‌ಮಸ್ ಹಾಡುಗಳನ್ನು ಹಾಕತೊಡಗಿದ್ದಾರೆ ಬ್ರಿಟನ್ ಪ್ರಜೆಗಳು!!!
Published by:vanithasanjevani vanithasanjevani
First published: