Betel: ಎಲೆ-ಅಡಿಕೆ ತಿನ್ನುವವರೇ ಕೇಳಿ, ವೀಳ್ಯದೆಲೆಯಲ್ಲಿ ಹೆಣ್ಣೆಲೆ ಮತ್ತು ಗಂಡೆಲೆಯ ಬಗ್ಗೆ ನಿಮಗೆ ಗೊತ್ತಾ?

ವೀಳ್ಯದೆಲೆಯಲ್ಲಿ ಹೆಣ್ಣು ಎಲೆ ಮತ್ತು ಗಂಡು ಎಲೆ ಎಂಬುದು ಇದೆ. ವೀಳ್ಯದೆಲೆ ಸೇವಿಸುವವರಲ್ಲಿ ಬಹುತೇಕರಿಗೆ ಈ ಸಂಗತಿ ಗೊತ್ತಿಲ್ಲ. ವೀಳ್ಯದೆಲೆ ಸೇವಿಸುವುದಕ್ಕೂ ನಿಯಮವೊಂದಿದೆ. ಯಾವುದನ್ನು ಮೊದಲು ತಿನ್ನಬೇಕು ಎಂಬುದೂ ಇದೆ. ಆದರೆ ನಿಯಮಾನುಸಾರವಾಗಿ ತಿಂದರೆ ಮಾತ್ರ ಎಲೆ-ಅಡಿಕೆ ತಿಂದದ್ದಕ್ಕೆ ಸಾರ್ಥಕ.

ಅಡಿಕೆ, ಸುಣ್ಣ, ವೀಳ್ಯದೆಲೆ

ಅಡಿಕೆ, ಸುಣ್ಣ, ವೀಳ್ಯದೆಲೆ

  • Share this:
    ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ (Betel)-ಅಡಿಕೆ (Arecanut) ತಿನ್ನುತ್ತಾರೆ. ಆದರೆ ಬಹುತೇಕರು ಇದೊಂದು ಸಂಪ್ರದಾಯ ಎಂದು ನಂಬಿಕೊಂಡು ಇದನ್ನು ಸೇವಿಸುತ್ತಾ ಬಂದಿದ್ದಾರೆ. ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಊಟ (Lunch) ಆದ ಬಳಿಕ ಎಲೆ, ಅಡಿಕೆ, ಸುಣ್ಣ ತುಂಬಿದ ಹರಿವಾಣವು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಮಧ್ಯಾಹ್ನ ಊಟ ಆದ ಬಳಿಕ ಎಲ್ಲರೂ ಕುಳಿತುಕೊಂಡು ಅಡಿಕೆ ಮತ್ತು ಎಲೆಗೆ ಕೊಂಚ ಸುಣ್ಣ (Lime) ಬೆರೆಸಿ ಸೇವಿಸುತ್ತಾರೆ. ಅಂದಹಾಗೆಯೇ ಇದು ಒಗ್ಗಟ್ಟಿನ ಸಂಕೇತವೂ ಆಗಿದೆ.

    ವೀಳ್ಯದೆಲೆಯಲ್ಲಿ ಹೆಣ್ಣು ಎಲೆ ಮತ್ತು ಗಂಡು ಎಲೆ ಎಂಬುದು ಇದೆ. ವೀಳ್ಯದೆಲೆ ಸೇವಿಸುವವರಲ್ಲಿ ಬಹುತೇಕರಿಗೆ ಈ ಸಂಗತಿ ಗೊತ್ತಿಲ್ಲ. ವೀಳ್ಯದೆಲೆ ಸೇವಿಸುವುದಕ್ಕೂ ನಿಯಮವೊಂದಿದೆ. ಯಾವುದನ್ನು ಮೊದಲು ತಿನ್ನಬೇಕು ಎಂಬುದೂ ಇದೆ. ಆದರೆ ನಿಯಮಾನುಸಾರವಾಗಿ ತಿಂದರೆ ಮಾತ್ರ ಎಲೆ-ಅಡಿಕೆ ತಿಂದದ್ದಕ್ಕೆ ಸಾರ್ಥಕ.

    ಹೆಣ್ಣೆಲೆ- ಗಂಡೆಲೆ ಗುರುತಿಸುವುದು ಹೇಗೆ?

    ವೀಳ್ಯದೆಲೆ ಕೊಯ್ಯುವಾಗ ಆ ಎಲೆಯ ಹಿಂಭಾಗವನ್ನು ಗಮನಿಸಿದರೆ ಅದು ಹೆಣ್ಣೆಲೆಯಾ ಅಥವಾ ಗಂಡೆಲೆಯಾ ಎಂದು ತಿಳಿದು ಬರುತ್ತದೆ. ಅದರಲ್ಲೂ ದೇವ ಮತ್ತು ದೈವ ಕಾರ್ಯಗಳಿಗೂ ವೀಳ್ಯದೆಲೆಯ ಬಹು ಮುಖ್ಯ ಪಾತ್ರ ವಹಿಸುತ್ತದೆ. ವೀಳ್ಯದೆಲೆಯ ಹಿಂಭಾಗವನ್ನು ನೋಡಿದಾಗವ ಅದರಲ್ಲಿ ಕೆಂಪು ಗೆರೆಗಳಿದ್ದರೆ ಅದನ್ನು ಗಂಡೆಲೆ ಎಂದು ಮತ್ತು ಹಸಿರು ಗೆರೆ ಕಂಡರೆ ಅದನ್ನು ಹೆಣ್ಣೆ ಎಂದು ಹೇಳಲಾಗುತ್ತದೆ. ಮಂಗಳೂರು ಅಥವಾ ಕರಾವಳಿ ಭಾಗದಲ್ಲಿ ಆನು ಅಂಗುರ ಮತ್ತು ಪೊಣ್ಣು ಅಂಗುರ ಎಂದು ಹೇಳುತ್ತಾರೆ.

    ವೀಳ್ಯದೆಲೆ ಕೊಯ್ಯುವುದಕ್ಕೂ ನಿಯಮವಿದೆ

    ವೀಳ್ಯದೆಲೆ ಎಲ್ಲೆಂದರಲ್ಲಿ ಬದುಕುವುದಿಲ್ಲ.  ಸರಿಯಾದ ನೀರು ಇರುವ ಜಾಗದಲ್ಲಿ ಮಾತ್ರ ವೀಳ್ಯದೆಲೆ ಬದುಕುತ್ತದೆ. ಅದರಲ್ಲೂ ವೀಳ್ಯದೆಲೆಗೆ ಬಹು ಬೇಡಿಕೆ ಇದೆ. ಕವಲೆ ಅಥವಾ ಸೂಡಿ (1 ಕಟ್ಟು) ರೂಪದಲ್ಲಿ ಇದನ್ನು ಮಾರುತ್ತಾರೆ. ವೀಳ್ಯದೆಲೆ ಕೊಯ್ಯುವುದಕ್ಕೂ ನಿಯಮವಿದೆ. ಮೊದಲಿನ ಎಲೆಯನ್ನು ಬಿಟ್ಟು ನಂತರದ ಎಲೆಯನ್ನು ಕತ್ತರಬೇಕು. ಅಂದರೆ ಮೊದಲಿನ ಎಲೆ ಚಿಗುರಿನ ಎಲೆಯಾಗಿದೆ. ಅದನ್ನು ಬೆಳೆಯಲು ಬಿಡಬೇಕು.

    ಇದನ್ನೂ ಓದಿ: Portable Washing Machine: ಇದು ವಿಶ್ವದ ಅತಿ ಚಿಕ್ಕ ವಾಷಿಂಗ್​ ಮೆಷಿನ್​! ಶರ್ಟ್​ ಕಿಸೆಯಲ್ಲೂ ಹಾಕಿ ಕೊಂಡೊಯ್ಯಬಹುದು ಕಣ್ರಿ

    ಮತ್ತೊಂದು ಸಂಗತಿ ಎಂದರೆ ವೀಳ್ಯದೆಲೆಯನ್ನು ಕೊಯ್ಯುವಾಗ ಬೇರಿನ ಕೆಳಭಾಗದಲ್ಲಿ ಎಲೆಯನನ್ನು ಕೊಯ್ಯುವ ಬದಲು ತುದಿಯಲ್ಲಿನ ಎಲೆಯನ್ನು ಕೊಯ್ಯುವುದು ಸೂಕ್ತ. ಏಕೆಂದರೆ ಬೇರಿನ ಪ್ರಾರಂಭದಲ್ಲಿರುವ ಎಲೆ ಹೆಚ್ಚು ಬೆಳೆದಿರುತ್ತದೆ ಮತ್ತು ಹಸಿರಾಗಿರುತ್ತದೆ.

    ದೇವಕಾರ್ಯಗಳಿಗೂ ವೀಳ್ಯದೆಲೆ ಬಹುಮುಖ್ಯ!

    ಪೂಜೆ ಮಾಡುವಾಗ, ದಕ್ಷಿಣೆ ನೀಡುವಾಗ ಅಡಿಕೆ ಮತ್ತು ವೀಳ್ಯದೆಲೆ ಬೇಕೆ ಬೇಕು. ಅದರಲ್ಲೂ ತಾಂಬೂಲ ಪ್ರಶ್ನೆ ಇರಿಸುವಾಗ ಸರಿಯಾದ ವೀಳ್ಯದೆಲೆಯನ್ನು ಜೋಡಿಸಿ ಕೊಡಬೇಕು. ವೀಳ್ಯದೆಲೆಯನ್ನು ನೋಡಿ ಪ್ರಶ್ನಾಚಿಂತನೆಯು ಆಗುತ್ತದೆ. ಇನ್ನು ಭೂತರಾಧನೆಯ ಸಮಯಲ್ಲೂ ಅಡಿಕೆ ಮತ್ತು ವೀಳ್ಯದೆಲೆ ಬೇಕಾಗುತ್ತದೆ. ಅಷ್ಟೇ ಏಕೆ ಗುರು ಹಿರಿಯರ ಆಶಿರ್ವಾದ ಪಡೆಯುವಾದ, ದಕ್ಷಿಣೆ ನೀಡುವಾಗ ಹರಿವಾಣದಲ್ಲಿ ಒಂದು ಅಡಿಕೆ ಮತ್ತು 2 ವೀಳ್ಯದೆಲೆ ನೀಡುವುದು ಗೌರವದ ಸಂಕೇತವಾಗಿದೆ.

    ಇದನ್ನೂ ಓದಿ: WhatsApp​ ಬಳಕೆದಾರರೇ ಈ ತಪ್ಪು ಮಾಡಬೇಡಿ! ಯಾಕಂದ್ರೆ, ಕಂಪನಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್​ ಮಾಡಿದೆ

    ಪಾಕಕ್ಕೂ ವೀಳ್ಯದೆಲೆಯಲ್ಲಿ ಬಳಸುತ್ತಾರೆ!

    ವೀಳ್ಯದೆಲೆ ಬರೀ ಎಲೆ ಅಡಿಕೆ ಸೇವನೆಗೆ ಮಾತ್ರವಲ್ಲ, ಇದನ್ನು ಬಳಸಿಕೊಂಡು ಪೋಡಿ ತಯಾರಿಸುತ್ತಾರೆ. ಅಷ್ಟೇ ಏಕೆ ಚಟ್ಟಂಬಡೆ ಮಾಡುವಾಗ ಕೊಂಚ ವೀಳದೆಲೆಯನ್ನು ಸೇರಿಸಿದರೆ ಅದರ ರುಚಿ ಬದಲಾಗುತ್ತದೆ.

    ಎಲೆ-ಅಡಿಕೆ ತಿನ್ನುವುದು ಹೇಗೆ ಗೊತ್ತಿದ್ಯಾ?

    ವೀಳ್ಯದೆಲೆಯನ್ನು ಸರಿಯಾಗಿ ಉಚ್ಚಿಕೊಂಡು ತಿನ್ನಬೇಕು. ಅದರಲ್ಲೂ ಅದನ್ನು ನಿಯಮಿತವಾಗಿ ತಿನ್ನಬೇಕು. ಎಲೆಯನ್ನು ಕೈಗೆತ್ತಿಕೊಂಡ ಬಳಿಕ ಎಲೆಯ ತುದಿಯನ್ನು ಹಣೆಗೆ ಉಜ್ಜಬೇಕು ಮತ್ತು ಎಲೆಯ ತೊಟ್ಟು ವಿಷದಿಂದ ಕೂಡಿರುತ್ತದೆ. ಈ ಕಾರಣಕ್ಕೆ ಅದನ್ನು ಬಿಸಾಡಬೇಕು ಎಂದು ಹೇಳುತ್ತಾರೆ.



    ಅಡಿಕೆ ಸೇವಿಸುವಾಗಲೂ ಅಷ್ಟೇ, ಸರಿಯಾದ ಹಣ್ಣು ಅಡಿಕೆ ಇಟ್ಟುಕೊಂಡು ಒಂದು ಅಥವಾ ಎರಡು ಅಡಿಕೆ ಸೇವಿಸಬಹುದು. ಸರಿಯಾಗಿ ವೀಳ್ಯದೆಲೆಯ ಬಗ್ಗೆ ಮಾಹಿತಿ ಬೇಕಾದರೆ ಈ ವಿಡಿಯೋ ನೋಡಿ.
    Published by:Harshith AS
    First published: