Turkey Teeth: ಹಲ್ಲಿನ ಸಮಸ್ಯೆಗೆ ಟರ್ಕಿ ಟೀತ್ ಟ್ರೀಟ್ಮೆಂಟ್!​ ಎಲ್ಲೆಡೆ ಫುಲ್​ ವೈರಲ್​

#TurkeyTeeth ಹ್ಯಾಶ್‌ಟ್ಯಾಗ್ ಟಿಕ್‌ಟಾಕ್‌ನಲ್ಲಿ 130 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಾಗ ಎಲ್ಲರ ಚಿತ್ತ ಈ ವೈರಲ್ ಸುದ್ದಿಯತ್ತ ನೆಟ್ಟಿತು. ವಿನಾಯಿತಿ ದರಗಳಲ್ಲಿ ಹಲ್ಲಿನ ಚಿಕಿತ್ಸೆಗಾಗಿ ಜನರು ಟರ್ಕಿಗೆ ಪ್ರಯಾಣಿಸುವ ಪ್ರವೃತ್ತಿ ಎಂಬುದಾಗಿ ಟರ್ಕಿ ಟೀತ್ ಅನ್ನು ಉಲ್ಲೇಖಿಸಲಾಗಿದೆ.

ಟರ್ಕಿ ಟೀತ್

ಟರ್ಕಿ ಟೀತ್

 • Share this:

ಟರ್ಕಿ ಟೀತ್ ಎಂಬುದು ಸಾಮಾಜಿಕ ಮಾಧ್ಯಮದಲ್ಲಿ (Social Media) ಹೆಚ್ಚು ವೈರಲ್ ಆಗುತ್ತಿರುವ ಟ್ರೆಂಡ್ ಆಗಿದೆ. #TurkeyTeeth ಹ್ಯಾಶ್‌ಟ್ಯಾಗ್ ಟಿಕ್‌ಟಾಕ್‌ನಲ್ಲಿ 130 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಾಗ ಎಲ್ಲರ ಚಿತ್ತ ಈ ವೈರಲ್ ಸುದ್ದಿಯತ್ತ ನೆಟ್ಟಿತು. ವಿನಾಯಿತಿ ದರಗಳಲ್ಲಿ (Exemption rate) ಹಲ್ಲಿನ ಚಿಕಿತ್ಸೆಗಾಗಿ ಜನರು ಟರ್ಕಿಗೆ (Turkey) ಪ್ರಯಾಣಿಸುವ ಪ್ರವೃತ್ತಿ ಎಂಬುದಾಗಿ ಟರ್ಕಿ ಟೀತ್ ಅನ್ನು ಉಲ್ಲೇಖಿಸಲಾಗಿದೆ. ಟರ್ಕಿಗೆ ಪ್ರಯಾಣಿಸುವ ಹೆಚ್ಚಿನವರು ಹಾಗೂ ಟರ್ಕಿಗೆ ಭೇಟಿ ನೀಡುವವರು ತಮ್ಮ ಹಲ್ಲುಗಳನ್ನು (Teeth) ಸುಂದರಗೊಳಿಸುವ ಇಲ್ಲವೇ ವೆನೀರ್‌ಗಳನ್ನು ಅಳವಡಿಸುವ (ತೆಳುವಾದ ಹಲ್ಲಿನದ್ದೇ ಬಣ್ಣವನ್ನು ಹೊಂದಿರುವ ಕಸ್ಟಮ್ ನಿರ್ಮಿತ ಚಿಪ್ಪುಗಳು) ಉದ್ದೇಶದಿಂದ ಟರ್ಕಿಗೆ ಭೇಟಿ ನೀಡುತ್ತಾರೆ.


ಕೇಟೀ ಪ್ರೈಸ್ ಮತ್ತು ಜ್ಯಾಕ್ ಫಿಂಚಮ್ ಅವರಂತಹ ಪ್ರಭಾವಿ ವ್ಯಕ್ತಿಗಳಿಂದ ಟರ್ಕಿ ಟೀತ್ ಟ್ರೆಂಡ್ ಪ್ರವರ್ಧಮಾನಕ್ಕೆ ಬಂದಿತು. ಸಂಪೂರ್ಣವಾಗಿ ದಂತದಂತಹ ಕಾಂತಿಯುಕ್ತ ಬೆಳ್ಳಗಿನ ಹಲ್ಲು ಪಡೆಯಲು ಅಥವಾ ವೆಚ್ಚ ತಗುಲಿದರೂ ಸುಂದರವಾದ ನಗುವನ್ನು ಪಡೆಯಲು ಇದು ಅತ್ಯುತ್ತಮ ವಿಧಾನ ಎಂದು ತೋರುತ್ತಿದೆಯಾದರೂ ಇದನ್ನು ಮಾಡಿಸಿಕೊಂಡ ನಂತರ ಹಲವಾರು ತೊಂದರೆಗಳಿಗೆ ಸಿಲುಕಿರುವವರೂ ಇದ್ದಾರೆ.


ಟರ್ಕಿ ಟೀತ್ ಸುದ್ದಿಯಲ್ಲಿರುವುದೇಕೆ
ಸುದ್ದಿ ಮಾಧ್ಯಮವೊಂದು ಈ ಕುರಿತು 1,000 ದಷ್ಟು ಇಂಗ್ಲೆಂಡ್‌ನ ದಂತ ವೈದ್ಯರ ಸಮೀಕ್ಷೆ ನಡೆಸಿದ್ದು ಇದರಲ್ಲಿ 597 ಜನ ವೈದ್ಯರು ಟರ್ಕಿ ಟೀತ್ ಮಾಡಿಸಿಕೊಂಡ ಹಲವು ರೋಗಿಗಳ ಹಲ್ಲಿನ ಸಮಸ್ಯೆಗಳನ್ನು ನಿವಾರಿಸಿದ್ದಾರೆ ಎಂದೇ ಹೇಳಿಕೊಂಡಿದ್ದಾರೆ. ವನೀರ್‌ಗಳನ್ನು ಅಳವಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಹೆಚ್ಚಿನವರು ಟರ್ಕಿಗೆ ಪ್ರಯಾಣ ಬೆಳೆಸುತ್ತಾರೆ ಈ ವನೀರ್‌ಗಳೆಂದರೆ ಅರ್ಧಮಿಲಿಮೀಟರ್‌ನಂತೆ ಸ್ವಲ್ಪ ಭಾಗವನ್ನು ಹಲ್ಲಿನ ಮುಂಭಾಗದಿಂದ ಕೆತ್ತಲಾಗುತ್ತದೆ ಇನ್ನು ಹಲ್ಲುಗಳ ಮೇಲೆ ಕ್ಯಾಪ್‌ಗಳನ್ನು ಇರಿಸಿಕೊಳ್ಳಲು (ಹಾನಿಗೊಂಡ ಹಲ್ಲಿನ ಮೇಲ್ಭಾಗದಲ್ಲಿ ಮಾಡುವುದು) ಹಲ್ಲನ್ನು ಕೋನ್ ಮಾದರಿಯಲ್ಲಿ ಶೇವ್ ಮಾಡಲಾಗುತ್ತದೆ ಇದನ್ನು ಇನ್‌ಫ್ಲುಯೆನ್ಸರ್‌ಗಳು ಶಾರ್ಕ್ ಟೀತ್ ಎಂದೂ ಕರೆಯುವುದಿದೆ.


ಟರ್ಕಿ ಟೀತ್ ಎಂದರೇನು?
ಟರ್ಕಿ ಟೀತ್ ಎಂಬುದು ಮುತ್ತಿನಂತೆ ಬಿಳಿ ಬಣ್ಣದ, ಸುಂದರವಾಗಿ ಚಚ್ಚೌಕದಂತೆ ಆಕಾರಗೊಳಿಸಿದ ಹಲ್ಲುಗಳಾಗಿದ್ದು ಪ್ರತಿಯೊಬ್ಬರೂ ಇಂತಹ ಹಲ್ಲುಗಳನ್ನು ಮಾಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಹಲ್ಲಿನ ಒಳಸೇರಿಸುವ ಪ್ರಕ್ರಿಯೆ ಇದಾಗಿದ್ದು ನೈಸರ್ಗಿಕ ಹಲ್ಲಿನ ಫೈಲಿಂಗ್ ಹಾಗೂ ಕಸ್ಟಮೈಸ್ ಮಾಡಿದ ಕ್ರೌನ್‌ಗಳು ಮತ್ತು ವೆನೀರ್‌ಗಳ ಅಳವಡಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಟರ್ಕಿಶ್ ಹಲ್ಲುಗಳನ್ನು ಪಡೆಯುವ ಟ್ರೆಂಡ್ ಇಂಗ್ಲೆಂಡ್‌ನಲ್ಲಿ ಜನಪ್ರಿಯವಾಗಿದ್ದು ಇದರ ಕ್ರೆಡಿಟ್ ಟಿಕ್‌ಟಾಕ್‌ಗೆ ಸಲ್ಲಬೇಕು.


ಟರ್ಕಿಶ್ ಟೀತ್ ಪ್ರಯೋಜನಗಳು
 • ಬಯಸಿದ ಆಕಾರ, ಗಾತ್ರ ಮತ್ತು ಬಣ್ಣ ಆಯ್ಕೆಮಾಡಲು ಅನುಮತಿಸುತ್ತದೆ.

 • ಇತರ ಹಲ್ಲಿನ ಒಳಸೇರಿಸುವ ಕಾರ್ಯವಿಧಾನಗಳಿಗೆ ಹೋಲಿಸಿದರೆ ಈ ವಿಧಾನವು ಸಾಮಾನ್ಯವಾಗಿ ಅಗ್ಗವಾಗಿದೆ.

 • ಕಡಿಮೆ ಹಲ್ಲುಗಳನ್ನು ಹೊಂದಿರುವ 75 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೂಕ್ತವಾಗಿದೆ.


ಇದನ್ನೂ ಓದಿ: Fact Check: ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಿಂದ ಬದುಕಿಸಲು ಸಾಧ್ಯವೇ?

ನಷ್ಟಗಳೇನು?
 • ನಕಲಿಯಾಗಿ ಕಾಣುತ್ತದೆ ಮತ್ತು ನೈಜವಲ್ಲ.

 • 60-70% ರಷ್ಟು ಹಲ್ಲುಗಳನ್ನು ಒಳಕ್ಕೆ ಸೇರಿಸುವುದರಿಂದ ತೀವ್ರ ತೊಡಕುಗಳು ಉಂಟಾಗುತ್ತವೆ.

 • ನರ ಹಾನಿ, ನರಗಳ ಸೂಕ್ಷ್ಮತೆ.

 • ಅಸಹನೀಯ ನೋವು, ಊತ, ಕೆಂಪುಗಾಗುವಿಕೆ.

 • ಆಹಾರವನ್ನು ಜಗಿಯುವಲ್ಲಿ ತೊಂದರೆ.

 • ಹಲ್ಲಿನ ನೋವಿನಿಂದ ಉಂಟಾಗುವ ಹಸಿವಿನ ಕೊರತೆಯಿಂದಾಗಿ ತೂಕ ನಷ್ಟ.

 • ಈ ಸಮಸ್ಯೆಯನ್ನು ಪರಿಹರಿಸಲು ರೂಟ್ ಕೆನಾಲ್ ಮಾಡಬೇಕಾಗುತ್ತದೆ ವೃಥಾ ಖರ್ಚಿಗೆ ಕಾರಣವಾಗುತ್ತದೆ.

 • ಈ ತೊಡಕುಗಳ ಜೊತೆಗೆ, ವೆನಿರ್‌ಗಳು ಅಥವಾ ಕ್ರೌನ್‌ಗಳು ತಾತ್ಕಾಲಿಕವಾಗಿರುತ್ತವೆ ಮತ್ತು ಪ್ರತಿ 5-15 ವರ್ಷಗಳಿಗೊಮ್ಮೆ ಬದಲಾಯಿಸಬೇಕು, ಇದು ತುಂಬಾ ದುಬಾರಿಯಾಗಬಹುದು.


ಇದನ್ನೂ ಓದಿ:  Crime News: ಗೋಡೆ ಮೇಲೆ ಸತ್ತು ಅಂಟಿದ್ದ ಸೊಳ್ಳೆಯಿಂದ ಸಿಕ್ಕಿಬಿದ್ದ ಕಳ್ಳ! ಈ ಪೊಲೀಸ್​ ಸ್ಟೋರಿ ಸಖತ್ತಾಗಿದೆ

ಟರ್ಕಿ ಟೀತ್ ಮಾಡಿಸುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
 • ಟರ್ಕಿ ಹಲ್ಲುಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯ ಕುರಿತು ದಂತ ವೈದ್ಯರ ಸಲಹೆಯನ್ನು ಕೇಳಿ.

 • ಸ್ವಚ್ಛಗೊಳಿಸಲು ಸಾಧ್ಯವಾಗದೇ ಇರುವ ಹಲ್ಲುಗಳ ಭಾಗಗಳ ತಪಾಸಣೆಗಾಗಿ ವರ್ಷಕ್ಕೆ ಎರಡು ಬಾರಿ ಇಲ್ಲವೇ ಪ್ರತೀ ಮೂರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಸಂಪರ್ಕಿಸಿ.

 • ಟರ್ಕಿ ಟೀತ್ ಮಾಡಿಸಿಕೊಳ್ಳುವ ಮುನ್ನ ಸೂಕ್ತ ಸಮಾಲೋಚನೆ ನಡೆಸಿ. ನಾವಿರುವವರೆಗೆ ನಮ್ಮ ಹಲ್ಲುಗಳು ಇರಬೇಕು ಹಾಗಾಗಿ ಒಮ್ಮೆ ಹಲ್ಲುಗಳನ್ನು ಶೇವ್ ಮಾಡಿಕೊಂಡ ನಂತರ ಅದನ್ನು ಪುನಃ ಮೊದಲಿದ್ದಂತೆ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಮರೆಯದಿರಿ.

Published by:Ashwini Prabhu
First published: