ಶ್ರಾವಣ ಮಾಸದಲ್ಲಿ ಹೆಚ್ಚು ಶಿವನ ಆರಾಧನೆ ಮಾಡೋದು ಯಾಕೆ ಗೊತ್ತಾ?

Shravana Maas: ಶ್ರಾವಣ ಮಾಸದಲ್ಲಿ ಜನರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಮಾಂಸಹಾರಿಗಳು ಮಾಂಸಹಾರವನ್ನು ತ್ಯಜಿಸುತ್ತಾರೆ, ಮತ್ತು ಸಸ್ಯಹಾರಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯನ್ನು ಈ ಮಾಸದಲ್ಲಿ ಮಾಡುವುದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಷಾಡ ಕಳೆದು ಶ್ರಾವಣ ಮಾಸ ಆರಂಭವಾಗಿದೆ. ಒಂದೆಲ್ಲ ಒಂದು ವಿಶೇಷ ಕಾರ್ಯಗಳು ಸಹ ಆರಂಭವಾಗುತ್ತದೆ. ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ಶ್ರಾವಣ ಮಾಸದ ಸಮಯದಲ್ಲಿ ಮಹಿಳೆಯರು ತಮ್ಮ ಕುಟುಂಬದ ಒಳಿತಿಗಾಗಿ 16 ಸೋಮವಾರಗಳ ಉಪವಾಸ ವ್ರತವನ್ನು ಮಾಡುತ್ತಾರೆ. ಈ ಮಾಸ ಬಹಳ ಪವಿತ್ರವಾಗಿದೆ. ಇನ್ನು ಈ ಮಾಸವನ್ನು ಶಿವನ ಮಾಸ ಎಂದೇ ಕರೆಯಲಾಗುತ್ತದೆ. ಇದು ಶಿವನ ಅತ್ಯಂತ ಪ್ರೀತಿಯ ಮಾಸ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಈ ಶ್ರಾವಣ ಮಾಸದ ಪ್ರಾಮುಖ್ಯತೆ ಏನು? ಈ ಮಾಸದಲ್ಲಿ ಏನೆಲ್ಲ ಆಗಿದೆ? ಏನೆಲ್ಲ ಮಾಡಬೇಕು ಎಂಬುದನ್ನ ಅರಿಯುವುದು ಸಹ ಮುಖ್ಯ.

ಶ್ರಾವಣ ಮಾಸ ಎಂದರೆ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಹಬ್ಬ-ಹರಿದಿನಗಳ ಮಾಸ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಭಕ್ತರು ಆಧ್ಯಾತ್ಮಿಕ ಅಂಶವನ್ನು ಒಳಗೊಂಡ ಸಂಗತಿಗಳನ್ನು ಕೇಳಬೇಕು. ಈ ಅವಧಿಯಲ್ಲಿ ಆಧ್ಯಾತ್ಮಿಕ ಪ್ರವಚನಗಳು, ಧರ್ಮೋಪದೇಶಗಳನ್ನು ಆಲಿಸಬೇಕು ಎನ್ನುವ ಅದ್ಭುತ ಉದ್ದೇಶವನ್ನು ಈ ಮಾಸ ಹೊಂದಿದೆ. ಈ ಸಮಯದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಜನರು ಕೇಳಬೇಕು. ಶಿವನ ಕುರಿತಾದ ಸ್ತ್ರೋತ್ರಗಳನ್ನು ಪಠನೆ ಮಾಡಬೇಕು, ಶಿವನ ಧ್ಯಾನ. ಪೂಜೆ, ಮೊದಲಾದ ಸತ್ಕಾರ್ಯಗಳನ್ನು ಈ ತಿಂಗಳಿನಲ್ಲಿ ಮಾಡಿದರೆ ಶಿವನ ಆಶೀರ್ವಾದ ಲಭಿಸುತ್ತದೆ.

ಇದನ್ನೂ ಓದಿ: ಶ್ರಾವಣ ಶನಿವಾರದ ಈ ದಿನ ಹೇಗಿರಲಿದೆ ನಿಮ್ಮ ದಿನ: ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಸಮುದ್ರ ಮಂಥನ
ಈ ಶ್ರಾವಣ ಮಾಸದಲ್ಲಿಯೇ ಸಮುದ್ರ ಮಂಥನ ಮಾಡಲಾಗಿದೆ. ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದ ಈ ಯುದ್ಧದಲ್ಲಿ ಲಕ್ಷ್ಮೀ , ಚಂದ್ರ, ಮಕರಂದ, ಕಲ್ಪಾವೃಕ್ಷ ,ರಂಭೆ ಮತ್ತು ಕಾಮಧೇನು ಹಸು ಸೇರಿದಂತೆ 14 ಪ್ರಮುಖ ವಸ್ತುಗಳನ್ನು ಪಡೆಯಲಾಗಿತ್ತು. ಇನ್ನು ಈ 14 ವಸ್ತುಗಳ ಜೊತೆ ಸಮುದ್ರ ಮಂಥನದ ಸಮಯದಲ್ಲಿಯೇ ವಿಷ ಸಹ ಉತ್ಪತ್ತಿಯಾಗಿತ್ತು. ಆ ವಿಷ ಇಡೀ ವಿಶ್ವವನ್ನು ನಾಶ ಮಾಡುವ ಶಕ್ತಿ ಹೊಂದಿದ್ದ ಕಾರಣ ಶಿವ ಆ ವಿಷವನ್ನು ಸೇವಿಸುತ್ತಾನೆ. ಈ ಶ್ರಾವಣ ಮಾಸದಲ್ಲಿಯೇ ಶಿವನು ವಿಷವನ್ನು ಸೇವಿಸಿ ಜನರನ್ನು ರಕ್ಷಣೆ ಮಾಡಿದ್ದಾನೆ. ಹಾಗಾಗಿ ಈ ಮಾಸನ ಶಿವನಿಗೆ ಹೆಚ್ಚು ಮೀಸಲಾಗಿದ್ದು, ಶಿವ ಭಕ್ತರು ಶಿವನ ಆರಾಧನೆಯನ್ನು ಹೆಚ್ಚು ಮಾಡುತ್ತಾರೆ.

ಇನ್ನು ಶ್ರಾವಣ ಮಾಸದಲ್ಲಿ ಜನರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಮಾಂಸಹಾರಿಗಳು ಮಾಂಸಹಾರವನ್ನು ತ್ಯಜಿಸುತ್ತಾರೆ, ಮತ್ತು ಸಸ್ಯಹಾರಿಗಳು ಈರುಳ್ಳಿ ಮತ್ತೆ ಬೆಳ್ಳುಳ್ಳಿಯ ಸೇವನೆಯನ್ನು ಈ ಮಾಸದಲ್ಲಿ ಮಾಡುವುದಿಲ್ಲ. ಅಲ್ಲದೆ, ಭಕ್ತರು ಈ ತಿಂಗಳಿನಲ್ಲಿ ಸೋಮವಾರ ಶಿವ ದೇವರ ಅನುಗ್ರಹ ಪಡೆಯಲು ಉಪವಾಸ ಮಾಡುತ್ತಾರೆ. ಜನರು ತಮ್ಮ ನಂಬಿಕೆಗಳ ಅನುಸಾರ ಈ ಉಪವಾಸವನ್ನು ಪಾಲಿಸುತ್ತಾರೆ. ಈ ಮಾಸದಲ್ಲಿ ಎಲ್ಲ ಸೋಮವಾರಗಳಂದು ಉಪವಾಸ ಮಾಡುವುದರಿಂದ ಆರೋಗ್ಯ, ಸಂಪತ್ತು, ಶಕ್ತಿ, ಮತ್ತು ಆಧ್ಯಾತ್ಮಿಕ ಆನಂದ ಸಿಗುತ್ತದೆ ಎಂದು ಭಕ್ತರು ನಂಬಿದ್ದಾರೆ.

ಈ ಶ್ರಾವಣ ಮಾಸ ಹಬ್ಬಗಳ ಮಾಸ ಎಂದೇ ಕರೆಯಲಾಗುತ್ತದೆ. ಈ ಅವಧಿಯಲ್ಲೇ ಅತಿ ಹೆಚ್ಚು ಹಬ್ಬಗಳ ಆಚರಣೆ ಮಾಡಲಾಗುತ್ತದೆ. ಯಾವುದೇ ಶುಭ ಸಮಾರಂಭವಿರಲಿ ಈ ಮಾಸದಲ್ಲಿ ಮಾಡಲು ಜನರು ಹೆಚ್ಚು ಇಷ್ಟಪಡುತ್ತಾರೆ. ಹೆಣ್ಣು ಮಕ್ಕಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಂಗಳ ಗೌರಿ ವ್ರತವನ್ನು ಈ ಸಮಯದಲ್ಲಿ ಆಚರಣೆ ಮಾಡುತ್ತಾರೆ.

ಅಲ್ಲದೆ ಶಿವನ   ಶಿರದಲ್ಲಿ ಚಂದ್ರ ಇರುವುದನ್ನು ನಾವು ಗಮನಿಸಿದ್ದೇವೆ. ಶಿವ ಆ ಚಂದ್ರನನ್ನ ಶಿರದಲ್ಲಿ ಧರಿಸಿದ್ದು ಸಹ ಇದೇ ಮಾಸದಲ್ಲಿ. ಪುರಾಣಗಳ ಪ್ರಕಾರ ಶಿವ ಕುಡಿದ ವಿಷದ ಪರಿಣಾಮವನ್ನು ಶಮನಗೊಳಿಸಲು ಚಂದ್ರನನ್ನು ಧರಿಸಲಾಗಿದೆ. ಇದೇ ಕಾರಣಕ್ಕಾಗಿ ಭಕ್ತರು ಶಿವನಿಗೆ ಹಾಲು, ಮೊಸರು, ಹೂವುಗಳು ಮತ್ತು ಬಿಲ್ವ ಪತ್ರೆಯನ್ನು ಈ ಮಾಸದಲ್ಲಿ ಹೆಚ್ಚು ಅರ್ಪಿಸುತ್ತಾರೆ.
Published by:Sandhya M
First published: