Mango Names: ಮಾವಿನ ಹಣ್ಣಿಗೂ ಸೆಲೆಬ್ರೆಟಿಗಳ ಹೆಸರು: ಏನು ಇದರ ವಿಶೇಷತೆ

ಮ್ಯಾಂಗೋ ಮ್ಯಾನ್‌ ಎಂದು ಕರೆಯುವ ಹಾಜಿ ಕಲೀಮುಲ್ಲಾ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಮಾವಿನ ವಿವಿಧ ತಳಿ ಬೆಳೆಯುವುದರಲ್ಲಿ ಅತ್ಯಂತ ಪ್ರಸಿದ್ಧಿ ವ್ಯಕ್ತಿ ಆಗಿದ್ದಾರೆ. ಹಾಗೆಯೇ ಕೆಲವು ವಿಶೇಷ ಮಾವಿನ ಹಣ್ಣುಗಳಿಗೆ ಸೆಲೆಬ್ರೆಟಿಗಳ ಹೆಸರು ಇರಿಸಿ ಅವುಗಳನ್ನು ಮತ್ತಷ್ಟು ಪ್ರಸಿದ್ಧಿ ಮಾಡುವುದು ಇವರ ಕಾಯಕ. ಹಾಗಿದ್ರೆ ಈ ಬಾರಿ ಯಾವ ಹೆಸರಿಟ್ಟಿದ್ದಾರೆ ನೋಡಿ

ಹಾಜಿ ಕಲೀಮುಲ್ಲಾ ಖಾನ್

ಹಾಜಿ ಕಲೀಮುಲ್ಲಾ ಖಾನ್

  • Share this:
ಮ್ಯಾಂಗೋ ಮ್ಯಾನ್‌ (Mango Man) ಎಂದು ಕರೆಯುವ ಹಾಜಿ ಕಲೀಮುಲ್ಲಾ (Haji Kalimullah) ಯಾರಿಗೆ ಗೊತ್ತಿಲ್ಲ ಹೇಳಿ. ಇವರು ಮಾವಿನ ವಿವಿಧ ತಳಿ ಬೆಳೆಯುವುದರಲ್ಲಿ ಅತ್ಯಂತ ಪ್ರಸಿದ್ಧಿ ವ್ಯಕ್ತಿ ಆಗಿದ್ದಾರೆ. ಹಾಗೆಯೇ ಕೆಲವು ವಿಶೇಷ ಮಾವಿನ ಹಣ್ಣುಗಳಿಗೆ ಸೆಲೆಬ್ರೆಟಿಗಳ ಹೆಸರು ಇರಿಸಿ ಅವುಗಳನ್ನು ಮತ್ತಷ್ಟು ಪ್ರಸಿದ್ಧಿ ಮಾಡುವುದು ಇವರ ಕಾಯಕ. ಈ ಮುಂಚೆ ಹಾಜಿ ಕಲೀಮುಲ್ಲಾ ಅವರು ಕೆಲವು ಮಾವಿನ ತಳಿಗಳಿಗೆ ‘ಐಶ್ವರ್ಯ’ ಮತ್ತು ‘ಸಚಿನ್’ ಸೆಲೆಬ್ರೆಟಿಗಳ ಹೆಸರು ಇರಿಸಿದ್ದರು. ಕೆಲವು ವಿಶಿಷ್ಟ ಮಾವಿನಹಣ್ಣುಗಳಿಗೆ ಸೆಲೆಬ್ರೆಟಿಗಳ ಹೆಸರು(Celebrity Names)  ಇರಿಸುವುದು ಇವರ ವಿಶೇಷತೆ ಆಗಿದೆ. ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ಖಾನ್ ಅವರು ಹಣ್ಣುಗಳ ರಾಜ  ಎಂದು ಕರೆಯುವ ಮಾವಿನ ಹಣ್ಣಿನಲ್ಲಿ (Mangoes) ಎರಡು ರುಚಿಕರವಾದ ಹೊಸ ಮಿಶ್ರ ತಳಿಗಳನ್ನು ಬೆಳೆದಿದ್ದಾರೆ ಮತ್ತು ಈ ಸಲವು ಅವುಗಳಿಗೆ ಇಬ್ಬರೂ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಇರಿಸಿದ್ದಾರೆ.

ಈ ಬಾರಿ ಮಾವುಗಳಿಗೆ ಇಟ್ಟಿರುವ ಹೆಸರುಗಳೇನು  

ಈ ಬಾರಿ, ಎರಡು ಹೊಸ ಪ್ರಭೇದಗಳಿಗೆ ಹಾಜಿ ಕಲೀಮುಲ್ಲಾ ಖಾನ್ ಅವರು ‘ಸುಶ್ಮಿತಾ ಆಮ್’ ಮತ್ತು ‘ಅಮಿತ್ ಶಾ ಆಮ್’ ಎಂದು ನಾಮಕರಣ ಮಾಡಿದ್ದಾರೆ. ಉತ್ತರ ಪ್ರದೇಶದ ಮಲಿಹಾಬಾದ್‌ನಲ್ಲಿರುವ ಅವರ ತೋಟದಲ್ಲಿ ಎರಡು ಮಾವಿನ ಹಣ್ಣುಗಳನ್ನು ಬೆಳೆಯಲಾಗಿದೆ.

ಮಾವಿನ ಹಣ್ಣಿಗೆ ಸುಶ್ಮಿತಾ ಸೇನ್‌ ಅಂತ ಹೆಸರಿಡಲು ಕಾರಣವೇನು?

ಸುಂದರ ಮತ್ತು ವಕ್ರವಾದ ಒಂದು ಮಾವಿನ ಹಣ್ಣಿಗೆ 'ಸುಶ್ಮಿತಾ ಆಮ್' ಎಂದು ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್‌ ನಟಿ ಆಗಿರುವ ಸುಶ್ಮಿತಾ ಸೇನ್‌ ಅವರ ಹೆಸರನ್ನು ಇರಿಸಲಾಗಿದೆ. ಈ ಸುಶ್ಮಿತಾ ಸೇನ್‌ ಅವರ ಹೆಸರನ್ನೆ ಯಾಕೆ ಇರಿಸಿದ್ದಿರಿ ಎಂದು ಕೇಳಿದ್ದಕ್ಕೆ ಹಾಜಿ ಕಲೀಮುಲ್ಲಾ ಅವರು “ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಅತ್ಯಂತ ಸುಂದರ ವ್ಯಕ್ತಿ.

ಇವರ ಸೌಂದರ್ಯದಷ್ಟೆ ಇವರ ಮನಸ್ಸು ಇದೆ. ಇವರು ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಹಾಗೆಯೇ ಎರಡು ದತ್ತು ಪುತ್ರಿಯರ ಜೊತೆಗೆ ಸುಂದರ ಜೀವನ ನಡೆಸುತ್ತಿದ್ದಾರೆ. ಅವರು ದೈಹಿಕವಾಗಿ ಸುಂದರವಾಗಿರುವುದಷ್ಟೆ ಅಲ್ಲದೇ, ಮಾನಸಿಕವಾಗಿಯೂ ಇವರು ಸುಂದರ ಮನಸ್ಸು ಹೊಂದಿರುವ ವ್ಯಕ್ತಿ. ಅದಕ್ಕೆ ಇವರ ಹೆಸರನ್ನು ಈ ಸುಂದರ ಮಾವಿನ ತಳಿಗೆ ಇರಿಸಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: IAS-IPS Family: ಈ ಕುಟುಂಬದಲ್ಲಿ ಮೂವರು ಐಎಎಸ್, ಒಬ್ಬರು ಐಪಿಎಸ್! ಇವರ ಕಥೆ ಇಂಟ್ರೆಸ್ಟಿಂಗ್

"ನಾನು ಈ ಮೊದಲು 'ಐಶ್ವರ್ಯಾ ಆಮ್' ಎಂದು ಹೆಸರಿಸಿದ್ದು ನಟಿ ಐಶ್ವರ್ಯಾ ರೈ ಅವರಿಗೆ ಆ ಮಾವಿನ ಹಣ್ಣನ್ನು ಅರ್ಪಿಸಿದ್ದೇನೆ. ಈ ಸಲದ ಮಾವಿನ ಹಣ್ಣಿಗೆ ಸುಶ್ಮಿತಾ ಸೇನ್ ಬಗ್ಗೆ ಯಾರೋ ನನಗೆ ಅವರು ಸುಂದರ ವ್ಯಕ್ತಿ ಅಷ್ಟೆ ಅಲ್ಲದೇ ತುಂಬಾ ಒಳ್ಳೆಯ ಮನಸ್ಸನ್ನು ಹೊಂದಿರುವವರು ಎಂದು ಹೇಳಿದ್ದರು. ಈ ಜಗತ್ತು ಅಂತಹ ವ್ಯಕ್ತಿತ್ವವನ್ನು ಆಗಾಗ ನೆನೆಪಿಸಿಕೊಳ್ಳಬೇಕು. ಅದಕ್ಕಾಗಿಯೇ ಈ ಬಾರಿ ಹೊಸ ಮಾವಿನ ತಳಿಗೆ ಸುಶ್ಮೀತಾ ಸೇನ್‌ ಅವರ ಹೆಸರು ಇರಿಸಲಾಗಿದೆ'' ಎಂದು ವಿವರಿಸಿದರು.

ಮಾವಿನ ಹಣ್ಣಿಗೂ ರಾಜಕೀಯ ಮುಖಂಡರ ಹೆಸರು 

“ಅಮಿತ್ ಶಾ ಆಮ್ ಗೆ ಬಿಜೆಪಿಯ ಮುಖಂಡ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಇರಿಸಲಾಗಿದೆ. ಈ ಹಣ್ಣು ರುಚಿಕರವಾಗಿದ್ದರೂ, ಅತ್ಯಂತ ಗಟ್ಟಿಯಾದ ಹಣ್ಣಾಗಿದೆ. ಈ ಮಾವಿನ ತಳಿ ಹಾಗೆಯೇ ಇರುವುದರಿಂದ ಈ ತಳಿಗೆ ಅವರ ಹೆಸರು ಇರಿಸಿದ್ದೇನೆ” ಎಂದು ಹೇಳುತ್ತಾರೆ.

“ನಾನು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಶೀಘ್ರದಲ್ಲೇ ಈ ಮಾವು ಎಲ್ಲರಿಗೂ ಲಭ್ಯವಾಗಲಿದೆ. ಆಗ ಈ ಮಾವಿನ ಹಣ್ಣು ಹೇಗಿದೆ? ಅದರ ರುಚಿ ಎಷ್ಟು ಚೆನ್ನಾಗಿದೆ ಎಂದರೆ ಜನ ಈ ಮಾವಿನ ಹಣ್ಣು ತಿಂದ ತಕ್ಷಣ ಅದನ್ನು ‘ಅಮಿತ್ ಶಾ ಆಮ್‌’ ಎಂದು ಹೇಳುತ್ತಾರೆ ”ಎಂದು ಅವರು ಹೇಳುತ್ತಾರೆ.

300 ಕ್ಕೂ ಹೆಚ್ಚು ವಿಶಿಷ್ಟವಾದ ಮಾವಿನಹಣ್ಣು ಬೆಳೆಸಿದ ಹಾಜಿ ಕಲೀಮುಲ್ಲಾ

ಹೆಸರಾಂತ ಮಾವು ಬೆಳೆಗಾರ, ಹಾಜಿ ಕಲೀಮುಲ್ಲಾ ಖಾನ್ ಅವರು ವಿಭಿನ್ನ ಮಿಶ್ರ ತಳಿಗಳನ್ನು ಬೆಳೆಸುತ್ತಿದ್ದಾರೆ ಮತ್ತು ದಶಕಗಳಿಂದ ಸಾರ್ವಜನಿಕವಾಗಿ ಜನಪ್ರಿಯತೆ ಪಡೆದ ವ್ಯಕ್ತಿಗಳ ಹೆಸರನ್ನು ಇರಿಸುತ್ತಿದ್ದಾರೆ.

82 ವರ್ಷ ವಯಸ್ಸಿನವರಾದ ಹಾಜಿ ಕಲೀಮುಲ್ಲಾ ಈಗಾಗಲೇ ಮುಲಾಯಂ ಆಮ್, ನಮೋ ಆಮ್, ಸಚಿನ್ ಆಮ್, ಕಲಾಂ ಆಮ್, ಅಮಿತಾಬ್ ಆಮ್ ಮತ್ತು ಯೋಗಿ ಆಮ್‌ನಂತಹ 300 ಕ್ಕೂ ಹೆಚ್ಚು ವಿಶಿಷ್ಟವಾದ ಮಾವಿನಹಣ್ಣುಗಳನ್ನು ಬೆಳೆದಿದ್ದಾರೆ.

ಇದನ್ನೂ ಓದಿ:  Viral Video: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ

ತೋಟಗಾರಿಕೆ ಕ್ಷೇತ್ರಕ್ಕೆ ಅವರ ಕೊಡುಗೆಗಳು ಮತ್ತು ಮಾವಿನ ತಳಿಗಳನ್ನು ಸಂರಕ್ಷಿಸಲು ಮತ್ತು ವಿಸ್ತರಿಸಲು ಅವರ ವಿಶಿಷ್ಟ ಕೊಡುಗೆಗಾಗಿ 2008 ರಲ್ಲಿ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.
Published by:Ashwini Prabhu
First published: